ಗುರುವಾರ, ಸೆಪ್ಟೆಂಬರ್ 24, 2009

ಮಳೆ ಬರುತ್ತಿದೆಯೇ, ಓ ಪುಟ್ಟ ಕುಸುಮವೇ? ಅದಕ್ಕಾಗಿ ಖುಷಿಪಡು!

ಮಳೆ ಬರುತ್ತಿದೆಯೇ, ಓ ಪುಟ್ಟ ಕುಸುಮವೇ? ಅದಕ್ಕಾಗಿ ಖುಷಿಪಡು!
ಬೆಳಗಿನಿಂದಲೇ ಮೋಡ ಕವಿದ ವಾತಾವರಣ. ಕೆಲವು ವಾರಗಳಿಂದ ಮಳೆರಾಯನ ಆಗಮನ. ಅದೂ ರಾತ್ರಿಯಿಂದ ಬೆಳಗಿನವರೆಗೆ ಬಿಟ್ಟೂ ಬಿಡದೆ ಬರುತಿದೆ. ಮೊನ್ನೆಯಂತೂ ಹಗಲಿನಲ್ಲಿಯೇ ಸುರಿದ ಮಳೆ. ಜೊತೆಗೆ ಭಾರೀ ಸಿಡಿಲಿನ ಆರ್ಭಟ.

ಯಾಕಾದ್ರೂ ಮಳೆ ಬರುತ್ತಿದೆಯೋ ಇಲ್ಲಿ? ಮಳೆಕಾಣದ ಬಯಲು ಸೀಮೆ, ಬರಪ್ರದೇಶ ಇಲ್ಲೆಲ್ಲ ಬಂದರೆ ರೈತರಿಗೆ ಅನುಕೂಲವಲ್ಲವೇ? ಎಂದು ಹಲವರಿಗನಿಸಿಂದತೆಯೇ ನನಗೂ ಅನಿಸಿದ್ದಿದೆ. ಕಾರಣಗಳು ಹಲವಾರು. ಹಾಗೆಂದು ಪ್ರಕೃತಿಗೆ ನಾವು ಹೇಳಿದಂತೆ ಅದು ಕೇಳುವುದೇ ಅಥವಾ ನಮಗೆ ತೋಚಿದಂತೆಲ್ಲಾ ಹೇಳುತ್ತಾ ಇದ್ದರೆ ಇವೆಲ್ಲ ನಡೆಯುವುದೇ? ಒಂದು ವೇಳೆ ಹೀಗೇ ಆಗಬೇಕೆಂದು ಪ್ರಕೃತಿಯಲ್ಲಿಯೇ ಲೆಕ್ಕಾಚಾರವಿರುವಾಗ, ನಾವೇನು ಮಾಡಲು ಸಾಧ್ಯ? ತಾನೊಂದು ಬಗೆದರೆ ಮಾನವಾ... ಬೇರೊಂದು ಬಗೆವುದು ದೈವ ಎಂದು ಒಂದು ಚಲನಚಿತ್ರಗೀತೆಯ ನೆನಪಾದರೆ... ನೋ ಕಾಮೆಂಟ್ಸ್‌....
ಈವತ್ತು ಬೆಳಗ್ಗೆ ಕಚೇರಿಗೆ ಬರುವಾಗ ನನಗೆ ಆಗಿದ್ದೂ ಇದೇನೆ. ಇದೇನು ಮಳೆ? ರಾತ್ರಿಯೆಲ್ಲಾ ಸುರಿದಿದೆ. ಮತ್ತೆ ಮೋಡ ಮುಸುಕಿದೆ! ಬಿಸಿಲು ಕಾಣದೆ..!!?? ಎಂದೆಲ್ಲಾ ಅನಿಸಿತು.

