ಬುಧವಾರ, ಆಗಸ್ಟ್ 25, 2010

ನಯನದಲಿ ಇದೇನಿದು...?

**********************************************
ಬೆಳಗಿನ ಮಂಜಿನ ಹನಿಗಳು
ಎಸ್‌ಎಮ್‌ಎಸ್ ಸಂದೇಶಗಳು
ನೀನು ಬರುತಿರುವೆಯಾ!
ಜಲನಯನ - ನೋಡಲು
ಗುಬ್ಬಿ-ಎಂಜಲು ಸವಿಯಲು
ಎಂಬುದಕೆ ಆಗಬಹುದು, ಬರುತಿಹೆನು
ಎಂದು ಮರುತ್ತರವಾಗಿ ಸಂದೇಶ ರವಾನಿಸಿದ್ದೆ.

ಖಂಡಿತಾ ಬನ್ನಿ, ಅಲ್ಲಿಯೇ ಸಿಗೋಣ
ಬಹಳ ದಿನಗಳ ನಂತರ ನಮ್ಮ ಭೇಟಿ
ನಾನು ಊರಿನಿಂದ ಬರುತಿರುವೆ
ನೀವು ಬರದಿದ್ದರೆ, ಹೇಗೆ? ಹೀಗೆ
ಪ್ರಶ್ನೆಗಳ-ಉತ್ತರಗಳ ಒತ್ತಾಯದ ಸುರಿಮಳೆ
ಹಿಂದಿನ ದಿನದ ಜಡಿಮಳೆ ನೆನೆದು
ಇಂದೂ ನೆನೆಯಬೇಕೆ? ಎಂದನಿಸಿದರೂ...
ಮನಸು ಬದಲಾಗಿ, ಉಸ್ಸೆಂದು ಬಸ್ಸನೇರಿ
ಹೊರಟಿದ್ದೆ... ನಾಲ್ಕು ಬಸ್ಸು ಹತ್ತಿ
ಹತ್ತರ ಸಮಯಕ್ಕೆ `ನಯನ' ದಲಿದ್ದೆ.

[ವಿಶೇಷ ಸೂಚನೆ: ಯಾರಿಗೂ ನೋವುಂಟು ಮಾಡುವುದಿಲ್ಲ ಈ ನನ್ನ ಬರಹ ಎಂಬ ನಂಬಿಕೆಯಿಂದ, ನನ್ನ ಗಮನಕ್ಕೆ ಬಂದು ನೆನಪಿನಲ್ಲಿದ್ದ ಪ್ರಸಂಗಗಳನ್ನು ಬರೆದಿದ್ದೇನೆ.]

ನಯನ ಸಭಾಂಗಣಕ್ಕೆ ಬಂದಾಗ ಪ್ರಕಾಶಣ್ಣ, ಪರಾಂಜಪೆ ಸರ್‍, ಶಿವು, ಮಲ್ಲಿಕಾರ್ಜುನ ಹೀಗೆ ಗೊತ್ತಿದ್ದವರೊಡನೆ ಇರುವಾಗ ಇನ್ನೂ ಹಲವು ಬ್ಲಾಗಿಗರ ಪರಿಚಯವಾಯಿತು. ಶ್ಯಾಮಲಾರವರ ಕರೆಬಂದಿತು. ಜೊತೆಗೆ ಸುರೇಶ ಅತ್ರಾಡಿಯವರ ಪರಿಚಯ. ಒಂದಷ್ಟು ಮಾತುಕತೆ. ನಿಮಗೀಗಾಲೇ ಗೊತ್ತಿರುವಂತೆ ಪುಸ್ತಕ ಬಿಡುಗಡೆ ಸಮಾರಂಭವಾದ ಮೇಲೆ... ಒಂದಷ್ಟು ಹೊತ್ತು ವಿಚಾರ ವಿನಿಮಯ, ಪುಸ್ತಕಕೊಳ್ಳುವಿಕೆ, ಸಹಿ ತೆಗೆದುಕೊಳ್ಳುವಿಕೆ... ನಗು, ನಲಿವು ಎಲ್ಲ ನಡೆಯುತ್ತಿರುವಾಗ ಮತ್ತಷ್ಟು ಮಿತ್ರರನ್ನು ಪರಿಚಯಿಸಿಕೊಂಡಿದ್ದಾಯಿತು.

