ಮಾನವನ ದಾಹಕ್ಕೆ ಬಲಿಯಾಗುವು ಏನೆಲ್ಲ?
ಒಂದು ದೇಶದಲ್ಲಿನ ಜನಾಂಗದ, ನೈಸರ್ಗಿಕ ಸಂಪತ್ತು, ಜೀವ ಸಂಕುಲವೆಲ್ಲ ನಾಶವಾಗುತ್ತವೆ. ಇಲ್ಲವೇ, ಒಂದಾದ ನಂತರ ಕೊಂಡಿ ಕಳಚಿಕೊಳ್ಳುತ್ತಾ... ಭೀಕರ ಕ್ಷಾಮ ತಲೆದೋರುತ್ತದೆ, ಖಾಯಿಲೆಗಳು, ಅಂಗವೈಕಲ್ಯ, ಕಲುಷಿತ ವಾತಾವರಣ, ಪ್ರಾಣಿಸಂಕುಲದ ನಾಶ... ಹೀಗೆ ಮಾನವನಿರ್ಮಿತ ಬಾಂಬುಗಳಿಂದ ತನಗೆ ತಾನೇ `ಭಸ್ಮಾಸುರ'ನಾಗುತ್ತಾನೆ. ಅದಕ್ಕೆ ಉದಾಹರಣೆ: ಜಪಾನಿನ ನಾಗಸಾಕಿ ಮತ್ತು ಹಿರೋಷಿಮಾ ಮೇಲಿನ ೧೯೪೫ರ ಯುದ್ಧದಲ್ಲಿ ನಡೆದ ಅಣುಬಾಂಬಿನ ದಾಳಿ.
ಆಗಸ್ಟ್ ೬, ೧೯೪೫, ೧.೪೫ ಎ.ಎಂ. ಗೆ ಯುಎಸ್ಬಿ-೨೯ ಎರಡನೇ ಅಣುಬಾಂಬನ್ನು ಹೊತ್ತು ಹಿರೋಷಿಮಾ ಮೇಲೆ ಹಾಕಿತು. ಯುದ್ಧ ವಿಮಾನಚಾಲಕ ಎನೊಲಾ ಗೇ... ಒಂದು ನಿಮಿಷದ ವಿವೇಚನಾ ರಹಿತ ತೀರ್ಮಾನ ಒಂದು ಜನಾಂಗದ, ದೇಶದ ಚಿತ್ರಣವನ್ನೇ ಬದಲಾಯಿಸಿತು. ಇದೆಲ್ಲ ಏಕಾಗಿ? ಇಂದಿಗೆ ೬೫ ವರ್ಷವಾಗುತ್ತಿದೆ. ಅಲ್ಲಿನ ಪರಿಸ್ಥಿತಿಯಲ್ಲಿ ಇನ್ನೂ ಸಹ ಸುಧಾರಣೆ ಕಂಡುಬಂದಿಲ್ಲವೆಂದು ವರದಿಗಳು ತಿಳಿಸುತ್ತವೆ. ಅಣುವಿಕಿರಣದ ಪರಿಣಾಮ ಭಯಾನಕವಾಗಿದ್ದು, ಇನ್ನೂ ಅದರ ಪಳಿಯುಳಿಕೆಗಳಿವೆ ಎಂಬುದಾಗಿ ತಿಳಿದುಬರುತ್ತದೆ.
ಇಂತಹ ಕೃತ್ಯಗಳನ್ನು ವಿಶ್ವ ಸಮುದಾಯ ಖಂಡಿಸಬೇಕು. ಅಣುಬಾಂಬಿನಂತಹ ವಿಶ್ವದ ವಿನಾಶಕಾರೀ ಅಸ್ತ್ರಗಳನ್ನು ಸದ್ಬಳಕೆ (??) ಮಾಡಿಕೊಳ್ಳಬೇಕು. ಅದು ಬಿಟ್ಟು, ಪರರ ಸಂಹಾರಕ್ಕೆ ಉಪಯೋಗಿಸಿದರೆ, `ಭಸ್ಮಾಸುರ' ನ ಗತಿಯೇ ಆಗುವುದು...
