ಸೋಮವಾರ, ಮೇ 25, 2009

ನಿಮ್ಮ ನಂಬರ್‌ ಏನು?

ನೆಂಟರು, ಸ್ನೇಹಿತರು ಯಾರೇ ಭೇಟಿಯಾದರೂ ಹಲವಾರು ಪ್ರಶ್ನೆಗಳು ಇದ್ದೇ ಇರುತ್ತವೆ. ಅವು ಯಾವುದು? ಅವುಗಳನ್ನು ಹೀಗೆ ಹೆಸರಿಸಬಹುದು!
ಏನ್ಸಮಾಚಾರ?
ಹೇಗಿದ್ದೀರಿ?
ಎಷ್ಟೊಂದು ದಿವ್ಸ ಆಯ್ತು?!
ಮನೆ ಕಡೆ ಎಲ್ಲ ಹೇಗೆ? ಎಲ್ಲ ಚೆನ್ನಾಗಿದ್ದಾರಾ?
ಇವೆಲ್ಲ ಸಾಮಾನ್ಯ ಪ್ರಶ್ನೆಗಳಾದರೂ ಅದರಲ್ಲಿ ಆತ್ಮೀಯತೆ ಎದ್ದು ಕಾಣುತ್ತಿರುತ್ತದೆ. ಕೆಲವೊಮ್ಮೆ ಅದು ತೋರಿಕೆಯ ಪ್ರಶ್ನೆಯೂ ಆಗಿರಬಹುದು.
*********
ಸರಿ. ಭೇಟಿ, ಮಾತು-ಕತೆ, ಸಂಸಾರ ತಾಪತ್ರಯ ಎಲ್ಲ ಹರಟಿದ, ನೆನಪಿಸಿಕೊಂಡ, ಇವೆಲ್ಲ ಮುಗಿದ ನಂತರ ನಿನ್ನ ನಂಬರು ಕೊಡಿ, ಕೊಡ್ತೀಯಾ/ರಾ? ಇದು ಕಾಮನ್‌ ಪ್ರಶ್ನೆಯಲ್ಲೊಂದು ಪ್ರಶ್ನೆ!
ಓಕೆ. ಇದು ನನ್ನ ನಂಬರು.
ನಿನ್ನ ನಂಬರು? ಮಿಸ್ ಕಾಲ್‌ ಕೊಡು. ಸೇವ್‌ ಮಾಡ್ಕೋತೀನಿ.
ರಿಂಗ್ ಮಾಡು, ಕಟ್ ಮಾಡು, ಓಕೆ? ಹೀಗೆ ಸಾಗುತ್ತಿರುತ್ತದೆ ಸಂಭಾಷಣೆ. ಇವೆಲ್ಲಾ ಈ ಫೋನ್‌ ನಂಬರಿನ ಸಂಭಾಷಣೆಗಳು.
ಇದರಲ್ಲಿ ನಿನ್ ನಂಬರ್‍ ಏನು? ಎಂಬ ಪ್ರಶ್ನೆ ಬಂದಾಗ... ೯೪೪೮೩.... ಎಂದೋ, ೯೮೪೫೬... ಎಂದೋ ಹೇಳುತ್ತಾ ಇರುವುದನ್ನು, ನಾವೇ ಹಾಗೆಲ್ಲ ಹೇಳುತ್ತಿರುತ್ತೇವೆ.
***********
ಮೊನ್ನೆ ಹೀಗೇ ಆಯಿತು. ಬಸ್ಸಿನಲ್ಲಿ ಯಾರೋ ಯಾರಿಗೋ ಫೋನ್‌ ಮಾಡಿದ್ದಾರೆ. ಈ ಕಡೆಯಿಂದ ಇದು ನಿನ್ ನಂಬರ್‌ ಅಲ್ವಾ?
ನಿನ್ ನಂಬರ್‍ ಏನು?
ಆ ಕಡೆಯವ ಕೀಟಲೇ ಸ್ವಭಾವದವನಾಗಿದ್ದರೆ? ಹೀಗಿರಬಹುದಿತ್ತೇ ಸಂಭಾಷಣೆ!
ಇದು ನನ್ನ ಮೊಬೈಲು ನಂಬರು ಅಥವಾ ನನಗೆ ನಂಬರ್‌ ಇಲ್ಲ.
ಅಥವಾ
ಈ ಲೋಕದಲ್ಲಿ ನನ್ನ ನಂಬರ್‍ ಏನೋ ಯಾರಿಗ್ಗೊತ್ತು. ಇಲ್ಲಿ ನಾನು ಎಷ್ಟನೆಯವನೋ? ಕೋಟಿಕೋಟಿ ಜೀವಿಗಳಲ್ಲಿ ನನ್ನದೆಷ್ಟು ಕೋಟಿ ಸಂಖ್ಯೆಯೋ? (ನಶ್ವರ ಜಗತ್ತು ಎಂದುಕೊಳ್ಳುತ್ತಾ)
ಅಥವಾ
ಟೆಲಿಫೋನ್‌ ಡೈರೆಕ್ಟರಿಯಲ್ಲಿ ಇದು ನನ್ನ ನಂಬರು. ನನ್ನ ಹೆಸರಿನ ಮುಂದಿರುವ ನಂಬರು.
ಇನ್ನೂ ಹೀಗೆಯೇ ಯೋಚಿಸುತ್ತಾ ಹೋದರೆ... ರೆ.. ರೆ...
*************
ಹೀಗೆಲ್ಲಾ ನನಗೆ ಯೋಚನೆ ಬಂದಿತ್ತು.
ಇವೆಲ್ಲಾ ಸರಿ. ಇದೀಗ ನಿಮ್ಮ ನಂಬರ್‌ ಏನು?