ಶ್ರೀಯುತ ವಿ.ಆರ್‍.ಭಟ್ಟರಲ್ಲವೇ ನೀವು ಎಂದಾಕ್ಷಣ, ನೀವುಗಳು ಫೋಟೋ ಹಾಕೋದಿಲ್ಲ ಅದರಿಂದ ಗುರುತು ಹಿಡಿಯಲು ಕಷ್ಟವಾಗುತ್ತೆ, ಫೋಟೋ ಹಾಕಿ ಎಂಬ ತಾಕೀತು(??!!), ಪ್ರೀತಿಯಿಂದ ಬಂದಿತು.

ಇದರ ನಡುವೆ ಶಿವು ಅವರಿಗೆ ತಿಂಡಿ=ಕಾಫಿ ಬಂದಿಲ್ಲವೆಂಬ ಯೋಚನೆ...

ಛಾಯಾಚಿತ್ರ ಪ್ರದರ್ಶನದಿಂದ ನನಗೂ ಹೊಸಬಗೆಯ ವಿಚಾರಗಳು (ಛಾಯಾಗ್ರಹಣ ಕುರಿತು) ತಿಳಿಯಲು ಅನುಕೂಲವಾಯಿತು.

ಪಾಲಚಂದ್ರರನ್ನು ಮಾತಾಡಿಸುತ್ತಾ ಅನುಭವ ಮಂಟಪದಲ್ಲಿ ಹಾಕಿರುವ ಸೈಕಲ್‌ ಸವಾರಿಯ ಚಿತ್ರದ ಬಗ್ಗೆ ತಿಳಿಸಿದಾಗ ಅವರು ಉತ್ತರಿಸಿದ್ದು... ಇಲ್ಲಿಗೆ ಈಗ ನಾವು ಬೈಸಿಕಲ್ಲಿನಲ್ಲಿಯೇ ಬಂದಿರುವುದು ಎಂದರು. ಖುಷಿಯಾಯಿತು. ಏಕೆಂದರೆ, ಅವರ ಸೈಕಲ್‌ ಪ್ರೀತಿಯ ಕಂಡು...

ಇನ್ನು ನಿಮ್ಮಳಗೊಬ್ಬ ಬಾಲು (ಶ್ರೀಯುತ ಬಾಲಸುಬ್ರಮಣ್ಯ) ಇವರು ಪರಿಚಯಿಸಿಕೊಳ್ಳುವಾಗ... ಹೊಸ ವಿಷಯ ತಿಳಿಯಿತು. ಛಾಯಾಗ್ರಹಣ ಹವ್ಯಾಸ ಅವರದ್ದು. ಇದರ ಜೊತೆಗೆ ಅವರು ಶ್ರೀರಂಗಪಟ್ಟಣದ ಬಗೆಗೆ ತಿಳಿಯದ ಅನೇಕ ವಿಚಾರಗಳನ್ನು ಕ್ರೋಢೀಕರಿಸಿ ಒಂದು ಬ್ಲಾಗ್‌ ತಯಾರಿಸುವ ವಿಚಾರ.

ಶ್ರೀಯುತ ವಿ.ಆರ್‍. ಭಟ್‌ ಅವರನ್ನು ಕಂಡಾಗ, ಅದೂ ವೇದಿಕೆಯಲ್ಲಿ ಅವರು ಕಾಣಿಸಿಕೊಂಡಾಗ ಕೆಲವರಿಗೆ ಹೇಗನ್ನಿಸಿರಬಹುದು? ಅವರನ್ನು ಕಂಡಾಗ ಯಾರೋ ಒಬ್ಬರು ಪದೇ ಪದೇ ನೆನಪಾದರು. ಯಾಕೆಂದರೆ, ಹೆಚ್ಚಿನ ಅಭಿಮಾನಿಗಳು ಆತನಿಗಿದ್ದಾರೆ.. ಯಾರಿರಬಹುದು? ನನಗೆ ಯಾರೋ ನೆನಪಾಗುತ್ತಿದ್ದಾರೆ ಅನಿಸಿದರೂ, ಹೊಳೆಯುತ್ತಿರಲಿಲ್ಲ. ಅಂಥವನೊಬ್ಬ ಕೋಟಿಗೊಬ್ಬ!!! ನನ್ನ ಪಕ್ಕದಲ್ಲಿಯೇ ಇದ್ದವರು .... ಮಾತುಗಳು ಡಾ.ವಿಷ್ಣುವರ್ಧನ್‌ ನೆನಪಿಸಿದರು. ವೇದಿಕೆಯಲ್ಲಿದ್ದ ಭಟ್ಟರ ಚಹರೆ, ಮಾತು, ವರ್ತನೆ, ಎಲ್ಲ `ಆ ರಾಮಾಚಾರಿ' ಯ ನೆನಪನ್ನು ತಂದಿತ್ತು... (ಇದರಿಂದ ಭಟ್ಟರಿಗೆ ಖುಷಿ ಎನ್ನುವ ಅನಿಸಿಕೆ ನನ್ನದು)

