ಸೋಮವಾರ, ಫೆಬ್ರವರಿ 1, 2010

ನಾನೂ ಹೋಗಿದ್ದೆ ಚಿತ್ರ ಸಂತೆಗೆ. ಅಲ್ಲಿದ್ದೆ ಸಂಜೆವರೆಗೆ...

ನಾಗೇಶ ಹೆಗಡೆಯವರ ಆರು ಪುಸ್ತಕಗಳ ಬಿಡುಗಡೆ ಸಮಾರಂಭದಲ್ಲಿ: ಶ್ರೀ ನಾಗೇಶ ಹೆಗಡೆ, ಶ್ರೀ ಕೆ.ವಿ.ಅಕ್ಷರ, ಪ್ರೊ. ಬಿ.ಕೆ.ಸಿ., ಡಾ. ನೇಮಿಚಂದ್ರ ಮತ್ತು ಶ್ರೀ ಚಿರಂಜೀವಿ ಸಿಂಗ್ (ಇವರ ಕನ್ನಡ ಅಭಿಮಾನಕ್ಕೆ ತಲೆಬಾಗಲೇ ಬೇಕು)
ಇಂದು ಬೆಳಗ್ಗೆ (ಜನವರಿ ೩೧, ೨೦೧೦) ಶ್ರೀ ನಾಗೇಶ ಹೆಗಡೆಯವರ ಆರು ಪುಸ್ತಕಗಳ ಬಿಡುಗಡೆ ಕಾರ್ಯಕ್ರಮವನ್ನು ಮುಗಿಸಿಕೊಂಡು, `ಅಂತರಂಗದ ಮಾತುಗಳ'ನ್ನು ಹಂಚಿಕೊಳ್ಳುತ್ತಾ ಇರುವಾಗ ಸ್ಥಳದಲ್ಲಿಯೇ ಸಂಪದ.ನೆಟ್ ನ ಸಂಪದಿಗರ ಪರಿಚಯದೊಂದಿಗೆ (ಹರಿಪ್ರಸಾದ್, ಹರ್ಷ, ವಿನಯ್, ರಶ್ಮಿ ಪೈ... ಇತ್ಯಾದಿ) `ಚಿತ್ರ ಸಂತೆ'ಗೆ ಹೋಗಿದ್ದೆ. ಅಲ್ಲದೇ ಛಾಯಾಕನ್ನಡಿಯ ಶಿವೂ ಸಹ ಸಿಕ್ಕಿದ್ದರು, ಅನುಭವ ಮಂಟಪದ ಫಾಲಚಂದ್ರ, ಹೀಗೆ ಇನ್ನೂ ಕೆಲವು ಸಹಬ್ಲಾಗಿಗರ ಪರಿಚಯವಾಯಿತು.

ಕಲಾವಿದರುಗಳ ಈ ಕಲಾಚಿತ್ರಗಳಿಗೆ ಬೆಲೆ ಕಟ್ಟಲು ಸಾಧ್ಯವೇ ಎಂದು ಒಂದು ಕ್ಷಣ ಅನ್ನಿಸಿತು. ಏಕೆಂದರೆ, ನಮ್ಮ ಸಂಸ್ಥೆಯ ಸಹೋದ್ಯೋಗಿಯೊಬ್ಬರ ಮಗಳೂ ಸಹ ಇಲ್ಲಿ ಸಂತೆಯಲ್ಲಿ ತಾನು ಬರೆದ ಚಿತ್ರಗಳನ್ನು ಪ್ರದರ್ಶಿಸಿದ್ದು, ಒಂದು ಚಿತ್ರವು ಮಾರಾಟವಾಗಿದ್ದ ಖುಷಿಗೆ (ಬೆಳಗ್ಗಿನಿಂದ ಇದ್ದರೂ ಸಂಜೆಗೆ ಈ ಖುಷಿ ಸಿಕ್ಕಿತಂತೆ) ಬೇರೆ ಕಲಾವಿದರ ಚಿತ್ರಗಳನ್ನು ನೋಡಿಬರಲು ಹೋಗಿದ್ದರು. ಅದಕ್ಕೇ, ಹೇಳಿದ್ದು, ಕಲೆಗೆ ಬೆಲೆ ಕಟ್ಟಲು ಬಹಳ ಕಷ್ಟ ಎಂದು...

