ಬುಧವಾರ, ಮಾರ್ಚ್ 10, 2010

ಏನನ್ನು ಬರೆಯಲಿ ಎಂದು ಯೋಚಿಸುತ್ತಾ ಕುಳಿತಿದ್ದೆ...

ಊಟ ಮುಗಿಸಿ ಮನೆಯಿಂದ ಮಧ್ಯಾಹ್ನ ಕಚೇರಿಗೆ ಬಂದೆ. ಏನನ್ನು ಬರೆಯಲಿ ಎಂದು ಯೋಚಿಸುತ್ತಾ ಕುಳಿತಿದ್ದೆ. ಆಗ ನೆನಪಾಗಿದ್ದು ಇದು...

ಆ ನಂತರ ಬಂದ ಪ್ರತಿಕ್ರಿಯೆಗಳಲ್ಲಿ, ಸಾಗರದಾಚೆಯಿಂದೊಬ್ಬರು ಕವನ ಬರೆಯಿರಿ ಎಂದರೆ, ಅಂತರಂಗದ ಮಾತುಗಳನ್ನೂ ಸೇರಿಸಿದ್ದರೆ ಚೆನ್ನಾಗಿತ್ತು ಎಂಬ ಸಲಹೆಗಳನ್ನು ಓದುತ್ತಿರುವಾಗ, ಶ್ರೀ ಸೀತಾರಾಮರು ಒಂದು ಕವನ ರಚಿಸಿ ಕಾಮೆಂಟ್ ಬಾಕ್ಸಿನಲ್ಲಿ ಹಾಕಿದ್ದರು. ಇದನ್ನು ಸೇರಿಸಲೋ ಬೇಡವೋ ಇಲ್ಲಿ ಎಂಬ ಗೊಂದಲದಲ್ಲಿರುವಾಗ ಗೊಂದಲಕ್ಕೆ (ಜೀವನ) ಮುಕ್ತಿಯನ್ನು ಕೊಟ್ಟಂತೆ ಸಲಹಿಸಿದವರ ಮಾತಿನಂತೆ, ಶ್ರೀ ಸೀತಾರಾಮರ ಈ ಗುಟುಕನ್ನು (ಕವನ) ಅವರ ಅನುಮತಿಯಿದೆ ಎಂಬ ಭಾವನೆಯಿಂದ ಇಲ್ಲಿ ಅಳವಡಿಸಿದ್ದೇನೆ. ಎಲ್ಲರಿಗೂ ಧನ್ಯವಾದಗಳನ್ನು ತಿಳಿಸುತ್ತಾ...
ಹರಿವ ನದಿಯ ತಟದಿ
ನಿಶ್ಚಲ ಬ೦ಡೆ
ಹರಿವಾಸೆ ಬ೦ಡೆಗೆ
ನದಿಯ ನೋಡಿ
ನಿಶ್ಚಲವಾಗುವಾಸೆ ನದಿಗೆ
ಬ೦ಡೆಯ ನೋಡಿ
ನದಿ ನಿಶ್ಚಲವಾಗದು
ಬ೦ಡೆ ಹರಿಯದು
ಇದು ಪ್ರಕೃತಿಯ ನಿಯಮ.
ಆದರೇ...
ತಟದಲ್ಲಿರುವ ಹಕ್ಕಿಗಳೇ
ಗು೦ಪಿನಲ್ಲಿದ್ದು ನೀವೇಕೆ ಏಕಾ೦ಗಿ?
ಹರಿಯಬಹುದಾದರೂ ನಿಶ್ಚಲವೇಕೇ?
ನೀವೂ ಹರಿಯಬಹುದು-ನಿಶ್ಚಲರಾಗಬಹುದು
ಗು೦ಪಿನಲಿ ಏಕಾ೦ಗಿಯಾಗಿರಬಹುದು
ಏಕಾ೦ಗಿತನದಲ್ಲಿ ಗು೦ಪೆನಿಸಬಹುದು
ಇದು ನಿಮಗೆ ಪ್ರಕೃತಿ ನೀಡಿದ ಆಯ್ಕೆ
ತಮ್ಮ ಚಿತ್ರಕ್ಕೆ ನನ್ನದೊ೦ದು ಗುಟುಕು.

೧೧.೦೩.೨೦೧೦


15 ಕಾಮೆಂಟ್‌ಗಳು:

ಸಾಗರದಾಚೆಯ ಇಂಚರ ಹೇಳಿದರು...

