ಶನಿವಾರ, ಮಾರ್ಚ್ 28, 2009

ಎಲ್ಲೆಲ್ಲು ಸೌಂದರ್ಯವೇ... ಎಲ್ಲೆಲ್ಲು ಸಂಗೀತವೇ...

ಎಲ್ಲೆಲ್ಲು ಸೌಂದರ್ಯವೇ... ಎಲ್ಲೆಲ್ಲು ಸಂಗೀತವೇ...
ಹೌದು. ಚರ-ಅಚರಗಳೆಲ್ಲದರಲ್ಲಿಯೂ ಒಂದಲ್ಲಾ ಒಂದು ಸುಂದರತೆ, ಸುಮಧುರ ಧ್ವನಿಯನ್ನು ಕಾಣ/ಕೇಳಬಹುದು. ನೋಡುವ ಕಣ್ಣೋಟದಲ್ಲಿ ಎಲ್ಲ ಚೆಂದ ಅಡಗಿದೆ. ಅದನ್ನು ಕಾಣುವ ಕಣ್ಣುಗಳು ಮಾತ್ರ ತಮ್ಮಷ್ಟಕ್ಕೆ ತಾವೇ ಸೌಂದರ್ಯವನ್ನು ಆಸ್ವಾದಿಸುತ್ತವೆ. ಕರ್ಣಗಳು ಗೀತಗಾಯನವನ್ನು ಕೇಳಿ ಆನಂದಿಸುತ್ತವೆ. ಪ್ರಕೃತಿಯಲ್ಲಿ, ಪ್ರಾಣಿ-ಪಕ್ಷಿಗಳಲ್ಲಿಯೂ, ಮಾನವನಲ್ಲಿಯೂ ಈ ಸೌಂದರ್ಯಪ್ರಜ್ಞೆಯನ್ನು ಗುರುತಿಸುವ ಶಕ್ತಿ ಕಣ್ಣುಗಳು ಮಾತ್ರ ಕಡಿಮೆಯಿರಬಹುದೇನೋ ಎಂದು ಒಮ್ಮೊಮ್ಮೆ ಅನಿಸಬಹುದು. ಕಾರಣ: ಕಂಫ್ಯೂಶಿಯಸ್‌ನ ಈ ಮುಂದಿನ ಮಾತುಗಳನ್ನು ಅರ್ಥೈಸಿಕೊಂಡರೆ ಹೀಗನ್ನಿಸಬಹುದು ಅಥವಾ ಅನಿಸದಿರಲೂ ಬಹುದು. ಅದೇ ಆಂಗ್ಲ ತರ್ಜುಮೆಯು "Everything has its beauty but not everyone sees it.- ಈ ರೀತಿಯಿದೆ. ನೀವೇನಂತೀರಿ???

3 ಕಾಮೆಂಟ್‌ಗಳು:

shivu.k ಹೇಳಿದರು...

ಫೋಟೊಗಳು ಚೆನ್ನಾಗಿವೆ...

Ittigecement ಹೇಳಿದರು...

ಕ್ಷಣ ಚಿಂತನೆ....

ಕೇಳುವ ಕಿವಿಯಿರಲು..
ನೋಡುವ ಕಣ್ಣಿರಲು...

ಮೌನವೂ ಸಂಗೀತವಾಗುವದು...!

ತುಂಬಾ ಚೆನ್ನಾಗಿದೆ..
ಫೋಟೊಗಳು..
ಬರವಣಿಗೆ...

ಇಷ್ಟವಾಯಿತು...

ಧನ್ಯವಾದಗಳು...

ಕ್ಷಣ... ಚಿಂತನೆ... ಹೇಳಿದರು...

ಶಿವು ಮತ್ತು ಪ್ರಕಾಶ್ ಅವರೆ, ಧನ್ಯವಾದಗಳು.
ನಾನಿನ್ನೂ ಫೋಟೋಗ್ರಫಿಯಲ್ಲಿ ಕೈಪಳಗಿಸಬೇಕಿದೆ. ನಿಮ್ಮಗಳ ಪ್ರೋತ್ಸಾಹಗಳಿಗೆ ಮತ್ತಷ್ಟು ಉತ್ತಮ ಚಿತ್ರಗಳನ್ನು ನೀಡುವ ಎನಿಸುತ್ತದೆ.

ಮತ್ತೊಮ್ಮೆ ಧನ್ಯವಾದಗಳು.