ಮಂಗಳವಾರ, ಮಾರ್ಚ್ 24, 2009

ಈ ಸಂಭಾಷಣೆ...

ಆ ದಿನ ಕ್ಯಾಮೆರಾ ಹಿಡಿದು ಮನೆ ಮತ್ತು ಕಚೇರಿಯ ಕ್ಯಾಂಪಸ್ಸಿನಲ್ಲಿ ಸಂಜೆ ಸುತ್ತಾಡುತ್ತಿದ್ದೆ.
ಹಸಿರು ತುಂಬಿದ ಮರದಾಳದಿಂದ ಹಕ್ಕಿಗಳ ಕೂಗು. ದಿನವೂ ಆಲಿಸುತ್ತಿದ್ದ ಅದೇ ಗಿಲಿವಿನ್ದೀನ್ ಕೂಗು. ಹಸಿರು ಎಲೆಗಳ ನಡುವೆ ಈ ಗಿಳಿಗಳು ಕಾಣುತ್ತಿಲ್ಲ, ಆದರೆ ಸದ್ದು ಮಾತ್ರ ಕೇಳುತ್ತಿದೆ.
ಅಲ್ಲಿಯೇ ಮತ್ತೆ ಸುತ್ತಾಡುತ್ತಿದ್ದಾಗ ನನ್ನ ಕಣ್ಣಿಗೆ ಈ ದೃಶ್ಯಾವಳಿ ಬಿದ್ದಿತು. ಸರಿ, ಕೈಯಲ್ಲಿಯೇ ಕ್ಯಾಮೆರಾ ಇತ್ತಲ್ಲ! ಒಂದೆರಡು ಸ್ನ್ಯಾಪ್‌ ಕ್ಲಿಕ್ಕಿಸಿದೆ.

ಅಲ್ಲಿ ೩ ಗಿಳಿಗಳ ಸಂಭಾಷಣೆ. ಆಗ ನೆನಪಾಗಿದ್ದು `ಈ ಸಂಭಾಷಣೆ, ನಮ್ಮ ಈ ಪ್ರೇಮ ಸಂಭಾಷಣೆ, ಅತಿ ನವ್ಯ ರಸ ಕಾವ್ಯ' ಗೀತೆ.
ಆದರೆ ಅಲ್ಲಿರುವುದು ೩ ಗಿಳಿಗಳು. ಆ ಹಾಡಿಗೂ ಈ ಗಿಳಿಗಳಿಗೂ ಸಂಬಂಧವಿರದು ಎನಿಸಿತು. ಹಾಗೆಯೇ ಚಿಂತಿಸುತ್ತಿದ್ದಾಗ "ಯಾರು ಹಿತವರು ಈ ೩ ವರೊಳಗೆ " ಎಂದು ದಾಸರಪದ ನೆನಪಾದರೆ...
ಆ ೩ ವರಲ್ಲಿ (ಗಿಳಿಗಳಲ್ಲಿ) ಒಂದು ನಾ ಹೋಗಿಬರುವೆ ಎಂದು ಹಾರಿಹೋಗಬೇಕೆ?
ಆಗ ನಾ ಹಾಡಲು ನೀ ಹಾರಿಹೋಗಬೇಕು (ನಾ ಹಾಡಲು ನೀವು ಹಾಡಬೇಕು ಬದಲಾಗಿ)ಎಂದು ಯೋಚಿಸಿರಬೇಕೆ ಈ ಇಬ್ಬರಲ್ಲಿ ಒಬ್ಬರು??!!
ಹೀಗೆ ಒಂದೆರಡು ನಿಮಿಷಗಳ ಈ ಸಂಭಾಷಣೆ ಒಂದು ಗಿಳಿಯು ಹಾರಿಹೋಗುವಲ್ಲಿ ಮುಕ್ತಾಯವಾಯಿತು.
ಗಿಳಿವಿಂಡಿನ ಬಗೆಗಿನ ಹಾಡನ್ನು http://puttanaputa.blogspot.com/2008/08/blog-post_2044.html ಈ ಪುಟ್ಟನಪುಟದಲ್ಲಿ ಓದಿದರೆ ನಿಮಗೇನು ಅನಿಸಬಹುದು?

6 ಕಾಮೆಂಟ್‌ಗಳು:

ಸಿಮೆಂಟು ಮರಳಿನ ಮಧ್ಯೆ ಹೇಳಿದರು...

ಕ್ಷಣ ಚಿಂತನೆ....

ಇತ್ತೀಚೆಗೆ ನೀವು ಬರವಣಿಗೆಯಲ್ಲಿ ಹಿಡಿತ ಸಾಧಿಸುತ್ತಿರುವಿರಿ...
ಹೀಗೆ ಇನ್ನಷ್ಟು ಬರೆಯಿರಿ...
ಇಷ್ಟವಾಗುತ್ತದೆ...

ಚಿತ್ರಲೇಖನಕ್ಕಾಗಿ
ಅಭಿನಂದನೆಗಳು...

ಕ್ಷಣ... ಚಿಂತನೆ... Thinking a While.. ಹೇಳಿದರು...

ಪ್ರಕಾಶ್ ಸರ್‍, ಇವೆಲ್ಲ ನಿಮ್ಮೀ ಪ್ರೋತ್ಸಾಹದಿಂದಲೇ ಸಾಧ್ಯವಾಗುತ್ತಿದೆ ಅನಿಸಿದೆ. ಪ್ರತಿಕ್ರಿಯೆಗಳಿಗೆ ಧನ್ಯವಾದಗಳು.

ತೇಜಸ್ವಿನಿ ಹೆಗಡೆ- ಹೇಳಿದರು...

ತುಂಬಾ ಮುದ್ದಾಗಿವೆ ಗಿಣಿಗಳು..ಜೊತೆಗೆ ಸುಂದರ ಹಾಡುಗಳ ನೆನಪನ್ನೂ ತರಿಸಿದ್ದೀರಿ.. ಧನ್ಯವಾದಗಳು.

ಕ್ಷಣ... ಚಿಂತನೆ... Thinking a While.. ಹೇಳಿದರು...

ಮೇಡಂ, ಧನ್ಯವಾದಗಳು.

ಕ್ಷಣ... ಚಿಂತನೆ... Thinking a While.. ಹೇಳಿದರು...

ಈ ಸಂಭಾಷಣೆಯನ್ನು ಮತ್ತಷ್ಟು ಮುಂದುವರೆಸಬಹುದಿತ್ತು ಎಂದು ಈಗ ಅನಿಸುತ್ತಿದೆ. ಮತ್ತೊಮ್ಮೆ ಯಾವಾಗಲಾದರೂ ಮುಂದುವರೆಸುತ್ತೇನೆ.

ಪ್ರತಿಕ್ರಿಯೆ ನೀಡಿದವರೆಲ್ಲರಿಗೂ ತುಂಬಾ ಥ್ಯಾಂಕ್ಸ್‌.

shivu ಹೇಳಿದರು...

ಸರ್,

ಫೋಟೋಗೆ ತಕ್ಕ ಸಂಭಾಷಣೆ...ಚೆನ್ನಾಗಿದೆ...ಇಂಥದ್ದು ಇನ್ನಷ್ಟು ಕೊಡಿ...
ಧನ್ಯವಾದಗಳು..