ಆ ವಿಚ್ಛದ್ರಕಾರಿ ಆಕ್ರಮಣದಲ್ಲಿ ಲಕ್ಷಾಂತರ ಮಂದಿ ಬೆಂದುಹೋದರು. ಅಂಗವಿಕಲರಾದರು. ಅವರ ನಂತರದ ಪೀಳಿಗೆಯಲ್ಲಿ ಅಣುವಿಕಿರಣದ ಅಂಶ ಇನ್ನೂ ಆರದೆ ಉಳಿದಿರುವುದು ಮಾನವ ಜನಾಂಗಕ್ಕೆ ಒಂದು ಕಪ್ಪು ಚುಕ್ಕೆಯಷ್ಟೇ ಅಲ್ಲ, ಎಂದಿಗೂ ಮರೆಯಲಾಗದಂತಹ ಘಟನೆ... ಇದು ಮಾನವಜನಾಂಗಕ್ಕೆ ಒಂದು ಪಾಠವಾಗಿದೆ.
ಇಂದಿಗೆ ೬೫ ವರ್ಷ. ಆ ದಿನದಿಂದ ಇಂದಿನವರೆಗೂ ನಲುಗಿದವರ ಬಾಳಿನಲ್ಲಿ ಬೆಳಕು ಮೂಡಲಿ.. ಎಂದು ಆಶಿಸೋಣ.
ಪೂರಕ ಓದಿಗಾಗಿ: http://www.hiroshimacommittee.org/
http://www.japaneselifestyle.com.au/travel/hiroshima_bombing.ಹ್ತ್ಮ್
8 ಕಾಮೆಂಟ್ಗಳು:
ತುಂಬಾ ದು:ಖಕರ ಹಾಗೂ ದುರದೃಷ್ಟಕರ ನೆನಪು ಚಂದ್ರೂ..... ನಾವೆಲ್ಲರೂ ಕೂಡಿ ಅದರಲ್ಲಿ ನಲುಗಿದವರ ಬಾಳಲ್ಲಿ ಬೆಳಕು ಮೂಡಲಿ ಎಂದು ಪ್ರಾರ್ಥಿಸೋಣ.....
ಶ್ಯಾಮಲ
ಒಳಿತನ್ನು ಆಶಿಸುವುದಷ್ಟೇ ನಮ್ಮ ಮು೦ದಿರುವ ಆಯ್ಕೆ. ಇನ್ನಾದರೂ ಇ೦ತಹ ಕೃತ್ಯಗಳು ಮರುಕಳಿಸದಿರಲಿ . ಸಕಾಲಿಕ ಬರಹ
eMdu mareyalaarada ghatanegalalloMdu ..
baraha chennagide ..
ನಾನು ಕಳೆದ ವರ್ಷ ಅಲ್ಲಿಗೆ ಹೋಗಿದ್ದೆ
ಮನ ಕಲಕುವ ಆ ಘಟನೆ ಕಣ್ಣಿಗೆ ಬಂತು
ಸರ್,
ಇದನ್ನು ನಿನ್ನೆ ರಾತ್ರಿ ಟಿವಿ೯ ನಲ್ಲಿ ಹೀರೋಶಿಮ ಬಗ್ಗೆ ಒಂದು ಕಾರ್ಯಕ್ರಮ ನೋಡಿದೆ. ಅವರಿಗಾದ ಅನ್ಯಾಯ ಮತ್ತು ಅವರು ಬೆಳೆದ ಪರಿ ಕಂಡು ವಿಸ್ಮಿತನಾದೆ. ಅವರ ಬದುಕಿನಲ್ಲಿ ಇನ್ಯಾದರು ಒಳ್ಳೆಯದು ಆಗಲಿ ಎಂದು ಹಾರೈಸೋಣ.
ನಾವೆಲ್ಲರೂ ಕೂಡಿ ಅದರಲ್ಲಿ ನಲುಗಿದವರ ಬಾಳಲ್ಲಿ ಬೆಳಕು ಮೂಡಲಿ ಎಂದು ಪ್ರಾರ್ಥಿಸೋಣ.....
chandru sir, nange 9th class English text nalli idondu lesson ittu...
enyaarigu etara agade erli alva...
ಇಂತಹ ಸನ್ನಿವೇಶಗಳು ಬರದಿರಲಿ ಎಂದು ಆಶಿಸುವ. ಪ್ರತಿಕ್ರಿಯಿಸಿದ ಎಲ್ಲರಿಗೂ ಧನ್ಯವಾದಗಳು
ಕಾಮೆಂಟ್ ಪೋಸ್ಟ್ ಮಾಡಿ