ಗುರುವೆಂದರೆ ಒಂದು ಆದರ್ಶ, ಸಂಸ್ಕೃತಿ, ವಿದ್ಯೆ, ವಿನಯ ಇತ್ಯಾದಿ ಎಲ್ಲವನ್ನೂ ಬಿಂಬಿಸುವಂತಹವನು...
ದ್ರೋಣಾಚಾರ್ಯರ ಪ್ರತಿಮೆಯನ್ನೇ ತನ್ನ ಗುರುವಾಗಿ ಪಡೆದು ಧನುರ್ವಿದ್ಯಾಧರನಾದವನು ಏಕಲವ್ಯ.
ಪ್ರಾಥಮಿಕ ಶಾಲೆಯಿಂದ, ಕಾಲೇಜು, ಉದ್ಯೋಗ ಹೀಗೆ ಎಲ್ಲೆಡೆಯೂ ಶಾಲೆಯಲ್ಲಿದ್ದ, ಅಕ್ಷರ ಕಲಿಸಿದ, ಶಿಕ್ಷಿಸಿದ, ಬುದ್ಧಿ ಹೇಳಿದ, ಸಂತೈಸಿದ ಗುರುಗಳು (ಶಿಕ್ಷಕಿಯರೇ ಹೆಚ್ಚು) ಆಗಾಗ ನೆನಪಿಗೆ ಬರುತ್ತಿರುತ್ತಾರೆ.
ಹೀಗೆಯೇ ೪-೫ ತಿಂಗಳ ಹಿಂದೆ ಈ ಅಂತರ್ಜಾಲದ ಒಂದು ತಾಣದಲ್ಲಿ, ನನ್ನ ಪ್ರಾಥಮಿಕ ಶಾಲಾ ಶಿಕ್ಷಿಯೊಬ್ಬರ ಛಾಯಾಚಿತ್ರವೊಂದು ಸಿಕ್ಕಿತು. ಆಗ ನಿಜಕ್ಕೂ ಖುಷಿಯಾಯಿತು. ಏಕೆಂದರೆ, ಈ ಹಿಂದೆ ಅವರ ಮತ್ತು ಅವರ ಸಹಶಿಕ್ಷಕಿಯರೆಲ್ಲ ನಮಗೆ ಬೋಧಿಸಿದವರೇ ಆಗಿದ್ದಾರೆ...
- ನನಗೂ ಶಾಲೆ ಬಿಟ್ಟ ಮೇಲೆ, ಕಾಲೇಜು, ಕೆಲಸ ಹೀಗೆ ಬೇರೆಬೇರೆ ಬ್ಯುಸಿ (??) ಕಾರಣಗಳಿಂದಾಗಿ ಮತ್ತೆ ಶಾಲಾ ವಲಯಕ್ಕೆಹೋಗಲು ಆಗಿರಲಿಲ್ಲ. ಹೋದರೂ ಅದು ಭಾನುವಾರವಾಗಿದ್ದರೆ ಏನುಪಯೋಗ? ಕೆಲವು ಬಾರಿ ಮಾತ್ರ ದಾರಿಯಲ್ಲಿ ಸಿಕ್ಕಟೀಚರ್ ಜೊತೆ ಒಂದೆರಡು ಮಾತು ಅಥವಾ ನಮಸ್ಕಾರ ಹೇಳಿದ್ದಿರಬಹುದು ಅಷ್ಟೆ...
- ಒಂದೆರಡು ಬಾರಿ ಕೆಲವೇ ಶಿಕ್ಷಕಿಯರ ಮನೆಗಳಿಗೆ ಸ್ನೇಹಿತರೊಡಗೂಡಿ ಭೇಟಿಯಿತ್ತದ್ದಿದೆ. ಅದೂ ಬಹಳ ವರ್ಷಗಳ ಹಿಂದೆ.
