ಮಂಗಳವಾರ, ನವೆಂಬರ್ 17, 2009

ಒಂದು ವರ್ಷದ ಚಿಂತನೆಯಿಂದ ಎರಡನೇ ವರ್ಷಕ್ಕೆ...

ಈ ಪುಟವನ್ನು ವಿನ್ಯಾಸಗೊಳಿಸಲು ಕ್ಷಣ ಚಿಂತಿಸಿಲ್ಲ... ಎಂಬುದು ನನ್ನ ಯೋಚನೆ. ಇದು ನನ್ನ ಮೊದಲ ಬ್ಲಾಗಂಚೆಯಲ್ಲಿ ಬರೆದದ್ದು.

http://kshanachintane.blogspot.com/2008/11/blog-post.html

ಈ ಬ್ಲಾಗನ್ನು ಶುರುಮಾಡಿದಾಗ ಎಲ್ಲವೂ ಸಿದ್ಧ ಉಡುಪಿನಂತೆಯೇ ಇದ್ದು ಕೇವಲ ಬರಹವನ್ನು ಅಕ್ಷರ ಪೆಟ್ಟಿಗೆಯಲ್ಲಿ ಹಾಕಿದ್ದರೆ ಮುಗಿದಿತ್ತು. ಅದಕ್ಕೆ ಹಾಗೆ ಬರೆದಿದ್ದೆ.

ಇನ್ನು ನನ್ನ ಆಲೋಚನೆಯಿದ್ದದ್ದು ಸುಭಾಷಿತಗಳ ರೀತಿಯಲ್ಲಿ ಪ್ರಸಿದ್ಧ ವ್ಯಕ್ತಿಗಳ ನುಡಿಗಳನ್ನು ಇಲ್ಲಿ ಬರೆಯಬೇಕೆಂದು ಅನಿಸಿತ್ತು. ಹಾಗೆಯೇ ಒಂದೆರಡು ಬ್ಲಾಗಂಚೆ (ಬ್ಲಾಗ್‌ಪೋಸ್ಟುಗಳು) ಅಂಚಿಸಿದ್ದೆ. ದೀಪವೇ ತೋರು ಸಮಯ ಎಂದು ದೀಪದ ಚಿತ್ರ ಹಾಕಿದ್ದೆ. ಆನಂತರ `ಲಹರಿ' http://kshanachintane.blogspot.com/2008/11/blog-post_21.html ಎಂಬ ಶೀರ್ಷಿಕೆಯಡಿ ಈ ಬ್ಲಾಗಿಗೆ ಈ ಹೆಸರು ಏಕೆ? ಎಂದು ಬರೆದಿದ್ದೆ.

ಬಾಪೂಜಿಗೆ ನಮನ - http://kshanachintane.blogspot.com/2008/11/blog-post_21.html ಎಂದು ಬಾಪೂಜಿಯ ನೆನೆಯುವ ದಿನಕ್ಕೆ ಒಂದೆರಡು ಸಾಲು ಬರೆದಿದ್ದೆ. ಅದಕ್ಕೆ ಪ್ರತಿಕ್ರಿಯೆಯಾಗಿ `ಚಿಂತೆ ಇರಬಾರದು. ಸದಾ ಚಿಂತನೆ ಇರಬೇಕು. ಚಿಂತೆ ಸಜೀವವಾಗಿ ನಮ್ಮನ್ನು ಸುಡುವುದು. ಚಿಂತನೆ ಸದ ನಮ್ಮಲ್ಲಿ ಮನೋವಿಕಾಸವನ್ನುಂಟುಮಾಡುವುದು. ಉತ್ತಮ ಚಿಂತನೆ ನಿಮ್ಮಿಂದ ಹರಿದು ಬರಲಿ ಎಂದು `ಮಾನಸಪೂರ್ವಕವಾಗಿ' ತಿಳಿಸಿದ್ದರು.

