ಸೋಮವಾರ, ಅಕ್ಟೋಬರ್ 12, 2009

ದೃಷ್ಟಿಕೋನ

"No two people see the same world" - Swami Vivekananda
ಧೀರ ಸಂನ್ಯಾಸಿ ಸ್ವಾಮಿ ವಿವೇಕಾನಂದರ ಈ ವಾಣಿ ಎಷ್ಟು ಸಮಂಜಸವಾದದ್ದು. ಯಾರೇ ಇಬ್ಬರು ಈ ವಿಶ್ವವನ್ನು ನೋಡುವ ದೃಷ್ಟಿಕೋನವು ಒಂದೇ ಆಗಿರುವುದಿಲ್ಲ.

ಪ್ರತಿಯೊಬ್ಬನಲ್ಲಿಯೂ ದ್ವಂದ್ವ ವಿಚಾರವಿರುತ್ತದೆ ಎಂದರೆ ತಪ್ಪಾಗದು. ಒಂದು ಧನಾತ್ಮಕ ಆಗಿದ್ದರೆ, ಮತ್ತೊಂದು ಋಣಾತ್ಮಕ. ಧನಾತ್ಮಕ ವಿಚಾರವಾದಿಯಲ್ಲಿ ಎಂತಹ ಸಾಧನೆಯನ್ನಾದರೂ ಸಾಧಿಸಬಹುದು ಎಂಬಂಶ ಇರುತ್ತದೆ. ಈ ಜಗತ್ತಿನಲ್ಲಿ ಸಾಧಿಸಲು ಅಸಾಧ್ಯವಾದುದು ಯಾವುದೂ ಇಲ್ಲ ಎಂಬ ಮನೋಭಾವವೇ ಇಂದಿನ ಆಧುನಿಕ ಸಂಶೋಧನೆಗಳೆನ್ನಬಹುದು. ಸಾಗರದಾಳದಲ್ಲಿ ಸಂಚರಿಸಬಲ್ಲ, ಎತ್ತರ ಪರ್ವತಗಳನ್ನು ಹತ್ತಬಲ್ಲ, ಚಂದ್ರತಾರೆಗಳೆಡೆಗೆ ಹೋಗಿಬರಬಲ್ಲ. ಇವೆಲ್ಲ ಸಾಧ್ಯವಾಗುವುದು ಇಂತಹ ಧನಾತ್ಮಕ ದೃಷ್ಟಿಕೋನದಿಂದ ಎನಬಹುದು. ಇಲ್ಲವಾಗಿದ್ದರೆ, ಮೊದಲ ಪ್ರಯತ್ನದಲ್ಲಿ ಸೋತವನು ಮತ್ತೆ ಮತ್ತೆ ಪ್ರಯತ್ನಿಸುತ್ತಿರಲಿಲ್ಲ, ಅಲ್ಲವೇ? ಹಿಡಿದ ಕೆಲಸ ಬಿಡದ ಛಲವಂತರು. ಇವರುಗಳು ಸೋಲನ್ನೇ ಗೆಲುವಿನ ಮೆಟ್ಟಿಲಾಗಿ ಪರಿವರ್ತಿಸುವಂತಹ ಧನಾತ್ಮಕತೆಯ ವಿಚಾರವಾದಿಗಳು.

ಇದಕ್ಕೆ ತದ್ವಿರುದ್ಧವಾದದು ಋಣಾತ್ಮಕ ವಿಚಾರವಾದಿಯಲ್ಲಿ ಅಡಕವಾಗಿರುತ್ತದೆ. ಸರಳವಾಗಿ ಹೇಳುವುದಾದರೆ, ಯಾವುದೇ ಒಂದು ಸಣ್ಣಪುಟ್ಟ ಕೆಲಸವೂ ನನ್ನಿಂದ ಆಗುವುದಿಲ್ಲ ಎಂಬ ಯೋಚನೆ ಬಂದೊಡನೆಯೇ ಋಣಾತ್ಮಕ ಚಿಂತನೆಗಳು ಇಂತಹವರಲ್ಲಿ ಸಾಗಿಬರುತ್ತವೆ. ಇವರು ಪ್ರತಿಯೊಂದರಲ್ಲಿಯೂ ಸೋಲನ್ನೆ ಕಾಣುವ ಪ್ರವೃತ್ತಿಯವರು.

