ತಲೆಯೆತ್ತಿ ನೋಡಿದಾಗ ಕಂಡದ್ದು ಅಡಿಕೆ ಮರ. ಹೌದು. ಅದು ಇಲ್ಲಿದ್ದ ಎಲ್ಲ ಮರಗಳಿಗಿಂತ ಎತ್ತರಕ್ಕೆ ಬೆಳೆದಿದೆ. ಕಾರಣ???
ಸಿಂಪಲ್!
ಯಾರೋ ಹೇಳಿದ ಈ ಮಾತನ್ನು ಅದು ಕೇಳಿರಬೇಕು. ಇಲ್ಲವಾದರೆ, ಅಷ್ಟು ಎತ್ತರ ಬೆಳೆಯಲು ಹೇಗೆ ಸಾಧ್ಯ? ಎನಿಸದಿರದು. ಏಕೆಂದರೆ, ತನ್ನ ಸುತ್ತಮುತ್ತಲಿನ ಮರಗಿಡಗಳೆಲ್ಲ ಕುಳ್ಳಗಿರುವಾಗ ಇದೂ ಸಹ ಹಾಗೆಯೇ ಇರಬೇಕು ಎಂದುಕೊಂಡರೆ ಹೇಗೆ? ಕನಸ ಕಾಣಬೇಕು. ಅದನು ನನಸಾಗಿಸಿಕೊಳ್ಳಬೇಕು ಎಂಬ ಮಹದಾಶೆಯೇ ಹಲವರನ್ನು, ಹಲವದನ್ನು ಎತ್ತರಕ್ಕೆ ಕೊಂಡೊಯುತ್ತದೆ ಎಂಬ ಮಾತನ್ನು ಸಾಮಾನ್ಯವಾಗಿ ಎಲ್ಲ ಕೇಳಿಯೇ ಇರುತ್ತೀರಿ ಅಥವಾ ಇರುತ್ತೇವೆ (!!) ಆದರೆ ಕನಸಿಗೆ ಒಂದು ಗುರಿಯನ್ನು ಇಟ್ಟುಕೊಂಡು, ಅದನ್ನು ಹಿಂಬಾಲಿಸುವಲ್ಲಿ ಎಡವುವವರೇ ಜಾಸ್ತಿ. ಹಾಗೆಯೇ ಇಲ್ಲಿಯೂ ಏಕಾಗಿರಬಾರದು? ಒಂದು ಸಿಂಪಲ್ ಪ್ರಶ್ನೆ ಎದುರಾಗುತ್ತದೆ. ಆದರೆ ಅರ್ಥವ್ಯಾಪ್ತಿ ದೊಡ್ಡದಾಗಿದ್ದರೆ ನಾನೇನು ಮಾಡಲಿ? ಅದಕ್ಕೇ ಈ ಅಡಿಕೆಮರವು Climb as high as you can dream. ಈ ಮಾತನ್ನು ಕೇಳಿರಬೇಕು ಎನಿಸಿದ್ದು.
ಈ ಲೇಖನ ಓದಿದ ತಕ್ಷಣ ನಿಮಗೇನಾದರೂ ಅನಿಸಿದ್ದರೆ ಕ್ಷಣವೆಣಿಸದೇ ಅನಿಸಿಕೆಯನ್ನು ಈ ಪುಟದಲ್ಲಿ ಹನಿಸಿ.
(ಈ ಛಾಯಾಚಿತ್ರವನ್ನು ಸೆರೆಹಿಡಿದದ್ದು ಶ್ರೀ ಕುಕ್ಕೆ ಸುಬ್ರಮಣ್ಯ ಕ್ಷೇತ್ರಕ್ಕೆ ೨೦೦೭ರಲ್ಲಿ ಭೇಟಿ ಇತ್ತಿದ್ದಾಗ)
4 ಕಾಮೆಂಟ್ಗಳು:
ಕ್ಷಣ... ಚಿಂತನೆ...
ಬಹುಷ ನೀವು ಹೇಳಿದ್ದು ಸರಿ ಇರಬಹುದು, ಪ್ರತಿಯೊಂದು ವಸ್ತುವು ಎತ್ತರಕ್ಕೆ ಬೆಳೆದಂತೆ ಗೌರವವೂ ಜಾಸ್ತಿ. ಅದು ಮನುಷ್ಯನಿಗೂ ಹೊರತಲ್ಲ, ಅಡಿಕೆ ಮರದ ಎತ್ತರದ ವಿವರಣೆಗೆ ಧನ್ಯವಾದಗಳು.
ಕ್ಷಣ ಚಿಂತನೆ....
ಕೆಲವರು ಹಾಗೆಯೇ ಇರುತ್ತಾರೆ....
ಅವರು ಇತರರಿಗೆ ಮಾದರಿಯಾಗಿರುತ್ತಾರೆ...
ತಾವೂ ಬೆಳೆಯುತ್ತಾರೆ...
ಇತರರಿಗೂ ಬೆಳೆಯುವಂತೆ ಮಾಡುತ್ತಾರೆ...
ಆಲದ ಮರದಂತಿರುವದಿಲ್ಲ...
ಧನ್ಯವಾದಗಳು...
ಸರ್,
ಅಡಿಕೆ ಮರದ ಚಿತ್ರವನ್ನು ಬಳಸಿಕೊಂಡು ಅದರಿಂದ ಸುಂದರ ಚಿಂತನವನ್ನು ಕೊಟ್ಟಿದ್ದೀರಿ...ನಿಮ್ಮ ಮಾತಿನಂತೆ ಕನಸು ಕಾಣಲು ಹಣ ಕೊಡಬೇಕಿಲ್ಲ...ಕಾಣುವುದೇ ಉಂಟು ದೊಡ್ಡದಾಗಿ ಕಾಣೋಣ...ಕಂಡದ್ದನ್ನು ಕಾರ್ಯಗತ ಗೊಳಿಸೋಣ....
ಚೆನ್ನಾಗಿದೆ..ಧನ್ಯವಾದಗಳು.
nimmelara anisikegalige dhanyavaadagaLu.
ಕಾಮೆಂಟ್ ಪೋಸ್ಟ್ ಮಾಡಿ