ಇದೆಲ್ಲಕಿಂತ ಆ ನಂತರದ ಉಡುಗೊರೆ ಸಮಾರಂಭದಲ್ಲಿ ನನ್ನನ್ನೂ ಕರೆದದ್ದು. ಇದಕ್ಕೆ ನಾನು ಅರ್ಹನೇ? ಎಂಬುದು ನನ್ನ ವಿಚಾರ. ಆದರೆ ಕುತೂಹಲ. ಈ ಪ್ರಕಾಶಣ್ಣ ಒಂದಿಲ್ಲಾ ಒಂದು ಫನ್‌ತೋಷಕ ಇಟ್ಟಿರುತ್ತಾರೆ ಅನಿಸಿತು.

ಹೊರ ಆವರಣದಲ್ಲಿ ಎಲ್ಲರ ಉಡುಗೊರೆಯ ಪಟ್ಟಣಗಳೂ ಬಿಚ್ಚಕೊಳ್ಳುವಾಗ, ಅವರುಗಳಿಗೆ ಸಿಕ್ಕ ಉಡುಗೊರೆಯ ತೋರಿಸುವಾಗ,, ನನಗೂ ಒಂಥರಾ ಕಸಿವಿಸಿ. ನನಗೇನು ಬಂದಿರಬಹುದು??? ಕೊನೆಗೂ ಉಡುಗೊರೆಯೊಂದ ಕೊಟ್ಟಿದ್ದರು. ಅದೂ ಹಸಿವಾಗಿರುವಾಗ `ಪಾರ್ಲೆ-ಜಿ' ಶಕ್ತಿ ಬಿಸ್ಕತ್ತು. ಉಪಯೋಗಿಸುವ ಯೋಚನೆ ಹೊಳೆಯಲೇ ಇಲ್ಲ. ಏಕೆಂದರೆ,... ಉಡುಗೊರೆಯ ನೋಡಿದೊಡನೆ ಹಸಿವು ಮಾಯವಾಗಿತ್ತು. ಖುಷಿಯಾಗಿತ್ತು...

ಹಾಡುಗಾರರಿಂದ ಮೂಡಿಬಂದ ಹಾಡುಗಳು ಸಖತ್ತಾಗಿದ್ದವು. ಮೊದಲಿಗೆ ಪ್ರಾರ್ಥನೆಗಾಗಿ ಹಾಡಿದ ಪುರಂದರದಾಸರ ಗೀತೆ ಅದ್ಭುತವಾಗಿತ್ತು. ಹಾಗೆಯೇ ಎಲ್ಲೋ ಹುಡುಕಿದೆ ಇಲ್ಲದ ದೇವರ; ನಿಂಗಿ.. ನಿಂಗಿ... ಹಾಗೂ ಹಿಂದಿಯ ಹಾಡುಗಳು ಸ್ವರ ತಪ್ಪಿದಂತೆನಿಸಿದರೂ, ಸಂತ ಸತಂದವು..

ಚೇತನಾ-ನಂಜುಂಡ, ಸುಘೋಷ್, ಶಿವಪ್ರಕಾಶ್, ಗುರುಪ್ರಸಾದ್, ಉಮೇಶ ದೇಸಾಯಿ, ಮಹೇಶ್, ಪ್ರವೀಣ್, ನವೀನ್, ದಿವ್ಯಾ, ಪ್ರಗತಿ-ದಿಲೀಪ್, ಸೀತಾರಾಮ್ ಕೆ. ಭಟ್ ದ್ವಯರು, ಡಾ.ಕೃಷ್ಣಮೂರ್ತಿ, ಉದಯ್ ಹೆಗ್ಡೆ, ಮಲ್ಲಿಕಾರ್ಜುನ, ಅವರ ಛಾಯಾಚಿತ್ರ ಗುರು ಎಮ್.ಎಸ್. ಹೆಬ್ಬಾರ್‍ ಇತ್ಯಾದಿ. ಕೆಲವರ ಹೆಸರು ನೆನಪಿಗೆ ಬರುತ್ತಿಲ್ಲ (ಹೆಸರು ತಪ್ಪಾಗಬಾರದಲ್ಲವೇ?) ಹೀಗೆ ಇವರೆಲ್ಲರ ಪರಿಚಯವಾಗಿದ್ದು ಮತ್ತೂ ಖುಷಿಕೊಟ್ಟ ವಿಚಾರ.

