ಸಮಯವೆಲ್ಲಿ? ನಮಗೆ...
ಏನಿದೇನಿದು ಜೀವನ! ಎಷ್ಟು ಜಾಗೃತವೋ?
ಸಮಯವಿಲ್ಲ ನಮಗೆ, ನಿಂತು ಅವಲೋಕಿಸಲು
ಆಡು-ಆಕಳಿನಂತೆ ತಂಪೆಳಲಿ ನಿಂತು
ನೆನಪುಗಳ ಮೆಲುಕಲೂ ಇಲ್ಲ, ಇಲ್ಲ ಸಮಯ
ಸಮಯವಿಲ್ಲ ನಮಗೆ, ನಿಂತು ಅವಲೋಕಿಸಲು
ಆಡು-ಆಕಳಿನಂತೆ ತಂಪೆಳಲಿ ನಿಂತು
ನೆನಪುಗಳ ಮೆಲುಕಲೂ ಇಲ್ಲ, ಇಲ್ಲ ಸಮಯ
ಇಲ್ಲವಲ್ಲ, ತಾಯಿ ನಿಸರ್ಗದೇವಿಯನು ಕಾಣಲು,
ಅವಳ ಮುಗುಳು ನಗೆಯ ಸಿರಿ ಸವಿಯಲು
ಅವಳ ಹೆಜ್ಜೆ-ಗೆಜ್ಜೆ ಧ್ವನಿಯ ಆಲಿಸಲೂ
ಇಲ್ಲವಲ್ಲಾ, ನಮಗೆ ಸಮಯ, ನಿಂತು ಆನಂದಿಸಲು
ಅವಳ ಮುಗುಳು ನಗೆಯ ಸಿರಿ ಸವಿಯಲು
ಅವಳ ಹೆಜ್ಜೆ-ಗೆಜ್ಜೆ ಧ್ವನಿಯ ಆಲಿಸಲೂ
ಇಲ್ಲವಲ್ಲಾ, ನಮಗೆ ಸಮಯ, ನಿಂತು ಆನಂದಿಸಲು
ಕಳೆದು ಹೋಗುವುದಲ್ಲಾ ಈ ಸಮಯ ನಿರಂತರ,
ಬರಿಯ ಬಡತನದ ಜೀವನ, ತಾ ಬಿಂದುವಾಗಿ
ಜಗವ ಸುತ್ತಿಸುಳಿದು ಈ ಸಮಯ, ಆಯಿತಲ್ಲಾ -
ಇದೆಂಥಾ ಜೀವನಾ? ಎಷ್ಟು ಜಾಗೃತವೋ ?
ಅಂತೂ ಸಮಯವಿಲ್ಲ ನಮಗೆ, ನಿಂತು ಅವಲೋಕಿಸಲು,
ಅಣಕಿಸಲು, ಬರಿಯ ಬಡತನದ - ಬಡತನದ ಜೀವನ
[W.H. Davis ಅವರ What is this life...ಕವನದ ಅನುವಾದ]
- ಚಂದ್ರಶೇಖರ ಬಿ.ಎಚ್.೩೧೦೫೨೦೦೧
- ಚಂದ್ರಶೇಖರ ಬಿ.ಎಚ್.೩೧೦೫೨೦೦೧
2 ಕಾಮೆಂಟ್‌ಗಳು:
ಚಂದ್ರು ಸರ್ ನೀವು ಇಷ್ಟು ಚೆನ್ನಾಗಿ ಕವನಗಳನ್ನು ಅನುವಾದ ಮಾಡುತ್ತೀರಿ ಎಂದು ನನಗೆ ತಿಳಿದಿರಲಿಲ್ಲ, ಹೌದು ಇಂದಿನ ಕಾಲದಲ್ಲಿ ಯಾರು ತಮ್ಮ ಸಮಯವನ್ನು ವ್ಯರ್ಥ ಮಾಡಲು ಇಚ್ಚಿಸುವುದಿಲ್ಲ, ಈ ಜಗ ಪೂರ್ತಿ ಹಣಮಯವಾಗಿದೆ, ಎಲ್ಲರಿಗೂ ತಮಗೆ ಸಿಗುವ ಲಾಭದ ಬಗ್ಗೆಯೇ ಚಿಂತೆ.........
savitha, nimma anisike nija. janaralli swaartha, laabhada uddeshave hecchaagi kandubaruttide. anisikegalige dhanyavaadagaLu.
ಕಾಮೆಂಟ್ ಪೋಸ್ಟ್ ಮಾಡಿ