ಮಂಗಳವಾರ, ಆಗಸ್ಟ್ 24, 2010

ಅದಕ್ಕೆ ನಿಮ್ಗೆ ಡಿಸ್ಕೌಂಟ್ ಇಲ್ಲ!!!


~~~~~****~~~~~
~~~~~ರಕ್ಷಾಬಂಧನದ ಶುಭಾಶಯಗಳು ~~~~~
~~~~~****~~~~~

ಅಚಾನಕ್ಕಾಗಿ ಬರುವಂತಹ ಮಾತುಗಳು ದಿಗ್ಭ್ರಮೆ ಅಥವಾ ಎಲ್ಲ ದಿಕ್ಕುಗಳನ್ನೂ ಒಮ್ಮೆನೋಡುವಂತೆ ಮಾಡುತ್ತದೆ ಎನ್ನಬಹುದು!

ಕಳೆದ ವಾರ ನನ್ನ ಸ್ನೇಹಿತನ ಜೊತೆ ಮಾತಾಡುತ್ತಿರುವಾಗ ಹೀಗೆಯೆ ಪುಸ್ತಕಗಳ ಕುರಿತು ಮಾತು ಬಂತು. ೧೮೫೭ ಭಾರತ ಮಹಾಸಂಗ್ರಾಮ ಓದಿದೆ. ನನ್ನ ಬಳಿ ಇಂತಹ ಲೇಖಕರ ಪುಸ್ತಕವಿದೆ. ಕವಲು ಓದಿದಿರಾ? ಎಸ್.ಎಲ್.ಭೈರಪ್ಪನವರ ಕೃತಿ ತುಂಬಾ ಜನ ಇಷ್ಟಪಡುತ್ತಾರೆ. ಹೀಗೆ ಮಾತು ಮುಂದುವರೆದಿತ್ತು.

ಕೆಲವೊಮ್ಮೆ ಪುಸ್ತಕ ಕೊಳ್ಳುವ ಅಂತ ಅಂಗಡಿಗೆ ಹೋಗಿದ್ದರೂ, ಪುಸ್ತಕದ ಬೆಲೆ, ಶೀರ್ಷಿಕೆ, ಜೊತೆಗೆ ಬರಹಗಾರರು ಯಾರು ಎಂದು ಹಿಂಬದಿಯ ಪುಟ ನೋಡದೇಕೊಳ್ಳುವುದಿಲ್ಲ. ಕೊಳ್ಳುವುದಕ್ಕೆ ಮುಂಚೆ ಪುಸ್ತಕದಲ್ಲಿನ ಒಂದೆರಡು ಅಧ್ಯಾಯದನಡುವಿನ ಹಾಳೆಗಳನ್ನು ಓತಪ್ರೋತವಾಗಿ ತಿರುವಿ, ಹಾಗೆ ಹೀಗೆ ಯೋಚಿಸಿಕೊಳ್ಳುವುದು ಅಥವಾ ಏಕ್ದಂ ಕೊಂಡೇ ಬಿಡುವುದು, ಹೀಗೆ ಸಾಗುತ್ತಿತ್ತು. ಜೊತೆಗೆಡಿಸ್ಕೌಂಟು ಉಂಟಾ? ಎಂಬ ಪ್ರಶ್ನೆಯನ್ನು ಪುಸ್ತಕದಂಗಡಿಯವರಿಗೆ ಆಗಾಗತೂರುವುದೂ ಉಂಟು. ಕೆಲವೊಮ್ಮೆ ಕೆಲವು ಪುಸ್ತಕಗಳಿಗೆ ಡಿಸ್ಕೌಂಟು ಸಿಗುತ್ತದೆ. ಕೆಲವಕ್ಕೆ ಇಲ್ಲ ಎನ್ನುತ್ತಾರೆ.

ಇಂತಹದೇ ಒಂದು ಸಂದರ್ಭವಂತೆ ಅದು. ಒಂದು ಪುಸ್ತಕಕ್ಕೆ ಸೋಡಿ ಕೊಟ್ಟರು. ಮತ್ತೊಂದಕ್ಕೆ ಕೇಳಿದ್ದಕ್ಕೆ ಉತ್ತರ ಅಚಾನಕ್ಕಾಗಿ ಬಂದಾಗ?? ಹೀಗಾಯಿತಂತೆ..