©Photo Chandrashekara B.H. Mar 2009


ಕಳೆದ ವಾರದ ಮಳೆಯಿಂದ ಅರ್ಧ ಕರ್ನಾಟಕ, ಆಂಧ್ರ ಪ್ರದೇಶ, ಮಹಾರಾಷ್ಟ್ರ ಇಲ್ಲೆಲ್ಲ ಜನಜೀವನ, ಜಾನುವಾರುಗಳು, ಪ್ರಾಣಿ-ಪಕ್ಷಿ ಸಂಕುಲಗಳು ಅಸ್ತವ್ಯಸ್ತವಾಗಿವೆ. ಅನೇಕ ಜನರು ತಮ್ಮ ಮಕ್ಕಳು, ಕುಟುಂಬ ಸದಸ್ಯರು, ಹಿರಿಯರು, ಕಿರಿಯರು, ಜಾನುವಾರು, ಮನೆ, ಹೊಲ ಎಲ್ಲವನ್ನೂ ಸಿರಿವಂತ, ಬಡವ ಎಂಬುದಿಲ್ಲದೇ ಕಳೆದುಕೊಂಡಿದ್ದಾರೆ. ಇಂತಹ ಸಮಯದಲ್ಲಿ ಅವರುಗಳಿಗೆ ಸ್ವಯಂ ಸೇವಕರು, ಸಂಘಗಳು, ಸರ್ಕಾರ ಇವೆಲ್ಲದರ ವತಿಯಿಂದ ಆಹಾರ, ಧಾನ್ಯ, ಬಟ್ಟೆ, ವಸತಿ ಹೀಗೆ ಪ್ರತಿಯೊಂದೂ ಸಹಾಯ ಮಾಡಲು ಜನರು ಮುಂದಾಗಿದ್ದಾರೆ. ರಸ್ತೆ, ಮನೆಗಳು, ಹೊಲ, ಇವುಗಳನ್ನೆಲ್ಲ ಹೂಳಿನಿಂದ ತೆಗೆದು, ರಸ್ತೆ ನಿರ್ಮಿಸಿ, ಬದುಕು ಕಟ್ಟುವಲ್ಲಿ ನಿರತರಾಗಿದ್ದಾರೆ. ಇವರೆಲ್ಲರ ಆಶಾಭಾವನೆಗಳೇ ಆ ಸಂತ್ರಸ್ತರಿಗೆ ದಾರಿದೀಪವಾಗುತ್ತಿವೆ. ಇಲ್ಲೆಲ್ಲ ಧನಾತ್ಮಕ ಮನೋಭಾವವೇ ಜನರ ಬದುಕನ್ನು ಕಟ್ಟುವಲ್ಲಿ ನಿರತವಾಗಬೇಕಿದೆ. ಮತ್ತೆ ಹೊಸ ಜೀವನ ಸಾಗಿಸುವಲ್ಲಿ ಅವರಿಗೆ ಆತ್ಮವಿಶ್ವಾಸವನ್ನು ಈ ಜಗತ್ತನ್ನು ನಡೆಸುತ್ತಿರುವ ಆ ಧೀಶಕ್ತಿಯು ನೀಡಲಿ.

"Nature, when she adds difficulties, adds brains", says EMERSON.

ಮುಂದಿನವಾರ ದೀಪಾವಳಿಯು ಸನಿಹವಾಗುತ್ತಿದೆ. ಇಂತಹ ಸಂದರ್ಭದಲ್ಲಿ ಮಳೆ, ನೆರೆ, ನೆರೆಭೀತಿಯಿಂದ ಸಂತ್ರಸ್ತರಾಗಿರುವ ಜನರ ಬದುಕಿಗೆ ದಿವ್ಯವಾದ ಬೆಳಕು ಲಭಿಸಲಿ ಎಂದು ಆಶಿಸುತ್ತಾ...

"The truest test of civilization is not the census, nor the size of cities, nor the crops; no, but the kind of man the country turns out", says EMERSON.

ಚಂದ್ರಶೇಖರ ಬಿ.ಎಚ್.

13 ಕಾಮೆಂಟ್‌ಗಳು:

ವಿನಾಯಕ ಹೆಬ್ಬಾರ ಹೇಳಿದರು...

chennagide.....

ಸಿಮೆಂಟು ಮರಳಿನ ಮಧ್ಯೆ ಹೇಳಿದರು...

ಚಂದ್ರಶೇಖರ್....

ನಿಮ್ಮ ಆಶಯ ಬಲು ಚೆನ್ನಾಗಿದೆ...
ಆಪ್ತವಾಗಿದೆ..

ಸಕಾಲಿಕವೂ ಆಗಿದೆ...
ನಾವೆಲ್ಲ ಅವರಿಗೆ ಸಹಾಯ ಮಾಡ ಬೇಕು..
ನಾವು ಕೊಟ್ಟ ಹಣ ಯೋಗ್ಯವಾಗಿ ಸಂತ್ರಸ್ತರಿಗೇ ಮುಟ್ಟುವದನ್ನು
ಖಾತ್ರಿ ಪಡಿಸಿಕೊಂಡು ಕೊಡಬೇಕು...

ಧನ್ಯವಾದಗಳು...

