ಸೋಮವಾರ, ಜುಲೈ 18, 2011

ದಟ್ ಇಸ್ ದಟ್...

ಬಹಳ ದಿನಗಳಿಂದ ಏನಾದರೂ ಬರೆಯಬೇಕೆಂದುಕೊಂಡರೂ ಬರೆಯಲು ಅದೇಕೋ ಆಗುತ್ತಿರಲಿಲ್ಲ.  ಹೀಗೆಯೇ ಏನಾದರೂ ಬರೆಯಬೇಕೆಂದು ಯೋಚಿಸುತ್ತಾ ಕುಳಿತಿದ್ದೆ ಗಣಕ ಯಂತ್ರದ ಮುಂದೆ.  ಕಚೇರಿಯಲ್ಲಿನ ಬೇರೆಲ್ಲ, ಅಂದರೆ ನನ್ನ ಪಾಲಿನ ಕೆಲಸ ಮುಗಿದಿತ್ತು. ಅತ್ತ ಕಡೆ ಸಭೆ ನಡೆಯುತ್ತಿತ್ತು. ಇಲ್ಲಿ ನಾನು ಖಾಲಿ ಕೂತಿದ್ದೆ. ಏನು ಮಾಡುವುದು? ಯೋಚನೆ. ಯೋಚನೆ??

ಹೀಗಿರುವಾಗ, ಬಿಡುವಿನ ವೇಳೆಯಲ್ಲಿ ಓದಲೆಂದು (ಜಸ್ಟ್ ಕಣ್ಣಾಡಿಸಲು) ಕೆಲವೊಂದು ವಿದ್ಯುನ್ಮಾನ ಪುಸ್ತಕಗಳನ್ನು ಅಂತರ್ಜಾಲದಿಂದ ಇಳಿಸಿಕೊಂಡಿದ್ದನ್ನು ನೋಡುತ್ತಿದ್ದಾಗ: ನಿರ್ಮಲಾ ಎಂಬುವವರು ಬರೆದ, ದಟ್ ಇಸ್ ದಟ್ * ಪುಸ್ತಕ ತೆರೆದೆ. ೧೦೬ ಪುಟದಲ್ಲಿ, ಸುಮ್ಮನೇ ನೂರನೇ ಪುಟಕ್ಕೆ ಕ್ಲಿಕ್ಕಿಸಿದೆ.

ಆಗ ಕಂಡಿದ್ದು:

I am that
You art that
And that is that.

ಆಗ ನೆನಪಾಗಿದ್ದು ರವಿಚಂದ್ರನ್‌ ರವರ ಒಂದು ಸಿನಿಮಾದ ಹಾಡು (ಸಿನೆಮಾ ನೆನಪಾಗುತ್ತಿಲ್ಲ). ಡಾ. ಎಸ್ಪಿ ಅವರು ಹಾಡಿದ ಹಂಸಲೇಖರ ಗೀತೆ. ರವಿಚಂದ್ರನ್ ಮತ್ತು ತಾಯ್‌ನಾಗೇಶ್ ನಟಿಸಿದ ಚಿತ್ರದ ಹಾಡು:

ನೀನು ನೀನೇ... ಇಲ್ಲಿ ನಾನು ನಾನೇ...
ನೀನು ನೀನೇ...
ಇಲ್ಲಿ ನಾನು ನಾನೇ...

ಇಲ್ಲಿ ಅಹಂ ಎಂಬುದಾಗಿ ತಿಳಿಯಬಹುದಾದರೂ, ಪ್ರತಿಯೊಬ್ಬರೂ ಅವರು ಅವರೇ ಆಗಿರುತ್ತಾರೆ.  ಒಬ್ಬನಂತೆ ಮತ್ತೊಬ್ಬನಿರುವುದಿಲ್ಲ ಅಥವಾ ಗುಣಸ್ವಭಾವವೂ ಬೇರೆಯದೇ ಆಗಿರುತ್ತದೆ.  ಇಂತಹ ಒಂದು ಸಂದರ್ಭದಲ್ಲಿಯೇ ನನಗೊಂದು ಎಸ್.ಎಂ.ಎಸ್. ನನ್ನ ಸ್ನೇಹಿತೆಯಿಂದ ಬಂದಿತ್ತು. ಅದೇನೆಂದರೆ,

People laugh, because I am different.
I laugh because they all are same!
That's called attitude.
Life is Yours, You live it
in Your Own Way


ಸದಾ ಕಾಲಕ್ಕೂ, ಸಕಲರಿಗೂ ಅನ್ವಯಿಸುತ್ತದೆಯಲ್ಲವೇ? ಯೋಚಿಸಿ ನೋಡಿ..

ಚಂದ್ರಶೇಖರ ಬಿ.ಎಚ್.

*That is That: Essays About True Nature BY NIRMALA Endless Satsang Press, www.endless-satsang.com 

3 ಕಾಮೆಂಟ್‌ಗಳು:

AntharangadaMaathugalu ಹೇಳಿದರು...

ಒಳ್ಳೆಯ ಮಾತುಗಳು ಚಂದ್ರೂ... ನಿಜ ನಾವೂ ನಾವೇ..!! :-) ಬಹಳ ದಿನಗಳ ನಂತರ ಬರೆದಿದ್ದೀರಿ....

ಶ್ಯಾಮಲ

V.R.BHAT ಹೇಳಿದರು...

ನಮ್ಮಲ್ಲಿ ಒಂದು ಗಾದೆ ಇದೆ, ’ನಮಗೆ ನಾವೇ ಗೋಡೆಗೆ ಮಣ್ಣೇ’ ಎಂದು, ಅದರರ್ಥ ನಮ್ಮ ಸಹಾಯಕ್ಕೆ ನಾವೇ ಹೊರತು ಬೇರೆಯವರಿಂದ ಯಾವುದನ್ನೂ ನಿರೀಕ್ಷಿಸಬಾರದು; ಗೋಡೆಗೆ [ಇಂದು ಸಿಮೆಂಟು,ಇಟ್ಟಿಗೆ ಇವೆಲ್ಲಾ ಮಣ್ಣಿನ ರೂಪಾಂತರಗಳು] ಮಣ್ಣೇ ಸಮಂಜಸ ಎಂಬುದು. ನಾವು ನಾವೇ ಆಗಿರುತ್ತೇವೆ ಹೊರತು ಬೇರೆಯವರ ರೀತಿಯೇ ನಾವು ಎನ್ನುವಂತಿರುವುದು ಸರಿಯಲ್ಲ, ಅದನ್ನೇ ತಾವೂ ಪ್ರತಿಪಾದಿಸಿದ್ದೀರಿ ಎಂದುಕೊಳ್ಳುತ್ತೇನೆ.

ಸಾಗರದಾಚೆಯ ಇಂಚರ ಹೇಳಿದರು...

That is that only sir,
sundara kalpane alva