ಮಂಗಳವಾರ, ಫೆಬ್ರವರಿ 23, 2010

ಸ್ವಾತಂತ್ರ್‍ಯ ಯೋಧರು, ಹೋಟೆಲು ತಿಂಡಿಗಳು

ಸ್ವಾತಂತ್ರ್‍ಯ ಯೋಧರು, ಹೋಟೆಲು ತಿಂಡಿಗಳು

ಆ ದಿನ ಚಿತ್ರ ಸಂತೆಯಲ್ಲಿ, ಮಧ್ಯಾಹ್ನದ ವೇಳೆಯಲಿ ಹೊಟ್ಟೆ ಹಸಿದಿತ್ತು.
ಜೊತೆಗಿದ್ದ ಸಂಪದಿಗರು ಹೋಟೆಲಿಗೆ ಹೋಗುವಾ ಎಂದರು, ಕಾಲು ಹೋಟೆಲತ್ತ ಸಾಗಿತ್ತು.
ಒಂದು ಕ್ಷಣ, ಕ್ಯಾಮೆರಾ ಹಿಡಿದು ಆ ಪಕ್ಕಕ್ಕೆ ತೆರಳಿದೆ, ಮಿತ್ರವೃಂದ ದೂರ ಸಾಗಿತ್ತು.
ಫೋನಾಯಿಸಿದೆ. ಫೋನಾಯಿಸುತ್ತಿದ್ದೆ. ಛಾಯಾಕನ್ನಡಿಯ ಕ್ಯಾಮೆರಾ ಕಣ್ಣು ನನ್ನತ್ತ ದಿಟ್ಟಿ ನೆಟ್ಟಿತ್ತು.

ಆ ಕಡೆಯಲ್ಲಿದ್ದೇವೆ, ಎಂದಿತು ಫೋನೊಳಗಿನ ದನಿ. ನಾನಾಕಡೆಗೆ ಹೊರಟಿದ್ದೆ, ಚಿತ್ರಗಳತ್ತ ವಿಮುಖನಾಗಿ.
ಹೋಟೆಲು ಹೊಕ್ಕಾಗ ಇದ್ದವು ನಮಗಷ್ಟು ಕುರ್ಚಿಗಳು. ಮಾಣಿಯೂ ಕೇಳಿದ ಏನು ಬೇಕೆಂದು?
ನಾವೂ ಹೇಳಿದೆವು, ಏನಿದ್ದರೂ ಕೊಡು ಎಂದು.
ಕೊನೆಗೆ ಟೊಮ್ಯಾಟೋಬಾತು, ಬಿಸ್ಲೆರಿ ನೀರು, ಪಲಾವು ಸಪ್ಲೈಯಾದವು.
ಆ ಕಡೆ ನೋಡುತ್ತೇನೆ. ಅದೋ ಗಾಂಧೀಜಿ, ನೆಹರೂಜಿ, ಸುಭಾಷ್‌ಜಿ ಹಾಗೂ ಭಗತ್‌ಜೀ...
ಅವರುಗಳ ಪಕ್ಕ ಇದೆ, ಕಾಫಿ, ಇಡ್ಲಿ-ವಡೆ, ದೋಸೆ, ಐಸ್ಕ್ರೀಂ ಇತ್ಯಾದಿ..

ಕೈಲಿದ್ದ ಕ್ಯಾಮೆರಾ ಕ್ಲಿಕ್ಕಿಸಿತ್ತು ಅವರೆಲ್ಲರನೂ, ಅವೆಲ್ಲವನೂ!

ಗಾಂಧೀಜಿಗಿಂತ ಮೊದಲು ಐಸ್‌ಕ್ರೀಮ್, ನೆಹರುಗೆ ಮೊದಲು ಇಡ್ಲಿ-ವಡೆ, ನೇತಾಜಿ ಮೊದಲು ಮಸಾಲೆದೋಸೆ, ಕಾಫಿ ಕಪ್ಪುಸಾಸರು ಭಗತ್‌ಜೀಗೆ ಮೊದಲು. ಅಚ್ಚರಿಯಾಗಿತ್ತು. ಇದರಲ್ಲೇನೋ ವಿಶೇಷ ಇದೆಯೆನಿಸಿತು. ಅಷ್ಟರಲ್ಲಾಗಲೇ ಹೊರಗಡೆಗೆ ನಾವೆಲ್ಲಾ ಹೊರಟಿದ್ದೆವು.

ಹೋಟಿಲಿನ ಮಾಲೀಕ ದೇಶಪ್ರೇಮಿಯೂ ಇರಬಹುದು!.

ಏಕೆಂದರೆ, ಪ್ರಶ್ನೆ ನನ್ನೊಳಗೆ ಉಳಿಯಿತು. ಚಿತ್ರಗಳು ಚಿತ್ತದಲ್ಲಿ, ಕ್ಯಾಮೆರಾದಲ್ಲಿ ದಾಖಲಾಗಿದ್ದವು!


