ಸೋಮವಾರ, ಜನವರಿ 11, 2010

ರಾಷ್ಟೀಯ ಯುವ ದಿನಾಚರಣೆ - ಸ್ವಾಮಿ ವಿವೇಕಾನಂದರು

उत्तिष्ठता जाग्रत, प्राप्यवरान् निबॊधता ।
ಉತ್ತಿಷ್ಠತಾ ಜಾಗ್ರತ, ಪ್ರಾಪ್ಯವರಾನ್ ನಿಬೋಧತಾ

ಏಳಿ, ಎದ್ದೇಳಿ, ಗುರಿ ಮುಟ್ಟುವವರೆಗೂ ನಿಲ್ಲದಿರಿ! ಈ ಸಿಂಹಘರ್ಜನೆಯನ್ನು ಕೇಳದವರಾರು? ಇದು ಹಿಂದೂ ಸಂನ್ಯಾಸಿ, ಮಹಾನ್ ದೇಶಭಕ್ತ, ಯುವಶಕ್ತಿಯ ಪ್ರತೀಕ ಸ್ವಾಮಿ ವಿವೇಕಾನಂದರದೆಂದು ಎಲ್ಲರೂ ತಿಳಿದಿರುವವರೇ?

ಜನವರಿ ೧೨, ೧೮೬೩: ಶ್ರೀ ರಾಮಕೃಷ್ಣ ಪರಮಹಂಸರು ಮತ್ತು ಶ್ರೀ ಮಾತೆ ಶಾರದಾದೇವಿಯರ ನೇರ ಶಿಷ್ಯಮ ಪ್ರೀತಿಯ ನರೇನ್ ಅಂದರೆ, ಮುಂದೆ ಸ್ವಾಮಿ ವಿವೇಕಾನಂದ ಎಂಬ ಹೆಸಿರನಿಂದ ಭಾರತೀಯತೆಯನ್ನು ವಿಶ್ವಕ್ಕೇ ಸಾರಿದ ಧೀಮಂತರ ಜನ್ಮದಿನವಿದು. ನಾಳೆಗೆ ೧೪೭ ನೇ ವರ್ಷದ ಜನ್ಮದಿನ.

೧೯೮೪ ರಲ್ಲಿ, ಭಾರತ ಸರ್ಕಾರವು ಸ್ವಾಮೀಜಿಯವರ ಜನ್ಮದಿನಾಚರಣೆಯನ್ನು `ರಾಷ್ಟ್ರೀಯ ಯುವ' ದಿನವೆಂದು ೧೯೮೫ರಿಂದ ಜಾರಿಗೆ ಬರುವಂತೆ ಆದೇಶಿಸಿತು. ಭಾರತ ಸರ್ಕಾರದ ಆದೇಶದ ನುಡಿಗಳು: "It was felt that the philosophy of Swamiji and the ideals for which he lived and worked could be a great source of inspiration for the Indian Youth.'

೧೯೮೫ರಿಂದ ಚಾಚೂ ತಪ್ಪದೆ ಯುವದಿನವನ್ನು ಆಚರಿಸುತ್ತಾ, ಹಲವು ಸಂಘಸಂಸ್ಥೆಗಳು, ಸರ್ಕಾರದ ವತಿಯಿಂದ, ಸರ್ಕಾರೇತರ ಹಾಗೂ ಶ್ರೀ ರಾಮಕೃಷ್ಣ ಮಿಷನ್ ವತಿಯಿಂದ ಆಚರಿಸುತ್ತಾ ಬಂದಿರುತ್ತಾರೆ. ಅನೇಕ ಸಾಮಾಜಿಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ಈ ಸಂದರ್ಭದಲ್ಲಿ ನಡೆಸುತ್ತಾ ಬಂದಿರುವುದನ್ನು ಗಮನಿಸಬಹುದು.

ಸ್ವಾಮಿ ವಿವೇಕಾನಂದರು ಕೇವಲ ಯುವಕರಿಗಷ್ಟೇ ಅಲ್ಲ, ಎಲ್ಲ ವಯೋಮಾನದವರಿಗೂ, ಸ್ರೀ-ಪುರುಷರಿಗೂ ಬೇಕಾದಂತಹ ಶಕ್ತಿಯ ಸಿಂಚನ. ಅವರ ಮಿಂಚಿನಂತಹ ಮಾತುಗಳು ಅಧೀರನನ್ನು ಸಹ ಧೀರನನ್ನಾಗಿ ಮಾಡುವಂತಹವು. ಯುವಶಕ್ತಿಯನ್ನು ಒಂದುಗೂಡಿಸುವ ಅವರ ಸಿಂಹವಾಣಿಯನ್ನು ನೆನೆಯುತ್ತಾ, ಈ ಶಕ್ತಿಯನ್ನು ಉತ್ತಮ ಸಮಾಜ, ಜನತೆ, ಘನತೆಯನ್ನು ಮೈಗೂಡಿಸಿಕೊಳ್ಳುವಲ್ಲಿ ಪ್ರೇರೇಪಿಸುವ ಶಕ್ತಿಯನ್ನಾಗಿ ಮಾಡಿಕೊಳ್ಳುವ..