- ನಮಗಿದ್ದ ಹೆಡ್ ಮೇಡಂ (ಈಗಿಲ್ಲ)ರವರನ್ನು ಕಂಡರೆ ದಿಗಿಲು ಇತ್ತು ಎಲ್ಲರಿಗೂ. ಆದರೆ ಅವರ ಪ್ರೀತಿತುಂಬಿದ ನುಡಿಗಳು ನಮಗೆಮಾತೇ ಹೊರಡದಂತೆ ಮಾಡುತ್ತಿದ್ದವು. ಅಲ್ಲದೇ ಅವರ ಮನೆಯಲ್ಲಿಯೇ ಒಂದು ಮತ್ತು ಎರಡನೇ ತರಗತಿ ನಡೆಯುತ್ತಿದ್ದವು. ೩-೭ರವರೆಗೆ ಬೇರೊಂದು ಸ್ಥಳದಲ್ಲಿ ವಿಶಾಲ ಕಟ್ಟಡವನ್ನು ಕಟ್ಟಿಸಿ ಅಲ್ಲಿಗೆ ವಿದ್ಯಾರ್ಥಿಗಳು ಬರುವಂತೆ ಮಾಡಿದ್ದರು. ಶಾಲಾವಾರ್ಷಿಕೋತ್ಸವ ಒಂದು ಭರ್ಜರಿಯಾಗಿ ನಡೆದಿತ್ತು. ಶಾಲಾ ಫೀಜು ಕಟ್ಟಲು ಆಗದೇ ಇದ್ದಾಗ ನಮ್ಮ ಪರೀಕ್ಷಾ ಫಲಿತಾಂಶತಿಳಿಸುವುದಿಲ್ಲ ಎಂದು ವಾಪಸ್ಸು ಮನೆಗೆ ಕಳಿಸುತ್ತಿದ್ದರು. ಮುಂದಿನ ತರಗತಿಗೆ ಸೇರುತ್ತಿದ್ದೆವು (ಫೀ ಮುಂದಿನ ತರಗತಿಯ ಜೊತೆಗೆಸೇರಕೊಳ್ಳುತ್ತಿತ್ತು, ಕೆಲವೊಮ್ಮೆ).
- ಇನ್ನು ಅವರ ಪತಿಯರವರು ಶಾಲಾ ಸೆಕ್ರೆಟರಿಯಾಗಿದ್ದರು. ಅವರಿಗೂ ಅಷ್ಟೆ ಮಕ್ಕಳೆಂದರೆ ಅತೀವ ಪ್ರೀತಿ, ವಾತ್ಸಲ್ಯ. ಸ್ವಾತಂತ್ರ್ಯದ ದಿನದ ಹೋರಾಟದ ಕಥೆಗಳನ್ನು ನಮಗೆಲ್ಲ ಹೇಳುತ್ತಿದ್ದರು. ದಿನವೂ ಬೈಸಿಕಲ್ಲಿನಲ್ಲಿ ಅವರು ಬರುವಾಗ ಶಾಲಾಮಕ್ಕಳು ಸಿಕ್ಕರೆ ಅವರ ಚೀಲ ಅಥವಾ ಮಕ್ಕಳನ್ನೆ ಸೈಕಲ್ಲಿನಲ್ಲಿ ಕೂರಿಸಿ ಕರೆತರುತ್ತಿದ್ದದ್ದೂ ಉಂಟು. ಇವೆಲ್ಲ ನೆನಪುಗಳು ಸದಾಕಾಡುತ್ತವೆ.
- ಒಮ್ಮೆ ಮೊದಲ ಬಾರಿಗೆ ತಿರುಪತಿಗೆ ಹೋಗಿ ಬಂದಾಗ ನನ್ನ ತಲೆ ಗುಂಡಗಾಗಿತ್ತು. ಟೋಪಿ ಧರಿಸಿದ್ದೆ. ಕ್ಲಾಸಿನಲ್ಲಿ ಟೋಪಿಹಾಕ್ಕೋತೀಯಾ ಅಂತ ಆನ್ವಟಿ ಎಂಬ ಹಿಂದಿ ಟೀಚರ್ ಗದರಿದ್ದರು. ವಿಧಿಯಿಲ್ಲದೇ ಟೋಪಿ ತೆಗೆದಿದ್ದೆ...