ಅಲ್ಲೊಂದಿಷ್ಟು ಚಿತ್ರಗಳನ್ನು ನನ್ನ ಪುಟ್ಟ ಕ್ಯಾಮೆರಾದಿಂದ ಸೆರೆಹಿಡಿದೆ. ಕೆಲವನ್ನು ಇಲ್ಲಿ ಬ್ಲಾಗಿನಲ್ಲಿ ಅಂಚಿಸುತ್ತಿದ್ದೇನೆ. ನೋಡಿ, ನಿಮಗೂ ಇಷ್ಟವಾಗಬಹುದು!

ವರಕವಿ ಡಾ. ದ.ರಾ. ಬೇಂದ್ರೆಯವರು ಮತ್ತು ಕನ್ನಡದ ಆಸ್ತಿ ಡಾ. ಮಾಸ್ತಿ ವೆಂಕಟೇಶ ಅಯ್ಯಂಗಾರರು

ಕರ್ನಾಟಕದ ಜ್ಞಾನಪೀಠ ವಿಜೇತರು

ಬುದ್ಧ ಮಲಗಿರಬಹುದು. ಕಲಾವಿದ ಎದ್ದಿದ್ದಾನೆ.

ಕಲಾವಿದರ ಕೈಚಳಕದಲ್ಲಿ ವಿಶ್ವದೆಲ್ಲವೂ ಮೇಳೈಸಿದೆ.

ಗಾಜಿನ ಬಾಟಲಿಯಲ್ಲಿ ಗಣೇಶ ಮತ್ತು ಇತರೆ ಕಲಾಕೃತಿಗಳು.

ತೋಳಿನ ಮೇಲಿನ ಹಚ್ಚೆಕಲೆ ಹೇಗಿದೆ?

ಕೃಪೆ: ಅಲ್ಲಿ ನೆರೆದಿದ್ದ ಕಲಾವಿದರದ್ದು: ಫೋಟೋಗಳು: ಚಂದ್ರಶೇಖರ ಬಿ.ಎಚ್.

14 ಕಾಮೆಂಟ್‌ಗಳು:

shivu ಹೇಳಿದರು...

ಸರ್,

ನಿಮ್ಮನ್ನು ಎರಡು ಕಡೆ ಬೇಟಿಯಾಗಿದ್ದು ನನಗೆ ಖುಷಿಯಾಯ್ತು. ನನಗೂ ಎರಡು ವಿಚಾರದಲ್ಲೂ[ಸಾಹಿತ್ಯ ಮತ್ತು ಕಲೆ]ಆಸಕ್ತಿ ಇರುವುದರಿಂದ ಎರಡು ಕಡೆ ಇದ್ದೆ.

ಚಿತ್ರ ಸಂತೆ ಫೋಟೊಗಳನ್ನು ತೋರಿಸಿದ್ದಕ್ಕೆ ಥ್ಯಾಂಕ್ಸ್..

ಸಾಗರದಾಚೆಯ ಇಂಚರ ಹೇಳಿದರು...

ಸರ್,
ನಮಗೂ ಹೋಗಿ ಬಂದಂತೆ ಆಯಿತು
ಫೋಟೋಗಳೊಂದಿಗೆ ವಿವರಣೆ ತುಂಬಾ ಚೆನ್ನಾಗಿದೆ

AntharangadaMaathugalu ಹೇಳಿದರು...