ನಾನೂ ಕ್ಯಾಮೆರಾ ತಂದಿದ್ದೆ. ಅದರ ಜೊತೆಗೆ ಬೇಕಿದ್ದ ಶಕ್ತಿ ಮಾಯವಾಗಿತ್ತು (ಸೆಲ್‌ಗಳು). ಹಾಗಾಗಿ ಫೋಟೋ ತೆಗೆಯಲು ಆಗಲಿಲ್ಲ. ಮತ್ತಷ್ಟು ಮಧುರ ನೆನಪುಗಳನ್ನು ಕಳೆದುಕೊಂಡೆನಾದರೂ, ಕೆಲವರು ತಮ್ಮ ಬ್ಲಾಗುಗಳಲ್ಲಿ ಚಿತ್ರ ಪ್ರಕಟಿಸುತ್ತಾರೆಂಬ ಸಂತಸ ನೂರ್ಮಡಿಯಾಗಿದೆ.

ಇದೊಂದು ಸುಂದರವಾದ ಭಾನುವಾರವಾಗಿತ್ತು ಎಂಬುದೇ ವಿಶೇಷಾನುಭವ ಕೊಟ್ಟಿದೆ. ಇಂತಹ ಮತ್ತೊಂದು ದಿನಕ್ಕಾಗಿ ಕಾಯೋಣ!, ಅದು ಯಾರಿಂದ ಶುರುವಾಗುವುದೋ ತಿಳಿಯದು. ಒಟ್ಟಿನಲ್ಲಿ ಮತ್ತೆ ಭೇಟಿಯಾಗುತ್ತೇವೆಯಲ್ಲವೆ?

ಚಂದ್ರಶೇಖರ ಬಿ.ಎಚ್.೨೫೮೨೦೧೦

11 ಕಾಮೆಂಟ್‌ಗಳು:

PARAANJAPE K.N. ಹೇಳಿದರು...

ನಯನದಿಂದ ನೇರ ವರದಿ, ಚೆನ್ನಾಗಿದೆ. ನನಗು ನಿಮ್ಮಷ್ಟೇ ಖುಷಿ ಉ೦ಟಾಯಿತು.

ಶಿವಪ್ರಕಾಶ್ ಹೇಳಿದರು...

Good Report Sir :)

AntharangadaMaathugalu ಹೇಳಿದರು...

ಕ್ಯಾಮೆರಾ ಇಲ್ಲದೆಯೇ... ಬರಿಯ ’ನಯನ’ದಿಂದಲೇ ಬಂದ ವರದಿ ಸಕ್ಕತ್ತ್ ಚಂದ್ರೂ... ಮತ್ತೆ ಎಲ್ಲವೂ, ಎಲ್ಲರನ್ನೂ ನೆನಪಿಸಿದಿರಿ. ಭಟ್ ಸಾರ್ ನಿಮ್ಮ ಮಾತುಗಳಿಗೆ ಏನು ಪ್ರತಿಕ್ರಿಯಿಸುತ್ತಾರೆಂಬ ಕುತೂಹಲ ನನಗೆ... ಹ್ಹ ಹ್ಹ :-)

ಶ್ಯಾಮಲ

ಸೀತಾರಾಮ. ಕೆ. / SITARAM.K ಹೇಳಿದರು...

ತುಂಬಾ ಆಪ್ತವಾಗಿ ಹಂಚಿಕೊಂಡಿದ್ದಿರಾ..ಮಧುರ ಕ್ಷಣಗಳಾ...

Naveen ಹಳ್ಳಿ ಹುಡುಗ ಹೇಳಿದರು...

ಮತ್ತೊಂದು ಮಗದೊಂದು ಕಾರ್ಯಕ್ರಮ ಹೀಗೆ ನಡೆಯುತ್ತಿರಲಿ ಅನ್ನೋ ಆಸೆ..
ಲೇಖನ ಭಾವಪೂರ್ಣವಾಗಿದೆ ಸರ್...

shivu.k ಹೇಳಿದರು...

ಚಂದ್ರು ಸರ್,

ಒಬ್ಬೊಬ್ಬರೂ ಒಂದೊಂದು ರೀತಿ ನಮ್ಮ ಕಾರ್ಯಕ್ರಮದ ವಿವರವನ್ನು ಕೊಟ್ಟರು ಅಂತಿಮ ಎಲ್ಲರೂ ಅತ್ಮೀಯವಾಗಿ ಆನಂದಿಸಿದ್ದೇ ಮುಖ್ಯವಲ್ಲವೇ...ನಿಮ್ಮದೇ ಶೈಲಿಯಲ್ಲಿ ನಿರೂಪಿಸಿರುವುದಕ್ಕೆ ಧನ್ಯವಾದಗಳು. ನಿಮ್ಮ್ ಅಲೋಚನೆಯಂತೆ ಬೇಗ ಮತ್ತೊಂದು ಕಾರ್ಯಕ್ರಮಕ್ಕೆ ಯೋಜನೆ ಸಿದ್ದವಾಗುತ್ತಿದೆ!

