ಸೋಮವಾರ, ಅಕ್ಟೋಬರ್ 5, 2009

ಬೆಳೆಯುವ ಸಿರಿ ಮೊಳಕೆಯಲ್ಲಿ

ನಿನ್ನೆ ಬೆಳಗ್ಗೆ ಗಿರಿನಗರದ ಹತ್ತಿರ ಇದ್ದೆ. ಒಬ್ಬ ಮಿತ್ರರನ್ನು ಭೇಟಿ ಮಾಡುವುದಿತ್ತು. ಅಲ್ಲಿಯೇ ಇದ್ದ ಒಂದು ದರ್ಶಿನಿಗೆ ಕಾಫಿಗೆಂದು ಹೋದೆ. ಆಗ, ನಡೆದ ಒಂದು ಘಟನೆಯನ್ನು ಅಕ್ಷರ ರೂಪಕ್ಕಿಳಿಸಿದ್ದೇನೆ. ಬಿಡುವಿದ್ದಾಗ ಓದಿ, ನಿಮ್ಮ ಅನಿಸಿಕೆಗಳನ್ನು ತಿಳಿಸಿ.

* * *

ಅಲ್ಲಿಬ್ಬರು ಹುಡುಗರು. ಸುಮರು ೯ ಮತ್ತು ೧೦ ವರ್ಷವಿರಬಹುದು. ದರ್ಶಿನಿಯಲ್ಲಿ ತಿಂಡಿಯ ಬೆಲೆ ವಿಚಾರಿಸುತ್ತಿದ್ದರು. ಎರಡು ರೂಪಾಯಿ ಕಡಿಯಮೆ ಇದೆ. ಏನ್ಮಾಡೋದೂ ಅಂತ ಯೋಚನೆ, ಒಬ್ಬ ಹುಡುಗನಿಗೆ. ಇಬ್ಬರೂ ತಿಂಡಿ ತಿನ್ನುವ ಆಸೆ. ಆದರೆ ದುಡ್ಡು ಕಡಿಮೆ ಇದೆ. ನಂತರ ಒಂದು ಉದ್ದಿನ ವಡೆ ತೊಗೊಂಡರು. ಇಬ್ಬರೂ ಅರ್ಧರ್ಧ ತಿಂದರು. ಇನ್ನೂ ನಾಲ್ಕು ರೂಪಾಯಿ ಉಳಿದಿದೆ ಎಂದ ದೊಡ್ಡ ಹುಡುಗ. ಅದಕ್ಕೆ, ಚಿಕ್ಕವನು ಇನ್ನೇನು? ತಿನ್ನೋಣ, ಇನ್ನೇನು ಬರುತ್ತೆ ಅಂತ ಮಾತಾಡುತ್ತಾ ಕೈ ತೊಳೆಯುತ್ತಿದ್ದರು.

ಆಗ...
ಪಕ್ಕದಲ್ಲಿ ಒಬ್ಬ ಗಾರೆಕೆಲಸದವ (ಸುಮಾರು ೧೮-೧೯ ವಯಸ್ಸಿನವ) ಇವರ ಮಾತನ್ನು ಕೇಳಿ, ತಮಾಷೆಯಾಗಿ `ಸಿಗರೇಟ್ ತೊಗೊಳ್ರೋ', ಎಂದ.
ಆಗ...
ಚಿಕ್ಕ ಹುಡುಗ, ಏನಂತೆ? ಎನ್ನುತ್ತಾ... `ಅಂಕಲ್‌, ಅದೆಲ್ಲ ನಿಮಗೇ ಇರಲಿ. ನಾವಂತ ಹುಡುಗ್ರಲ್ಲಾ.. ನಿಮಗೆ ಬೇಕಾದ್ರೆ ತೊಗೊಳಿ'. ಎನ್ನುತ್ತ... ದೊಡ್ಡ ಹುಡುಗನಿಗೆ, `ಬಾರಲೇ ಹೋಗೋಣ, ಏನೂ ತಿನ್ನೋದು ಬೇಡ', ಎಂದು ಕೂಗುತ್ತಾ ಇಬ್ಬರೂ ಅಲ್ಲಿಂದ ಕಾಲ್ತೆಗೆದರು.

ಆ ಗಾರೆ ಕೆಲಸದವ ತಮಾಷೆಗೆ ಹೇಳಿದ್ದರೂ, ಆ ಇಬ್ಬರೂ ಹುಡುಗರು, `ಸೀರಿಯಸ್ಸಾಗಿ' ಅವನ ಮಾತನ್ನು ತಿರಸ್ಕರಿಸಿ ಹೋಗಿದ್ದು ನೋಡಿ ಖುಷಿಯಾಯಿತು.

