ಮಿತ್ರ ಶಿವು ಅವರು ಎಲ್ಲಾ ಛಾಯಾಗ್ರಾಹಕ ಮಿತ್ರರಿಗೆ ಎಂದು ಒಂದು ಮಿಂಚಂಚೆ ಕಳಿಸಿದ್ದರು ಮೇ ತಿಂಗಳಿನಲ್ಲಿ. ಅದು ಏನೆಂದರೆ, ಕರ್ನಾಟಕ ಛಾಯಾಚಿತ್ರ ಸಂಘದ (ಕೆಪಿಎ) ಕಡೆಯಿಂದ ೨ನೇ ರಾಜ್ಯ ಮಟ್ಟದ ಛಾಯಾಚಿತ್ರ ಸ್ಪರ್ಧೆಗೆ ಸಂಬಂಧಿಸಿದ್ದು. ಸರಿ, ನಾನೂ ಕೆಲವು ಚಿತ್ರಗಳನ್ನು ಅಳೆದೂ ಸುರಿದೂ ಕೊನೆಗೆ ಎರಡು ಚಿತ್ರಗಳನ್ನು ಅಚ್ಚಿಸಿ ಈ ಒಂದು ಸ್ಪರ್ಧೆಗೆ ಕಳಿಸಿದ್ದೆ. ಫಲಿತಾಂಶ ಬಂದಾಗ ಖುಷಿಯಾಯಿತು.. ಏಕೆಂದರೆ, ಮೊದಲ ಬಾರಿಗೆ ಪ್ರಯತ್ನಿಸಿದ್ದೆ. ಅದರಲ್ಲಿ ವಿಷಾದವೆಂದು ತಿಳಿಸಿದ್ದರು. ಆದರೆ, ಒಂದು ಉಚಿತ ಟಿಕೆಟ್ ನೀಡಿದ್ದರು. ನನ್ನ ಒಂದಿಬ್ಬರು ಬ್ಲಾಗ್ ಮಿತ್ರರಿಗೆ ಈ ವಿಚಾರ ತಿಳಿಸಿದ್ದೆ.
ಬೆಂಗಳೂರಿನ ಅರಮನೆ ಮೈದಾನದಲ್ಲಿ ಈ ಸ್ಪರ್ಧೆಯಲ್ಲಿ ಭಾಗಿಗಳಾಗಿ ವಿಜಯಿಗಳೂ ಹಾಗೂ ಆಯ್ಕೆಯಾದವರ ಚಿತ್ರಪ್ರದರ್ಶನ ಎಲ್ಲ ನಡೆದಿತ್ತು. ಇಲ್ಲಿ ಹೋಗಬೇಕೆಂಬ ಇಚ್ಛೆ. ಆದರೆ, ಕೆಲವಾರು ವೈಯಕ್ತಿಕ ಕಾರಣಗಳಿಂದ ನನಗೆ ಜುಲೈ ೯ -೧೦ ಹೋಗಲಾಗಲಿಲ್ಲ. ಕೊನೆಯ ದಿನದಂದು ಹೋಗುವ ಎಂದು ಯೋಚಿಸಿದೆ. ಒಬ್ಬನೇ ಹೋದರೆ ಹೇಗೆ? ಜೊತೆಯಲ್ಲಿ ಸ್ನೇಹಿತರಿದ್ದರೆ ಓಕೆ ಅನ್ನಿಸಿತು. ಫೋನಾಯಿಸಿದೆ. ಕೆಲವರಿಗೆ ಬರಲಾಗಲಿಲ್ಲ. ಸರಿ, ವಿವರಗಳಿಗೆ ಸಂಪರ್ಕಿಸಿ ಎಂದು ನಮೂದಿಸಿದ್ದ ನಂಬರಿಗೆ ದೂರವಾಣಿ ಕರೆ ಮಾಡಿದೆ. ನಂತರ ನನ್ಯ ಪುಟ್ಟ ಕ್ಯಾಮೆರಾ ಹಿಡಿದು ಅರಮನೆಯ ಮೈದಾನದ ಅಂಗಳಕ್ಕೆ ಬಸ್ಸಿನಲ್ಲಿ ಬಂದಿಳಿದೆ. ನಂತರ ಅಲ್ಲೆಲ್ಲ ಸುತ್ತಾಡಿದೆ. ನಮ್ಮ ಕಚೇರಿಯ ಮಾಜಿ ಉದ್ಯೋಗಿಯೊಬ್ಬರು ಹಾಗೂ ಸಹೋದ್ಯೋಗಿಯೊಬ್ಬರು ಸಿಕ್ಕಿದರು. ಮಾಜಿ ಉದ್ಯೋಗಿಯವರು ಅಖಿಲ ಕರ್ನಾಟಕ ಛಾಯಾಚಿತ್ರಗಾರರ ಮತ್ತು ವಿಡಿಯೋಗ್ರಾಫರುಗಳ ಸಂಘಕ್ಕೆ ಸೇರಿದವರು. ಸರಿ, ಅಲ್ಲಲ್ಲಿ ಕ್ಯಾಮೆರಾ ಮಾದರಿಗಳು, ಪ್ರಿಂಟಿಂಗ್ ಯಂತ್ರಗಳು, ಹೀಗೆ ಫೋಟೋಗ್ರಫಿ ಮತ್ತು ಪ್ರಿಂಟಿಂಗ್ ಸಂಬಂಧಪಟ್ಟ ಪರಿಕರಗಳನ್ನು ನೋಡಿದ್ದಾಯಿತು.
ಮುಂದೆ... ಅಲ್ಲಿ ನಡೆಯುತ್ತಿದ್ದ ಕಾರ್ಯಾಗಾರಕ್ಕೆ ಭೇಟಿಯಿತ್ತೆ. ಆಸ್ಟ್ರೋ ಮೋಹನ್ ರವರ ಕಾರ್ಯಾಗಾರ ನೋಡಿದೆ. ಮತ್ತೊಂದು ಕಡೆ ಫೋಟೋಶಾಪ್ ಪಾಠ ಕೇಳಿದೆ. ಆಡ್ ಫೋಟೋಗ್ರಫಿ ಪ್ರಾತ್ಯಕ್ಷಿಕೆ ನೋಡಿದೆ.
ಪ್ರದರ್ಶನದ ಹಾಲಿನಲ್ಲಿ `ಉದಯ್' ಇವರನ್ನು ಮಾತಾಡಿಸಿದೆ. ಒಂದು ಭಾವಚಿತ್ರಕ್ಕೆ ಖುಷಿಯಿಂದ ಫೋಸ್ ಕೊಟ್ಟರು... ಇವೆಲ್ಲ ನೆನಪುಗಳು... ನನ್ನ ಈ ಕೆಲವು ಚಿತ್ರಗಳಿಂದ ನಿಮಗೂ ತಿಳಿಸುತ್ತಿದ್ದೇನೆ.
ಛಾಯಾಗ್ರಾಹಕ ಮಿತ್ರರಾದ ಕೆ.ಶಿವು ಮತ್ತು ಡಿ.ಜಿ. ಮಲ್ಲಿಕಾರ್ಜುನ ಅವರ ಚಿತ್ರಗಳೂ ಇದ್ದವು. ಅವನ್ನೂ ಇಲ್ಲಿ ಕಾಣಬಹುದು.
ಹೇಗಿದೆ? ನಿಮ್ಮ ಅಭಿಪ್ರಾಯ ತಿಳಿಸಿ...
ಚಿತ್ರಗಳು: ಚಂದ್ರಶೇಖರ ಬಿ.ಎಚ್.
ನಾನು ಕಳಿಸಿದ್ದ ಛಾಯಾಚಿತ್ರ-೧ನಾನು ಕಳಿಸಿದ್ದ ಛಾಯಾಚಿತ್ರ-೨ಶ್ರೀ ಉದಯ್
ಮದುವೆಯ ಛಾಯಾಚಿತ್ರಗಳು - ಕೆ.ಶಿವು ಅವರದ್ದೂ ಇದೆ.
