ಶನಿವಾರ, ಅಕ್ಟೋಬರ್ 31, 2009

ಕನ್ನಡಮ್ಮನ ಆರಾಧನೆ

ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು. ಸುಮಾರು ೨೦೦೦ ನೇ ಇಸವಿಯಲ್ಲಿ ಒಂದು ಕವಿತೆ ಬರೆದಿದ್ದೆ.

ನೆರೆ ಹಾವಳಿಯಿಂದಾಗಿ ಈ ಬಾರಿಯ ರಾಜ್ಯೋತ್ಸವ ಕಾರ್ಯಕ್ರಮಗಳು ಸರಳವಾಗಿ ನಡೆಸಲು ರಾಜ್ಯ ಸರ್ಕಾರದ ಮನವಿಯಿದೆ. ಕನ್ನಡವನ್ನು ಉಳಿಸಿ, ಬೆಳೆಸಲು ಸರಳವಾಗಿ ಎಲ್ಲರೊಡನೆ ಬೆರೆತು, ಕಲೆತು, ಓದಿ-ಬರೆದು, ಮಾತಾಡಿದರೆ ಸಾಕೆಂಬುದು ನನ್ನ ಅನಿಸಿಕೆ. ಬಿಡುವಿದ್ದಾಗ ಓದಿ, ನಿಮ್ಮ ಅನಿಸಿಕೆಗಳನ್ನು ತಿಳಿಸಿರಿ.
ಮತ್ತೊಮ್ಮೆ ಎಲ್ಲರಿಗೂ ಶುಭಾಶಯಗಳು.


ಕನ್ನಡಮ್ಮನ ಆರಾಧನೆ

ನವ್ಹೆಂಬರದ ತೇದಿ ಮೊದಲಲಿ, ಹರುಷ ಎಲ್ಲರ ಹೃದಯದಲಿ
ಹಾರಿಸುವರು ಕನ್ನಡ ಬಾವುಟ, ತಾಯಿ-ಕನ್ನಡದೇವಿಯನು ಪೂಜಿಸುತ
ಪಂಪ, ರನ್ನರಿಗೆ ನಮಿಸುತಾ, ವಿದ್ಯಾರಣ್ಯರ ನೆನೆಯುತ
ಚೆನ್ನಮ್ಮ, ಮಲ್ಲಮ್ಮ, ಓಬವ್ವರ ನಾಡಿನಲಿ ಹಾಡುತಾ
ರಾಯಣ್ಣ, ಸಿಂಧೂರಲಕ್ಷ್ಮಣರ ಕೆಚ್ಚು ಮೆಚ್ಚುತಾ
ಹಾರಿಸುವರು ಕನ್ನಡ ಬಾವುಟ, ತಾಯಿ-ಕನ್ನಡದೇವಿಯನು ಪೂಜಿಸುತ
ಕರ್ನಾಟಕ ಸಂಗೀತಕೆ ಕೊಡುಗೆಯಿತ್ತ ದಾಸಶ್ರೇಷ್ಠರ ನೆನೆಯುತಾ
ಯೋಗಿ ಬಸವಣ್ಣ, ಶಿವಶರಣೆ ಅಕ್ಕ, ಜ್ಞಾನಿ ಸರ್ವಜ್ಞರಿಗೆ ನಮಿಸುತಾ
ಭಕ್ತಿಭಾವಗಳಿಗೆ ಶಿರಬಾಗಿ, ಮುಕ್ತರಾದೆವೆಂದು ತಿಳಿಯುತಾ
ಹಾರಿಸುವರು ಕನ್ನಡ ಬಾವುಟ, ತಾಯಿ-ಕನ್ನಡದೇವಿಯನು ಪೂಜಿಸುತ
ಕನ್ನಡ ನೆಲದಲಿ ಹುಟ್ಟಿ-ಬೆಳೆದು, ಉತ್ತಿಬಿತ್ತಿ ಬೆಳೆದು
ಕಾವೇರಿ ನೀರನು ಕುಡಿದು, ಬಾಳಿದಾ, ಬಾಳುತಿರುವ
ಜೀವ-ಜೀವಿಗಳೇ ನೀವೇ, ನೀವೇ ಧನ್ಯರು ಎನ್ನುತಾ
ಹಾರಿಸುವರು ಕನ್ನಡ ಬಾವುಟ, ತಾಯಿ-ಕನ್ನಡದೇವಿಯನು ಪೂಜಿಸುತ
ಒಂದಾಗಿ ಬನ್ನಿ, ಸಾಲಾಗಿ ಬನ್ನಿ, ಜಗಳ ಜಂಜಾಟ ಮರೆತು ಬನ್ನಿ
ಸ್ನೇಹ-ಸೌಹಾರ್ದಭಾವದಲಿ ಬನ್ನಿ, ಮಕ್ಕಳಂತೆಯೆ ಬನ್ನಿ
ಭುವನೇಶವರಿಯ ಪೂಜಿಸುವ ಬನ್ನಿ, ಶಿರಬಾಗಿ ಬನ್ನಿ
ಸಮಸ್ತ ಕನ್ನಡನಾಡಿಗೆ ದುಡಿದು ಶ್ರಮಿಸಿದವರಿಗೆ ನಮಿಸುತ ಬನ್ನಿ
ಕನ್ನಡ-ಭಾಷೆ-ನಾಡನು ಉಳಿಸುವ, ಬೆಳೆಸುವ ಕಾರ್ಯಕೆ ಉತ್ಸಾಹದಲಿ ಬನ್ನಿ
ನವ್ಹೆಂಬರದ ತೇದಿ ಮೊದಲಲಿ, ಹರುಷ ಎಲ್ಲರ ಹೃದಯದಲಿ
ಹಾರಿಸುವರು ಕನ್ನಡ ಬಾವುಟ, ತಾಯಿ-ಕನ್ನಡದೇವಿಯನು ಪೂಜಿಸುತ

