ಶುಕ್ರವಾರ, ಸೆಪ್ಟೆಂಬರ್ 9, 2011

ಶಿಕ್ಷಕರ ಮತ್ತು ಸಹಪಾಠಿಗಳ ನೆನಪಿನಲ್ಲಿ...

Old messages are deleted when new messages come to inbox. Old friends are ignored when new one comes.  Never do this mistake because some messages can be created but not the same old friend.

ಈ ಮೇಲಿನ ಸಂದೇಶವನ್ನು ನನ್ನ ಸಹೋದ್ಯೋಗಿಯೊಬ್ಬರ ಮಗಳಿಂದ ಬಂದಿತ್ತು.  ಓದುತ್ತಾ ಹೋದಂತೆ, ಈ ಮೇಲಿನ ಮಾತಿನಲ್ಲಿ ಎಂತಹ ನಿಜ ಅಡಗಿದೆ ಎನಿಸಿತು.  ಎಷ್ಟೋ ಬಾರಿ ಶಾಲಾ ಸ್ನೇಹಿತರು, ಅಥವಾ ಅಕ್ಕಪಕ್ಕದ ಮನೆಯ ಮಿತ್ರರು (ಬಾಲ್ಯದ ಜೀವನದಲ್ಲಿ) ಇವರೆಲ್ಲರೊಂದಿಗೆ ಬೆರೆತು ಓದಿರುತ್ತೇವೆ, ಆಡಿರುತ್ತೇವೆ.  ಹಾಗೆಯೇ ಕಾಲ ಕಳೆಯುತ್ತಿದ್ದಂತೆ, ಶಾಲಾ ವಿದ್ಯಾಭ್ಯಾಸ ಮುಗಿದು, ಕಾಲೇಜು, ಅಲ್ಲಿ ಹೊಸ ಮಿತ್ರರು, ನಂತರ ಉದ್ಯೋಗ, ಉದ್ಯೋಗದಲ್ಲಿ ಸಹೋದ್ಯೋಗಿಗಳ ಸ್ನೇಹ, ಆನಂತರ ಅವರಿಂದಲೂ ದೂರವಾಗುತ್ತಾ (ಆಧುನಿಕ ತಂತ್ರಜ್ಞಾನದ ಫಲ) ಫೇಸ್‌ಬುಕ್, ಆರ್ಕುಟ್, ಯಾಹೂ!ಗ್ರೂಪ್‌, ಟ್ಟಿಟ್ಟರ್‌ ಹೀಗೆ ಹೊಸ ಹೊಸ ಸ್ನೇಹ ಸಂಬಂಧಗಳು ಬೆಳೆಯುತ್ತಾ ಹೋಗುತ್ತಿದೆ/ಹೋಗಿರುತ್ತದೆ.  ಎಲ್ಲೋ ಕೆಲವು ಮಂದಿಗೆ ಬಾಲ್ಯಮಿತ್ರರು ಮತ್ತೆ ಸಿಕ್ಕಿರುತ್ತಾರೆ ಅಥವಾ ಅವರೊಡನೆ ಇನ್ನೂ ಸಹ ಸ್ನೇಹಸಂಪರ್ಕ ಇಟ್ಟುಕೊಂಡಿರುತ್ತಾರೆ.  ಆದರೂ, ಎಲ್ಲೋ ಒಂದು ಕಡೆ ಅವರನ್ನೆಲ್ಲ ದೂರ ಮಾಡಿಕೊಂಡಿರುತ್ತೇವೆ (ಉದ್ಯೋಗ ವಲಸೆ, ಪರದೇಶವಾಸ ಅಥವಾ ಇನ್ನೂ ಅನೇಕ ಕಾರಣಗಳು).  ಆದರೂ, ಮೇಲಿನ ವಾಕ್ಯವನ್ನು ಮತ್ತೆ ಮತ್ತೆ ಓದಿದಾಗ... ಏನನಿಸಬಹುದು??? 

ನನಗಂತೂ ಹೌದು, ಕೆಲವು ಬಾಲ್ಯ ಸ್ನೇಹಿತರು ನೆನಪಿನಲ್ಲಿದ್ದಾರೆ, ಕೆಲವರ ಭೇಟಿ ಆಗುತ್ತಿರುತ್ತದೆ.  ಇನ್ನೂ ಕೆಲವರು ವಿದೇಶದಲ್ಲಿದ್ದಾರೆ.  ಆದರೆ ಸಂಪರ್ಕವಿಲ್ಲದಿದ್ದರೂ ಹೇಗೋ ಒಮ್ಮೆಯಾದರೂ ಭೇಟಿ ಮಾಡುವ ಅವಕಾಶ ಒದಗಿಬಂದಾಗ ಸಂತಸವಾಗುತ್ತದೆ....