Raghu ಹೇಳಿದರು...

ಆ ದಿನ ನಮಗೆಲ್ಲ ತುಂಬಾ ಸಂತೋಷ ತಂದ ದಿನ.
ಎಷ್ಟು ಜನರ ಪರಿಚಯ..!!
ಒಳ್ಳೆಯ ನೆನಪು.
ನಿಮ್ಮವ,
ರಾಘು.

ಮನಸಿನ ಮಾತುಗಳು ಹೇಳಿದರು...

ನಿಮ್ಮೆಲ್ಲರ ಮುಖತಃ ಭೇಟಿಯಾಗಿದ್ದು ನನಗೂ ಸಂತೋಷ ಕೊಟ್ಟಿದೆ ಸರ್.. :-) nice sunday indeed !!

ದಿನಕರ ಮೊಗೇರ ಹೇಳಿದರು...

sir.
naanu bandidde nimma nnu maatanaaDisidde..... nimma varadi nodi matte ellavu nenapaayitu.....

dhanyavaada sir.....

V.R.BHAT ಹೇಳಿದರು...

ಲೇಖನ ಓದಿದೆ, ಚೆನ್ನಾಗಿದೆ, ದಿ| ಶ್ರೀ ವಿಷ್ಣುವರ್ಧನರ ಜೊತೆ ನನ್ನನ್ನು ಹೊಲಿಸಿದಿರಿ, ವರಷ್ಟು ಆಗಲು ಸಾಧ್ಯವಿಲ್ಲ, ಆದರೆ ಅವರ ರೂಪ ಚಹರೆ ಪಡೆದಿದ್ದು ನಿಜ ಅಂತ ಬಹಳ ಜನ ಹೇಳಿದ ಮೇಲೇ ನನಗೆ ತಿಳಿದಿದ್ದು, ತಪ್ಪಾಗಿ ಗ್ರಹಿಸಿ ಸುತ್ತ ಜನ ಸೇರಿದ್ದೂ ಇದೆ! ಆಗೆಲ್ಲಾ ನಮಸ್ಕರಿಸಿ ನಾನು ಅವರ ಅಭಿಮಾನಿ ಅಷ್ಟೇ ಎಂದು ಹೇಳಿದ್ದೇನೆ, ಅವರ ಜೀವನವೇ ಆದರ್ಶ, ಅಂತಹ ಪುಣ್ಯಾತ್ಮನಿಗೆ ಹೊಲಿಸಿದಿರಿ, ನನಗೆ ಹೋಲಿಕೆಯಿಂದ ಅತ್ಯನತ್ ಖುಷಿಯಾಗಲೀ, ನೋವಾಗಲೀ ಇಲ್ಲ, ನಾನು ಈ ವಿಷಯದಲ್ಲಿ ನ್ಯೂಟ್ರಲ್, ನಿಮ್ಮ ಪ್ರೀತಿಗೆ ಅಭಾರಿ, ನಮಸ್ಕಾರಗಳು

ಕ್ಷಣ... ಚಿಂತನೆ... ಹೇಳಿದರು...

ಪರಾಂಜಪೆ ಸರ್‍, ಶಿವಪ್ರಕಾಶ್, ಶ್ಯಾಮಲಾ, ಸೀತಾರಾಂ ಸರ್‍, ನವೀನ್ ಮೇಷ್ಟ್ರೆ, ಶಿವು ಕೆ, ರಾಘು, ದಿವ್ಯಾ, ದಿನಕರ್‍, ನಿಮ್ಮೆಲ್ಲರ ಭೇಟಿಯಾಗಿದ್ದು ನನಗೂ ಖುಷಿಯಾಯಿತು.

ಇನ್ನು ಭಟ್ ಸರ್‍, ನನಗೆ ಅನ್ನಿಸಿದ್ದನ್ನು ಇಲ್ಲಿ ಹಂಚಿಕೊಂಡೆ. ನಿಮ್ಮ ... ನ್ಯೂಟ್ರಲ್ ಎಂದಿದ್ದೀರಿ. ಧನ್ಯವಾದಗಳು.

ಪ್ರತಿಕ್ರಿಯೆ ನೀಡಿದ ಎಲ್ಲರಿಗೂ ಧನ್ಯವಾದಗಳು.

ಸ್ನೇಹದಿಂದ,