ಸೋಮವಾರ, ಮಾರ್ಚ್ 1, 2010

ಅಮ್ಮಾ.. ಅಮ್ಮ... ಅಮ್ಮಾ.....ಆಅಅಅ....

ಅಮ್ಮಾ.. ಅಮ್ಮ... ಅಮ್ಮಾ.....ಆಅಅಅ....

ಈಗೊಂದೆರಡು ದಿನದ ಹಿಂದೆ, ಅಂದು ಸಂಜೆ ಸಹೋದ್ಯೋಗಿಗಳೊಡನೆ ಸಂಜೆಯ ವಿಹಾರ ಮುಗಿಸಿ ಮನೆಗೆ ಹಿಂದಿರುಗುವಾಗ, ಒಂದು ಉದ್ಯಾನವನದ ಮೂಲಕ ಬರುತ್ತಿದ್ದೆವು. (ದಿನವೂ ಹಾಗೆಯೇ ಬರುವುದು). ಆದರೆ, ಇಂದು ಒಂದು ಪುಟ್ಟ ಘಟನೆ(??) ನಡೆಯಿತು. ಅದನ್ನು ನಿಮ್ಮೊಂದಿಗೆ ಹಂಚಿಕೊಳ್ಳುವಾಸೆಯಾಯಿತು. ಅದೇನದು, ಎಂದರೆ???

ಸುಮಾರು ೨ ರಿಂದ ೩ ವರ್ಷದ ಮಗು ಅಳುತ್ತಿದೆ.

ಅಪ್ಪ `ಅಳಬೇಡ` ಎನ್ನುತ್ತಿದ್ದಾರೆ.

ಮಗು: ನಾನು ಬಿದ್ದೆ. ಪೆಟ್ಟಾಯ್ತು.... ಅಮ್ಮಾ ... ಅಪ್ಪಾಅ..... ಅಳುತ್ತಿದೆ.

ಅಪ್ಪ: ಅಳಬೇಡ. ಜಾಸ್ತಿ ಪೆಟ್ಟಾಗಿಲ್ಲ. ಬಾ ಎತ್ಕೊಂಡು ಹೋಗ್ತೀನಿ. ಅಳಬೇಡ. ಆತನ ಸಾಂತ್ವನ ಮಗುವಿಗೆ.

ಆದರೆ,
ಮಗುವಿನ ಮುಗ್ಧ ಪ್ರಶ್ನೆ: ನಾನು ಬಿದ್ದೆ. `ಯಾಕೆ ಅಳಬಾರದು'? ನಾನು . ನೀನೇ ಬೀಳಿಸಿದ್ದು. ನೀನೇ ಸರಿಯಾಗಿ ಕೈ ಹಿಡಕೊಳ್ಳದೆ ಬೀಳಿಸಿದ್ದು.

ಅಪ್ಪ: ಸರಿ. ಆದರೆ, ಅಳಬೇಡ. ಮನೆಗೆ ಹೋಗೋಣ. ಔಷಧಿ ಹಾಕ್ತೀನಿ. (ದಾರಿಯಲ್ಲಿ ನಡೆಯುತ್ತ.. ಬರುತ್ತಿದ್ದಾರೆ).

ಮಗು: ಯಾಕಪ್ಪಾ `ಅಳಬಾರ್‍ದು'? ಅಮ್ಮಂಗೆ ಹೇಳು, 'ನೀನೇ ಬೀಳಿಸಿದ್ದು' ಅಂತ. (ಅಂದರೆ, ಅಪ್ಪನೇ ಬೀಳಿಸಿದ್ದು...)

ಹೀಗೆ ಅಪ್ಪ, ಮಗಳ ಸಂಭಾಷಣೆ ಸಾಗುತ್ತಾ ಇತ್ತು. ನಾವು ಈ ಮಗುವಿನ ಮಾತನ್ನು ಕೇಳುತ್ತಾ...ಆ ಪ್ರಶ್ನೆಗಳಿಗೆ, ಉತ್ತರಕ್ಕೆ ನಗುತ್ತಾ ಮನೆಯ ಕಡೆಗೆ ಹೊರಟಿದ್ದೆವು.

***

ಮಕ್ಕಳ ಮುಗ್ಧಪ್ರಶ್ನೆಗಳಿಗೆ ಉತ್ತರ ಕೊಡೋದು ಹೇಗೆ? ನನ್ನ ತಲೆಯೊಳಗೆ ಪ್ರಶ್ನೆಯಾಗಿಯೇ ಉಳಿಯಿತು!