- ಇನ್ನೊಮ್ಮೆ ಶಾಲೆಯಲ್ಲಿ ಆಟಕ್ಕೆಂದು ಬಿಟ್ಟಾಗ - ನಮ್ಮ ಸಹಪಾಠಿಯರೊಂದಿಗೆ ಆಡುತ್ತಾ... ಆಟದಲ್ಲಿ ಸೋತವರು ಒಂದು ಕಾಲಿನಲ್ಲಿಕುಂಟುತ್ತಾ ಅವರು ಹೇಳಿದಷ್ಟು ದೂರ ಹೋಗಬೇಕು ಅಥವಾ ಒಂದಿಪತ್ತು ಅಡಿ ಬೆನ್ನಮೇಲೆ ಕೂರಿಸಿಕೊಂಡ ಹೋಗಬೇಕಿತ್ತು.. ಇದುಒಬ್ಬ ಟೀಚರ್ ಗಮನಕ್ಕೆ ಬಂದು ಎಲ್ಲರಿಗೂ ಗದರಿದ್ದಲ್ಲದೇ... ಕಟ್ಟಿಗೆಯೇಟಿನ ಶಿಕ್ಷೆ ಕೊಟ್ಟಿದ್ದರು...
- ಇನ್ನೊಬ್ಬರು ದೇವಿಕಾ ಟೀಚರ್.. ಇವರು ನಮಗೆ ೬-೭ ನೇ ತರಗತಿಯಲ್ಲಿ ಪಾಠ ಹೇಳಿಕೊಡುತ್ತಿದ್ದರು. ಇವರ ವಿಷಯ ಇಂಗ್ಲಿಷ್ಮತ್ತು ವಿಜ್ಞಾನ... ಒಮ್ಮೆ ಇಂಗ್ಲಿಷ್ನ ಒಂದು ಪದದ ಅರ್ಥ ಕೇಳಿದರು ಎಲ್ಲ ಮಕ್ಕಳಿಗೂ... ಆದರೆ ಕೆಲವು ಪರ್ಯಾಯ ಪದಗಳುತಿಳಿಯುತ್ತಿಲ್ಲ. ಕ್ರೌನ್ ಪದದ ಅರ್ಥ - ಕಿರೀಟ ಎಂಬುದು ಸಾಮಾನ್ಯವಾಗಿ ತಿಳಿದಿದ್ದೆವು. ಹುಂಜದ ತಲೆಯ ಮೇಲಿನದಕ್ಕೆ ಉತ್ತರಕೇಳಿದ್ದರು... ನಾನು ತುರಾಯಿ ಎಂದು ಹೇಳಿದ್ದೆ. ಅಂದಿನಿಂದ ವಿಶೇಷ ಅಕ್ಕರೆ ನನಗೆ ತೋರುತ್ತಿದ್ದರು. ಕೆಲವೊಮ್ಮೆ ವಿಜ್ಞಾನದನೋಟ್ಸ್ ಬರೆದುಕೊಟ್ಟಿದ್ದರು.
- ಇನ್ನೊಬ್ಬರು ಎಮಿಲಿ ಲೋಬೋ. ಇವರೆಂದರೆ ಕಾಲೇಜು ಬಿಟ್ಟು ಕೆಲಸಕ್ಕೆ ಸೇರಿದ್ದರೂ ಒಂಥರಾ ಭಯ (?) ಇತ್ತು ಎನ್ನಬಹುದು. ಅವರೊಮ್ಮೆ ಕಾಣಿಸಿಕೊಂಡರೆ ಇಡೀ ತರಗತಿ ಗಪ್ಚುಪ್. ನಮಗೆ ಗಣಿತದ ಟೀಚರ್ ಆಗಿದ್ದರು. ಮಕ್ಕಳಲ್ಲಿ ಭಾಷಾ ಉಚ್ಛಾರಣೆಯಲ್ಲಿತಪ್ಪು ಕಂಡರೆ ಹೊಡೆತ ಬೀಳುತ್ತಿತ್ತು. ಸರಿಯಾಗಿ ಕಲಿವವರೆಗೂ ಬಿಡುತ್ತಿರಲಿಲ್ಲ. ಇದೀಗ ಮುಖ್ಯೋಪಾಧ್ಯಾಯಿನಿಯಾಗಿದ್ದಾರೆ.. ಕಳೆದೆರಡು ತಿಂಗಳ ಹಿಂದೆ ಅವರನ್ನು ಭೇಟಿ ಮಾಡಿದ್ದೆ. ಜೊತೆಗೆ ಪ್ರೌಢಶಾಲಾ ಟೀಚರುಗಳೂ ಸಿಕ್ಕಿದ್ದರು. ಖುಷಿಯಾಗಿತ್ತು.
