ಪದಕಟ್ಟುವ ಆಟ, ಇದನ್ನು ಆಂಗ್ಲದಲ್ಲಿ ವರ್ಡ್ ಬಿಲ್ಡಿಂಗ್ ಎಂದು ಕರೆಯುತ್ತಾರೆ. ಒಂದು ಮೂರು-ನಾಲ್ಕು ಅಕ್ಷರಗಳನ್ನು ಬರೆದು ಅವುಗಳ ನಡುವೆ ಜಾಗ ಬಿಡುವುದು. ಆ ಅಕ್ಷರಗಳ ನಡುವೆ, ಹಿಂದೆ, ಮುಂದೆ ಒಂದು ಅಥವಾ ಹಲವು ಪದಗಳ ರಚನೆಯನ್ನು ಮಾಡಲು ಪ್ರಯತ್ನಿಸುವ ಆಟವನ್ನು ಪದಕಟ್ಟುವ ಆಟವೆನ್ನಬಹುದು. ಇದರಿಂದ ಹೊಸ ಪದಗಳ ಪರಿಚಯ, ಅವುಗಳ ಕಾಗುಣಿತ ಇತ್ಯಾದಿಗಳ ಅರಿವು ಉಂಟಾಗುವುದರಲ್ಲಿ ಸಂದೇಹವೇ ಇಲ್ಲ. ಉದಾ: ಆಂಗ್ಲದಲ್ಲಿ ಕೊಡುವುದಾದರೆ, A ಮತ್ತು T . ಈ ಅಕ್ಷರಗಳ ನಡುವೆ ಮತ್ತು ಹಿಂದೆ-ಮುಂದೆ ಬೇರೆ ಸ್ವರ ಅಥವಾ ವ್ಯಂಜನಾಕ್ಷರ ಬರೆದು ಪದಗಳನ್ನು ರಚಿಸಬಹುದು. A ಮತ್ತು T ಮಧ್ಯೆ N ಬರೆದಾಗ ANT ಆಗುತ್ತದೆ. ಇದೇ ರೀತಿ A(r)T, M(a)RT, SH(i)RT, ಹೀಗೆ ಬೇರೆ ಬೇರೆ ಪದಗಳ ರಚನೆ ಮಾಡಿ ಆಟ ಆಡಬಹುದು.
ಕನ್ನಡದಲ್ಲಿ ಪದ ಕಟ್ಟುವ ಆಟವನ್ನು ಸಹ ಇದೇ ವಿಧಾನದಲ್ಲಿ ಆಡಬಹುದು. ಈಗ ಒಂದೆರಡು
ಅಕ್ಷರಗಳನ್ನು ಬರೆಯೋಣ.
ಕ ಮತ್ತು ಲ. ಇವುಗಳ ನಡುವೆ, ಹಿಂದೆ, ಮುಂದೆ ಸ್ವರ, ವ್ಯಂಜನಗಳನ್ನು ಸೇರಿಸಿ ಪದ ರಚನೆ ಮಾಡುವುದಾದರೆ, ಪದಗಳು ಕೆಳಗೆ ಅಚ್ಚಿಸಿದಂತೆ ಇರಬಹುದೆ?
ಕಲಾ, ಕಲಸು, ಕೆಲಸ, ಕಲಿತ, ಕಲಿಸು, ಕಲೆ, ಕುಲ ಇತ್ಯಾದಿ.
ಕನ್ನಡದಲ್ಲಿ ಕೆಲವೊಮ್ಮೆ ಒಂದು ಸ್ವರ/ವ್ಯಂಜನಕ್ಕಿಂತ ದೀರ್ಘ ಸ್ವರಗಳನ್ನು ಉಪಯೋಗಿಸಿದಾಗ ಕೆಲವೊಂದು ಪದಗಳನ್ನು ರಚಿಸಬಹುದು.
ಈ ಪದ ಕಟ್ಟುವ ಆಟದಿಂದ ಪದಗಳ ಪರಿಚಯದೊಂದಿಗೆ, ಒಂದು ಪದಕ್ಕೆ ಇರುವ ಬೇರೆ ಬೇರೆ ಅರ್ಥಗಳಲ್ಲದೆ, ಮೆದುಳಿಗೆ ಕಸರತ್ತು ಕೊಡುವಂತಹದೇ ಆಗಿದೆ. ಅಲ್ಲದೆ, ಕಾಗುಣಿತ, ವ್ಯಾಕರಣದಲ್ಲಿ ಬರುವ ಸಂಧಿಗಳು, ಇವುಗಳೊಂದಿಗೆ ಪದಗಳ ಉಪಯೋಗದ ಅನುಭವವನ್ನೂ ಕೊಡುವಂತಹುದಾಗಿದೆ.
ಇದಕ್ಕಿಂತ ಸ್ವಲ್ಪ ಬೇರೆ ವಿಧಾನದಲ್ಲಿ ಪದಬಂಧ ಇರುತ್ತದೆ. ಅಲ್ಲಿ ಅಕ್ಷರಗಳ ಸಂಖ್ಯೆ, ಜೊತೆಗೆ ಪದ ಹೊಂದಿಸುವುದಕ್ಕಾಗಿ ಸುಳಿವು ಕೂಡ ಇರುತ್ತದೆ. ಆದರೆ ಪದ ಕಟ್ಟುವ ಆಟದಲ್ಲಿ ಅಕ್ಷರಗಳೆ ಸುಳಿವಾಗಿ ಮಾರ್ಪಡುತ್ತವೆ.
ನಿಮಗೆ ಪದ ಕಟ್ಟುವ ಆಟ ಇಷ್ಟವಾಯಿತೆ?
ನಿಮ್ಮ ಅಭಿಪ್ರಾಯಗಳನ್ನು ಪದಗಳೊಡನೆ ಬೆರೆಸಿ ವಿ-ಅಂಚೆಯ ಮೂಲಕ ಕದ ತಟ್ಟಿ ಕಳುಹಿಸುವಿರಲ್ಲಾ!.
ಚಂದ್ರಶೇಖರ ಬಿ.ಎಚ್.
೦೧.೦೧.೧೧
3 ಕಾಮೆಂಟ್‌ಗಳು:
ಸರ್,
ಒಂಥರ ಮಜವಾಗಿದೆ. ಆಟ ಇಷ್ಟಪಟ್ಟು ಆಡಬಹುದು ಅನ್ನಿಸುತೆ...ಪರಿಚಯ ಮಾಡಿಕೊಟ್ಟಿದ್ದಕ್ಕೆ ಥ್ಯಾಂಕ್ಸ್.
too good
inthaha aatagala munde computer aatagalu waste anisatte alvaa?
ಗುರು ಮತ್ತು ಶಿವು ಸರ್, ಆಟದ ಬಗೆಗಿನ ಲೇಖನ ಮೆಚ್ಚಿದ್ದಕ್ಕೆ ಧನ್ಯವಾದಗಳು.
ಕಾಮೆಂಟ್ ಪೋಸ್ಟ್ ಮಾಡಿ