* * *

ಮಕ್ಕಳ ಮನಸ್ಸು ಹೇಗಿರುತ್ತದೆ, ಎಂದು ಬಲ್ಲವರು ಯಾರು? ಆ ವಯಸ್ಸಿಗನುಗುಣವಾಗಿ ಕುತೂಹಲದಿಂದ ಅವರು ಸಿಗರೇಟಿಗೆ ಕೈ ಚಾಚಿದ್ದರೆ...?? ಎಂತಹ ಅನಾಹುತಕ್ಕೆ ಎಡಯಾಗುತ್ತಿತ್ತು?
ಇದನ್ನೇ ಅಲ್ಲವೇ `ಬೆಳೆಯುವ ಸಿರಿ ಮೊಳಕೆಯಲ್ಲಿ' ಎನ್ನುವುದು.
* * *
ಚಂದ್ರಶೇಖರ ಬಿ.ಎಚ್.

12 ಕಾಮೆಂಟ್‌ಗಳು:

ಸಾಗರದಾಚೆಯ ಇಂಚರ ಹೇಳಿದರು...

ನಿಜ, ಮಕ್ಕಳು ಚಿಕ್ಕವರು ಇರುವಾಗ ಕಲಿತ ಗುಣಗಳೇ ದೊಡ್ಡವರಾದಾಗ ವ್ಯಕ್ತಿತ್ವ ರೂಪಿಸಲು ನೆರವಾಗುತ್ತವೆ, ನಿಜಕ್ಕೋ ಆ ಮಕ್ಕಳಲ್ಲಿ ಒಂದು ಸಂಸ್ಕಾರ ಇದೆ

PARAANJAPE K.N. ಹೇಳಿದರು...

ಮಕ್ಕಳ ಮನಸ್ಸು ಹಸಿಗೋಡೆಯ೦ತೆ, ಕಲ್ಲು ಎಸೆದರೆ ಅಲ್ಲಿ ನಾಟಿಕೊಳ್ಳುತ್ತದೆ, ಈ ಹಂತದಲ್ಲಿ ಅವರು ಸುಲಭವಾಗಿ ತಪ್ಪುದಾರಿಗಿಳಿಯುವ ಸಾಧ್ಯತೆ ಇರುತ್ತದೆ. ನಿಮ್ಮ ಅವಲೋಕನ ಚೆನ್ನಾಗಿದೆ.

ಕ್ಷಣ... ಚಿಂತನೆ... bhchandru ಹೇಳಿದರು...

ಗುರುಮೂರ್ತಿ ಅವರೆ, ನಿಮ್ಮ ಮಾತು ನಿಜ. ಆ ಹುಡುಗರು ಉತ್ತಮ ಮನೆತನದವರಂತೆಯೇ ಕಾಣುತ್ತಿದ್ದರು.

ನಿಮ್ಮ ಅನಿಸಿಕೆಗಳಿಗೆ ಧನ್ಯವಾದಗಳು.

ಸ್ನೇಹದಿಂದ,
ಚಂದ್ರು

ಕ್ಷಣ... ಚಿಂತನೆ... bhchandru ಹೇಳಿದರು...

ಪರಾಂಜಪೆ ಸರ್‍,

ಇಂತಹ ವಿಚಾರಗಳಲ್ಲಿ ಬಹಳ ಎಚ್ಚರಿಕೆಯಿಂದ ಮಕ್ಕಳ ಮನಸ್ಸಿನ ಜೊತೆ ವ್ಯವಹರಿಸಬೇಕು. ಇಲ್ಲವಾದರೆ, ಮನೆಯವರಿಗೂ, ಸಮಾಜಕ್ಕೂ ತೊಂದರೆ.

ಧನ್ಯವಾದಗಳು.

ಸ್ನೇಹದಿಂದ,

ಚಂದ್ರು

ತೇಜಸ್ವಿನಿ ಹೆಗಡೆ- ಹೇಳಿದರು...

ವಯಸ್ಸಿನಲ್ಲಿ ದೊಡ್ಡವನಾದ ಆ ಗಾರೆಗೆಲಸದವನಗಿಂತ.. ವಯಸ್ಸಿನಲ್ಲಿ ಚಿಕ್ಕವರಾದ ಈ ಮಕ್ಕಳ ಮನಸ್ಸು ದೊಡ್ಡದೆನಿಸಿತು. ಅವರಿಗೆ ಉತ್ತಮ ಭವಿಷ್ಯ ಸಿಗುವಂತಾಗಲೆಂದು ಹಾರೈಸುವೆ.

AntharangadaMaathugalu ಹೇಳಿದರು...