10 ಕಾಮೆಂಟ್‌ಗಳು:

Prakash Shetty Ulepady ಹೇಳಿದರು...

ನನ್ನ ನಂಬರು - 99588... ತಗಳ್ಳಿ..

ಹೌದು ನನ್ ನಂಬರ್ ಇಟ್ಗೊಂಡು ನೀವೇನು ಮಾಡ್ತೀರ್ರೀ...

ಅಯ್ಯೋ... ಪಬ್ಲಿಕ್ನಲ್ಲಿ ನಂಬರ್ ಕೊಡೋನು ಮೂರ್ಖನಂತೆ ಗೊತ್ತಾ...

ಮೊನ್ನೆ ಹಾಗೆಯೇ ಆಯ್ತು.. ಒಬ್ಳು ಚೆಂದದ ಹುಡುಗಿ ಇನ್ನೊಳತ್ರ ನಂಬರು ಕೇಳಿದ್ಳು.. ಅವಳು ಜೋರಾಗಿಯೇ ಹೇಳಿದ್ಳು.. 98457... ಅಂತ..ಅಲ್ಲಿದ್ದ ಎಲ್ರೂ ಕೇಳಿಸ್ಕೊಂಡ್ರು...

ಆಮೇಲೇನಾಯ್ತೂಂದ್ರೆ....

Ittigecement ಹೇಳಿದರು...

ಕ್ಷಣ ಚಿಂತನೆ....

ಹಾಸ್ಯದಿಂದ ಆಧ್ಯಾತ್ಮದೆಡೆಗೆ ಹೋಗಿದ್ದೀರಿ...
ನಿಜ ನಮ್ಮ ನಂಬರ್ ಯಾವಾಗಲೋ ಗೊತ್ತಿಲ್ಲ....

ಚಿಂತನೆಯ ಬರಹ....

ಬರಹದ ಶೈಲಿ ಇಷ್ಟವಾಯಿತು...

ಕ್ಷಣ... ಚಿಂತನೆ... ಹೇಳಿದರು...

ಶಿವು ಸರ್‍,

ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.

ಕೆಲವರು ಹೀಗೆಯೇ ನೀವು ಹೇಳಿದ ಹಾಗೆ ಮೊಬೈಲ್‌ ದೂರವಾಣಿಯಲ್ಲಿ ಆ ಕಡೆಯವರಿಗೆ `ನಂಬರ್‍' ಕೊಡುವ ರೀತಿ. ಅದರಲ್ಲಿಯೂ ಸಾರ್ವಜನಿಕವಾಗಿ ಈ ರೀತಿ ನೀಡುವ ವಾಡಿಕೆ (????) ನಿಜಕ್ಕೂ ಬೆರಗುಗೊಳಿಸುತ್ತದೆ. ಏಕೆಂದರೆ, ಅದರಿಂದ ನಂಬರ್‌ ಕೊಟ್ಟವರಿಗೆ ಯಾವ್ಯಾವ ಅನುಭವಗಳು, ಅನಾಹುತಗಳು ಆಗುವುದೋ, ಆಗಿದೆಯೋ ಬಲ್ಲವರಾರು? ಇದು ಬೀದಿಯಲ್ಲಿ, ಬಸ್ಸಿನಲ್ಲಿ, ರೈಲಿನಲ್ಲಿ ಕೊಡುವವರಿಗೆ ಒಂದು ಸೂಚನೆ ಕೊಟ್ಟಿದ್ದೀರಿ. ಧನ್ಯವಾದಗಳು.

ಇನ್ನು ನಿಮ್ಮ ನಂಬರ್‍.... ನಿಮಗೆ ನೆನಪಿರಬಹುದು. ಅದಾಗಲೇ ನೀವು ನನಗೆ ಕೊಟ್ಟಿದ್ದೀರಿ. ನಿಮ್ಮೊಂದಿಗೆ ಮಾತಾಡಿದ್ದೇನೆ (ದೂರದರ್ಶನ ಸಂದರ್ಶನ ಬರುತ್ತಿಲ್ಲವಲ್ಲಾ ಎಂದು)

ಕ್ಷಣ... ಚಿಂತನೆ... ಹೇಳಿದರು...

