ಇವೆರಡು ಆಂಗ್ಲ ವಾಕ್ಯಗಳನ್ನು ಓದಿದಾಗ, ನನಗೆ ಅನಿಸಿದ ಒಂದೆರಡು ಯೋಚನೆಗಳನ್ನು ಸಂಯೋಜಿಸಿ ಈ ಪುಟ್ಟ ಪ್ಯಾರಾವನ್ನು ಬರೆಯಲು ಪ್ರೇರಣೆಯಾಯಿತು. ಅದರ ರೂಪವೇ ಈ ಕೆಳಗಿನ ಬರಹ.
++++++++++++++++
ಇದು ನನಗೆ ಮೊದಲೇ ಯೋಚನೆ ಬಂದಿತ್ತು. ಈ ಕೆಲಸವನ್ನು ಹೀಗೆಯೇ ಮಾಡಬೇಕು ಅಂತ ಅನಿಸಿತ್ತು. ಆದರೆ... ಸುಮ್ಮನಾದೆ.
ಬಹುಶ: ಹೀಗೊಂದು ವಾಕ್ಯ ಸಾಮಾನ್ಯವಾಗಿ ಒಬ್ಬರಲ್ಲಾ ಒಬ್ಬರು ಆಡುತ್ತಲೇ ಇರುತ್ತಾರೆ.
ನಮಗೆ ನಾವೇ ಕೆಲವು ಬಾರಿ ಯೋಚನೆಗಳೊಂದಿಗೆ ಯೋಜನೆಗಳನ್ನೂ ಹಾಕಿಕೊಳ್ಳತ್ತೇವೆ. ಆದರೆ, ಮುಂದುವರೆಯುವುದು ಅಥವಾ ಮುಂದುವರೆಸುವಲ್ಲಿ ನಿರ್ಲಕ್ಷ್ಯ ತೋರಿರುತ್ತೇವೆ. ಇವೆಲ್ಲವೂ ನಮ್ಮ ಗಮನಕ್ಕೆ ಬಂದಿದ್ದರೂ ಕೆಲವೊಮ್ಮೆ ಹೆಚ್ಚು ಗಮನಿಸಿರುವುದಿಲ್ಲ. ಇಂತಹ ವಿಚಾರಗಳನ್ನೇ ಕೆಲವರು ಸೀರಿಯಸ್ಸಾಗಿ ಅಥವಾ ಸೀರೀಸ್ ಆಗಿ ತೆಗೆದುಕೊಂಡು `ನಮಗರಿವಿಲ್ಲದಂತೆಯೇ' ನಾವಂದು ಯೋಚಿಸಿದ್ದ/ಯೋಜಿಸಿದ್ದ ವಿಚಾರಗಳಲ್ಲಿ ಯಶಸ್ಸನ್ನು ಪಡೆಯುತ್ತ ಮುಂದೆ ಸಾಗಿರುತ್ತಾರೆ. ಇವುಗಳೂ ಸಹ ಗಮನಕ್ಕೆ ಬರುವುದು ಅಪರೂಪವಾಗಿರುತ್ತದೆ. ಆಗ ನಮಗನ್ನಿಸುವುದು `ನಾನಂದುಕೊಂಡಿದ್ದನ್ನು ನನಗೇ ಗೊತ್ತಿಲ್ಲದಂತೆ ಬೇರೆಯವರು ಉಪಯೋಗಕ್ಕೆ ಪಡಕೊಂಡರು' ಎಂದು.
ಇಂತಹ ವಿಚಾರ/ಯೋಚನೆಗಳನ್ನು ಸೂಕ್ಷ್ಮವಾಗಿ ಪ್ರಸಿದ್ಧರು ಹೀಗೆ ಹೇಳಿದ್ದಾರೆ. "In every work of genius we recognize our own rejected thoughts; they come back to us with a certain alienated majesty". Ralph Waldo Emerson
ಇಂತಹ ಸಂದರ್ಭಗಳಲ್ಲಿ ಕೇವಲ ಯೋಚನೆ/ಯೋಜನೆಗಳಿದ್ದರೆ ಸಾಲದು. ಅಂತಹ ಯೋಜನೆ/ಯೋಚನೆಗಳು ನಿಜವಾಗಲೂ ಕಾರ್ಯಗತವಾಗದ ಹೊರತು ಯಾವುದೇ ಕೆಲಸವೂ ಸಹ ಆಗುವುದಿಲ್ಲ. ಕೇವಲ ಕಲ್ಪನೆಗಳಲ್ಲಿಯೋ, ಕನಸಿನಲ್ಲಿಯೋ ಕಾರ್ಯಗತವಾದಂತೆ ಭಾಸವಾಗುವುದು. ಅದಕ್ಕೆ ಹೀಗೊಬ್ಬರ ಕಿವಿಮಾತು: Nothing is really work unless you would rather be doing something else. - James M. Barrie.
+++++++++++++++
ಚಂದ್ರಶೇಖರ ಬಿ.ಎಚ್.೨೨ ಜುಲೈ ೨೦೦೯
Do not look back upon what has been done. Go ahead! -Swamy ವಿವೇಕಾನಂದ
LEARN, MASTER AND ACHIEVE!!!-Bruce Lee
2 ಕಾಮೆಂಟ್‌ಗಳು:
ಕ್ಷಣ ಚಿಂತನೆ ಸರ್,
ನಮಗನ್ನಿಸಿದನ್ನು ನಾವು ಮೊದಲು ಮಾಡಿಬಿಡಬೇಕು. ಅದಕ್ಕೆ ಯಾವುದೆ ನೆಪಗಳಿಲ್ಲ. ನಾವು ಮಾಡದೇ ಅದೇ ವಿಚಾರವನ್ನು ಬೇರೆಯವರು ಮಾಡಿದರೆ ಅವರನ್ನು ಮೆಚ್ಚಬೇಕೆ ಹೊರತು ಅಂಗಿರಬಾರದು ಅಲ್ವಾ ಸರ್,
ಇಷ್ಟಕ್ಕೂ ಒಂದೇ ಅಲೋಚನೆಗಳು ಅನೇಕರಿಗೆ ಬರುತ್ತವೆ ಅದನ್ನು ಮೊದಲು ಕಾರ್ಯಗತಗೊಳಿಸಿದವನು ಗ್ರೇಟ್...
ಸರ್, ಒಳ್ಳೆಯ ಬರಹ...
ಶಿವು ಸರ್, ನಿಮ್ಮ ಮಾತುಗಳು ಸತ್ಯಕ್ಕೆ ಸನಿಹ. ಏಕೆಂದರೆ, ಆಲೋಚನೆಗಳ ಪ್ರಭಾವವೇ ಹಾಗೆ. ಲೇಖನ ಮೆಚ್ಚಿದ್ದಕ್ಕೆ ಧನ್ಯವಾದಗಳು.
ಕಾಮೆಂಟ್ ಪೋಸ್ಟ್ ಮಾಡಿ