ಇರುವೆ, ನಿನ್ನೊಡನೆ...
ನಿನ್ನ ಹೃದಯದ ನೋವನು ನಾ ಪಡೆಯಲಾರೆ..
ನಿನ್ನೊಡನೆ ಇರುವೆ, ನೋವ ಮರೆಸುವೆ..
ನಿನ್ನೊಡನೆ ಹೆಜ್ಜೆ ಹಾಕುವೆ, ಸಲಹುವೆ..
ಇದಿಷ್ಟು ಭರವಸೆಯಲಿ ನಿನ್ನ ಸಂತೈಸುವೆ...
ನಿನ್ನೆದೆಯಾಳದ ಮಾತುಗಳ ನಾ ಕೇಳುವೆ..
ನಿನ್ನ ತುಂಬಿದ ಕಣ್ಣಾಲಿಗಳ ಒರೆಸುವೆ..
ಚಿಂತೆಗಳ ದೂರಮಾಡಲು ನಾ ಸಹಕರಿಸುವೆ..
ಭಯವನು ಬಿಡು, ಅಭಯ ನೀಡುವೆ...
ನಿನ್ನ ಬಳಿಯಲೇ ಇರುವೆ, ಮಾತಾಡುತಿರುವೆ..
ನೀನೇರುವ ಗುಡ್ಡಬೆಟ್ಟಗಳಿಗೆ ಜೊತೆಯಾಗುವೆ..
ನೀನೆನ್ನ ಕರವ ಹಿಡಿದುಕೋ.. ವಿಶ್ವವನೆ ಜಯಿಸು..
ಅದಕಾಗಿ ನೀ ಬಾಳಬೇಕು.. ಕಾಣುವುದು ಬೆಳಕು...
ನೀನು ಒಂಟಿಯಲ್ಲಿ.. ಒಬ್ಬಂಟಿಯಲ್ಲ ನೆನಪಿಡು..
ನಿನ್ನ ಕನಸುಗಳ ನೀ ಸಾಕಾರಗೊಳಿಸು..
ನೋವೆಲ್ಲ ಮರೆತು ನಗುವ ಮೊಗವ ಕಾಣಿಸು..
ಬದುಕು ಶೂನ್ಯವಲ್ಲ, ತಿಳಿಯೇ ನೀ ಸೋದರೀ...
ನಿನ್ನ ಹೃದಯದ ನೋವನು ನಾ ಪಡೆಯಲಾರೆ..
ನಿನ್ನೊಡನೆ ಇರುವೆ, ನೋವ ಮರೆಸುವೆ..
ನಿನ್ನೊಡನೆ ಹೆಜ್ಜೆ ಹಾಕುವೆ, ಸಲಹುವೆ..
ಇದಿಷ್ಟು ಭರವಸೆಯಲಿ ನಿನ್ನ ಸಂತೈಸುವೆ...
ನಿನ್ನೆದೆಯಾಳದ ಮಾತುಗಳ ನಾ ಕೇಳುವೆ..
ನಿನ್ನ ತುಂಬಿದ ಕಣ್ಣಾಲಿಗಳ ಒರೆಸುವೆ..
ಚಿಂತೆಗಳ ದೂರಮಾಡಲು ನಾ ಸಹಕರಿಸುವೆ..
ಭಯವನು ಬಿಡು, ಅಭಯ ನೀಡುವೆ...
ನಿನ್ನ ಬಳಿಯಲೇ ಇರುವೆ, ಮಾತಾಡುತಿರುವೆ..
ನೀನೇರುವ ಗುಡ್ಡಬೆಟ್ಟಗಳಿಗೆ ಜೊತೆಯಾಗುವೆ..
ನೀನೆನ್ನ ಕರವ ಹಿಡಿದುಕೋ.. ವಿಶ್ವವನೆ ಜಯಿಸು..
ಅದಕಾಗಿ ನೀ ಬಾಳಬೇಕು.. ಕಾಣುವುದು ಬೆಳಕು...
ನೀನು ಒಂಟಿಯಲ್ಲಿ.. ಒಬ್ಬಂಟಿಯಲ್ಲ ನೆನಪಿಡು..
ನಿನ್ನ ಕನಸುಗಳ ನೀ ಸಾಕಾರಗೊಳಿಸು..
ನೋವೆಲ್ಲ ಮರೆತು ನಗುವ ಮೊಗವ ಕಾಣಿಸು..
ಬದುಕು ಶೂನ್ಯವಲ್ಲ, ತಿಳಿಯೇ ನೀ ಸೋದರೀ...
- ಚಂದ್ರಶೇಖರ ಬಿ.ಎಚ್. ೧೯.೦೮.೨೦೧೦
[ಇದು ಒಂದು ಅನಾಮಿಕ ಬರೆದ ಆಂಗ್ಲ ಕವಿತೆಯ ಸಾಲುಗಳನ್ನು ನನ್ನ ಭಾವನೆಗಳಿಗೆ ಹೊಂದಿಸಿಕೊಂಡು ಬರೆದಿರುವೆನು.]
3 ಕಾಮೆಂಟ್‌ಗಳು:
ವಾವ್ . . . ಎಷ್ಟು ಚೆನ್ನಾಗಿ ಭಾವಾನುವಾದ ಮಾಡಿದಿರಾ ಸರ್ . ವಾಸ್ತವಕ್ಕೆ ಹತ್ತಿರವಾದ ತುಂಬಾ ಅರ್ಥಪೂರ್ಣ ಸಾಲುಗಳು.
ಚೆನ್ನಾಗಿದೆ, ಇನ್ನಷ್ಟು ಬರೆಯಿರಿ
ಚೆಂದದ ಕವನ.
ಕಾಮೆಂಟ್ ಪೋಸ್ಟ್ ಮಾಡಿ