ಆಗಿನ್ನೂ ಬರಹವನ್ನು ಕೇವಲ ಒಂದೆರಡು ಸಾಲುಗಳಲ್ಲಿಯೇ ಮುಗಿಸುತ್ತಿದ್ದೆ. ಏಕೆಂದರೆ, `ಪುಟನಾಮವೇ' ಕ್ಷಣ ಚಿಂತನೆ ಎಂದಿಟ್ಟಿದ್ದೆನಲ್ಲ.

ಹೀಗಿರುವಾಗ, ಸ್ವಾಮಿ ವಿವೇಕಾನಂದರ ವಾಣಿಯನ್ನು ಹಾಕಿದ್ದೆ. ಅದೇನೆಂದರೆ, Where can we go to find God if we cannot see Him in our own hearts and in every living being.. ಇದಕ್ಕೆ ಪ್ರತಿಕ್ರಿಯೆಯಾಗಿ, ನಿಮ್ಮದೇ ವಾಕ್ಯದಲ್ಲಿ ಸ್ವಲ್ಪ ವಿವರಣೆಯನ್ನೂ ಬರೆದರೆ ಇನ್ನೂ ಚೆನ್ನಾಗಿರುತ್ತದೆ ಹಾಗೂ ಕನ್ನಡದಲ್ಲಿ ಬರೆಯಿರಿ ಎಂದು `ಬೆಳಕು' ಚೆಲ್ಲಿದವರೊಬ್ಬರು.

ಮತ್ತೊಬ್ಬರಿಂದ, ಬರವಣಿಗೆಯ ಜೊತೆಯಲ್ಲಿ ಛಾಯಾಚಿತ್ರಗಳೂ ಚೆನ್ನಾಗಿವೆ, ಹೀಗೆಯೆ ಬರೆಯುತ್ತಿರಿ. ಹೀಗೆಯೇ ಅನೇಕ ಓದುಗರ ಪ್ರೋತ್ಸಾಹದಿಂದಲೇ ಇಲ್ಲಿಯವರೆವಿಗೆ ಬರೆಯಲು ಸಾಧ್ಯವಾಗಿದೆಯೇನೋ ಅನ್ನಿಸುತ್ತಿದೆ. ಇವೆಲ್ಲದರ ಜೊತೆಯಲ್ಲಿ ಕೆಲವು ಆತ್ಮೀಯರ ಲಭ್ಯತೆಯೂ ಆಗಿದೆ.

1 varsha pooraisitu.. 2ne varshakke...

ಇದೀಗ ಈ ನನ್ನ ಬ್ಲಾಗು ಇಂದಿಗೆ ಒಂದು ವರ್ಷ ಪೂರೈಸಿ ಎರಡನೆಯ (೨ನೇ) ವರ್ಷಕ್ಕೆ ಕಾಲಿಡುತ್ತಿದೆ. ಇದುವರೆವಿಗೆ ಸುಮಾರು ೧೦೦ ಕ್ಕೂ ಮಿಕ್ಕಿ ಬ್ಲಾಗಂಚೆಗಳನ್ನು ಬರೆದಿದ್ದೇನೆ. ನುಡಿಗಟ್ಟುಗಳನ್ನು ಬಳಸಿ ಬರೆದ ಬರಹಗಳೊಂದಿಗೆ, ಸ್ವಾನುಭವ ಅಥವಾ ಯಾವುದೋ ಗಮನಾರ್ಹ ಘಟನೆಯ ಮೆಲಕು, ಒಂದಷ್ಟು ಕವಿತೆಗಳು, ಕೆಲವು ಫೋಟೋ ಹಾಗೂ ಶುಭಾಶಯ ಪತ್ರಗಳೂ ಸೇರಿವೆ.

