ಬದುಕೊಂದು ಪಯಣ
ಹುಟ್ಟೆಂಬುದು ಆರಂಭ
ಸಾವೆಂಬುದು ಅಂತ್ಯದ ತಾಣ
ನಡುವಿಹುದು ಜೀವನ ಪಯಣ
ಶೈಶವದಿಂದ ಬಾಲ್ಯದೆಡೆಗೆ
ಯೌವ್ವನದಿಂದ ಹಿರಿತನದೆಡೆಗೆ
ಸಾಗುತಿಹುದು ಜೀವನ ಪಯಣ
ಅಜ್ಞಾನದಿಂದ ಸುಜ್ಞಾನದೆಡೆಗೆ
ಕೆಲಬಾರಿ ಜ್ಞಾನದಿಂದ ಅಜ್ಞಾನದೆಡೆಗೆ
ಸಾಗುತಿಹುದು ಜೀವನ ಪಯಣ
ಬೆಳಕಿನಿಂದ ಕತ್ತಲೆಡೆಗೆ
ಕತ್ತಲಿಂದ ಬೆಳಕಿನೆಡೆಗೆ
ಸಾಗುತಿಹುದು ಜೀವನ ಪಯಣ
ದೌರ್ಬಲ್ಯದಿಂದ ದೃಢತೆಯೆಡೆಗೆ
ದೃಢತೆಯಿಂ ಜಡತತ್ವದೆಡೆಗೆ
ಸಾಗುತಿಹುದು ಜೀವನ ಪಯಣ
ನಂಬಿಕೆಯಿಂದ ಪ್ರಾರ್ಥನೆಯೆಡೆಗೆ
ಸಶಕ್ತಿಯಿಂದ ಸಹನಾಶಕ್ತಿಯೆಡೆಗೆ
ಸಾಗುತಿಹುದು ಜೀವನ ಪಯಣ
ನಂಬಿಕೆಯಿಂ ಅಪನಂಬಿಕೆಗಳೆಡೆಗೆ
ಸಹನೆಯಿಂದ ಕಡುಕೋಪದೆಡೆಗೆ
ಸಾಗುತಿಹುದು ಜೀವನ ಪಯಣ
ಛಲದಿಂದ ಮುನ್ನುಗುವೆಡೆಗೆ
ಅಂತಸ್ಸತ್ವವನು ಎಬ್ಬಿಸುವೆಡೆಗೆ
ಸಾಗುತಿಹುದು ಜೀವನ ಪಯಣ
ಹಲವೊಮ್ಮೆ ಅಧೈರ್ಯದೆಡೆಗೆ
ಅಂತಸ್ಸತ್ವದಿಂ ನಿಶ್ಶಕ್ತಿಯೆಡೆಗೆ
ಸಾಗುತಿಹುದು ಜೀವನ ಪಯಣ
ಇರಲಿ ಎಂದಿಗೂ ಎದೆಗುಂದದ ಛಲ
ಹಿಂದಿಕ್ಕದ ಹೆಜ್ಜೆ, ಕಾರಣ
ಸಾಗುತಿಹುದು ಜೀವನ ಪಯಣ
ಹುಟ್ಟೆಂಬುದು ಆರಂಭ
ಸಾವೆಂಬುದು ಅಂತ್ಯದ ತಾಣ
ನಡುವಿಹುದು ಜೀವನ ಪಯಣ, ಚಾರಣ
ಹುಟ್ಟೆಂಬುದು ಆರಂಭ
ಸಾವೆಂಬುದು ಅಂತ್ಯದ ತಾಣ
ನಡುವಿಹುದು ಜೀವನ ಪಯಣ
ಶೈಶವದಿಂದ ಬಾಲ್ಯದೆಡೆಗೆ
ಯೌವ್ವನದಿಂದ ಹಿರಿತನದೆಡೆಗೆ
ಸಾಗುತಿಹುದು ಜೀವನ ಪಯಣ
ಅಜ್ಞಾನದಿಂದ ಸುಜ್ಞಾನದೆಡೆಗೆ
ಕೆಲಬಾರಿ ಜ್ಞಾನದಿಂದ ಅಜ್ಞಾನದೆಡೆಗೆ
ಸಾಗುತಿಹುದು ಜೀವನ ಪಯಣ
ಬೆಳಕಿನಿಂದ ಕತ್ತಲೆಡೆಗೆ
ಕತ್ತಲಿಂದ ಬೆಳಕಿನೆಡೆಗೆ
ಸಾಗುತಿಹುದು ಜೀವನ ಪಯಣ
ದೌರ್ಬಲ್ಯದಿಂದ ದೃಢತೆಯೆಡೆಗೆ
