ಸೋಮವಾರ, ಜುಲೈ 6, 2009

ಸೋದರಿ..ಗೆ...

ಸೋದರಿ..ಗೆ...
ನಗುತಿರು, ನಗುತಿರು ನನ್ನ ಸೋದರಿ
ತುಂಬಿರಲಿ ಸಂತಸ ಸದಾ ನಿನ್ನಲಿ
ಇದುವೆ ನನ್ನ ಹಾರೈಕೆ - ಸೋದರಿ
ಕನಸೆನ್ನುವ ಮೊಗ್ಗೆಲ್ಲವೂ ಹೂವಾಗಿ ಅರಳಲಿ
ಸಂತಸ ತುಂಬಿದ ಮನೆ-ಮನ ನಿನ್ನದಾಗಲಿ
ನೋವೆಲ್ಲವೂ ತಿಳಿನೀರ ನದಿಯಾಗಿ ಹರಿದುಹೋಗಲಿ

ಬಾಲರವಿಯ ಕಿರಣಕಾಂತಿ ಕಣ್ಣಿನೊಳು ನೆಲೆಸಲಿ
ಬೀಸಿಬರುವ ತಂಗಾಳಿ ಮಾತಿನೊಳೊಂದಾಗಲಿ
ಚಿಮ್ಮುವಾ ಕಾರಂಜಿಯಂತೆ ಉತ್ಸಾಹ-ಉಲ್ಲಾಸ ಚಿಮ್ಮುತಿರಲಿ

ಇರಲಿ ಎಂದೆಂದೂ ಹೀಗೆ ಪ್ರತಿಕ್ಷಣ, ಪ್ರತಿದಿನ
ಎನುತ ಹಾರೈಸಲಿ ನನ್ನ ಮನ, ಸೋದರಿ
-ಚಂದ್ರಶೇಖರ ಬಿ.ಎಚ್.೨೬೫೯೨

4 ಕಾಮೆಂಟ್‌ಗಳು:

shivu.k ಹೇಳಿದರು...

ಸಹೋದರಿಯನ್ನು ಹಾರೈಸುವ ಕವನ ತುಂಬಾ ಚೆನ್ನಾಗಿದೆ ಸರ್..ಹೀಗೆ ಮುಂದುವರಿಯಲಿ..

Ittigecement ಹೇಳಿದರು...

ಚಂದ್ರಶೇಖರ್..

ಬಹಳ ಸೊಗಸಾಗಿದೆ...
ದೂರದ ದೆಹಲಿಯಲ್ಲಿರುವ ನನ್ನ ತಂಗಿ ನೆನಪಾದಳು...

ಪ್ರತಿ ಸಾಲಿನಲ್ಲಿ ವಾತ್ಸ್ಯಲ್ಯ, ಮಮತೆ ತುಂಬಿದೆ...

ಅಭಿನಂದನೆಗಳು...

ಕ್ಷಣ... ಚಿಂತನೆ... ಹೇಳಿದರು...

ಶಿವು ಸರ್‍ ಕವನವನ್ನು ಮೆಚ್ಚಿಕೊಂಡಿದ್ದಕ್ಕೆ ಧನ್ಯವಾದಗಳು.

ಕ್ಷಣ... ಚಿಂತನೆ... ಹೇಳಿದರು...

ಪ್ರಕಾಶ್ ಸರ್‍, ಈ ಒಂದು ಕವನವು ದೂರದ ದೆಹಲಿಯಲ್ಲಿರುವ ನಿಮ್ಮ ಸೋದರಿಯನ್ನು ನೆನಪಿಸಿತು ಎಂದಿದ್ದೀರಿ. ಅಂತಹ ಒಂದು ಭಾವನಾತ್ಮಕತೆಗೆ ನಾ ಧನ್ಯ ಎಂದು ನಿಮಗೆ ಧನ್ಯವಾದಗಳು.