ಸಾಗರದಾಚೆಯ ಇಂಚರ ಹೇಳಿದರು...

ಚಂದ್ರು ಸರ್,
ನೀವು ಅನ್ನೋದು ಸರಿ,
ವಿಚಾರ ಯಾವಾಗಲೂ ಧನಾತ್ಮಕವಾಗಿಯೇ ಇರಬೇಕು
ಧನಾತ್ಮಕೆ ತುಂಬಿದ್ದರೆ ಏನು ಬೇಕಾದರೂ ಸಾಧಿಸಬಹುದು

shivu ಹೇಳಿದರು...

ಸರ್,

ಧನಾತ್ಮಕ ಋಣಾತ್ಮಕ ವಿಚಾರಗಳ ಬಗ್ಗೆ ತುಂಬಾ ಚೆನ್ನಾಗಿ ಬರೆದಿದ್ದೀರಿ..

ಈ ಸಂದರ್ಭಕ್ಕೆ ಸಮಯೋಚಿತವೂ ಆಗಿದೆ. ಅಲ್ಲಿನ ಪರಿಸ್ಥಿತಿಯಲ್ಲಿ ನಾವೆಲ್ಲಾ ಅದ್ದೂರಿ ದೀಪಾವಳಿ ಆಚರಿಸುವುದು ಬೇಡವೆಂದು ನನ್ನ ಭಾವನೆ.

ಧನ್ಯವಾದಗಳು.

ಕ್ಷಣ... ಚಿಂತನೆ... bhchandru ಹೇಳಿದರು...

ವಿನಾಯಕ ಹೆಬ್ಬಾರರೇ, ಮೊದಲ ಬಾರಿಗೆ ನನ್ನ ಬ್ಲಾಗಿಗೆ ಬಂದಿದೀರಿ ನಿಮಗೆ ಸ್ವಾಗತ. ಹಾಗೂ ನಿಮ್ಮ ಅನಿಸಿಕೆಗಳಿಗೆ ಧನ್ಯವಾದಗಳು. ಹೀಗೆಯೆ ಬರುತ್ತಿರಿ.

ಚಂದ್ರು,

ಕ್ಷಣ... ಚಿಂತನೆ... bhchandru ಹೇಳಿದರು...

ಪ್ರಕಾಶಣ್ಣ,

ನಾನು ಏನೋ ಬರೆಯಲು ಯೋಚಿಸಿದ್ದೆ. ಬರೆಯುತ್ತಿರುವಾಗ ಇಲ್ಲಿ ನಮ್ಮ ಕ್ಯಾಂಪಸ್ಸಿನಲ್ಲಿ ಬಹಳ ಮಳೆ, ಸಿಡಿಲು ಶುರುವಾಯಿತು. ಆಗ, ನನ್ನ ಬರಹ ಈ ದೃಷ್ಟಿಕೋನಕ್ಕೆ ತಿರುಗಿತು.

ಹೌದು, ಸಂತ್ರಸ್ತರಿಗೆ ಶ್ರೀಸಾಮಾನ್ಯನ ಹಣ ಸದುಪಯೋಗವಾಗಬೇಕು. ನಿಮ್ಮ ಅನಿಸಿಕೆಗಳಿಗೆ ಧನ್ಯವಾದಗಳು.

ಸ್ನೇಹದಿಂದ,
ಚಂದ್ರು,

ಕ್ಷಣ... ಚಿಂತನೆ... bhchandru ಹೇಳಿದರು...

ಗುರು ಅವರೆ, ಈ ಜಗತ್ತಿನಲ್ಲಿ ಇರುವುದು + ಮತ್ತೊಂದು -. + ಗಳು ಎರಡು - ಗಳಿಂದ ಆಗಿದೆ. So, think positive ಎಂದು ನನ್ನ ಮೊಬೈಲಿಗೆ ಒಂದು ಸಂದೇಶವೂ ಬಂದಿತ್ತು.
ನಿಮ್ಮ ಅನಿಸಿಕೆಗಳಿಗೆ ಸ್ವಾಗತ.

ಧನ್ಯವಾದಗಳು,

ಸ್ನೇಹದಿಂದ,
ಚಂದ್ರು

ಕ್ಷಣ... ಚಿಂತನೆ... bhchandru ಹೇಳಿದರು...

ಶಿವೂ ಅವರೆ, ನಿಮ್ಮ ಅಭಿಪ್ರಾಯಗಳಿಗೆ ಧನ್ಯವಾದಗಳು. ಇಂದಿನ ದಿನಪತ್ರಿಕೆಯಲ್ಲಿಯೂ ಸಹ ನೀವು ನಿಮ್ ಅಭಿಪ್ರಾಯದ ಕೊನೆಯಲ್ಲಿ ಹೇಳಿರುವ ಮಾತುಗಳು ಇವೆ.