ಚಿಂತಿಸಲು, ಬರೆಯಲು ಹಾಗೂ ಚಿಂತಿಸಿ ಬರೆಯಲು ನಿಮ್ಮೆಲ್ಲರ ಪ್ರೋತ್ಸಾಹದಿಂದ ಸಾಧ್ಯವಾಗುತ್ತಿದೆ ಎಂದರೆ ತಪ್ಪಾಗದು. ಸಲಹೆ-ಸೂಚನೆ, ಅಭಿಪ್ರಾಯಗಳನ್ನು ತಿಳಿಸುತ್ತಾ ಬರೆಯುವ ಉತ್ಸಾಹ ತುಂಬಿದ ನಿಮ್ಮೆಲ್ಲ ಪ್ರತಿಯೊಬ್ಬರಿಗೂ ಧನ್ಯವಾದಗಳು.

ಸ್ನೇಹದಿಂದ,

ಚಂದ್ರಶೇಖರ ಬಿ.ಎಚ್.
೧೭.೧೧.೨೦೦೯

21 ಕಾಮೆಂಟ್‌ಗಳು:

ಶಿವಪ್ರಕಾಶ್ ಹೇಳಿದರು...

ಶುಭಾಶಯಗಳು...
ಹೀಗೆ ಬರಿತ ಇರಿ... :)

prakash ಹೇಳಿದರು...

ಆತ್ಮೀಯ ಚಂದ್ರು...

ನಮ್ಮ ಕನ್ನಡದ ಬ್ಲಾಗುಗಳಲ್ಲಿ ವಿಶಿಷ್ಟವಾದ ಬ್ಲಾಗು ನಿಮ್ಮದು..
ಅದನ್ನು ಮುಂದೂ ಕಾಯ್ದುಕೊಂಡು ಹೋಗುವಿರೆಂಬ ಭರವಸೆ ಇದೆ...

ಶುಭಾಶಯಗಳು..
ಇನ್ನಷ್ಟು ಬರೆಯಿರಿ...

ಪ್ರೀತಿಯಿಂದ
ಪ್ರಕಾಶಣ್ಣ..

shamalajanardhanan ಹೇಳಿದರು...

ಚಂದ್ರು ಅವರೆ...
ಹಾರ್ದಿಕ ಶುಭಾಶಯಗಳು.... ಬ್ಲಾಗ್ ಲೋಕದಲ್ಲಿ ಒಂದು ವರ್ಷ ಆಗಿದ್ದಕ್ಕೆ ಮತ್ತು ಬರಹಗಳ ಮಾಲೆ ಶತಕ ದಾಟಿದ್ದಕ್ಕೆ... ನಿಮ್ಮ ಬ್ಲಾಗ್ ಅನೇಕ ವಿಷಯಗಳನ್ನೊಳಗೊಂಡು ನಿಜಕ್ಕೂ ಚಿಂತನೆಗೆ ಹಚ್ಚತ್ತೆ... ಹೀಗೇ ಮುಂದುವರೆಸಿ... ನಾವು ಹಿಂಬಾಲಿಸುತ್ತಿರುತ್ತೇವೆ...
ಮತ್ತೊಮ್ಮೆ ಶುಭಾಶಯಗಳು......
ಶ್ಯಾಮಲ

Ramagopalarya ಹೇಳಿದರು...

ಆತ್ಮೀಯ ಚಂದ್ರುರವರೇ, ನಿಮ್ಮ ಬ್ಲಾಗ್ ನಿಂದ ಅನೇಕ ವಿಚಾರಗಳು ತಿಳಿದು ಬಂದಿವೆ. . . ಹೀಗೆ ಮುಂದುವರಿಯಲಿ. . . ಒಂದು ವರ್ಷವಲ್ಲ . . . . ಪ್ರತಿ ವರ್ಷ ಮುಂದುವರಿಯುತ್ತಿರಲಿ . . . ಹೊಸ ಹೊಸ ವಿಚಾರ ಲಹರಿಗಳು ಹರಿದು ಬರುತ್ತಿರಲಿ. . .ಶುಭಾಶಯಗಳು. . . .