ಹ ಹ
ಚೆನ್ನಾಗಿದೆ
ಇದರ ಮೇಲೆ ಒಂದು ಕವನ ಬರೆಯಿರಿ

AntharangadaMaathugalu ಹೇಳಿದರು...

ಚಂದ್ರೂ....
ಕೆಲವು ಸಾಲುಗಳಲ್ಲಿ ನಿಮ್ಮ ಅನಿಸಿಕೆ ಸೇರಿಸಿದ್ದರೆ ತುಂಬಾ ಆಕರ್ಷಕವಾಗಿರುತ್ತಿತ್ತು... ಈಗಲೂ ಸೇರಿಸಿ... ಚೆನ್ನಾಗಿರತ್ತೆ...

ಸೀತಾರಾಮ. ಕೆ. ಹೇಳಿದರು...

ಹರಿವ ನದಿಯ ತಟದಿ
ನಿಶ್ಚಲ ಬ೦ಡೆ
ಹರಿವಾಸೆ ಬ೦ಡೆಗೆ
ನದಿಯ ನೋಡಿ
ನಿಶ್ಚಲವಾಗುವಾಸೆ ನದಿಗೆ
ಬ೦ಡೆಯ ನೋಡಿ
ನದಿ ನಿಶ್ಚಲವಾಗದು
ಬ೦ಡೆ ಹರಿಯದು
ಇದು ಪ್ರಕೃತಿಯ ನಿಯಮ.
ಆದರೇ...
ತಟದಲ್ಲಿರುವ ಹಕ್ಕಿಗಳೇ
ಗು೦ಪಿನಲ್ಲಿದ್ದು ನೀವೇಕೆ ಏಕಾ೦ಗಿ?
ಹರಿಯಬಹುದಾದರೂ ನಿಶ್ಚಲವೇಕೇ?
ನೀವೂ ಹರಿಯಬಹುದು-ನಿಶ್ಚಲರಾಗಬಹುದು
ಗು೦ಪಿನಲಿ ಏಕಾ೦ಗಿಯಾಗಿರಬಹುದು
ಏಕಾ೦ಗಿತನದಲ್ಲಿ ಗು೦ಪೆನಿಸಬಹುದು
ಇದು ನಿಮಗೆ ಪ್ರಕೃತಿ ನೀಡಿದ ಆಯ್ಕೆ
ತಮ್ಮ ಚಿತ್ರಕ್ಕೆ ನನ್ನದೊ೦ದು ಗುಟುಕು.

PARAANJAPE K.N. ಹೇಳಿದರು...

ಚಿತ್ರವೂ ಚೆನ್ನಾಗಿದೆ, ಅದಕ್ಕೆ ಸೀತಾರಾಮರು ಹೊಸೆದ ಕವನದ ಸಾಲು ಗಳೂ ಚೆನ್ನಾಗಿವೆ.

ಕ್ಷಣ... ಚಿಂತನೆ... bhchandru ಹೇಳಿದರು...

ಗುರು ಅವರೆ, ನಿಮ್ಮ ಸಲಹೆಗೆ ಧನ್ಯವಾದಗಳು. ನಾನು ಕವನ / ಲೇಖನ ಬರೆಯುವ ಎಂದುಕೊಂಡಿದ್ದೆ. 'ಹೊಳೆ'ಯಲಿಲ್ಲ. ಅದಕ್ಕೆ, ಅ ಪ್ರಶ್ನೆ ಹಾಕಿಕೊಂಡೆ.
ಹೀಗೆಯೆ ಬರುತ್ತಿರಿ.
ಸ್ನೇಹದಿಂದ,

ಕ್ಷಣ... ಚಿಂತನೆ... bhchandru ಹೇಳಿದರು...

ಅಂತರಂಗದ ಮಾತುಗಳಿಗೆ, ಯೋಚಿಸೋಣ ಎಂದಷ್ಟೇ ತಿಳಿಸಬಹುದು.
ಸ್ನೇಹದಿಂದ,

ಕ್ಷಣ... ಚಿಂತನೆ... bhchandru ಹೇಳಿದರು...

