ಮಂಗಳವಾರ, ನವೆಂಬರ್ 9, 2010

ಸ್ಫೂರ್ತಿಯ ಚಿಲುಮೆ: ಶಂಕರ ನಾಗರಕಟ್ಟೆ... ಇಂದು ನಿಮ್ಮ ಜನ್ಮದಿನ


೪ನೇ ತಾರೀಖು ಬ್ಲಾಗ್‌ ಮಿತ್ರರೊಬ್ಬರು ನನಗೆ ನಾಳೆ ದಿನ ಜಯನಗರದ ಟೋಟಲ್‌ಕನ್ನಡ ದಲ್ಲಿ ಪುಸ್ತಕ ಬಿಡುಗಡೆ ಇದೆ ಬನ್ನಿ ಎಂದು ಕರೆದರು. ಆದರೆ, ವೈಯಕ್ತಿಕ ಕಾರಣಗಳಿಂದ ಅಲ್ಲಿಗೆ ಹೋಗಲು ಆಗಲಿಲ್ಲ. ಅದು ಕನ್ನಡದ ಸಹಜ ನಟ ಅನಂತನಾಗ್‌ರವರು ಬರೆದ ತಮ್ಮ `ತಮ್ಮನ' ಪುಸ್ತಕ ಬಿಡುಗಡೆ ಕಾರ್ಯಕ್ರಮವಾಗಿತ್ತು. ನನ್ನ ತಮ್ಮ ಶಂಕರ ಪುಸ್ತಕರ ಹೆಸರು.

ಇಂದು ಬೆಳಗ್ಗೆ ಅದೇ ಮಿತ್ರರಿಂದ ಈವತ್ತು ಶಂಕರ್‌ನಾಗ್‌ ಜನ್ಮದಿನ ಎಂದು ತಿಳಿಸಿದರು. ಏನಾದರೂ ಬರೆಯಿರಿ ಅವರ ಬಗ್ಗೆ ಎಂದೂ ಹೇಳಿದರು. ಏನೆಂದು ಬರೆಯುವುದು ಆತನ ಬಗ್ಗೆ.

ಅವರ ಬಗ್ಗೆ ಹೇಳಬಹುದಾದರೆ, ನಟ, ನಿರ್ದೇಶಕ, ರಂಗಕರ್ಮಿ ಶಂಕರ್‌ನಾಗ್‌ ಒಂದು ಚಿಲುಮೆಯ ಸ್ಫೂರ್ತಿ, ಚಟುವಟಿಕೆಯ ಆಗರ, ಅಗಾಧ ಕನಸುಗಾರ, ಅಸಾಧ್ಯವೆಂಬ ಮಾತಿಗೆ ದೂರ, ಛಲಗಾರ, ಅಷ್ಟೇ ಅಲ್ಲದೇ ಸಂಕೇತ್‌ ಎಂಬ ಸ್ಟುಡಿಯೋ ಹುಟ್ಟಿಗೆ ಕಾರಣಕರ್ತ. ಒಂದಷ್ಟು ರಾಜಕೀಯ ಕಾರ್ಯದಲ್ಲೂ ಸಕ್ರಿಯನಾಗಿದ್ದವರು. ಹಾಗೆಯೇ, ಆಟೋರಿಕ್ಷಾದವರ ಕಣ್ಮಣಿ, ಆಟೋರಿಕ್ಷಾಗಳ ಮೇಲೆ ಆತನ ಚಿತ್ರವಿಲ್ಲದ ಆಟೋ ಊಹಿಸಿಕೊಳ್ಳುವುದೂ ಕಷ್ಟ. ಶಂಕರ್‌ನಾಗರ ಬಗ್ಗೆ ಒಂದೆರಡು ಸಾಲು ಬರೆಯಲೂ ಸಾಧ್ಯವಾಗದಷ್ಟು ಅಗಾಧ ರೂಪಿ ಎನ್ನಬಹುದು.