10 ಕಾಮೆಂಟ್‌ಗಳು:

ಸೀತಾರಾಮ. ಕೆ. / SITARAM.K ಹೇಳಿದರು...

marketing strategy.....irbodu
nice info

V.R.BHAT ಹೇಳಿದರು...

many hoteliers too are having their own interests in kaavya-saahitya, nice reading!

ಸಾಗರದಾಚೆಯ ಇಂಚರ ಹೇಳಿದರು...

idondu marketing trick irabahuda?

illa deshabhaktiya nenapa?

Subrahmanya ಹೇಳಿದರು...

ಎಲ್ಲಾದಕ್ಕಿಂತ ಹೆಚ್ಚಾಗಿ ನಿಮ್ಮ observation ಮತ್ತು ಆ ಕ್ಷಣದ ಯೊಚನೆ ಚೆನ್ನಾಗಿದೆ. ದೇಶಭಕ್ತಿ ಇರಬಹುದೆನೋsss..??!!

ವನಿತಾ / Vanitha ಹೇಳಿದರು...

ಸರ್, ದೇಶಭಕ್ತಿ ಇರಬಹುದೇನೋ ಎಂದು ಅನಿಸ್ತಿದೆ..ನನ್ನ ಮಾವನವರು ಇದೆ ತರ..ಮನೆತುಂಬ ಗಾಂಧೀಜಿ, ಅಂಬೇಡ್ಕರ್, ನೇತಾಜಿ ಯವರ ಫೋಟೋ ಕಾಣಸಿಗುತ್ತದೆ:)
& a quick observation by you!!!

PARAANJAPE K.N. ಹೇಳಿದರು...

ಹೋಟೆಲು ತಿ೦ಡಿ promote ಮಾಡಲು ದೇಶಭಕ್ತರ ಚಿತ್ರ ಬಳಸಿರಬಹುದು. ತಪ್ಪೇನಿಲ್ಲ. ಅವರೊಳಗೊಬ್ಬ ದೇಶಭಕ್ತನೂ ಇರಬಹುದು. ಆದರೆ ಅಷ್ಟು ಬೇಗ ಇದನ್ನೆಲ್ಲಾ ಗ್ರಹಿಸಿ ಫೋಟೋ ಕ್ಲಿಕ್ಕಿಸಿದ ನಿಮಗೆ ಸಲಾಂ. ಹೀಗೆಯೇ ದೈನ೦ದಿನ ಜೀವನದಲ್ಲಿ ನಮ್ಮ ನಡುವೆ ಕಾಣ ಸಿಗುವ ಅಪರೂಪದ ವಿಶೇಷ ಸನ್ನಿವೇಶ ಗಳನ್ನೂ ಸೆರೆ ಹಿಡಿಯುವ ಯತ್ನ ಮಾಡಿ.

AntharangadaMaathugalu ಹೇಳಿದರು...

ಚಂದ್ರೂ....
ನಿಮ್ಮ observation ಸೂಪರ್... ಹೋಟೆಲ್ ಮಾಲೀಕ ದೇಶಭಕ್ತನಿರುವುದು ಸಂತಸದ ಸಮಾಚಾರವೇ ಸರಿ. ಆದರೆ ತಿಂಡಿಗಳ ಚಿತ್ರಗಳ ಮಧ್ಯದಲ್ಲಿ ನಮ್ಮ ನಾಯಕರುಗಳ ಚಿತ್ರ ಏಕೋ ಅಷ್ಟು ಸಮಂಜಸ ಅನ್ಸಲ್ಲ ಅಲ್ವಾ? ಗಾಂಧಿ ಬಜಾರ್ ವಿದ್ಯಾರ್ಥಿ ಭವನದಲ್ಲಿ ಕವಿಗಳ, ಸಾಹಿತಗಳ ಚಿತ್ರಗಳನ್ನು ಬೇರೆ ಬೇರೆಯಾಗಿಯೇ ತೂಗು ಹಾಕಿದ್ದಾರೆ... ನನಗೇಕೋ ಇಡ್ಲಿ-ವಡೆ, ದೋಸೆಗಳ ಮಧ್ಯೆ ಈ ಚಿತ್ರಗಳನ್ನು ನೋಡಿ ಸಂಕಟವಾಯಿತು.... ನಿಮ್ಮ ಸಮಯಪ್ರಜ್ಞೆ ಪ್ರಶಂಸಿಸಬೇಕು....

shivu.k ಹೇಳಿದರು...
ಲೇಖಕರು ಈ ಕಾಮೆಂಟ್‌ ಅನ್ನು ತೆಗೆದು ಹಾಕಿದ್ದಾರೆ.
shivu.k ಹೇಳಿದರು...