11 ಕಾಮೆಂಟ್‌ಗಳು:

PARAANJAPE K.N. ಹೇಳಿದರು...

ಹೌದು, ಮಕ್ಕಳ ಮನಸ್ಸೇ ಹಾಗೆ ? ಮುಗ್ಧ ಮತ್ತು ನಿಷ್ಕಪಟ. ಮಕ್ಕಳನ್ನು ಉತ್ತಮ ರೀತಿಯಲ್ಲಿ ಬೆಳೆಸಿ ಸರಿಯಾದ ಮಾರ್ಗದಲ್ಲಿ ನಡೆವ೦ತೆ ಮಾಡುವುದು ಇ೦ದು ಪೋಷಕರ ಪಾಲಿಗೆ ಬಹುದೊಡ್ಡ ಸವಾಲು.

ಕ್ಷಣ... ಚಿಂತನೆ... ಹೇಳಿದರು...

ಪರಾಂಜಪೆ ಸರ್‍, ನಿಮ್ಮ ಅನಿಸಿಕೆ ಖಂಡಿತಾ ನಿಜ. ಮಕ್ಕಳ ಮನಸ್ಸನ್ನು ಅರಿತು, ಉತ್ತಮ ಮಾರ್ಗದರ್ಶನ ಕಷ್ಟಸಾಧ್ಯವೇ ಹೌದು. ಅಭಿಪ್ರಾಯಗಳಿಗೆ ವಂದನೆಗಳು.

ಸ್ನೇಹದಿಂದ,

ಸೀತಾರಾಮ. ಕೆ. / SITARAM.K ಹೇಳಿದರು...

ತಪ್ಪೊಪ್ಪಿಗೆ ಆ ಮಗುವಿಗೆ ಪ್ರಾಮುಖ್ಯ. ಅಳು ಅದನ್ನು ಪಡೆಯಲು ಸಾಧನ. ಚೆನ್ನಾಗಿದೆ ತಮ್ಮ ಅನುಭವದ ಲೇಖನ.

AntharangadaMaathugalu ಹೇಳಿದರು...

ಚಂದ್ರೂ...
ಬರಹ ಚೆನ್ನಾಗಿದೆ. ಪುಟ್ಟ ಮಕ್ಕಳು ಯಾವಾಗಲೂ ಹಾಗೇ ತಾಯಿಯೇ ಸರ್ವಸ್ವ ಮತ್ತು ಅಮ್ಮ ತನ್ನೆಲ್ಲ ಕಷ್ಟಗಳನ್ನೂ, ನೀಗಿಸಿ ಅಕ್ಕರೆಯ ಅಪ್ಪುಗೆಯಲ್ಲಿ ಮರೆಸುತ್ತಾಳೆಂಬ ನಂಬಿಕೆಯಿಂದ ಎಲ್ಲಕ್ಕೂ ಅಮ್ಮ ಬೇಕು ಅನ್ನೋದು ಅಲ್ವಾ? ತಾಯಿಯ ಪ್ರೇಮ ಮಗುವಿನ ಪಾಲಿಗೆ ’ಇಡೀ ಪ್ರಪಂಚ’... ಮನಸ್ಸು ಮುದವಾಯಿತು ಓದಿ ಚಂದ್ರೂ....

ತೇಜಸ್ವಿನಿ ಹೆಗಡೆ ಹೇಳಿದರು...

ಮಕ್ಕಳ ಎಷ್ಟೋ ಪ್ರಶ್ನೆಗಳಿಗೆ ದೊಡ್ಡವರಾದ ನಾವು ಸರಿಯಾದ ಉತ್ತರಕೊಡಲಾಗುವುದಿಲ್ಲ. ಕಾರಣ ಅವರ ಪ್ರಶ್ನೆಗಳೆಲ್ಲಾ ನೇರ, ಸರಳ ಹಾಗೂ ಸತ್ಯತೆಯಿಂದ ಕೊಡಿರುತ್ತವೆ. ಅರಿಯದ ಮಕ್ಕಳಿಂದ ನಾವು ಅರಿಯುವುದು ಬಹಳಷ್ಟಿರುತ್ತದೆ.

ಸಾಗರದಾಚೆಯ ಇಂಚರ ಹೇಳಿದರು...