- ಮನೋರಮಾ - ಇವರಿಗೆ ಮಕ್ಕಳ ಕಂಡರೆ ತುಂಬಾ ಸಂತಸ. ನಾವೆಲ್ಲ ಸ್ನೇಹಿತರು ಸುಮಾರು ವರ್ಷಗಳ ನಂತರ ಮನೆಗೆಹೋದಾಗ `ನನ್ನ ಮಕ್ಕಳು ಬಂದಿದ್ದಾರೆ' ಎಂದು ಕೊಬ್ಬರಿ ಮಿಠಾಯಿ ಮಾಡಿಕೊಟ್ಟಿದ್ದರು. ಏಯ್! ಎಂದರೆ ಸಾಕು ತರಗತಿಯೆಲ್ಲನಿಶ್ಶಬ್ದವಾಗುತ್ತಿತ್ತು. ಕಿಟಕಿ ಸರಳಿನಿಂದ ಅದೆಷ್ಟೋ ಹೊಡೆತ ತಿಂದದ್ದಿದೆ (ಎಲ್ಲರೂ ಎನ್ನಬಹುದು). ಇವನ್ನೆಲ್ಲ ಅವರೊಡನೆ ಇತ್ತೀಚೆಗೆನೆನಪಿಸಿಕೊಂಡೆ...
- ಪ್ರಮೀಳಾ ಎಂಬುವವರು ಬರವಣಿಗೆ (ಕಾಪಿರೈಟಿಂಗ್) ಎಷ್ಟು ಕೊಡುತ್ತಿದ್ದರೆಂದರೆ... ಅಬ್ಬಬ್ಬಾ... ಬರೆಯಲು ಆಗದಷ್ಟು... ೧ ರಿಂದಸಾವಿರ, ೫ ಸಾವಿರ ಹೀಗೆ... ಬರೆಯದಿದ್ದಾಗ ಬೆಂಚಿನ ಮೇಲೆ ನಿಲ್ಲುವ ಶಿಕ್ಷೆ.. ಅದೆಷ್ಟು ಮಂದಿ ನಿಲ್ಲುತ್ತಿದ್ದೆವೋ! ಪದ್ಮಾವತಿಎಂಬುವರು ಹಿಂದಿ, ಸಮಾಜ (ನಾವು ಹೈಸ್ಕೂಲಿನಲ್ಲಿದ್ದಾಗ ನಮ್ಮನ್ನಗಲಿದರು) ಪಾಠಮಾಡುತ್ತಿದ್ದರು. ತುಂಬಾ ಚೆನ್ನಾಗಿ ಇತಿಹಾಸತಿಳಿಸುತ್ತಿದ್ದರು. ಆಗೆಲ್ಲ ಇಸವಿಗಳ ನೆನಪು ಇಟ್ಟುಕೊಳ್ಳಬೇಕಿತ್ತು... (ಈಗ ಎಲ್ಲ ಮರೆತಿದೆ).
- ಇನ್ನು ಲಲಿತಾ, ಗಿರಿಜಾ, ಪ್ರೇಮ ಹೀಗೆ ಇಬ್ಬಿಬ್ಬರು ಟೀಚರ್ ಇದ್ದರು. ಸಿದ್ಧಮ್ಮ, ಸರಳ, ಸುಧಾ, ಲಕ್ಮ್ಮೀ ಹೀಗೆ ಬಹಳ ಟೀಚರ್ಇದ್ದರು. ಅವರೆಲ್ಲರ ಪ್ರೀತಿ ಆಗ ಅರಿಯಲಾಗುತ್ತಿರಲಿಲ್ಲ ಅಷ್ಟೇ...
- ಪಿ.ಟಿ. ಮಾಸ್ತರು ಇದ್ದರು. ಅವರಿಗೆ ಕೇಸವ ಎಂದರೇ ಒಂಥರಾ ಖುಷಿ.... ಶಕಾರ ಬರುತ್ತಿರಲಿಲ್ಲ.... ನಾವೆಲ್ಲ ಒಮ್ಮೆ ಕೇಸವ ಎಂದುಹೆಸರ ಹೇಳಿ ನಕ್ಕಿದ್ದಾಗ ಒದೆ ಬಿದ್ದಿತ್ತು. ಮೊನ್ನೆ ಶಾಲೆಗೆ ಹೋದಾಗ ಸಿಕ್ಕಿದ್ದರು. ಈಗ ೫೦+ ಅವರಿಗೆ ನನ್ನನ್ನ ಗುರುತು ಹಿಡಿದರು. ನಮ್ಮೊಡನಿದ್ದ ಗೆಳೆಯರನ್ನೆಲ್ಲ ಕೇಳಿದರು... ಖುಷಿಯಾಯಿತು..