ಚಂದ್ರು ಸರ್,

ಖಂಡಿತ ಆತ ದೇಶಪ್ರೇಮಿ. ಅವನ ಅಭಿರುಚಿಯನ್ನು ಕ್ಯಾಮೆರದಲ್ಲಿ ಸೆರೆಯಿಡಿದಿರುವುದು ಚೆನ್ನಾಗಿದೆ. ನನ್ನ ಕ್ಯಾಮೆರಾ ನಿಮ್ಮ ಕಡೆಗಿದ್ದಿದ್ದು ನಿಮಗೆ ತಿಳಿಯ ಬಾರದೆಂದುಕೊಂಡೆ. ಆದ್ರೂ ಗೊತ್ತಾಗಿಬಿಟ್ಟಿದೆ. ಇರಲಿ. ಮುಂದೆ ಬರುವ ನನ್ನ ಚಿತ್ರ ಸಂತೆ ಲೇಖನದಲ್ಲಿ ನಾನು ತೆಗೆದಿರುವ ನಿಮ್ಮ ಫೋಟೊ ಹಾಕುತ್ತೇನೆ. ಆದ್ರೆ ನಾಗೇಶ್ ಹೆಗಡೆ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ನಾನು ನಿಮ್ಮ ಫೋಟೊ ತೆಗೆದಿರುವುದು ನಿಮಗೆ ಗೊತ್ತಾ?

ಕ್ಷಣ... ಚಿಂತನೆ... ಹೇಳಿದರು...

ಶ್ರೀ ಕೆ. ಸೀತಾರಾಮರಿಗೆ ಸ್ವಾಗತ. ಅಭಿಪ್ರಾಯಗಳಿಗೆ ಧನ್ಯವಾದಗಳು. ನಿಮ್ಮ ಪ್ರೋತ್ಸಾಹವಿರಲಿ. ಹೀಗೆಯೆ ಬರುತ್ತಿರಿ.
@@
ಶ್ರೀಗಳಾದ ವಿ.ಆರ್‍.ಭಟ್, ಗುರುಮೂರ್ತಿ, ಸುಬ್ರಮಣ್ಯ ಭಟ್, ಪರಾಂಜಪೆ ನಿಮ್ಮೆಲ್ಲರ ಅನಿಸಿಕೆಗಳಿಗೆ ಧನ್ಯವಾದಗಳು. ಬಹುಶ: ಅದು ವ್ಯಾಪಾರ ತಂತ್ರ ಅಥವಾ ದೇಶಪ್ರೇಮ ಎರಡೂ ಇರಬಹುದು. ಹೀಗೆಯೆ ಬರುತ್ತಿರಿ.

ಶ್ರೀಮತಿ ವನಿತಾರವರಿಗೆ ಸ್ವಾಗತ. ನಿಮ್ಮ ಮಾವನವರಂತೆಯೇ ಈತನೂ ಇರಬಹುದು ಎಂದಿದೀರಿ. ಇರಬಹುದು. ವಂದನೆಗಳು.

ಅಂತರಂಗದ ಮಾತುಗಳು: ನಿಮ್ಮ ಅನಿಸಿಕೆ ನನಗೆ ಹೊಳೆದಿರಲೇ ಇಲ್ಲ. ನಿಮ್ಮ observation ನನಗಿಂತ ಸೂಪರ್‌ ಎನ್ನಬಹುದು. ವಂದನೆಗಳು.

ಶಿವು ಅವರೆ, ನಿಮ್ಮ ಅನಿಸಿಕೆಗಳಿಗೆ ಧನ್ಯವಾದಗಳು. ನಾನು ಚಿತ್ರಸಂತೆಯಲ್ಲಿ ನಿಮ್ಮ ಕ್ಯಾಮೆರಾ ನನ್ನ ಕಡೆಗಿದ್ದದ್ದು ಗಮನಿಸಿದೆ. ಮಾತಾಡಿಸಿದೆ. ಆದರೆ, ಶ್ರೀ ನಾಗೇಶ ಹೆಗಡೆ ಅವರ ಪುಸ್ತಕ ಬಿಡುಗಡೆಯಲ್ಲಿ ಗಮನಿಸಿಲ್ಲ. ಬಹುಶ: ತಿಂಡಿ-ಕಾಫಿ ಯಲ್ಲಿ ಮಗ್ನನಾಗಿರುವಾಗ ಕ್ಲಿಕ್ಕಿಸಿರಬಹುದೆ? ಹೀಗೆಯೆ ಬರುತ್ತಿರಿ.

ಸ್ನೇಹದಿಂದ,

ಚಂದ್ರಶೇಖರ ಬಿ.ಎಚ್.