ನಿಜ ಸರ್
ಮಕ್ಕಳ ಮುಗ್ಧತೆ ದೊಡ್ಡವರಲ್ಲಿ ಯಾಕೆ ಇಲ್ಲ ಅನ್ನೋದು ಎಷ್ಟೋ ಸಲ ನನ್ನ ಕಾಡಿದ ಪ್ರಶ್ನೆ
ಬೆಳೆದಂತೆ ನಾವೇಕೆ ಮೃಗ ಆಗುತ್ತಿವೀ ಎನ್ನುವುದು ಯಕ್ಷಪ್ರಶ್ನೆ
ಒಳ್ಳೆಯ ಬರಹ

V.R.BHAT ಹೇಳಿದರು...

ಇಲ್ಕೇಳಿ- ಮಗು ಬಿದ್ದಾಗ ಯಾರೂ ನೋಡದಿದ್ದರೆ ಎದ್ದು ಸುಮ್ಮನೆ ಒರೆಸಿಕೊಂಡು ಹೋಗಿಬಿಡುತ್ತದೆ, ಅದೇ ಯಾರಾದರೂ ನೋಡಿಬಿಟ್ಟರೆ ಅದರ ಮರ್ಯಾದೆಗೆ ಸ್ವಲ್ಪ ಕಮ್ಮಿ-ಹೀಗಾಗಿ ತಿಕ್ಕಾಟ, ಅಲ್ಲಿ ಅಪ್ಪ-ಅಮ್ಮನನ್ನೂ ಆ ತಿಕ್ಕಾಟ ಬಿಡುವುದಿಲ್ಲ, ತಪ್ಪಾಯ್ತು ಅಂತ ಒಪ್ಪಿಕೊಂಡು ನಮದೆ ತಪ್ಪು ಅಂತ ಹೇಳಿದರೆ ಆಗ ಮಗುವಿಗೆ ಅದೇನೋ ಗೆದ್ದ ಖುಷಿ, ಚೆನ್ನಾಗಿದೆ !

V.R.BHAT ಹೇಳಿದರು...

ಇಲ್ಕೇಳಿ- ಮಗು ಬಿದ್ದಾಗ ಯಾರೂ ನೋಡದಿದ್ದರೆ ಎದ್ದು ಸುಮ್ಮನೆ ಒರೆಸಿಕೊಂಡು ಹೋಗಿಬಿಡುತ್ತದೆ, ಅದೇ ಯಾರಾದರೂ ನೋಡಿಬಿಟ್ಟರೆ ಅದರ ಮರ್ಯಾದೆಗೆ ಸ್ವಲ್ಪ ಕಮ್ಮಿ-ಹೀಗಾಗಿ ತಿಕ್ಕಾಟ, ಅಲ್ಲಿ ಅಪ್ಪ-ಅಮ್ಮನನ್ನೂ ಆ ತಿಕ್ಕಾಟ ಬಿಡುವುದಿಲ್ಲ, ತಪ್ಪಾಯ್ತು ಅಂತ ಒಪ್ಪಿಕೊಂಡು ನಮದೆ ತಪ್ಪು ಅಂತ ಹೇಳಿದರೆ ಆಗ ಮಗುವಿಗೆ ಅದೇನೋ ಗೆದ್ದ ಖುಷಿ, ಚೆನ್ನಾಗಿದೆ !

shivu.k ಹೇಳಿದರು...

ಸರ್,

ಮಕ್ಕಳ ಮುಗ್ದತೆ ಬಗ್ಗೆ ಎಷ್ಟು ಬರೆದರೂ ಕಡಿಮೆಯೇ ಅಲ್ಲವೇ..ಅವರ ಮಾತುಗಳನ್ನು ಕೇಳಿದಾಗ ಮತ್ತು ಕೇಳಿ ಅಲೋಚಿಸಿದಾಗ ಸರಿಯಾಗಿದೆ ಎನಿಸುವುದೇ ಹೆಚ್ಚು ಅಲ್ಲವೇ...

ಕ್ಷಣ... ಚಿಂತನೆ... ಹೇಳಿದರು...

ಪ್ರತಿಕ್ರಿಯೆಯನ್ನು ತಿಳಿಸಿದ ಎಲ್ಲರಿಗೂ ಧನ್ಯವಾದಗಳು.

ಸ್ನೇಹದಿಂದ,

ಮನದಾಳದಿಂದ............ ಹೇಳಿದರು...

ಮಕ್ಕಳ ಮನಸ್ಸು ಹಾಗೆ, ಮಕ್ಕಳ ಪ್ರಶ್ನೆ ಶುರು ಆಯಿತು ಅಂದ್ರೆ ಉತ್ತರ ಹುಡುಕೋಕೆ ನಾವು ಒದ್ದಾಡಬೇಕು. ಉತ್ತಮವಾಗಿದೆ.