ಮಂಗಳವಾರ, ನವೆಂಬರ್ 24, 2009

ಎರಡು ಮತ್ತು ಮೂರು?

Photo©Chandrashekara BH,ISEC,24Nov2009
ಒಂದೇ ರೂಪ, ಎರಡು ಗುಣ - ಹೀಗೊಂದು ಚಲನಚಿತ್ರದ ಹೆಸರು
ಅದಕ್ಕೆ ತಕ್ಕಂತೆ ಇಲ್ಲಿದೆ ಒಂದು ಮರಕ್ಕೆ ಬರೆದ ನಂಬರು!
ಬೇರೊಂದು, ಕವಲೆರಡು, ಆದರೂ ಬಿಟ್ಟಿಲ್ಲ ಒಬ್ಬರನೊಬ್ಬರು,
ಒಂದೇ ತಾಯಿಬೇರು, ಜೊತೆಯಲ್ಲಿರುವಾಗ ಬಿಡುವುದಾದರೂ ಯಾರು?
ಆದರೆ, ಯಾರು ಬರೆದರೋ ಇದಕ್ಕೆ ನಂಬರು?
ತಿಳಿದೋ, ತಿಳಿಯದೆಯೋ ಎರಡು ಮತ್ತು ಮೂರು?

ಚಂದ್ರಶೇಖರ ಬಿ.ಎಚ್.
ಫೋಟೋ: ಚಂದ್ರಶೇಖರ ಬಿ.ಎಚ್.

13 ಕಾಮೆಂಟ್‌ಗಳು:

PARAANJAPE K.N. ಹೇಳಿದರು...

ಚೆನ್ನಾಗಿದೆ

ಕ್ಷಣ... ಚಿಂತನೆ... bhchandru ಹೇಳಿದರು...

ಪರಾಂಜಪೆ ಸರ್‍, ಧನ್ಯವಾದಗಳು.

ಸಾಗರದಾಚೆಯ ಇಂಚರ ಹೇಳಿದರು...

ತುಂಬಾ ಅರ್ಥ ಗರ್ಭಿತವಾಗಿದೆ,

ಕ್ಷಣ... ಚಿಂತನೆ... bhchandru ಹೇಳಿದರು...

ಗುರು ಅವರೆ, ಧನ್ಯವಾದಗಳು. ಇದು ನಮ್ಮ ಕ್ಯಾಂಪಸ್ಸಿನಲ್ಲಿ ಕಂಡು ಬಂದ ದೃಶ್ಯ.

AntharangadaMaathugalu ಹೇಳಿದರು...

ಕಲೆಯನ್ನು ಆರಾಧಿಸುವ ಹೃದಯ, ಕಣ್ಣು ಎರಡೂ ಇದ್ದರೆ.. ನೋಡುವ ಸಾಮಾನ್ಯ ನೋಟದಲ್ಲೂ ಹೊಸ ಅರ್ಥ ಹುಡುಕಬಹುದು ಅಲ್ವಾ ಚಂದ್ರು ಸಾರ್... ಚೆನ್ನಾಗಿದೆ... ಅದನ್ನೇ ನೋಡುತ್ತಾ ಮನಸ್ಸಿನ ಲಹರಿ ಹರಿಯ ಬಿಟ್ಟರೆ.. ಕಲ್ಪನೆಯಲ್ಲಿ ಅನೇಕ ವಿಷಯಗಳು ಬರುತ್ತವೆ......

ಶ್ಯಾಮಲ

ಕ್ಷಣ... ಚಿಂತನೆ... bhchandru ಹೇಳಿದರು...

ನಿಮ್ಮ ಅನಿಸಿಕೆಗಳಿಗೆ ದನ್ಯವಾದಗಳು. ಚಿಂತನೆಗೆ ಇರುವ ಶಕ್ತಿಯೇ ಅದು ಎನ್ನಬಹುದು.

ಚುಕ್ಕಿಚಿತ್ತಾರ ಹೇಳಿದರು...

ಅವು ಅವಳಿಗಳಾದರೆ....
ಒ೦ದೇ ಹೆಸರಿಟ್ಟರೆ ಕರೆಯುವುದು ಹೇಗೆ.....?

shivu ಹೇಳಿದರು...

ಸಮಯೋಜಿತವಾಗಿ ಫೋಟೊ ತೆಗೆದಿರುವುದು ಚೆನ್ನಾಗಿದೆ.

ಜಲನಯನ ಹೇಳಿದರು...

ಶ್ಯಾಮಲಾ ಮಾತನ್ನು ನಾನು ಒಪ್ಪುತ್ತೇನೆ...ನಿಮ್ಮ ಎಲ್ಲವನ್ನೂ ವಿಸ್ತೃತವಾಗಿ ನೋಡುವ ವಿಶ್ಲೇಷಿಸಿ ಅದರ ಗುಣಗಳನ್ನು ಹೊರತೆಗೆವ ಭಾವ ಇದ್ದರೆ..ಇಂಥ ಮಂಥನಗಳು ಸಾಧ್ಯ...ಅಭಿನಂದನೆ

ಅನಾಮಧೇಯ ಹೇಳಿದರು...

ಒಳ್ಳೆಯ ಚಿತ್ರ. ಆ ಸಂಖ್ಯೆಗಳು ೧ ಮತ್ತು ೨ ಅಂತಿದ್ರೆ ಇನ್ನೂ ಚೆನ್ನಾಗಿರ್ತಿತ್ತು ಅಲ್ವಾ..ಮನುಷ್ಯರಲ್ಲೂ ಹೀಗೆ ಬೆರೆತು ಬಾಳುವ ಗುಣ ಬರಲಿ ಅಂತ ಅನ್ನಲೆ?

ದಿಲೀಪ್ ಹೆಗಡೆ ಹೇಳಿದರು...

ಚೆನ್ನಾಗಿದೆ.. :)

ಕ್ಷಣ... ಚಿಂತನೆ... bhchandru ಹೇಳಿದರು...

ಚುಕ್ಕಿ ಚಿತ್ತಾರ ಅವರಿಗೆ ಸ್ವಾಗತ. ನಿಮ್ಮ ಅನಿಸಿಕೆ ಹೌದೆನ್ನಬಹುದು. ಅವಳಿಗಳಾದರೆ ಗುರುತಿಸುವುದು ಅಸಾಧ್ಯ. ನಿಮ್ಮ ಯೋಚನಾ ಲಹರಿ ಚೆನ್ನಾಗಿದೆ.

ಸ್ನೇಹದೊಂದಿಗೆ,

ಕ್ಷಣ... ಚಿಂತನೆ... bhchandru ಹೇಳಿದರು...

ಶಿವು ಸರ್‍, ಜಲನಯನ, ಸುಮನಾ ಮೇಡಂ, ದಿಲೀಪ್, ನಿಮ್ಮೆಲ್ಲರ ಅಭಿಪ್ರಾಯಗಳಿಗೆ ಧನ್ಯವಾದಗಳು.

ಸ್ನೇಹದಿಂದ,