ಚಂದ್ರು ಅವರೇ...
ನಾ ಚಿತ್ರಸಂತೆಗೆ ಬರಲಾಗಲಿಲ್ಲವಾದ್ದರಿಂದ ಸಂಪದದ ಇತರ ಮಿತ್ರರ ಭೇಟಿ ತಪ್ಪಿತು. ನಿಮ್ಮ ವಿವರಣೆ, ಚಿತ್ರಗಳೊಂದಿಗೆ ನೋಡಿ, ನಾನೇ ಹೋಗಿ ಬಂದಷ್ಟು ಖುಷಿಯಾಯಿತು. ಧನ್ಯವಾದಗಳು.......

ಗೌತಮ್ ಹೆಗಡೆ ಹೇಳಿದರು...

ivannella blog ge tandu nammeduru ittiddakke tamage dhanyavaada sir:)

ಸಿಮೆಂಟು ಮರಳಿನ ಮಧ್ಯೆ ಹೇಳಿದರು...

ಚಂದ್ರು..

ವಿವರಣೆ..
ಫೋಟೊಗಳನ್ನು ನೋಡಿ ತುಂಬಾ ಖುಷಿಯಾಯಿತು...

ಅನಾರೊಗ್ಯದ ಕಾರಣ ನನಗೆ ಬರಲಾಗಲಿಲ್ಲ..

ಬೇಸರವಾಗುತ್ತಿದೆ...

ನಿಮ್ಮ ಫೋಟೊಗಳನ್ನು ನೋಡಿ ತುಂಬಾ ಖುಷಿಯಾಯಿತು..
ಅಲ್ಲಿ ಬಂದಿದ್ದರೆ ನಿಮ್ಮನ್ನೆಲ್ಲ ಭೇಟಿಯಾಗ ಬಹುದಿತ್ತು...

PARAANJAPE K.N. ಹೇಳಿದರು...

ನಾಗೇಶ ಹೆಗಡೆಯವರ ಪುಸ್ತಕ ಬಿಡುಗಡೆ ಮತ್ತು ಚಿತ್ರಸ೦ತೆಗೆ ನನಗೆ ಬರಲಾಗಲಿಲ್ಲ, ಆ ಕೊರತೆ ನಿಮ್ಮ ಬ್ಲಾಗ್ ಓದಿನಿ೦ದ ನೀಗಿದ೦ತಾಯಿತು. ಫೋಟೋ ಗಳೂ ಚೆನ್ನಾಗಿವೆ.

ಕ್ಷಣ... ಚಿಂತನೆ... bhchandru ಹೇಳಿದರು...

ಶಿವು ಸರ್‍, ನಾನೂ ಸಹ ನಿಮ್ಮನ್ನು ಮೂರು (೩) ಬಾರಿ ಭೇಟಿಯಾಗಿದ್ದು ಖುಷಿಯಾಯಿತು. ೧) ಶ್ರೀ ಪ್ರಕಾಶ್ ಹೆಗಡೆ ಮತ್ತು ನಿಮ್ಮ ಪುಸ್ತಕ ಬಿಡುಗಡೆಯಲ್ಲಿ. ಮತ್ತೆರಡನೆಯ ಹಾಗೂ ಮೂರನೆಯ ಭೇಟಿ ಶ್ರೀ ನಾಗೇಶ್ ಹೆಗಡೆಯವರ ಪುಸ್ತಕ ಬಿಡುಗಡೆ ಮತ್ತು ಚಿತ್ರಸಂತೆಯಲ್ಲಿ. ನಿಮ್ಮ ಆಸಕ್ತಿಯೂ ನನ್ನ ಆಸಕ್ತಿಯೂ ಒಂದೇ ಇರುವುದರಿಂದ ಇರಬೇಕು ಹೀಗೆ ಭೇಟಿಯಾಗಲು ಸಾಧ್ಯವಾಗಿದ್ದು.

ನಿಮ್ಮ ಫೋಟೋ (ಚಿತ್ರ ಸಂತೆಯದು) ಗಳಿಗಾಗಿ ಕಾದಿರುವೆ.

ಸ್ನೇಹದಿಂದ,

ಕ್ಷಣ... ಚಿಂತನೆ... bhchandru ಹೇಳಿದರು...

