ಗುರುವಾರ, ಅಕ್ಟೋಬರ್ 15, 2009

ದೀಪಾವಳಿ - ಚೈತನ್ಯ ತರಲಿ


ಬೆಳಗಿನ ಉಷಾಕಿರಣದಂತೆ
ದಿನಮಣಿಯ ಪ್ರಖರತೆಯಂತೆ
ಬಾಳಿನ ಆಶಾಸೌಧಕೆ, ಸ್ಫೂರ್ತಿಯಾಗಿ,
ಪೂರ್ತಿಯಾಗಿ, ಸವಿಯಾಗಿ
ಬರಲಿ, ದೀಪಾವಳಿ

ನೆರೆಯಲಿ ನೊಂದವರ ಬಾಳಿನ,
ಮನದ ದುಗಡಗಳನೆಲ್ಲ ಅಳಿಸಿ,
ಹೊಸಬೆಳಕನು ಉಡಿಸಿ, ಅವರ ಮೊರೆಗೆ
ಬೆಳದಿಂಗಳಾಗಿ, ಕರುಣೆಯಿಂದದಿ
ಬರಲಿ, ದೀಪಾವಳಿ

ತಾಯ್ತಂದೆ, ಮಡದಿ, ಪತಿ, ಮಕ್ಕಳ ನೆನಪು,
ಪ್ರೀತಿಯಿಂ ಕಾಪಾಡಿ ಬೆಳೆದ ಬೆಳೆ,
ಜೊತೆಜೊತೆಗೆ ದುಡಿದ ಜಾನುವಾರುಗಳ
ನೆನಪು ಹಳೆಯದಾಗಿ, ತಿಳಿಯಾಗಿ,
ಕುಡಿಯಾಗಿ, ಬರಲಿ ದೀಪಾವಳಿ

ಎಲ್ಲರಿಗೂ `ದೀಪಾವಳಿ' ಶುಭಾಶಯಗಳು (ಮುಂಚಿತವಾಗಿ)
- ಚಂದ್ರಶೇಖರ ಬಿ.ಎಚ್. ೧೫.೧೦.೨೦೦೯

7 ಕಾಮೆಂಟ್‌ಗಳು:

ಸಾಗರದಾಚೆಯ ಇಂಚರ ಹೇಳಿದರು...

ದೀಪಾವಳಿಯ ಹಾರ್ದಿಕ ಶುಭಾಶಯಗಳು.

ವಿನಾಯಕ ಹೆಬ್ಬಾರ ಹೇಳಿದರು...

ನಿಮ್ಮ ಆಶಯ ತುಂಬಾ ಚೆನ್ನಾಗಿದೆ....ನೀವೆಂದಂತೆ ಆಗಲಿ....

ತೇಜಸ್ವಿನಿ ಹೆಗಡೆ- ಹೇಳಿದರು...

ಸುಂದರ ಕವನ. ನಿಮಗೂ ದೀಪಾವಳಿಯ ಹಾರ್ದಿಕ ಶುಭಾಶಯಗಳು.

shivu ಹೇಳಿದರು...

ಸರ್,

ಕವನದ ಆಶಯ ಚೆನ್ನಾಗಿದೆ. ನಿಮಗೂ ದೀಪಾವಳಿ ಹಬ್ಬದ ಶುಭಾಶಯಗಳು.

ಕ್ಷಣ... ಚಿಂತನೆ... bhchandru ಹೇಳಿದರು...

ಗುರು, ವಿನಾಯಕ ಹೆಬ್ಬಾರ, ತೇಜಸ್ವಿನಿ, ಶಿವು ನಿಮ್ಮ ಅನಿಸಿಕೆಗಳಿಗೆ ಧನ್ಯವಾದಗಳು.

ನಿಮಗೆಲ್ಲರಿಗೂ ಕೂಡ ದೀಪಾವಳಿ ಹಬ್ಬದ ಶುಭಾಶಯಗಳು.

ಸ್ನೇಹದಿಂದ,

ಚಂದ್ರು

Manju Bhat ಹೇಳಿದರು...

ನಿಮಗೆ ಹಾಗೂ ನಿಮ್ಮ ಮನೆಯವರಿಗೆ ದೀಪಾವಳಿಯ ಶುಭಾಶಯಗಳು!!!

AntharangadaMaathugalu ಹೇಳಿದರು...

ನಿಮಗೂ ಹಾಗೂ ನಿಮ್ಮ ಮನೆಯವರೆಲ್ಲರಿಗೂ
ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು.......
ಶ್ಯಾಮಲ