ಮೊನ್ನೆ ಶಿಕ್ಷಕರ ದಿನಾಚರಣೆಗೆ ನಾನು ಓದಿದ್ದ ಶಾಲಾ ಶಿಕ್ಷಕರಲ್ಲಿ ಕೆಲವರನ್ನಾದರೂ ಭೇಟಿ ಮಾಡಬೇಕೆಂಬ ಆಶಯವಿತ್ತು.  ಆದರೆ, ಕಾರಣಾಂತರಗಳಿಂದ ಆಗಲಿಲ್ಲ. ಭಾನುವಾರವೇ ಹೋಗುವ ಇಚ್ಛೆಯಿದ್ದರೂ, ಊರಿನಲ್ಲಿರಿಲಿಲ್ಲವಾಗಿ ಭೇಟಿ ಮಾಡಲು ಆಗಲಿಲ್ಲ.  ಕಡೆಗೆ ದೂರವಾಣಿ ಮೂಲಕ ಪ್ರಯತ್ನಿಸಿದೆ.  ಒಬ್ಬರ ಫೋನ್‌ ನಂಬರ್‌ ಚಾಲ್ತಿಯಲ್ಲಿಲ್ಲ.  ಮತ್ತೊಬ್ಬರು ಉತ್ತರಿಸುತ್ತಿಲ್ಲ.  ಕೊನೆಗೂ ಸಂಜೆ ಶಾಲಾ ಶಿಕ್ಷಕಿ ಫೋನಿನಲ್ಲಿ ಸಿಕ್ಕಿದಾಗ.... ಅದೆಷ್ಟೋ ಖುಷಿಯಾಯಿತು.  ಅವರಿಗೆ ಶುಭಾಶಯ ಹೇಳಿ, ಆರೋಗ್ಯ-ಉದ್ಯೋಗ ವಿಚಾರ ವಿನಿಮಯ ಮಾಡಿಕೊಂಡಿದ್ದಾಯಿತು.  ಆಗ, ನಮ್ಮೊಡನಿದ್ದ ವಿದ್ಯಾರ್ಥಿಗಳ ಬಗ್ಗೆಯೂ ಕೇಳಿದರು. ನನಗೆ ತಿಳಿದವರ ವಿಷಯ ಹೇಳಿದೆ. ಅದೊಂದು ಅದ್ಭುತ ಕ್ಷಣವಾಗಿತ್ತು.  ಏಕೆಂದರೆ, ಸುಮಾರು ಒಂದು ವರ್ಷದಿಂದ ನಾನು ಓದಿದ್ದ ಶಾಲೆಗೆ ಭೇಟಿಕೊಡಲು ಆಗಿರಲಿಲ್ಲ.
ಈ ಮೇಲಿನ ವಾಕ್ಯವನ್ನು ಓದಿದಾಗ ಇವೆಲ್ಲ ನೆನಪಾಯಿತು....

ಶಿಕ್ಷಕರ ಮತ್ತು ಸಹಪಾಠಿಗಳ ನೆನಪಿನಲ್ಲಿ...

ಚಂದ್ರಶೇಖರ

+++++++++++++++++++++++++++++++++
++++++++++++++++++++++++++++++++++

5 ಕಾಮೆಂಟ್‌ಗಳು:

AntharangadaMaathugalu ಹೇಳಿದರು...

ಹೌದು ಚಂದ್ರೂ... ನಮ್ಮ ಎಲ್ಲಾ ಗುರುಗಳನ್ನೂ ನಾವು ನೆನಪಿಸಿಕೊಳ್ಳಲೇ ಬೇಕು. ಒಳ್ಳೆಯ ವಿಚಾರ, ಸಂದರ್ಭೋಚಿತವಾಗಿದೆ.


ಶ್ಯಾಮಲ

ಮನದಾಳದಿಂದ............ ಹೇಳಿದರು...

ಅದಕ್ಕೆ ದೊಡ್ಡವರು ಹೇಳಿದ್ದಿರಬೇಕು 'ನೆನಪುಗಳ ಮಾತು ಮಧುರ' ಅಂತ, ಅಲ್ವಾ ಸರ್.
ಒಳ್ಳೆಯ ಆಲೋಚನೆ.

ಕ್ಷಣ... ಚಿಂತನೆ... ಹೇಳಿದರು...

ಶ್ಯಾಮಲಾ,
ಮನದಾಳದಿಂದ....
ಬರಹ ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು.

prabhamani nagaraja ಹೇಳಿದರು...

ನಿಮ್ಮ ಶಿಕ್ಷಕರೊ೦ದಿಗಿನ ಬಾ೦ಧವ್ಯವನ್ನು ಉಳಿಸಿಕೊಳ್ಳಬೇಕೆ೦ಬ ನಿಮ್ಮ ಅಭಿಲಾಷೆ ತಿಳಿದು ಸ೦ತಸವಾಯ್ತು. ನನ್ನ ಶಿಕ್ಷಕಿಯೋಬ್ಬರನ್ನು ಕಾಣಬೆಕೆ೦ದು ನಾನು ಬಹಳದಿನ ಕನಸಿದ್ದೆ. ಇನ್ನೂ ಸಾಧ್ಯವಾಗಿಲ್ಲ! ಧನ್ಯವಾದಗಳು.

ದೀಪಸ್ಮಿತಾ ಹೇಳಿದರು...

ಗುರುವನ್ನು ದೇವರ ಸಮಾನ ಮಾಡಿರುವುದು ನಮ್ಮ ಸಂಸ್ಕೃತಿ ಮಾತ್ರ. ಹಿಂದಿನವರಿಗೆ ವಿದ್ಯೆಯೆ ಮಹತ್ವ ಗೊತ್ತಿತ್ತು