ಹೇಗೆ? ಮತ್ತು ಯಾವ ಪುಸ್ತಕಗಳು??

ಎಲ್ಲರಿಗೂ ಗೊತ್ತಿರುವಂತೆ ಗಾಂಧೀಜಿಯ ಹತ್ಯೆಯನ್ನು ನಾಥೋರಾಂ ಗೋಡ್ಸೆ ಮಾಡಿದ್ದು, ಇದರಲ್ಲಿ ಸೋದರ ವಿನಾಯಕ ಗೋಡ್ಸೆ ಈ ಸಂಚಿನಲ್ಲಿದ್ದಾರೆ ಎಂಬ ಆರೋಪ, ಇತ್ಯಾದಿ ವಿಚಾರಣೆಗಳು. ನಂತರ ಒಬ್ಬರಿಗೆ ಗಲ್ಲು, ಮತ್ತೊಬ್ಬರಿಗೆ ಜೀವಾವಧಿ ಶಿಕ್ಷೆ.. ಇಬ್ಬರಿಂದಲೂ ಗಾಂಧೀಜಿ ಹತ್ಯೆಯ ಕುರಿತಾಗಿ ಬರವಣಿಗೆ. ಅದರಲ್ಲಿ ನಾಥೋರಾಮ್ನದು `ನಾನೇಕೆ ಗಾಂಧಿಯನ್ನು ಕೊಂದೆ? ಆದರೆ, ವಿನಾಯಕಗೋಡ್ಸೆದು `ಗಾಂಧಿ ಹತ್ಯೆ ಮತ್ತು ನಾನು'.

ಶೇಕಡಾ ೧೦ ರಂತೆ ಎರಡನೆಯ ಪುಸ್ತಕಕ್ಕೆ ಸೋಡಿ ಸಿಕ್ಕಿತಂತೆ. ಸರಿ, ಮೊದಲನೆಯಪುಸ್ತಕ ಡಿಸ್ಕೌಂಟು ಕೇಳಿದ್ದಕ್ಕೆ...

ಗಾಂಧೀಜಿಯನ್ನು ಕೊಂದಿದ್ದಕ್ಕೆ `ನಿಮ್ಗೆ' ಡಿಸ್ಕೌಂಟು ಕೊಡೋದಿಲ್ಲ, ಎಂದು ಆ ನಿಮಿಷಕ್ಕೇ ಅಂಗಡಿಯಾಕೆಯಿಂದ ಉತ್ತರ ಬಂದಿತಂತೆ.

ತಕ್ಷಣಕ್ಕೆ ಉತ್ತರ ಕೇಳಿದರೆ.... ಇವರೇ (ಪುಸ್ತಕ ಕೊಳ್ಳುತ್ತಿರುವವರೇ) ಮಹಾತ್ಮಾಗಾಂಧೀಜಿಯವರನ್ನು ಕೊಂದರೇನೋ ಎಂಬ ಭಾವನೆ. ಆದರೆ, ಅದು ಆಕೆಯಿಂದ ಬಂದ ಅಚಾನಕ್ಕಾದ (ನಾವು ನಕ್ಕಿದ್ದೇ ನಕ್ಕಿದ್ದು) ಮಾತುಗಳಾದರೂ, ತಕ್ಷಣಕ್ಕೆತಲ್ಲಣವಾದರೂ, ನಗುಮೂಡಿಸಿತ್ತಂತೆ...

(ಇದು ನನ್ನ ಗೆಳೆಯರಿಗಾದ ಅನುಭವ. ಮತ್ತು ನಿಮ್ಮೊಡನೆ ಹಂಚಿಕೊಳ್ಳುವುದಕ್ಕೆ ಅವರ ಅಭ್ಯಂತರವಿಲ್ಲ ಎಂಬ ಕಾರಣದಿಂದ ಇಲ್ಲಿ ಬರೆದಿರುವೆನು. ಈ ವಿಷಯ ತಿಳಿಸಿದ ಗೆಳೆಯರಿಗೆ ಧನ್ಯವಾದಗಳು).