- ಇನ್ನು ನಮ್ಮ ಹೆಡ್ ಮೀದ ಉಷಾರಾವ್ ಒಬ್ಬರು ಇಂಗ್ಲಿಷ್ ಪಾಠ ಮಾಡುತ್ತಿದ್ದರು. ಫುಲ್ ಇಂಗ್ಲಿಷ್. ನಮಗೆ ಉಹೂಂ! ಅರ್ಥಆಗುತ್ತಿರಲಿಲ್ಲ. ಆದರೆ, ನಂತರ ಅರ್ಥವಾಗಿಸುತ್ತಿದ್ದರು. ಪದಗಳ ಅರ್ಥ, ಸ್ಪೆಲ್ಲಿಂಗ್ ಎಲ್ಲ ತಿದ್ದಿ ತೀಡಿ ಕಲಿಸಿದವರು.
- ಒಮ್ಮೆ ನಾವೆಲ್ಲ ಮಕ್ಕಳೂ (೫-೬ ಮಕ್ಕಳು ಅಂದರೆ ತಂಗಿಯರು, ಚಿಕ್ಕಮ್ಮನ ಮಕ್ಕಳು ಹೀಗೆ) ಶಾಲೆಯಲ್ಲಿ ಮಧ್ಯಾಹ್ನ ಸುಮ್ಮನೇಅಲ್ಲಿಗೆ ಹೋಗಬೇಕು ಹೀಗೆ ಏನೋ ನೆಪಹೇಳಿ ಮನೆಮಂದಿಯ ಜೊತೆ ಚಲನಚಿತ್ರಕ್ಕೆ ಹೋಗಿದ್ದೆವು. ಅದು ಹೇಗೋ ಅವರಿಗೆತಿಳಿದುಬಿಡುತ್ತಿತ್ತು. ಒಮ್ಮೆ ಹೀಗೆ ಹೋಗಿರುವಾಗ ಅದೇ ಚಲನ ಚಿತ್ರ ನೋಡಲು ಕೆಲವು ಟೀಚರ್ ಬಂದಿದ್ದರು. ಅದೂಸಾಲದೆಂಬಂತೆ ನಮ್ಮ ಪಕ್ಕದಲ್ಲಿಯೇ (ಆಗೆಲ್ಲ ಟೆಂಟು ಸಿನಿಮಾ ನೆಲವೇ ಜಾಸ್ತಿ ಹೋಗುತ್ತಿದ್ದದ್ದು) ಕುಳಿತಿರಬೇಕೆ? ಸಿನಿಮಾ ಹೆಸರೂನೆನಪಿಲ್ಲ (ಬಹುಶ: ಕರುಳಿನ ಕರೆ ಅಥವಾ ದ್ವಾರಕೀಶ್ ಚಿತ್ರ ಗುರು ಶಿಷ್ಯರು ಇರಬೇಕು). ಮಾರನೇ ದಿನ ಇದೇ ಶಾಲೆಯಲ್ಲಿವಿಷಯವಾಗಿತ್ತು... ಹಹಹ್ಹ...
ಹೈಸ್ಕೂಲಿನ ಟೀಚರ್‍ಸ್ ಜೊತೆಯ ಒಡನಾಟ ತುಂಬಾ ಕಡಿಮೆ (ಕೇವಲ ಮೂರು ವರ್ಷಗಳು). ಆದರೂ ಕೆಲವೇ ಕೆಲವರು ಮತ್ತೆ ಮತ್ತೆ ನೆನಪಾಗುತ್ತಾರೆ. ಕೆಲವರು ಆಗೀಗ ಸಿಕ್ಕದ್ದಾರೆ.. ಸಿಕ್ಕುತ್ತಿರುತ್ತಾರೆ...