Savitha.B.C ಹೇಳಿದರು...

ಹಲೋ ಚಂದ್ರು ಸರ್,
ನಿಮ್ಮ ಬ್ಲಾಗ್ಗೆ ಸ್ಪಾಟ್ ಒಂದು ವರ್ಷ ತುಂಬಿದ್ದು ನನಗೆ ತುಂಬ ಸಂತೋಷವಾಗಿದೆ. ನಾನು ನಿಮ್ಮ ಲೇಖನಗಳನ್ನು ಓದುವ ಅವಕಾಶ ಸಿಕ್ಕಿರುವುದು ಇತ್ತೀಚಿಗೆ ಅದ್ರು ನಾನು ನಿಮ್ ಲೇಖನಗಳ ಫ್ಯಾನ್ ಆಗಿದ್ದೇನೆ, ಅದರಲ್ಲೂ ನಿಮ್ಮ ಲೇಖನಗಳ ಭಾಷೆ ನನಗೆ ತುಂಬ ಇಷ್ಟ........ ಹೀಗೆ ಸದಾ ಬರೆಯುತ್ತ ಇರಿ ಎಂದು ಹಾರೈಸುತ್ತೇನೆ......... All the best sir.........

ಸಾಗರದಾಚೆಯ ಇಂಚರ ಹೇಳಿದರು...

ಚಂದ್ರು ಸರ್,
ಹಾರ್ದಿಕ ಶುಭಾಶಯಗಳು
ಇನ್ನೂ ಹೆಚ್ಚಿನ ಬರಹಗಳು ನಿಮ್ಮಿಂದ ನೀರೀಕ್ಷಿಸುತ್ತ
ಗುರು

ಕ್ಷಣ... ಚಿಂತನೆ... bhchandru ಹೇಳಿದರು...

ಶಿವಪ್ರಕಾಶ್, ನಿಮ್ಮ ಪತ್ರ ನೋಡಿದೆ. ನಿಮ್ಮ ಊರಿನ ಬಗ್ಗೆ ಪ್ರತಿಕ್ರಿಯೆ ನೀಡಿದ್ದೆ ಎಂದು ತಿಳಿಸಿದ್ದಿರಿ. ನಿಮ್ಮ ಶುಭಾಶಯಗಳಿಗೆ ನನ್ನ ಧನ್ಯವಾದಗಳು. ಹೀಗೆಯೆ ಬರುತ್ತಿರಿ.

ಸ್ನೇಹದಿಂದ,
ಚಂದ್ರು

ಕ್ಷಣ... ಚಿಂತನೆ... bhchandru ಹೇಳಿದರು...

ಪ್ರಕಾಶಣ್ಣ,
ನನ್ನ ಬರಹವನ್ನು ವಿಸ್ತರಿಸಲು ಸೂಚಿಸಿದವರು ನೀವಾಗಿದ್ದಿರಿ. ನಿಮ್ಮ ಅಭಿಪ್ರಾಯ ಸಲಹೆಗಳಿಂದ ಇಷ್ಟು ಬರೆಯಲು ಸಾರ್ಧಯವಾಗಿದೆ. ನಿಮ್ಮ ಪ್ರೋತ್ಸಾಹ ಹೀಗೆಯೆ ಸಿಗುತ್ತಿರಲಿ. ಧನ್ಯವಾದಗಳು.

ಚಂದ್ರು..

ಕ್ಷಣ... ಚಿಂತನೆ... bhchandru ಹೇಳಿದರು...

ಶ್ಯಾಮಲಾ ಅವರೆ, ನಿಮ್ಮ ಅನಿಸಿಕೆಗಳಿಗೆ ಧನ್ಯವಾದಗಳು.