ಅತಿ ಚಿಕ್ಕ ವಯಸ್ಸಿನಲ್ಲಿಯೇ ಮಹತ್‌ಸಾಧನೆಗಳನ್ನು ಮಾಡಿದ ಹಾಗೂ ಇನ್ನೂ ಮಾಡಬೇಕೆಂದಿದ್ದ ಒಬ್ಬ ಕನಸುಗಾರ ಶಂಕರ್‌ನಾಗ್ ಜನ್ಮ ದಿನ ಇಂದು (೯ ನವೆಂಬರ್‌, ೧೯೫೪) ಆದರೆ, ಆತ ಅಕಾಲದಲ್ಲಿಯೇ ಬಿಟ್ಟು ಹೋದ ನೆನಪುಗಳು ಅನೇಕ (ಸೆಪ್ಟೆಂಬರ್‍ ೩೦, ೧೯೯೦). ಅದರಲ್ಲಿ ಮಾಲ್ಗುಡಿ ಡೇಸ್‌... ರಾಷ್ಟ್ರವ್ಯಾಪಿ ಧಾರಾವಾಹಿಯಾಗಿ ಮಾಡಿದ್ದೂ ಸಹ ಒಂದು ವಿಶೇಷ ಸಾಧನೆ.

ಆತನನ್ನು ಒಮ್ಮೆ ಸ್ವತ: ನಾನು ಕಂಡಿದ್ದು ಬಸವನಗುಡಿಯ ನ್ಯಾಷನಲ್‌ ಕಾಲೇಜಿಗೆ ಹೋಗುವ ನಾರ್ತ್‌ರೋಡ್‌ನಲ್ಲಿ, ತನ್ನ ಕಾರನ್ನು ಚಲಾಯಿಸುತ್ತಾ ಸಾಗುತ್ತಿದ್ದದ್ದು.

ದಿವಂಗತ ಶಂಕರ್‌ನಾಗ್‌ ಹೆಸರಿನಲ್ಲಿ ಬೆಂಗಳೂರಿನಲ್ಲಿ ಚಿತ್ರಮಂದಿರವೂ ಇದೆ. ರಂಗಶಂಕರ ರಂಗಮಂದಿರವೂ ಇದೆ. ಹೀಗೆ ಆತನ ನೆನಪು ಸದಾ ಜನಮಾನಸದಲ್ಲಿದೆ.

ಆತನ ಚಿತ್ರಗಳನ್ನು ಮನೆಮಂದಿಯೆಲ್ಲ ಖುಷಿಯಿಂದ ನೋಡಬಹುದಿತ್ತು. ಸೀತಾ ರಾಮು, ಮಿಂಚಿನ ಓಟ, ನೋಡಿ ಸ್ವಾಮಿ ನಾವಿರೋದೇ ಹೀಗೆ, ಸಿಬಿಐ ಶಂಕರ್‍, ಸಾಂಗ್ಲಿಯಾನ (ಭಾಗ೧ ೧-೨), ಗೆದ್ದಮಗ, ಹೀಗೆ ಅನೇಕ ಚಿತ್ರಗಳು. ಒಂದಾನೊಂದು ಕಾಲದಲ್ಲಿ - ಮೊದಲ ಚಲನಚಿತ್ರಕ್ಕೆ ರಾಷ್ಟ್ರಪ್ರಶಸ್ತಿ ಬಂದಿತ್ತು. ಹೀಗೆ ಸಾಗುತ್ತದೆ, ಆತನ ಚಲನಚಿತ್ರ, ನಾಟಕ, ನಿರ್ದೇಶನ ಜೀವನಗಾಥೆ. ಆತನೊಬ್ಬ ಬಲು ಆತ್ಮೀಯ ವ್ಯಕ್ತಿಯಾಗಿದ್ದರು.

ಇನ್ನು ಹೆಚ್ಚಿನ ವಿವರಗಳಿಗಾಗಿ ಇಲ್ಲೊಂದಷ್ಟು ಜಾಲತಾಣಗಳಿವೆ ನೋಡಿ:
http://www.shankarnag.in/
http://www.chakpak.com/celebrity/shankar-nag/biography/11656

ಶಂಕರ್‌ನಾಗ್‌, ನಿಮಗೆ ನಮನಗಳು.


ಚಿತ್ರಕೃಪೆ: ಗೂಗಲ್‌ ಇಮೇಜ್ ಸರ್ಚ್ (Photo courtsey: Google image search)

8 ಕಾಮೆಂಟ್‌ಗಳು:

PARAANJAPE K.N. ಹೇಳಿದರು...

