ಬುಧವಾರ, ಜನವರಿ 12, 2011

ಸ್ವಾಮಿ ವಿವೇಕಾನಂದರ ಒಂದು ಮಾತು - ಬೆಳಕು...

"All the powers in the universe are already ours. It is we who have put our hands before our eyes and cry that it is dark"
Swami Vivekananda
ಈ ಸಿಂಹವಾಣಿಯನ್ನು ಕೇಳುತ್ತಿದ್ದರೆ... ಖಂಡಿತಾ ಅಂದಿಗಿಂತ ಇಂದಿನ ವಾಸ್ತವಿಕ ಪರಿಸ್ಥಿತಿ ಹೆಚ್ಚಾಗಿ ಅನ್ವಯಿಸುತ್ತದೆ ಎನ್ನಬಹುದು. ಇಂದಿನ ಯುವ ಜನಾಂಗವು ವಿದ್ಯಾವಂತರಾಗಿದ್ದೂ ಅಂಧಾನುಕರಣೆ ಮಾಡುತ್ತಾ ತಮ್ಮ ತನವನ್ನು ಮರೆಯುತ್ತಾ ಸಾಗುತ್ತಿರುವುದು ವಿಪರ್ಯಾಸ. ನಮ್ಮ ದೇಶದ ಯುವಶಕ್ತಿಯಲ್ಲಿ ಶಕ್ತಿಯಿದೆ. ಆದರೆ, ಅದರ ಸದುಪಯೋಗ ಆಗುತ್ತಿಲ್ಲವೆನ್ನಬಹುದು. ಯಾವುದೇ ಒಂದು ದೇಶದಲ್ಲಿನ ಯುವಶಕ್ತಿಯ ಸದುಪಯೋಗ ಆ ದೇಶದ ಬಲಶಾಲಿ, ಆರ್ಥಿಕವಾಗಿ ಸದೃಢ ಮತ್ತು ಉತ್ತಮ ಜನಾಂಗವನ್ನು ಹೊಂದುವಲ್ಲಿ ಸಾಫಲ್ಯ ಕಾಣುತ್ತದೆ. ಆದರೆ, ಇಂದಿನ, ಈಗಿನ ಸ್ಥಿತಿಯಲ್ಲಿ ಎಲ್ಲಿ ನೋಡಿದರೂ ಒಂದಲ್ಲಾ ಒಂದು ವಿಧದ ಆತಂಕ, ಆಧುನಿಕತೆಯಲ್ಲಿ ಮೈಮರೆತ, ಮಾದಕ ಸೇವನೆಯತ್ತ ವಾಲಿದ, ವಾಲುತ್ತಿರುವ, ಅಮಲೇರಿದಂತೆ ಹಣದ ಮದ ತೋರಿಸುವವರೇ ಹೆಚ್ಚಾಗುತ್ತಿದ್ದಾರೆ. ಇದೂ ಒಂದು ವಿಧದಲ್ಲಿ ಎಲ್ಲ ಬಲವಿದ್ದೂ ದುರ್ಬಲ ಮತ್ತು ಸಾಮಾಜಿಕ ಸ್ತರಗಳಲ್ಲಿ ಬೇಜವಾಬ್ದಾರಿತನ ತೋರುವವರಾಗಿದ್ದಾರೆ. ಇದನ್ನೇ ನಮ್ಮ ಕೈಗಳನ್ನೇ ಕಣ್ಣೆದುರಿಗೆ ಅಡ್ಡ ಮಾಡಿಕೊಂಡು ಕತ್ತಲೆಯೆಂಬ ಭ್ರಮೆಯಲ್ಲಿ, ನಿರಾಶಾವಾದದಲ್ಲಿ ಬೀಳುವ ಪ್ರಮೇಯ ನಮಗಿದೆಯೆ? ಯುವ ಜನಾಂಗ ಚಿಂತನಾಶೀಲವಾಗಿದ್ದು, ತಮ್ಮ ದೇಶ, ಸಂಪತ್ತು, ಕುಟುಂಬದೆಡೆಗೆ ವಿಶಾಲ ಹೃದಯಿಗಳಾಗಬೇಕಾಗಿದೆ. ಎಲ್ಲ ದುರ್ಬಲತೆಯನ್ನೂ ತೊಲಗಿಸುವಲ್ಲಿ ಸ್ವಾಮಿ ವಿವೇಕಾನಂದರ ನುಡಿಗಳು, ಅವರ ಜೀವನ, ಅವರ ಆದರ್ಶ ಇವುಗಳನ್ನು ಮೈಗೂಡಿಸಿಕೊಂಡರೆ.... ಕತ್ತಲೆಯೆಂಬುದೇ ಇರುವುದಿಲ್ಲ.

ಇಂದು, ಜನವರಿ ೧೨, ದೇಶಕ್ಕೆ ದೇಶವೇ ಸ್ವಾಮಿ ವಿವೇಕಾನಂದರ ಹೆಸರಿನಲ್ಲಿ ರಾಷ್ಟ್ರೀಯ ಯುವದಿನವನ್ನಾಗಿ ಆಚರಿಸುತ್ತಾರೆ. ಸ್ವಾಮೀಜಿಯವರ ಆದರ್ಶ, ಧೈರ್ಯ, ಸ್ಥೈರ್ಯ, ನೈತಿಕತೆ, ವಿಚಾರಶೀಲತೆ ಎಲ್ಲ ರಂಗಗಳಲ್ಲಿಯೂ ಕಂಡುಬರಲಿ.

ಜೈ ಗುರುದೇವ!

ಚಂದ್ರಶೇಖರ ಬಿ.ಎಚ್.
೧೨.೦೧.೨೦೧೧

5 ಕಾಮೆಂಟ್‌ಗಳು:

PARAANJAPE K.N. ಹೇಳಿದರು...

ಸಕಾಲಿಕ ಚಿಂತನೆ, ವಿವೇಕ ವಾಣಿ ಇಂದಿಗೂ ಪ್ರಸ್ತುತ

Ittigecement ಹೇಳಿದರು...

ಚಂದ್ರು...

ವಿವೇಕಾನಂದರು ಇಡಿ ವಿಶ್ವಕ್ಕೇ ಆದರ್ಶರು..

ಸಕಾಲಿಕ ಲೇಖನ ಅವರ ನೆನಪನ್ನು ( ಅವರ ಜನ್ಮ ದಿನದಂದು) ಮಾಡಿದ್ದಕ್ಕೆ ಧನ್ಯವಾದಗಳು...

shivu.k ಹೇಳಿದರು...

ವಿವೇಕನಂದರ ಬಗ್ಗೆ ಒಂದು ಸೊಗಸಾದ ಬರಹ. ಅವರ ಜನ್ಮದಿನದಂದೂ ಈ ಲೇಖನವನ್ನು ಬರೆದು ನೆನಪಿಸಿದ್ದಕ್ಕೆ ಥ್ಯಾಂಕ್ಸ್.

ಗಿರೀಶ್.ಎಸ್ ಹೇಳಿದರು...

really itz good article..
I also had posted some thpughts of Vivekananda on his birthday..
http://giri-shikhara.blogspot.com/2011/01/vivekanandas-call-to-nation.html

Fastag Service ಹೇಳಿದರು...

ಸರ್,,,,,,,
ತುಂಬಾ ಧನ್ಯವಾದಗಳು ,,,,,,
ಸ್ವಾಮಿ ವಿವೇಕನಂದ