ಪ್ರಕೃತಿಯಲ್ಲಿ ಇವೆಲ್ಲ ಸಹಜ ಮತ್ತು ಅದಕ್ಕೆ ತನ್ನದೇ ಆದ ಸಕಾರಣವೂ ಇರುತ್ತದೆ ಎಂಬ ಆಲೋಚನೆ ನನಗೆ ಯಾಕೆ ಬರಲಿಲ್ಲ? ಹೀಗೆಯೇ ಜನರ ಜೀವನದಲ್ಲಿ ಸುಖ-ದು:ಖ ಇವುಗಳ ಸರಪಳಿಯ ಕೊಂಡಿ ಒಂದನೊಂದು ಹಿಡಿದಿರುತ್ತವೆ ಎಂದೂ ಅನಿಸಿತು. ಉದಾ: ಇನ್ನೇನು ಮಗನ ವಿದ್ಯಾಭ್ಯಾಸ ಮುಗಿಯಿತು, ನಾಲ್ಕು ಕಾಸು ಸಂಪಾದಿಸುತ್ತಾನೆ ಎನ್ನುವಾಗ ಅವನಿಗೆ ಕೆಲಸವೇ ಸಿಗದೇ ಇರಬಹುದು ಅಥವಾ ಆತನಿಗೆ ಕೆಲಸದ ಆಸೆಯೇ ಇಲ್ಲದಿರಬಹುದು ಅಥವಾ ಈ ಎಲ್ಲ ಆಲೋಚನೆಗಳಿಗಿಂತ ವಿರುದ್ಧವಾಗಿರಬಹುದು! ಕೇವಲ ಸುಖವೇ ಇದ್ದರೆ ದು:ಖದ ಮುಖ ಕಾಣುವುದಾದರೂ ಹೇಗೆ? ಅಥವಾ ದು:ಖವೇ ಇದ್ದರೆ ಸುಖದ, ಸಂತಸದ ಜೀವನ ಹೇಗೆ? ಹೀಗೆಲ್ಲಾ ಯೋಚಿಸುತ್ತಿರುವಾಗ `ಒಬ್ಬ ಅನಾಮಿಕ' ನ ಆಂಗ್ಲ ಕವಿತೆಯು ಕಣ್ಣಿಗೆ ಬಿದ್ದಿತು, ಮನಸಿಗೆ ಹಿಡಿಸಿತು.

Is it raining, little flower?
Be glad of rain.
Too much sun would wither thee,
'Twill shine again.
The sky is very black, 'tis true,
But just behind it shines
The blue.

Art thou weary, tender heart?
Be glad of pain;
In sorrow the sweetest things will grow
As flowers in the rain.
God watches and thou wilt have sun
When clouds their perfect work
Have done.
Anonymous.
ಇಷ್ಟೆಲ್ಲಾ ಬರೆಯುವ ಕ್ಷಣಗಳಲ್ಲಿ, ನಮ್ಮ ಕಚೇರಿಯ ಹತ್ತಿರ ಮಳೆ ಹನಿ ಶುರುವಾಗಿದೆ. ಜೊತೆಗೆ ಬಿಸಿಲೂ ಕಾಣುತ್ತಿದೆ. ಮುಂದೆ ಬಿಸಿಲು-ಮಳೆಯೊಂದಿಗೆ ಮಳೆಬಿಲ್ಲೂ ಕಾಣುವುದು ಸಹಜ. ಆ ನಂತರ ಹಕ್ಕಿಗಳ ಚಿಲಿಪಿಲಿಯೂ ಕಂಡುಬರುತ್ತದೆ. ಇವೆಲ್ಲಾ ನೋಡಿದ್ದರೂ ಮತ್ತೆ ಮತ್ತೆ ಮನಸಿಗೆ ಮುದ ನೀಡುವ ಚಿತ್ರಣಗಳನ್ನು ಮರೆಯಲು ಸಾಧ್ಯವೇ?

ಹೀಗಿರುವಾಗ, "Showers alternate with sunshine, sorrows with pleasure, pain and weariness with comfort and rest; but accept the one as necessary to the other, and you will enjoy both" ಎಂದು ಅದೇ ಅನಾಮಿಕ ಕವಿಯ ಮಾತುಗಳು ನೆನಪಾದವು.
ಇದನ್ನೂ ಓದಿ/ನೋಡಿ: ಮಳೆ ನಿಂತು ಹೋದಮೇಲೆ ನಮ್ಮ ರಸ್ತೆಗಳಲ್ಲಿ ಇವೆಲ್ಲ ಕಂಡು ಬಂದಿವೆ. ಬ್ರಹ್ಮಕಮಲ, ಶಂಖದಹುಳು, ಬಸವನಹುಳು, ಮಿಡತೆ, ಕಪ್ಪೆಗಳು, ಇತ್ಯಾದಿ... (ಕೆಲವೊಂದು ಫೋಟೋಗಳನ್ನು ಇಲ್ಲಿ ಹಾಕಿದ್ದೇನೆ).