- ಎಲ್ಲಕಿಂತ ಮುಖ್ಯವಾಗಿ ನಮಗೆಲ್ಲಾ ಒಂದು ವಿದ್ಯೆಯನ್ನು ಧಾರೆಯೆರೆಯಲು ಶ್ರಮ ಪಟ್ಟ ಆ ಹಿರಿಯ ವೃಂದಗಳಿಂದ ಭಾಷಾಶುದ್ಧಿ, ಉತ್ತಮ ಗುಣಗಳನ್ನು ಕಲಿತಿದ್ದೇವೆ. ಅವರೆಲ್ಲರ ನೆನಪುಗಳು ಆಗಾಗ ಬರುತ್ತಿರುತ್ತದೆ. ಕೆಲವರು ನಮ್ಮೊಂದಿಗಿಲ್ಲ. ಕೆಲವರು ಇನ್ನೂವೃತ್ತಿಯಲ್ಲಿದ್ದಾರೆ, ಮತ್ತೆ ಕೆಲವರು ನಿವೃತ್ತರಾಗಿದ್ದಾರೆ.
ಇದೆಲ್ಲ ನೆನಪಿಸಿಕೊಂಡಾಗ ನಾವಿಷ್ಟರ ಮಟ್ಟಿಗೆ ಬೆಳೆಯಲು ಇಂತಹ ಗುರುಗಳಲ್ಲದೇ ಇನ್ಯಾರಿಂದ ದಾರಿತೋರಲು ಸಾಧ್ಯ? ಮನೆಯೇ ಮೊದಲ ಶಾಲೆಯಾದರೂ.. ನಂತರದ ಶಾಲೆ ಗುರುವಿನೊಡನೆ ಕಳೆದ, ಬರೆದ, ಕೂಡಿದ ಕ್ಷಣಗಳು ಅದ್ಭುತ. ಅವನ್ನೆಲ್ಲ ಮರೆಯಲುಂಟೇ? ಗುರುವಿಲ್ಲದ ಮನೆಯಿಲ್ಲ, ಗುರಿಯಿಲ್ಲದ ಬದುಕಿಲ್ಲ... ಇದ್ದರೂ ಒಂದು ಗುರು-ಗುರಿ ಇರಲೇಬೇಕು... ಇರುತ್ತದೆ. ಅದರ ವ್ಯಾಪ್ತಿ ಊಹೆಗೆ ಮೀರುವಂತಹುದು.
ಇಂತಹ ಗುರುಗಳನ್ನು ಎಲ್ಲರೂ ಒಂದಲ್ಲಾ ಒಂದು ವಿಧದಲ್ಲಿ ಪಡೆದಿರುತ್ತಾರೆ. ಹಾಗೆಯೇ ಉತ್ತಮ ಶಿಷ್ಯರನ್ನೂ ಗುರುಗಳು ಪಡೆದರೆ... ಅದರ ಪರಿಧಿಯೇ ಬೇರೆ ಇರುತ್ತದೆ. ಹಾಗಾಗುವುದು ಅಪರೂಪ...
ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ ಎಂದರು ದಾಸರು... ಆದರೆ ಇಂದಿನ ದಿನಗಳಲ್ಲಿ ಗುರುವೇ ನೀ ಗುಲಾಮನಾಗಿರುವ ತನಕ ಸಂಬಳವಿಲ್ಲ, ಉಂಬಳವಿಲ್ಲ.. ಎನ್ನುವವರೂ ಇದ್ದಾರೆ.. ಏನೆನ್ನಬೇಕು ಇದಕ್ಕೆ???
ಭಾರತದ ರಾಷ್ಟ್ರಪತಿಯಾಗಿದ್ದ, ಶಿಕ್ಷಣತಜ್ಞ ಡಾ|| ಸರ್ವಪಲ್ಲಿ ರಾಧಾಕೃಷ್ಣನ್ರವರ ಜನ್ಮ ದಿನ (ಸೆಪ್ಟೆಂಬರ್ ೫, ೧೮೮೮ - ೧೯೭೫). ಈ ದಿನವಾದರೂ ಗುರುಗಳನ್ನು ನೆನಯದಿದ್ದರೆ... ಹೇಗೆ? ಹಾಗೆಂದುಕೊಳ್ಳುತ್ತಲೇ ನನ್ನ ನೆನಪಿನಲ್ಲುಳಿದವನ್ನು ಇಲ್ಲಿ ನಿಮ್ಮೊಡನೆ ಹಂಚಿಕೊಂಡೆ. (ಇನ್ನೂ ಇವೆ... ಸಾಧ್ಯವಾದರೆ ಆಗಾಗ ಬರೆಯುತ್ತೇನೆ ಅಂದುಕೊಂಡಿರುವೆ...)
