ಮಂಗಳವಾರ, ಏಪ್ರಿಲ್ 19, 2011

ಹಣದಾಸೆಗಾಗಿ...

ಅಪರೂಪಕ್ಕೆಂದು ಈ ಒಂದು ಕಾರ್ಯಕ್ರಮದ ತುಣುಕು ನೋಡಿದೆ...

ಅದು....

ಪ್ಯಾಟೆ ಹುಡ್ಗೀರ್‌ ಹಳ್ಳಿ ಲೈಫು-೨. ಈ ಒಂದು ರಿಯಾಲಿಟಿ ಷೋನ ಸಾಕಷ್ಟು ಎಪಿಸೋಡುಗಳು ಪ್ರಸಾರವಾಗಿದೆ. ಹೀಗೆ ಮೊನ್ನೆ ಒಂದು ಚಲನಚಿತ್ರದ ನಡುವೆ ಈ ವಾರದ ಎಪಿಸೋಡಿನ ದೃಶ್ಯಾವಳಿ, ಅಲ್ಲಿನ ನಿಯಮಗಳನ್ನು ಜಾಹಿರಾತಿನಂತೆ ತೋರಿಸುತ್ತಿದ್ದರು. ಅದರಲ್ಲಿಯೂ ಯುವತಿಯರು ಕುಸ್ತಿ ಮಾಡುವುದು, ಸುತ್ತಲಿನ ಹಳ್ಳಿಯ ಜನ ಇವರ ಕುಸ್ತಿಯಾಟ ನೋಡುವುದು. ಸೋತವರಿಗೆ ಕೇಕೆ ಹಾಕಿ ನಗುವುದು ಇತ್ಯಾದಿ. ಕುಸ್ತಿಯಾಟದಲ್ಲಿ ಒಬ್ಬ ಯುವತಿಗೆ ಪೆಟ್ಟಾಗಿ ಆಸ್ಪತ್ರೆಯಲ್ಲಿ ಇದ್ದು ಬಂದಿದ್ದೂ ಆಯಿತಂತೆ.

ಮತ್ತೊಂದು ದೃಶ್ಯ ನೋಡಿದೆ. ಭಾರೀ ಎತ್ತೊಂದು ಸುತ್ತಲೂ ಬಂದು ಮಾಡಿದ ಬಯಲಿನಲ್ಲಿ ನಿಂತಿದೆ. ಅದನ್ನು ಇಬ್ಬರು ತರಬೇತುದಾರರು ಹಿಡಿದಿದ್ದಾರೆ. ಆ ಎತ್ತಿನ ಕೊರಳಿಗೆ ಮೂರು ನಿಮಿಷದಲ್ಲಿ ಗಂಟೆ ಕಟ್ಟಬೇಕಂತೆ. ಆ ಎತ್ತನ್ನು ನಾವು ತೆರೆಯ ಮೇಲೆ ನೋಡಿದರೇ ಭಯವೆನಿಸುವಷ್ಟಿದೆ. ಅಂತಹುದಕ್ಕೆ ಇದೊಂದು ಟಾಸ್ಕು. ಜೊತೆಗೆ ಈ ಕಾರ್ಯಕ್ರಮ ನಿರೂಪಕ ಹೇಳುತ್ತಾನೆ. ಧೈರ್ಯ ಇಲ್ಲದಿದ್ದರೆ ಈ ಕಾರ್ಯಕ್ರಮದಿಂದ ಔಟು. ನೋಡಿ ರೂ.೧೫.೦೦ ಲಕ್ಷ ಕಳೆದುಕೊಳ್ಳೊ ಹಾಗಿದ್ದರೆ ಟಾಸ್ಕ್ ಬಿಟ್ಟುಬಿಡಿ. ಇನ್ನೊಂದು ಮಾತು. ಈ ಎತ್ತು ರೇಗಿದರೆ ಅದನ್ನು ನಿಯಂತ್ರಿಸಲು ಕಷ್ಟ. ಜೀವಕ್ಕೇನಾದರೂ (ಈ ಟಾಸ್ಕಿನಲ್ಲಿ ಧೈರ್ಯಮಾಡಿ ಕಟಾಂಜನದೊಳಗೆ ಹೋದವರು) ಅಪಾಯವಾದರೆ `ನಾವು' ಜವಾಬ್ದಾರರಲ್ಲ.