  • All differences in this world are of degree, and not of kind, because oneness is the secret of everything.
  • Condemn none: if you can stretch out a helping hand, do so. If you cannot, fold your hands, bless your brothers, and let them go their own way.
  • If faith in ourselves had been more extensively taught and practiced, I am sure a very large portion of the evils and miseries that we have would have vanished.
  • If money help a man to do good to others, it is of some value; but if not, it is simply a mass of evil, and the sooner it is got rid of, the better.
  • The world is the great gymnasium where we come to make ourselves strong.
  • Take up one idea. Make that one idea your life - think of it, dream of it, live on idea. Let the brain, muscles, nerves, every part of your body, be full of that idea, and just leave every other idea alone. This is the way to success.

ಜುಲೈ ೪, ೧೯೦೨ರಂದು ಸ್ವಾಮಿ ವಿವೇಕಾನಂದರು ದೇಹತ್ಯಾಗವಾಯಿತು.

ಆತ್ಮನೋ ಮೋಕ್ಷಾರ್ಥಂ ಜಗತ ಹಿತಾಯ ಚ - ಇದು ಬೆಂಗಳೂರಿನ ಶ್ರೀ ರಾಮಕೃಷ್ಣ ಮಠದಲ್ಲಿ ಕಂಡು ಬರುವ ಸಂಸ್ಕೃತೋಕ್ತಿ.

ಆ ಮಹಾನ್ ಚೇತನಕ್ಕೆ ನಮ್ಮೆಲ್ಲರ ನಮನಗಳು.

7 ಕಾಮೆಂಟ್‌ಗಳು:

PARAANJAPE K.N. ಹೇಳಿದರು...

ಆ ಮಹಾನ್ ಚೇತನವನ್ನು ನೆನಪಿಸಿದ್ದಕ್ಕೆ ಧನ್ಯವಾದ. ಅವರು ನಮಗೆಲ್ಲರಿಗೂ ಆದರ್ಶ ಪುರುಷ.

ಸಾಗರದಾಚೆಯ ಇಂಚರ ಹೇಳಿದರು...

ಅವರ ಆದರ್ಶತೆ ಎಲ್ಲರಿಗೂ ಅನುಕರಣೀಯ
ಅವರ ನೆನಪು ಸದಾ ಹಸಿರಾಗಿರಲಿ

Subrahmanya Bhat ಹೇಳಿದರು...

ಉತ್ತಮ ಮಾಹಿತಿಯ ಲೇಖನ. ಧನ್ಯವಾದಗಳು

ಕ್ಷಣ... ಚಿಂತನೆ... bhchandru ಹೇಳಿದರು...

ಪರಾಂಜಪೆ ಸರ್‍, ಆದರ್ಶಪುರಷರು ಯಾವತ್ತಿಗೂ ಮರೆತುಹೋಗಲಾರರು. ಧನ್ಯವಾದಗಳು.

ಸ್ನೇಹದಿಂದ,

ಕ್ಷಣ... ಚಿಂತನೆ... bhchandru ಹೇಳಿದರು...

ಗುರು ಅವರೆ, ಆದರ್ಶವನ್ನು ಅನುಕರಿಸುವ ಮನಸ್ಸು ನಮ್ಮಗಳೆಲ್ಲರದಾಗಲಿ. ಧನ್ಯವಾದಗಳು.

ಸ್ನೇಹದಿಂದ,

ಕ್ಷಣ... ಚಿಂತನೆ... bhchandru ಹೇಳಿದರು...

ಸುಬ್ರಮಣ್ಯ ಭಟ್ ಅವರೆ, ನಿಮ್ಮ ಪ್ರೋತ್ಸಾಹಕ್ಕೆ ವಂದನೆಗಳು.

ಸ್ನೇಹದಿಂದ,

AntharangadaMaathugalu ಹೇಳಿದರು...

ಚಂದ್ರು ಅವರೆ..
ಉತ್ತಮ ಮಾಹಿತಿಯುಳ್ಳ ಲೇಖನ... ಧನ್ಯವಾದಗಳು......

ಶ್ಯಾಮಲ