ಸನ್ಮಾರ್ಗ, ವಿದ್ಯೆ, ಭಾಷೆ, ಸಂಸ್ಕೃತಿ ಇವುಗಳನ್ನೆಲ್ಲ ಕಲಿಸಿದ ಹಾಗೂ ನಮ್ಮೆಲ್ಲರ ಮನದಲ್ಲಿ ಮನೆಮಾಡಿರುವ ಎಲ್ಲ ಗುರುಗಳಿಗೂ ಮನ:ಪೂರ್ವಕ ನಮಸ್ಕಾರಗಳು.
ಇಲ್ಲಿ ನಮ್ಮ ಯಾವುದೇ ಶಿಕ್ಷಕಿ/ಕ ಇವರುಗಳಿಗೆ ನೋವಾಗದಿರುವಂತೆ ನೆನಪಿಸಿಕೊಂಡಿದ್ದೇನೆ ಎಂದುಕೊಂಡಿದ್ದೇನೆ. ತಪ್ಪಾಗಿದ್ದರೆ... ಕ್ಷಮೆಯಿರಲಿ, ಮಿಸ್!
-ಚಂದ್ರಶೇಖರ ಬಿ.ಎಚ್.
7 ಕಾಮೆಂಟ್‌ಗಳು:
ನಮಗೆ ವಿಧ್ಯೆ ಕಲಿಸಿಕೊಟ್ಟ ಗುರುಗಳನ್ನು ನೀವು ಚೆನ್ನಾಗಿ ನೆನಪಿಸಿದ್ದೀರಿ. ನನ್ನ ಬಾಲ್ಯದ ವಿಧ್ಯಾಭ್ಯಾಸ ನೆನಪಾಯಿತು.
ಧನ್ಯವಾದಗಳು.
howdu sir nanagu nanna sir gangadarappa tumba nenapadaru ...ollae lekhana
ತುಂಬಾ ಚೆನ್ನಾಗಿದೆ
ಚಂದ್ರು ಸರ್,
ನಿಮಗೆ ನೆನಪಿದ್ದ ಎಲ್ಲಾ ಗುರುಗಳನ್ನು ನೆನಪು ಮಾಡಿಕೊಂಡು , ಅವರ ಬಗ್ಗೆ ಬರೆದು ಅವರಿಗೆ ನಿಮ್ಮ ನಮನ ಸಲ್ಲಿಸಿದ್ದೀರಾ.... ಇದರೊಂದಿಗೆ ನಮ್ಮ ಗುರುಗಳ ನೆನಪು ಮಾಡಿಸಿದ್ದೀರಾ....... ಧನ್ಯವಾದ ಸರ್..........
ವಿದ್ಯೆ ಕೊಟ್ಟ ಗುರುಗಳನ್ನು ನೆನಪಿಟ್ಟುಕೊ೦ಡಿದ್ದಿರಾ ಮತ್ತು ಶಿಕ್ಷಕರ ದಿನಾಚರಣೆಯ೦ದು ಅವರೊಡನೆಯ ಮಧುರ ಕ್ಷಣಗಳೊ೦ದಿಗೆ ನೆನಪಿಸಿಕೊ೦ಡು ಹ೦ಚಿಕೊ೦ಡಿದ್ದಿರಾ!
ಧನ್ಯವಾದಗಳು.
|| ವರ್ಣ ಮಾತ್ರಂ ಗುರುಃ || ನಿಮ್ಮ ಎಲ್ಲಾ ಶಿಕ್ಷಕರನ್ನು ನೆನಪುಮಾಡಿಕೊಂಡು ನಮ್ಮೆದುರಲ್ಲಿ ಗೌರವಿಸಿದೀರಿ, ನಿಮಗೆ ಧನ್ಯವಾದಗಳು
ಈ ನನ್ನ ಒಂದು ನೆನಪಿನ ಬರಹದಿಂದ ನಿಮ್ಮೆಲ್ಲರ ಗುರುಗಳೂ ನೆನಪಾಗಿದ್ದು ತಿಳಿಸಿದ್ದೀರಿ.
ಎಲ್ಲರಿಗೂ ಧನ್ಯವಾದಗಳು.
ಸ್ನೇಹದಿಂದ,
ಕಾಮೆಂಟ್ ಪೋಸ್ಟ್ ಮಾಡಿ