-ಚಂದ್ರಶೇಖರ ಬಿ.ಎಚ್. ೨೧೮೨೦೧೦

9 ಕಾಮೆಂಟ್‌ಗಳು:

shridhar ಹೇಳಿದರು...

ha ha ha ..
achanakkagi banda uttar sakattagide ..

PARAANJAPE K.N. ಹೇಳಿದರು...

ಪ್ರಸ೦ಗ ಚೆನ್ನಾಗಿದೆ. ಕೆಲವೊಮ್ಮೆ ಹೀಗೆ ಆಗುವುದು೦ಟು, ಏನೋ ಮಾತನಾಡಲು ಹೋಗಿ ಅದಕ್ಕೆ ಇನ್ನೇನೋ ಅರ್ಥ ಬರುವುದು, ಸ್ವಾರಸ್ಯಪೂರ್ಣ

shivu.k ಹೇಳಿದರು...

ಚಂದ್ರು ಸರ್,

ಸಕ್ಕತ್ತಾಗಿತ್ತು. ಇಂಥ ಅನುಭವಗಳು ಹಂಚಿಕೊಳ್ಳುವುದರಲ್ಲಿ ಖುಷಿಕೊಡುತ್ತದೆ ಅಲ್ಲವೇ..

ದಿನಕರ ಮೊಗೇರ ಹೇಳಿದರು...

hhaa hhaa ... majavaagide..... dhanyavaada hanchikonDiddakke sir...

AntharangadaMaathugalu ಹೇಳಿದರು...

ಚಂದ್ರೂ....
ಚೆನ್ನಾಗಿದೆ... ಹೀಗೇ ದಿನ ನಿತ್ಯವೂ ನಾವು ಬೇಕಾದಷ್ಟು ಅಭಾಸಕರ ಅರ್ಥ ಬರುವ ಮಾತುಗಳನ್ನು ಆಡುತ್ತಿರುತ್ತೇವೆ, ಕೇಳುತ್ತಿರುತ್ತೇವೆ. ಒಟ್ಟಾರೆಯ ಅರ್ಥ ಗ್ರಹಿಸಿ ಬಿಡುವುದರಿಂದ ಇವುಗಳು ನಮ್ಮ ನಿರ್ಲಕ್ಷ್ಯಕ್ಕೊಳಗಾಗುತ್ತವೆ. ನೆನಪಿಸಿಕೊಂಡು ಬರೆದರೆ ನಿಜಕ್ಕೂ ಒಂದು ಒಳ್ಳೆ ಹಾಸ್ಯ ಬರಹವಾಗಬಹುದು.... ಧನ್ಯವಾದಗಳು

ಶ್ಯಾಮಲ

Raghu ಹೇಳಿದರು...

ಹ್ಹ ಹ್ಹ ಹ್ಹ..ಒಳ್ಳೆ ಸನ್ನಿವೇಶ..
ನಿಮ್ಮವ,
ರಾಘು.

ಕ್ಷಣ... ಚಿಂತನೆ... ಹೇಳಿದರು...

ಹೌದು, ಕೆಲವೊಮ್ಮೆ ಮಾತಿನ ಭರದಲ್ಲಿ ಇಂತಹ ಅವಾಂತರಗಳಾದರೂ ಕ್ಷಣಕಾಲ ಮನಸ್ಸಿಗೆ, ಜನಕ್ಕೆ ನಗುವುಂಟು ಮಾಡುತ್ತದೆ. ಪ್ರತಿಕ್ರಿಯಿಸಿದ ಎಲ್ಲರಿಗೂ ಧನ್ಯವಾದಗಳು. ಹೀಗೆಯೆ ಬರುತ್ತಿರಿ.

ಸ್ನೇಹದಿಂದ,

ಸೀತಾರಾಮ. ಕೆ. / SITARAM.K ಹೇಳಿದರು...

ಅವಾಂತರದ ಹಾಸ್ಯ ಚೆನ್ನಾಗಿದೆ.

V.R.BHAT ಹೇಳಿದರು...

ಹಾಸ್ಯ ಚೆನ್ನಾಗಿದೆ, Nice !