ಮಂಗಳವಾರ, ಮಾರ್ಚ್ 30, 2010

ಪೌರ್ಣಿಮೆಯ ಚಂದ...

Photo by Chandrashekara BH,29032010

ಬಾನಂಗಳದಲಿ ಚಂದ್ರಮ
ಸಂಜೆಗತ್ತಲಿಗೆ ಸಂಭ್ರಮ

ಕ್ಷೀರಧಾರೆಯ ಬೆಳಕು
ಕರಗಿಸೆ ಕತ್ತಲ ಮುಸುಕು

ತಂಗಾಳಿ ಹಾಡಿ ಹೇಳಲು
ತಾರೆ ನೂರು ಮಿನುಗಲು

ಅದುವೇ ಹುಣ್ಣಿಮೆಯ ಚಂದ್ರಮ
ನಿನಗೆ ನೀನೇ ಉಪಮ, ಅನುಪಮ

[ಇಂದು ಚಿತ್ರಾ ಪೂರ್ಣಿಮೆ + ಬೆಂಗಳೂರು ಕರಗ ಮಹೋತ್ಸವ. ಎಲ್ಲರಿಗೂ ಮಂಗಳವಾಗಲಿ]

6 ಕಾಮೆಂಟ್‌ಗಳು:

ಸಾಗರದಾಚೆಯ ಇಂಚರ ಹೇಳಿದರು...

ಸರ್
ಸುಂದರ ಕವನ
ಚಂದ್ರಮನ ಗುಣಗಾನ

ಸೀತಾರಾಮ. ಕೆ. / SITARAM.K ಹೇಳಿದರು...

NICE
SUPER
HAPPY KARAGA

ಕ್ಷಣ... ಚಿಂತನೆ... ಹೇಳಿದರು...

ಗುರು ಅವರೆ, ನಿಮ್ಮ ಅನಿಸಿಕೆಗಳಿಗೆ ಧನ್ಯವಾದಗಳು.

@@@@@@@@@@@

ಸೀತಾರಾಮ ಅವರೆ, ಧನ್ಯವಾದಗಳು ಹಾಗೂ ನಿಮಗೂ ಶುಭಾಶಯಗಳು.

ಹೀಗೆಯೆ ಬರುತ್ತಿರಿ.

ಸ್ನೇಹದಿಂದ,

AntharangadaMaathugalu ಹೇಳಿದರು...

ಕವನ ಚೆನ್ನಾಗಿದೆ ಚಂದ್ರೂ.......
ನಾನೂ ಆದಿನ ಚಂದ್ರನನ್ನು ನೋಡಿ, ನಿಜವಾಗಿ ಮೈ ಮರೆತಿದ್ದೆ. ನನಗೆ "ಬೆಳ್ದಿಂಗಳು ಹಾಲ್ಚೆಲ್ಲಿದ ಹುಣ್ಣಿಮೆ ಇರುಳಲ್ಲಿ...." ಹಾಡು ಚಂದ್ರನ ದರ್ಶನವಾದಾಗಿನಿಂದಲೂ ಕಾಡುತ್ತಿದೆ... ಕವಿಯ ವರ್ಣನೆಗೆ ಸಾಟಿಯೇ ಇಲ್ಲ ಅಲ್ವಾ? ಈ ಕವನ ಪ್ರೇಮ ಗೀತೆಯಾದರೂ ಕೂಡ, ಬೆಳ್ದಿಂಗಳನ್ನು ಹಾಲಿಗೆ ಹೋಲಿಸಿ, ತುಂಗೆಯ ಮರಳನ್ನು ಸಕ್ಕರೆಗೆ ಹೋಲಿಸಿ.... !!!!

PARAANJAPE K.N. ಹೇಳಿದರು...

ಚೆನ್ನಾಗಿದೆ,

shivu.k ಹೇಳಿದರು...

ಬೆಂಗಳೂರು ಕರಗ ಸಮಯದಲ್ಲಿ ಪೂರ್ಣ ಹುಣ್ಣೀಮೆ ಸಮಯದ ಫೋಟೊ ಮತ್ತು ಕವನ ಚೆನ್ನಾಗಿದೆ...ಅದ್ರೆ ಇದೇ ಕರಗಕ್ಕಾಗಿ ನನ್ನ ಇಬ್ಬರೂ ಹುಡುಗರು ದಿನಪತ್ರಿಕೆ ಕೆಲಸಕ್ಕೆ ಚಕ್ಕರ್ ಹಾಕಿದರಲ್ಲಾ...ಅದಕ್ಕೇನು ಹೇಳಲಿ...