ನಿಜಕ್ಕೂ ಸಂಸ್ಕಾರವಂತ ಮಕ್ಕಳು. ಇದಕ್ಕೆ ಅವರ ತಾಯಿ ತಂದೆಯರನ್ನು ಶ್ಲಾಘಿಸಬೇಕು. ಮಕ್ಕಳಿಗೆ ಖಂಡಿತಾ ಉಜ್ವಲ ಭವಿಷ್ಯವಿದೆ. ಒಳ್ಳೆಯ ವಿಷಯ ಚೆನ್ನಾಗಿದೆ.

ಶ್ಯಾಮಲ

ಕ್ಷಣ... ಚಿಂತನೆ... bhchandru ಹೇಳಿದರು...

ತೇಜಸ್ವಿನಿ ಮೇಡಂ,

ಆ ಹುಡುಗರಿಗೆ ಉತ್ತಮ ಭವಿಷ್ಯ ಸಿಗಲೆಂದು ಹಾರೈಸಿದ್ದೀರಿ.

ಧನ್ಯವಾದಗಳು.

ಚಂದ್ರು

ಕ್ಷಣ... ಚಿಂತನೆ... bhchandru ಹೇಳಿದರು...

ಶ್ಯಾಮಲಾ ಅವರೆ, ಅವರು ನಿಜಕ್ಕೂ ಸಂಸ್ಕಾರವಂತರ ಮಕ್ಕಳಾಗಿದ್ದರು. ಹೇಗೆಂದ್ರೆ, ಅವರು ಧರಿಸಿದ್ದ ಉಡುಪು ಮತ್ತು ಹಣೆಯಲ್ಲಿದ್ದ ಶ್ರೀಗಂಧದ ತಿಲಕ ಮತ್ತು ಅವರಾಡುತ್ತಿದ್ದ ಸುಲಲಿತ ಭಾಷೆ. ಅವರ ತಾಯಿ-ತಂದೆಯರಿಗೆ ಮೆಚ್ಚುಗೆ ಮತ್ತು ಮಕ್ಕಳನ್ನು ಹರಸಿದ್ದೀರಿ.

ನಿಮ್ಮ ಅನಿಸಿಕೆಗಳಿಗೆ ಧನ್ಯವಾದಗಳು.

ಚಂದ್ರು

Savitha.B.C ಹೇಳಿದರು...

ಚಂದ್ರು ಸರ್ ಅತ್ಯಂತ ಚಿಕ್ಕದಾದಾ ಲೇಖನ ಆದರು ತಿಳಿದುಕೊಳ್ಳುವುದು ತುಂಬ ಇದೆ. ಮಕ್ಕಳಿಗೆ ಚಿಕ್ಕವರಾಗಿದ್ದಾಗ ದೊಡ್ಡವರು ಏನು ಸಂಸ್ಕಾರ ಕಲಿಸುತ್ತಾರೋ ಅದೇ ಅವರ ಜೀವನದುದ್ದಕ್ಕೂ ಆಚರಣೆಯಾಗುತ್ತದೆ... ನಿಮ್ಮ ಲೇಖನಕ್ಕೆ ಅತ್ಯಂತ ಸೂಕ್ತ ಶೀರ್ಷಿಕೆ...........

ಕ್ಷಣ... ಚಿಂತನೆ... bhchandru ಹೇಳಿದರು...

ಸವಿತಾ, ನಿನ್ನ ಅನಿಸಿಕೆಗಳಿಗೆ ಥ್ಯಾಂಕ್ಸ್.

ಹೀಗೇ ಬರುತ್ತಿರಿ.

ಸ್ನೇಹದಿಂದ,
ಚಂದ್ರು

shivu ಹೇಳಿದರು...

ಕ್ಷಣಚಿಂತನೆ ಸರ್,

ಮಕ್ಕಳ ಮನಸ್ಸನ್ನು ಒಂದು ಹಂತದವರೆಗೆ ಯಾರು ಏನೇ ಪ್ರಯತ್ನ ಮಾಡಿದರೂ ಬದಲಿಸಲಾಗುವುದಿಲ್ಲ. ಅಂತ ಅನುಭವ ನನಗೂ ಆಗಿದೆ.

ಅದಕ್ಕೆ ಮಕ್ಕಳ ಮನಸ್ಸಿಗೆ ಒಳ್ಳೆಯದನ್ನು ಮಾತ್ರ ತುಂಬಬೇಕು.

ನಿಮ್ಮ ಅನುಭವದ ಲೇಖನ ಚೆನ್ನಾಗಿದೆ ಸರ್..

ಕ್ಷಣ... ಚಿಂತನೆ... bhchandru ಹೇಳಿದರು...

Shivu sir,
nimma anisikegalige dhanyavaadagaLu.

snehadinda,
chandru