ಇಂತಹ ಕಠಿಣ ನಿಯಮಗಳು. ಅದಕ್ಕಿಂತಲೂ ಯುವತಿಯರನ್ನು ಈ ರೀತಿ ಗೋಳು ಹುಯ್ದುಕೊಳ್ಳೋದು, ಕೇಕೆ ಹಾಕಿ ನಗುವುದು ಇವೆಲ್ಲ ಯಾಕೆ? ಜೊತೆಗೆ ಪ್ರಾಣಕ್ಕೆ ಆಗಲಿ ಅಥವಾ ದೈಹಿಕವಾಗಿ ಅವರಿಗೇನಾದರೂ ಅಪಾಯವೇ ಆದರೂ ಕಾರ್ಯಕ್ರಮವನ್ನು ನಡೆಸುತ್ತಿರುವವರ/ಪ್ರಾಯೋಜಕರು/ ಟಿವಿವಾಹಿನಿಯವರ ಜವಾಬ್ದಾರಿಯಿಲ್ಲ ಎಂದಮೇಲೆ ಹಣದಾಸೆಗಾಗಿ ಈತ ಹೇಳಿದ್ದನ್ನೆಲ್ಲಾ ಮಾಡಲು ಒಪ್ಪಿಕೊಳ್ಳುವ ಈ ಮಂದಿಗೂ ಬುದ್ಧಿ ಭ್ರಮಣೆಯೆ? ಅನ್ನಿಸಿತು. ನೀವ್ಯಾರಾದರೂ ಈ ಕಾರ್ಯಕ್ರಮ ನೋಡಿದ್ದರೆ.... ನಿಮಗೇನನ್ನಿಸಬಹುದು?
ಚಂದ್ರಶೇಖರ ಬಿ.ಎಚ್.

3 ಕಾಮೆಂಟ್‌ಗಳು:

Chetana ಹೇಳಿದರು...

ನಿಜ ಸರ್...ಇಂಥ ಕಾರ್ಯಕ್ರಮಗಳನ್ನ ನೋಡಿದ್ರೆ ನಮ್ಗೂ ಹಾಗೆ ಅನ್ಸುತ್ತೆ. ಇವೆಲ್ಲ ಮನರಂಜನೆಯ ಕಾರ್ಯಕ್ರಮಗಳಾ ಅಂತ ಅನ್ಸುತ್ತೆ..

ಗಿರೀಶ್.ಎಸ್ ಹೇಳಿದರು...

ಈಗಿನ ಎಲ್ಲ ರಿಯಾಲಿಟಿ ಶೋ ಗಳು ಕೂಡ ಇದೆ ಥರ ಆಗಿಬಿಟ್ಟಿವೆ,ಒಂದು ಕಡೆ ಮಾನಸಿಕೆ ಹಿಂಸೆ ಕೊಡುತ್ತಿವೆ,
ಅದರಲ್ಲಿ ಭಾಗವಹಿಸುವರು ಕೂಡ ಹಣದ ಆಸೆಗೆ ಇವೆಲ್ಲವನ್ನೂ ಒಪ್ಪಿಕೊಳ್ಳುತ್ತಾರೆ ಅನಿಸುತ್ತದೆ.
ಕಡೆ ಪಕ್ಷ ಅವರ ಪೋಷಕರು ಹೇಳಬಹುದು

ಅನಿಕೇತನ ಸುನಿಲ್ ಹೇಳಿದರು...

Kuruda kanchana kuniyuttalittu..kalige biddava tuliyutalittu....:-)