ಗುರು ಅವರೆ, ಧನ್ಯವಾದಗಳು.
ಸ್ನೇಹದಿಂದ,

ಕ್ಷಣ... ಚಿಂತನೆ... bhchandru ಹೇಳಿದರು...

ಶಾಮಲಾ ಮೇಡಂ, ನಿಮ್ಮ ಭೇಟಿಯೊಂದಿಗೆ, ಸಂಪದ ಬರಹಗಾರರ ಭೇಟಿಯು ಖುಷಿಯಾಯಿತು. ನೀವು ಚಿತ್ರಸಂತೆಗೆ ಬಂದಿದ್ದರೆ... ಇನ್ನಷ್ಟು ಚೆನ್ನಿರುತ್ತಿತ್ತು.

ನಿಮ್ಮ ಅನಿಸಿಕೆಗಳಿಗೆ ಧನ್ಯವಾದಗಳು.

ಸ್ನೇಹದಿಂದ,

ಕ್ಷಣ... ಚಿಂತನೆ... bhchandru ಹೇಳಿದರು...

ಗೌತಮ್ ಅವರೆ, ನಿಮಗೆ ಸಂತಸವಾಗಿದ್ದನ್ನು ಹಂಚಿಕೊಂಡಿದ್ದೀರಿ, ನಿಮಗೂ ಧನ್ಯವಾದಗಳು.

ಹೀಗೆಯೆ ಬರುತ್ತಿರಿ,

ಸ್ನೇಹದಿಂದ,

ಕ್ಷಣ... ಚಿಂತನೆ... bhchandru ಹೇಳಿದರು...

ಪ್ರಕಾಶಣ್ಣ,
ನೀವು ಬರುವಿರೆಂದು ತಿಳಿದಿದ್ದೆವು. ಮತ್ತೊಮ್ಮೆ, ಇಂತಹ ಕಾರ್ಯಕ್ರಮದಲ್ಲಿ ಸಿಗೋಣ.

ಈ ಕೆಲವು ಫೋಟೋಗಳಿಂದ ನಿಮಗೆ ಖುಷಿಯಾಗಿದ್ದು ನನಗೂ ಸಂತಸವಾಗಿದೆ,

ಸ್ನೇಹದಿಂದ,

ಕ್ಷಣ... ಚಿಂತನೆ... bhchandru ಹೇಳಿದರು...

ಪರಾಂಜಪೆ ಸರ್‍,
ನಾನೂ ಸಹ ಅಲ್ಲಿಗೆ ಹೋಗುವ ವಿಚಾರವಿರಲಿಲ್ಲ. ಆದ್ರೆ, ಹೋಗಿದ್ದು ಮಾತ್ರ ಆಕಸ್ಮಿಕ. ಹೀಗೆ ಚಿತ್ರಸಂತೆಯನ್ನು ನಿಮ್ಮೊಂದಿಗೆ ಹಂಚಿಕೊಂಡಿದ್ದು, ನಿಮ್ಮ ಪ್ರೋತ್ಸಾಹಕ್ಕೆ ವಂದನೆಗಳು.

ಸ್ನೇಹದಿಂದ,

ವಿ.ಆರ್.ಭಟ್ ಹೇಳಿದರು...

ನಿಮ್ಮ ಚಿತ್ರದೊಲವು ಚೆನ್ನಾಗಿದೆ, ಪ್ರಸ್ತುತಪಡಿಸಿರುವ ಚಿತ್ರಗಳೂ ಚೆನ್ನಾಗಿವೆ.

ಕ್ಷಣ... ಚಿಂತನೆ... bhchandru ಹೇಳಿದರು...

ವಿ.ಆರ್. ಭಟ್ಟರೆ, ಹೀಗೆಯೆ ಬರುತ್ತಿರಿ. ನಿಮ್ಮ ಪ್ರೋತ್ಸಾಹವಿರಲಿ.
ಧನ್ಯವಾದಗಳು.