ಇನ್ನಷ್ಟು ಬರಹಗಳು ಬರಲೆಂದು ವಿಶೇಷವಾಗಿ ಬರಲೆಂದು ನಿಮ್ಮ ಆಶಯ. ಪ್ರಯತ್ನಿಸುವೆ. ಹೀಗೆಯೆ ಬರುತ್ತಿರಿ.

ಚಂದ್ರು

PARAANJAPE K.N. ಹೇಳಿದರು...

ಶುಭಾಶಯಗಳು ಚಂದ್ರು, ಕ್ಷಣ ಚಿಂತನೆಗೆ ಯೋಗ್ಯವಾದ ಕಿರುಬರಹಗಳ ಮೂಲಕ ವಿಶಿಷ್ಟ ಯತ್ನ ಮಾಡುತ್ತಾ ಬಂದಿರಿ, ವಿಚಾರಪೂರ್ಣವಾಗಿತ್ತು ನಿಮ್ಮ ಬರಹದ ಶೈಲಿ. ಮುಂದುವರಿಯಲಿ ನಿಮ್ಮ ಬರವಣಿಗೆಯ ಮೆರವಣಿಗೆ

ಕ್ಷಣ... ಚಿಂತನೆ... bhchandru ಹೇಳಿದರು...

ರಾಮಗೋಪಾಲ್‌ ಅವರೆ, ಕೆರೆಯ ನೀರನು ಕೆರೆಗೆ ಚಲ್ಲು ಎಂಬಂತೆ ಇಲ್ಲಿನ ಜಾಲದಿಂದ ಹುಡುಕಿ ತೆಗೆದದ್ದೆ. ನಿಮ್ಮ ಅನಿಸಿಕೆಗಳೀಗೆ ಧನ್ಯವಾದಗಳು.

ಯಾವಾಗ ಸಿಗುತ್ತೀರಿ?

ಚಂದ್ರು

ಕ್ಷಣ... ಚಿಂತನೆ... bhchandru ಹೇಳಿದರು...

ಸವಿತಾ..

ಇಂಟರ್‍ಕಾಮ್‌ನಿಂದಲೇ ಅಭಿನಂದನೆ ತಿಳಿಸಿದಿರಿ. ನನ್ನ ಫ್ಯಾನ್‌ ಎಂದು ಬೇರೆ ಹೇಳಿದ್ದೀರಿ. ನಿಮಗೆ ಬರವಣಿಗೆ ಇಷ್ಟವಾಗಿದ್ದಕ್ಕೆ ಥ್ಯಾಂಕ್ಸ.

ಹೀಗೆಯೆ ಬರುತ್ತಿರಿ. ಓದುತ್ತಿರಿ. ಕಾಮೆಂಟಿಸಿ...

ಚಂದ್ರು

ಕ್ಷಣ... ಚಿಂತನೆ... bhchandru ಹೇಳಿದರು...

ಗುರುಮೂರ್ತಿ ಅವರೆ, ಧನ್ಯವಾದಗಳು.

ನಿಮ್ಮ ಪ್ರೋತ್ಸಾಹವೇ ಇಷ್ಟೆಲ್ಲ ಬರೆಯಲು ಸಾಧ್ಯ ಎನಿಸುತ್ತದೆ. ನಿಮ್ಮ ಹಾರೈಕೆಗಳಿಗೆಧನ್ಯವಾದಗಳು.

ನೀವು ಭಾರತಕ್ಕೆ ಬಂದಾಗ ಸಿಗುವ...

ಚಂದ್ರು

ಕ್ಷಣ... ಚಿಂತನೆ... bhchandru ಹೇಳಿದರು...

ಪರಾಂಜಪೆ ಸರ್‍,

ಬರವಣಿಗೆಯ ಮೆರೆವಣಿಗೆ ಸಾಗಲಿ ಎಂದಿದೀರಿ. ಜೊತೆಗೆಪುಸ್ತಕ ಮಾಡಿ ಎಂದೂ (ಚಾಟಿಸುವಾಗ...) ತಿಳಿಸಿದಿರಿ. ನೋಡುವ ಪ್ರಯತ್ನ ಮಾಡುವ...