ಲೇಖನ: ಚಂದ್ರಶೇಖರ ಬಿ.ಎಚ್.
೨೪.೦೯.೨೦೦೯

6 ಕಾಮೆಂಟ್‌ಗಳು:

PARAANJAPE K.N. ಹೇಳಿದರು...

ಸಕಾಲಿಕ ಬರಹ, ಬಹಳ ಚೆನ್ನಾಗಿದೆ, ಬರಹ ಮತ್ತು ಚಿತ್ರಮಾಲಿಕೆ.

shivu.k ಹೇಳಿದರು...

ಕ್ಷಣ ಚಿಂತನೆ ಸರ್,

ಮಳೆಯ ಲೇಖನ ತುಂಬಾ ಚೆನ್ನಾಗಿ ಬಂದಿದೆ. ನಾನು ಕೂಡ ಮಳೆಯಲ್ಲೇ ಎಲ್ಲಾ ಕೆಲಸವನ್ನು ಮಾಡುತ್ತಿದ್ದೇನೆ. ನಿತ್ಯ ನೆನೆಯೋದು ಅಭ್ಯಾಸವಾಗಿದೆ. ಸಂಜೆ ವಾಕ್ ಹೋಗಿ ವಾಪಸ್ಸು ಬರುವಾಗಲು ನಾವಿಬ್ಬರೂ ನೆನೆದಿದ್ದಾಯ್ತು..

ಮತ್ತೆ ಮನೆಗೆ ಬಂದು ಈಗ ನಿಮ್ಮ ಬ್ಲಾಗಿನಲ್ಲಿ ಮಳೆಯ ಲೇಖನ ಫೋಟೊಗಳನ್ನು ನೋಡಿದೆ...ಚೆನ್ನಾಗಿದೆ...

ಕ್ಷಣ... ಚಿಂತನೆ... ಹೇಳಿದರು...

ಪರಾಂಜಪೆ ಸರ್‍, ಈ ಪುಟ್ಟ ಲೇಖನ ಮೆಚ್ಚಿದ್ದಕ್ಕೆ ಧನ್ಯವಾದಗಳು.

ಚಂದ್ರು

ಕ್ಷಣ... ಚಿಂತನೆ... ಹೇಳಿದರು...

ಶಿವು ಸರ್‍,

ಲೇಖನ ನಿಮಗೆ ಇಷ್ಟವಾಗಿದ್ದಕ್ಕೆ ಹಾಗೂ ಮಳೆಯಲ್ಲಿನ ನಿಮ್ಮ ಚಟುವಟಿಕೆಯನ್ನು ನೆನಪಿಸಿಕೊಂಡಿದ್ದೀರಿ. ಹೀಗೆ ಬರುತ್ತಿರಿ. ಧನ್ಯವಾದಗಳು.

ಚಂದ್ರು

Ittigecement ಹೇಳಿದರು...

ಚಂದ್ರಶೇಖರ್...

ಚಿಂತನೆಗೆ ಹಚ್ಚುವ ನಿಮ್ಮ ಬರಹ ಚೆನ್ನಾಗಿದೆ..
ಸಕಾಲಿಕವಾಗಿದೆ...

ವಿಜಯದಶಮಿಯ ಶುಭಾಶಯಗಳು....

ಕ್ಷಣ... ಚಿಂತನೆ... ಹೇಳಿದರು...

ಪ್ರಕಾಶಣ್ಣ,
ನಿಮ್ಮ ಅನಿಸಿಕೆಗಳಿಗೆ ಥ್ಯಾಂಕ್ಸ್.
ನಿಮಗೂ ಶುಭಾಶಯಗಳು.

ಚಂದ್ರು