ದೃಢತೆಯಿಂ ಜಡತತ್ವದೆಡೆಗೆ
ಸಾಗುತಿಹುದು ಜೀವನ ಪಯಣ
ನಂಬಿಕೆಯಿಂದ ಪ್ರಾರ್ಥನೆಯೆಡೆಗೆ
ಸಶಕ್ತಿಯಿಂದ ಸಹನಾಶಕ್ತಿಯೆಡೆಗೆ
ಸಾಗುತಿಹುದು ಜೀವನ ಪಯಣ
ನಂಬಿಕೆಯಿಂ ಅಪನಂಬಿಕೆಗಳೆಡೆಗೆ
ಸಹನೆಯಿಂದ ಕಡುಕೋಪದೆಡೆಗೆ
ಸಾಗುತಿಹುದು ಜೀವನ ಪಯಣ
ಛಲದಿಂದ ಮುನ್ನುಗುವೆಡೆಗೆ
ಅಂತಸ್ಸತ್ವವನು ಎಬ್ಬಿಸುವೆಡೆಗೆ
ಸಾಗುತಿಹುದು ಜೀವನ ಪಯಣ
ಹಲವೊಮ್ಮೆ ಅಧೈರ್ಯದೆಡೆಗೆ
ಅಂತಸ್ಸತ್ವದಿಂ ನಿಶ್ಶಕ್ತಿಯೆಡೆಗೆ
ಸಾಗುತಿಹುದು ಜೀವನ ಪಯಣ
ಇರಲಿ ಎಂದಿಗೂ ಎದೆಗುಂದದ ಛಲ
ಹಿಂದಿಕ್ಕದ ಹೆಜ್ಜೆ, ಕಾರಣ
ಸಾಗುತಿಹುದು ಜೀವನ ಪಯಣ
ಹುಟ್ಟೆಂಬುದು ಆರಂಭ
ಸಾವೆಂಬುದು ಅಂತ್ಯದ ತಾಣ
ನಡುವಿಹುದು ಜೀವನ ಪಯಣ, ಚಾರಣ
ಚಿತ್ರ-ಕವನ: ಚಂದ್ರಶೇಖರ ಬಿ.ಎಚ್. ೩.೧೧.೨೦೧೦
9 ಕಾಮೆಂಟ್ಗಳು:
ಚೆನ್ನಾಗಿದೆ.
ಕವನ ತುಂಬಾ ಚೆನ್ನಾಗಿದೆ.
ಚೆನ್ನಾಗಿದೆ
ಬದುಕೊ೦ದು ಪಯಣ - ಅರ್ಥಗರ್ಭಿತವಾಗಿದೆ.
ಶುಭಾಶಯಗಳು
ಅನ೦ತ್
ಕವನ ಸರಳವಾಗಿ ಚೆನ್ನಾಗಿದೆ.
ಬದುಕಿನ ಬಗೆಗಿನ ಕವನ ತುಂಬಾ ಚೆನ್ನಾಗಿದೆ..
ಕವನವನ್ನು ಇಷ್ಟಪಟ್ಟ ಎಲ್ಲರಿಗೂ ಧನ್ಯವಾದಗಳು.
ದೀಪಾವಳಿ ಹಬ್ಬದ ಶುಭಾಶಯಗಳು.
ಖುಷಿ ಕೊಟ್ಟ ಕವನ .ಚೆನ್ನಾಗಿದೆ.
ನಮಸ್ಕಾರಗಳೊ೦ದಿಗೆ,
ನಿಮ್ಮವ ನಾವಡ.
ಜ್ಞಾನದಿಂದ ಅಜ್ಞಾನಕ್ಕೆ ಹೋಗುವದಾಗಲಿ, ಬೆಳಕಿಂದ ಕತ್ತಲೆಗೆ ಹೋಗುವದಾಗಲಿ, ಜೀವನದಲ್ಲಿ ಇದ್ದರೂ ಅದರ ಪ್ರಸ್ತುತಿ ಧನಾತ್ಮಕ ಭಾವದ ಕವನದಲ್ಲಿ ಬೇಕೇ? ಬೇಕಿದ್ದರೂ ಖಂಡನೆಯಲ್ಲಿರಬೇಕಿತ್ತು ಎಂದು ನನ್ನ ಅಭಿಪ್ರಾಯ ಮಿಕ್ಕಂತೆ ಕವನ ಸರಳವಾಗಿ ಬದುಕ ಪಯಣವನ್ನ ಸಾರ್ಥಕವಾಗಿ ಬಿಂಬಿಸುತ್ತದೆ.
ಕಾಮೆಂಟ್ ಪೋಸ್ಟ್ ಮಾಡಿ