- ಚಂದ್ರಶೇಖರ ಬಿ. ಎಚ್.
ಡಿಸೆಂಬರ್ ೦೧, ೨೦೦೦

6 ಕಾಮೆಂಟ್‌ಗಳು:

shivu ಹೇಳಿದರು...

ಕ್ಷಣಚಿಂತನೆ ಸರ್,

ತಡವಾಗಿ ಬಂದಿದ್ದಕ್ಕೆ ಕ್ಷಮೆಯಿರಲಿ...ನಿಮ್ಮ ಈ ಪದ್ಯ ಚೆನ್ನಾಗಿದೆ...ರಾಜ್ಯೋತ್ಸವಗಳು ಸರಳವಾಗಿ ಆಚರಣೆಗೆ ಜಾರಿಯಲ್ಲಿದೆ. ನೆರಹಾವಳಿಯ ಸಂದರ್ಭವಾದರೂ ತಾಯಿ ಭುವನೇಶ್ವರಿಯನ್ನು ನೆನಸಲೇ ಬೇಕು.

ನಿಮಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು.

ಗೌತಮ್ ಹೆಗಡೆ ಹೇಳಿದರು...

nimage tadavaagi rajyotsavada shubhashayagalu:)

ಕ್ಷಣ... ಚಿಂತನೆ... bhchandru ಹೇಳಿದರು...

ಶಿವೂ ಸರ್‍, ಇದಕ್ಕೆಲ್ಲ ಕ್ಷಮೆ ಕೇಳುವುದು ಬೇಡ.
ನಿಮ್ಮ ಆಶಯಗಳಿಗೆ ನನ್ನ ಶುಭಾಶಯಗಳು.

ಸ್ನೇಹದಿಂದ,

ಕ್ಷಣ... ಚಿಂತನೆ... bhchandru ಹೇಳಿದರು...

ಗೌತಮ್ ಅವರೆ, ನಿಮಗೂ ಶುಭಾಶಯಗಳು.
ಸ್ನೇಹದಿಂದ,

AntharangadaMaathugalu ಹೇಳಿದರು...

ಚಂದ್ರು ಅವರೆ...
ತಡವಾಗಿ ಶುಭಾಶಯಗಳನ್ನು ಹೇಳುತ್ತಿದ್ದೇನೆ... ಕನ್ನಡ ತಾಯಿಯನ್ನು ನೆನೆಯಲು ನವೆಂಬರ್ ಬರಬೇಕೆಂದೇನಿಲ್ಲ ಅಲ್ಲವೇ? ಆದ್ದರಿಂದ ತಡವಾದರೂ ಪರವಾಗಿಲ್ಲವೆಂದುಕೊಂಡೆ. ನಿಮ್ಮ ಪದ್ಯ ಚೆನ್ನಾಗಿದೆ...

ಶ್ಯಾಮಲ

ಕ್ಷಣ... ಚಿಂತನೆ... bhchandru ಹೇಳಿದರು...

ಶ್ಯಾಮಲಾ ಅವರೆ, ನಿಮ್ಮ ಅನಿಸಿಕೆಗಳಿಗೆ ಧನ್ಯವಾದಗಳು.