ಸೀತಾರಾಮರಿಗೆ ನಮಸ್ಕಾರ. ಕವನ ಸೊಗಸಾಗಿದೆ. ಧನ್ಯವಾದಗಳು.
ನನಗೆ ಏನೂ ಬರೆಯಲು ತೋಚದಿದ್ದಾಗ ಫೋಟೋ ಮೂಲಕ ತಿಳಿಸಿದೆ. ಅದಕ್ಕೆ ನೀವು ಕವನದ ರೂಪ ಕೊಟ್ಟಿದ್ದೀರಿ. ಧನ್ಯವಾದಗಳು.

ಹೀಗೆಯೆ ಬರುತ್ತಿರಿ.
ಸ್ನೇಹದಿಂದ,

ಕ್ಷಣ... ಚಿಂತನೆ... bhchandru ಹೇಳಿದರು...

ಪರಾಂಜಪೆ ಸರ್‍, ನಿಮ್ಮ ಅನಿಸಿಕೆಗಳಿಗೆ ಥ್ಯಾಂಕ್ಸಗಳು.
ಸ್ನೇಹದಿಂದ,

Shweta ಹೇಳಿದರು...

ತುಂಬಾ ಚೆನ್ನಾಗಿ ಮೂಡಿಬಂದಿದೆ ಸರ್ ಕವನ...
ಕವನಗಳನ್ನು ಯಾಕೆಹೆಚ್ಚು ಬರೆಯಬಾರದು ನೀವು ?

shivu.k ಹೇಳಿದರು...

ಸರ್,

ಫೋಟೊಗೆ ತಕ್ಕ ಕವನ. ನೀವು ಒಂದು ಕವನವನ್ನು ಬರೆದಿದ್ದರೆ ಚೆನ್ನಾಗಿತ್ತು. ಮತ್ತೆ ಇವತ್ತು ನಮ್ಮ YPS ಸದಸ್ಯರೆಲ್ಲಾ ರಂಗನತ್ತಿಟ್ಟು ಕಡೆ ಹೋಗಿದ್ದಾರೆ...ಮತ್ತಷ್ಟು ಇಂತದ್ದೇ ಚಿತ್ರಗಳನ್ನು ಸೆರೆಯಿಡಿಯಬಹುದು.

Deepasmitha ಹೇಳಿದರು...

ಫೋಟೋ, ಕವನ ಚೆನ್ನಾಗಿದೆ. ಇದು ಎರಡು ಕೃತಿಗಳ ಸಂಗಮ, ಫೋಟೋ ನಿಮ್ಮದ, ಕವನ ಸೀತಾರಾಮರದ್ದು

ವಿ.ಆರ್.ಭಟ್ ಹೇಳಿದರು...

ಕವನ ಚಿತ್ರಕ್ಕೆ ಸರಿಯಾಗಿದೆ, ಸನ್ನಿವೇಶಕ್ಕೆ ಬರೆಯಲು ಸೀತಾರಾಮ್ ರವರು ಪಳಗಿದ ಕೈ ಎನಿಸುತ್ತದೆ, ಧನ್ಯವಾದಗಳು, ನಿಮಗೂ ಮತ್ತು ಸೀತಾರಾಮ್ ರವರಿಗೂ

ಸಾಗರಿ.. ಹೇಳಿದರು...

ಫೋಟೊ ಹಾಗೂ ಕವನ superbbbbbbb..

sunaath ಹೇಳಿದರು...

ಚಿತ್ರ ಹಾಗು ಕವನ ಎರಡೂ ಸುಂದರವಾಗಿವೆ. ನಿಮ್ಮಿಬ್ಬರಿಗೂ ಅಭಿನಂದನೆಗಳು.

ಕ್ಷಣ... ಚಿಂತನೆ... bhchandru ಹೇಳಿದರು...

ಫೋಟೋ ಮತ್ತು ಕವನವನ್ನು ಮೆಚ್ಚಿಕೊಂಡು ಪ್ರತಿಕ್ರಿಯೆಯನ್ನು ಹಾಗೂ ಪ್ರೋತ್ಸಾಹವನ್ನು ನೀಡಿದ ಶ್ವೇತಾ, ಶಿವು, ದೀಪಸ್ಮಿತ, ವಿ.ಆರ್‍.ಭಟ್, ಸಾಗರಿ ಮತ್ತು ಸುನಾಥ ನಿಮ್ಮೆಲ್ಲರಿಗೂ ಧನ್ಯವಾದಗಳು.

ಹೀಗೆಯೆ ಬರುತ್ತಿರಿ.

ಸ್ನೇಹದಿಂದ,