ಧನ್ಯವಾದಗಳು.

ಚಂದ್ರು

ತೇಜಸ್ವಿನಿ ಹೆಗಡೆ- ಹೇಳಿದರು...

ಚಂದ್ರಶೇಖರ್ ಅವರೆ,

ನಿಮಗೆ ಹಾಗೂ ನಿಮ್ಮ ಕ್ಷಣ ಚಿಂತನೆಗೆ ಹಾರ್ದಿಕ ಶುಭಾಶಯಗಳು. ಉತ್ತಮ ಚಿಂತನೆಯತ್ತ ಗಮನ ಹರಿಸುವಂತಹ ಬರಹಗಳು ಮತ್ತಷ್ಟು ನಿಮ್ಮಿಂದ ಹೊರಬರಲೆಂದು ಹಾರೈಸುವೆ.

ಕ್ಷಣ... ಚಿಂತನೆ... bhchandru ಹೇಳಿದರು...

ತೇಜಸ್ವಿನಿ ಅವರೆ,

ನಿಮ್ಮ ಹಾರೈಕೆಗಳಿಗೆ ಧನ್ಯವಾದಗಳು. ನಿಮ್ಮೆಲ್ಲರ ಪ್ರೋತ್ಸಾಹ, ಅನಿಸಿಕೆಗಳಿಂದ ಇದು ಸಾಧ್ಯವಾಗಿದೆ ಎಂದು ತಿಳಿಯುತ್ತೇನೆ.

ಚಂದ್ರು,

Shweta ಹೇಳಿದರು...

ಚಂದ್ರು ಸರ್........
ಅಭಿನಂದನೆಗಳು ..ಹೀಗೆಯೇ ಸಾಗಲಿ ನಿಮ್ಮ ಚಿಂತನೆಗಳ ಪಯಣ...ಬಿಡುವಿದ್ದಾಗಲೆಲ್ಲ ಓದುತ್ತಲೇ ಇರುತ್ತೇನೆ ,
ಧನ್ಯವಾದಗಳೊಂದಿಗೆ ....

shivu ಹೇಳಿದರು...

ಶುಭಾಶಯಗಳು ಸರ್,

ಜ್ವರದಿಂದಾಗಿ ಬ್ಲಾಗುಗಳಿಗೆ ಬರಲಾಗುತ್ತಿಲ್ಲ. ಒಂದು ವರ್ಷವನ್ನು ಪೂರೈಸಿದ್ದಕ್ಕೆ ಮತ್ತು ಬರಹದಲ್ಲಿ ಶತಕವನ್ನು ಬಾರಿಸಿದ್ದಕ್ಕೆ ಅಭಿನಂದನೆಗಳು ಸರ್.

ಕ್ಷಣ... ಚಿಂತನೆ... bhchandru ಹೇಳಿದರು...

ಶಿವು ಸರ್‍, ಧನ್ಯವಾದಗಳು.

ಮಲ್ಲಿಕಾರ್ಜುನ.ಡಿ.ಜಿ. ಹೇಳಿದರು...

ಶುಭಾಶಯಗಳು ಸರ್. ಇನ್ನಷ್ಟು ಮತ್ತಷ್ಟು ಬರೆಯಿರಿ. ಇನ್ನಷ್ಟು ಸೆಂಚುರಿಗಳು ಬಾರಿಸಲೆಂದು ಹಾರೈಸುವೆ.

ಕ್ಷಣ... ಚಿಂತನೆ... bhchandru ಹೇಳಿದರು...

ಮಲ್ಲಿಕಾರ್ಜುನ ಅವರೆ, ನಿಮ್ಮ ಹಾರೈಕೆಗಳಿಗೆ ಥ್ಯಾಂಕ್ಸು.

ಸ್ನೇಹದಿಂದ,