13 ಕಾಮೆಂಟ್‌ಗಳು:
Chennagive chitragaLu. Nimmadu uttama prayatna... keep it up.
ಚಿತ್ರಗಳು ಚೆನ್ನಾಗಿವೆ. ನೀವು ಸೆರೆ ಹಿಡಿದ ಚಿತ್ರವೂ ಮನೋಹರ.
ಸರ್,
ಇನ್ನಷ್ಟು ಚಿತ್ರಗಳನ್ನು ಹಾಕಿದ್ದರೆ ಚೆನ್ನಾಗಿತ್ತು. ಈ ವಿಚಾರದಲ್ಲಿ ನಿಮ್ಮ ಉತ್ಸಾಹ ಕಂಡು ಖುಷಿಯಾಯ್ತು..
ಚಿತ್ರಗಳು ಮುದ ಕೊಟ್ಟವು ಚ೦ದ್ರು ಅವರೆ.
ಶುಭಾಶಯಗಳು
ಅನ೦ತ್
ಚಿತ್ರಗಳು ಚೆನ್ನಾಗಿವೆ.
ನಿಮ್ಮವ,
ರಾಘು .
ಉತ್ತಮ ಪ್ರಯತ್ನ, ಮು೦ದಿನ ಬಾರಿ ಯಶಸ್ಸು ನಿಮ್ಮದಾಗಲಿ.
ಚಂದ್ರು....
ನೀವು ತೆಗೆದ ಮೊದಲನೆಯ ಫೋಟೊ ಬಲು ಸುಂದರವಾಗಿದೆ...
ನನಗೆ ಅರಮನೆ ಮೈದಾನಕ್ಕೆ ಬರಲಾಗಲಿಲ್ಲ...
ನಿಮ್ಮ ಚಿತ್ರ ಲೇಖನ ಓದಿ ಖುಷಿಯಾಯಿತು..
ಚೆಂದದ ಮಾಹಿತಿ. ತಮ್ಮ ಚಿತ್ರಗಳು ಚೆನ್ನಾಗಿವೆ. ಮುಂದಿನ ಸರ್ತಿ ತಮಗೆ ಜಯ ಲಭಿಸಲಿ.
ಪ್ರದರ್ಶನದ ಚಿತ್ರಗಳನ್ನು ಕೊಟ್ಟಿದ್ದಕ್ಕೆ ಧನ್ಯವಾದಗಳು.
ಚಿತ್ರ ಮತ್ತು ಲೇಖನಗಳು ತುಂಬಾ ಚನ್ನಾಗಿವೆ.
ಮುಂದೇ ನಿಮಗೆ ಯಶಸ್ಸು ಲಭಿಸಲಿ..........
ನಿಮ್ಮ ಪ್ರಯತ್ನಕ್ಕೆ ಅಭಿನಂದನೆಗಳು
ಚಂದ್ರು...ಶಿವು ಮತ್ತೆ ಮಲ್ಲಿ ಸಾಲಿನ ಸಾಲು ಮರ ನೀವು ಅಂತ ಗೊತ್ತಿರಲಿಲ್ಲ....ಚೆನ್ನಾಗಿವೆ ಚಿತ್ರಗಳು....ಇನ್ನು ಮೇಲೆ ನಿಯಮಿತ ಆಗೊಮ್ಮೆ ಈಗೊಮ್ಮೆ ಬಿಡುವಾದಾಗಲೆಲ್ಲ ಬರಲು ಪ್ರಯತ್ನಿಸುವೆ
ನಾನೂ ಈ ಪ್ರದರ್ಶನಕ್ಕೆ ಹೋಗಿದ್ದೆ. ಬಹುಮಾನಿತ ಫೋಟೋಗಳು ಸುಂದರವಾಗಿದ್ದವು
pratikriyisida ellarigoo dhanyavaadagalu.
ಕಾಮೆಂಟ್ ಪೋಸ್ಟ್ ಮಾಡಿ