ಸ್ನೇಹದಿಂದ,

ಚಂದ್ರು.

PARAANJAPE K.N. ಹೇಳಿದರು...

ನಿಮ್ಮ ಆಶಯ ಸಕಾಲಿಕವಾದುದು. ಸ೦ತ್ರಸ್ತರಿಗೆ೦ದು ನಾವು ಕೊಟ್ಟ ದೇಣಿಗೆ ಅಪಾತ್ರದಾನ ಆಗಬಾರದು. ಅಷ್ಟನ್ನು ಖಾತ್ರಿ ಪಡಿಸಿಕೊ೦ಡು ನಾವು ಸ೦ತ್ರಸ್ತರ ನೆರವಿಗೆ ನಮ್ಮ ಕೈಲಾದಷ್ಟನ್ನು ಕೊಡೋಣ. ಧನಾತ್ಮಕ ವಿಚಾರ ಲಹರಿ ಯೊ೦ದಿಗೆ ಮುಂದುವರೆಯೋಣ.

PaLa ಹೇಳಿದರು...

ಸಕಾಲಿಕವಾಗಿದೆ ನಿಮ್ಮ ಆಶಯ.. ಜೊತೆಗೆ ನಮ್ಮ ನೆರವೂ ನೆರೆ ಸಂತ್ರಸ್ತರಿಗೆ ಊರುಗೋಲಾಗಬಹುದು.

AntharangadaMaathugalu ಹೇಳಿದರು...

ಚಂದ್ರು ಅವರೇ...
ನಿಮ್ಮ ವಿಚಾರ ಉತ್ತಮವಾಗಿದೆ. ಎಲ್ಲರೂ ಈಗಾಗಲೇ ನಮ್ಮ ಕೈಲಾದ ಕಾಣಿಕೆಗಳನ್ನು ಕೊಟ್ಟೇ ಇದ್ದಾರೆ. ನಿನ್ನೆ ಟಿವಿ೯ ನಲ್ಲಿ ಅವರು ಸಂಗ್ರಹಿಸಿದ ವಸ್ತುಗಳನ್ನೆಲ್ಲಾ ವಿತರಣೆ ಮಾಡಿದ್ದನ್ನು ತೋರಿಸುತ್ತಿದ್ದರು.... ಟಿವಿ೯ ರವರು ಇದೆಲ್ಲಾ ನಿಮ್ಮದೇ ಮತ್ತು ನಿಮ್ಮಿಂದಲೇ ಸಾಧ್ಯವಾಯಿತು ವೀಕ್ಷಕರೇ ಎಂದು ತಮ್ಮ ಧನ್ಯವಾದ ಅರ್ಪಿಸಿದರೆ...!!!

ಶ್ಯಾಮಲ

ಕ್ಷಣ... ಚಿಂತನೆ... bhchandru ಹೇಳಿದರು...

ಪರಾಂಜಪೆ ಮತ್ತು ಪಾಲ,

ನಿಮ್ಮ ಅನಿಸಿಕೆಗಳಿಗೆ ಧನ್ಯವಾದಗಳು. ನಿಮ್ಮೆಲ್ಲರ ಆಶಯವೇ ನನ್ನದೂ ಸಹ. ನಮ್ಮ ಕಚೇರಿಯ ಮುಖಾಂತರ ಒಂದು ದಿನದ ಸಂಬಳ ನೀಡಲು ನಾವೆಲ್ಲ ಬರೆದುಕೊಟ್ಟಿದ್ದೇವೆ. ಅದು ಸಕಾಲದಲ್ಲಿ, ಸರಿಯಾಗಿ ಸಂತ್ರಸ್ತರಿಗೆ ನೆರವಾಗುವುದು ಎಂಬ ಆಶಯವಿದೆ.

ಸ್ನೇಹದಿಂದ,

ಚಂದ್ರು

ಕ್ಷಣ... ಚಿಂತನೆ... bhchandru ಹೇಳಿದರು...

ಶ್ಯಾಮಲಾ ಅವರೆ, ನಿಮ್ಮ ಅಭಿಪ್ರಾಯಗಳಿಗೆ ಧನ್ಯವಾದಗಳು. ಟಿವಿಯಲ್ಲಿ ತೋರಿಸಿದ ವಿಚಾರ ನನಗೆ ತಿಳಿದಿರಲಿಲ್ಲ. ಟಿವಿಯನ್ನು ನಾನು ಅಷ್ಟಾಗಿ ನೋಡುವುದಿಲ್ಲ. ವಿಷಯ ತಿಳಿಸಿದ್ದಕ್ಕೆ ಧನ್ಯವಾದಗಳು.

ಸ್ನೇಹದಿಂದ,

ಚಂದ್ರು