ಒಬ್ಬ ಸಾರ್ಥಕ ವ್ಯಕ್ತಿಯ ಹುಟ್ಟುಹಬ್ಬ ದ೦ದು ಆತನ ಬಗ್ಗೆ ಬರೆದಿದ್ದೀರಿ. ಚೆನ್ನಾಗಿದೆ.

ಮಹೇಶ ಹೇಳಿದರು...

ಕನ್ನಡಕ್ಕೆ ಸಿಕ್ಕ ಅಪರೂಪದ ಪ್ರತಿಭೆ ಮಿಂಚಿನಂತೆ ಮಾಯವಾಯಿತು. ಶಂಕರ ನಾಗರಕಟ್ಟೆಯವರಿಗೆ ನಮನ

ನಾಗರಾಜ್ .ಕೆ (NRK) ಹೇಳಿದರು...

ShankarNag- A candle, which burned from both sides to give light for many ART n Social sectors. Happy birthday to him.

Dr.D.T.Krishna Murthy. ಹೇಳಿದರು...

ಶಂಕರ ನಾಗ್ ನನ್ನ ಮೆಚ್ಚಿನ ನಟರಾಗಿದ್ದರು.ಅವರ ಬಗ್ಗೆ ಮಾಹಿತಿ ನೀಡಿದ್ದಕ್ಕೆ ಧನ್ಯವಾದಗಳು.

Ittigecement ಹೇಳಿದರು...

ಚಂದ್ರು...

ಶಂಕರನಾಗ್..

ಆ ಕಾಲದಲ್ಲೇ ಬೆಂಗಳೂರಿಗೆ ಫ್ಲೈಓವರುಗಳ ಬಗೆಗೆ ಚಿಂತಿಸಿದ್ದರು...
ನಂದಿ ಬೆಟ್ಟಕ್ಕೆ ರೋಪ್ ವೇ ಹಾಕಿಸುವದರ ಬಗೆಗೆ ಆಲೋಚಿಸಿದ್ದರು...

ಇಂಥಹ ಮಹಾನ್ ಚೇತನ ನಮ್ಮನ್ನು ಅಗಲಿದ್ದು ನಿಜಕ್ಕೂ ತುಂಬಲಾರದ ನಷ್ಟ..

ಅವರು ನಮಗೆಲ್ಲ ಸ್ಪೂರ್ತಿ...

ಧನ್ಯಾವದಗಳು...

shivu.k ಹೇಳಿದರು...

ಸರ್,

ನಾನು ಟೋಟಲ್ ಕನ್ನಡ ಪುಸ್ತಕ ಮಳಿಗೆಗೆ ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೆ ಹೋಗಿದೆ. ಒಬ್ಬ ಗ್ರೇಟ್ ಸಾಧಕನ ಬಗ್ಗೆ ಚೆನ್ನಾಗಿ ಬರೆದಿದ್ದೀರಿ..

ಕ್ಷಣ... ಚಿಂತನೆ... ಹೇಳಿದರು...

ದಿ. ಶಂಕರನಾಗರ ಬಗ್ಗೆ ಬರಯಕ್ಕೆ ಬೇಕಾದಷ್ಟು ಇದೆ. ಪ್ರತಿಕ್ರಿಯೆ ಕಳುಹಿಸಿದ ಎಲ್ಲರಿಗೂ ಧನ್ಯವಾದಗಳು.

ಸೀತಾರಾಮ. ಕೆ. / SITARAM.K ಹೇಳಿದರು...

ಶಂಕರ ನಾಗ ನನ್ನ ಮೆಚ್ಚಿನ ನಟರು. ಅವರೊಂದು ಉತ್ಸಾಹದ ಬತ್ತದ ಚಿಲುಮೆ. ಅಕಾಲ ಮೃತ್ಯುಗೀಡಾಡ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ. ಅವರ ಮೇರು ವ್ಯಕ್ತಿತ್ವದ ಸಂಕ್ಷಿಪ್ತ ಪರಿಚಯ ಮಾಡಿಸಿದ್ದಕ್ಕೆ ಧನ್ಯವಾದಗಳು.