ಪ್ರಕಾಶ್ ಸರ್‍,
ನೀವು ನನ್ನ ಬರಹದ ಶೈಲಿ ಮೆಚ್ಚಿಕೊಂಡಿದ್ದಕ್ಕೆ ಧನ್ಯವಾದಗಳು. ಈ ಒಂದು ವಿಚಾರ ಬರೆಯಲು ಆ ಬಸ್ಸಿನಲ್ಲಿ ಆ ವ್ಯಕ್ತಿ ಆ ಕಡೆಯವನ ನಂಬರ್‍ ಮಾತ್ರ ಮತ್ತೆ ಮತ್ತೆ ಕೇಳುತ್ತಿದ್ದ ನೋಡಿ ನನಗೆನಗು ಬಂದಿತು. ಅದನ್ನೇ ಅಲ್ಪ ಬದಲಾವಣೆಯೊಂದಿಗೆ ಬರೆದೆ. ಈ ಜೀವನವೇ ಹಾಗಲ್ಲವೇ? ಧನ್ಯವಾದಗಳು ಮತ್ತೊಮ್ಮೆ.

ಸಾಗರದಾಚೆಯ ಇಂಚರ ಹೇಳಿದರು...

ಕ್ಷಣ ಚಿಂತನೆ,
ಒಳ್ಳೆಯ ಬರಹ, ಇಷ್ಟವಾಯಿತು

shivu.k ಹೇಳಿದರು...

ಸರ್,

ಏನೋ ಹೇಳುತ್ತೀರೆಂದುಕೊಂಡೆ...ಇಲ್ಲಿ ನೋಡಿದರೆ ಓದುತ್ತಿದ್ದಂತೆ ಹಾಗೆ ಆದ್ಯಾತ್ಮದತ್ತ ವಾಲಿಸಿಬಿಟ್ಟಿರಲ್ಲ....

"ಈ ಲೋಕದಲ್ಲಿ ನನ್ನ ನಂಬರ್‍ ಏನೋ ಯಾರಿಗ್ಗೊತ್ತು. ಇಲ್ಲಿ ನಾನು ಎಷ್ಟನೆಯವನೋ? ಕೋಟಿಕೋಟಿ ಜೀವಿಗಳಲ್ಲಿ ನನ್ನದೆಷ್ಟು ಕೋಟಿ ಸಂಖ್ಯೆಯೋ?" ಈ ಸಾಲುಗಳು ನನಗೆ ಒಂದು ಕ್ಷಣ ತಬ್ಬಿಬ್ಬುಗೊಳಿಸಿತು..ಹೌದು..ನಾನು ಈ ನಿಟ್ಟಿನಲ್ಲಿ ಯೋಚಿಸಿಯೇ ಇರಲಿಲ್ಲವಲ್ಲ...

ಸರ್ ನನ್ನ ನಂಬರ್....ಏಳುನೂರು ಕೋಟಿ ಮುವತ್ತೈದು ಲಕ್ಷದ ಐವತ್ತೆರಡು ಸಾವಿರದ ನಾಲ್ಕುನೂರ ಇಪ್ಪತ್ತು. ಗುರುತು ಮಾಡಿಕೊಂಡುಬಿಡಿ...

ಧನ್ಯವಾದಗಳು

ಮಲ್ಲಿಕಾರ್ಜುನ.ಡಿ.ಜಿ. ಹೇಳಿದರು...

ಸರ್,
ಈ ಬಗ್ಗೆ ನಾನು ಯೋಚಿಸಿಯೇ ಇರಲಿಲ್ಲ. Wholistic thinking ಅಂದ್ರೆ ಇದೇನಾ? ಈ ರೀತಿ ಯೋಚಿಸುವುದರಿಂದ ಮನಸ್ಸಿನ ವೈಶಾಲ್ಯತೆ ಹೆಚ್ಚುತ್ತದಂತೆ. ಹೌದಾ?

ಕ್ಷಣ... ಚಿಂತನೆ... ಹೇಳಿದರು...

ಶಿವು ಅವರೆ ನಿಮ್ಮ ನಂಬರ್‍ ನೋಟಾಗಿದೆ (ನೋಟ್‌) ಆಗಿದೆ. :-)

ಕ್ಷಣ... ಚಿಂತನೆ... ಹೇಳಿದರು...

ಗುರುಮೂರ್ತಿ ಸರ್‍, ನಿಮಗೆ ಈ ಚಿಂತನೆ ಇಷ್ಟವಾಗಿದ್ದಕ್ಕೆ ಧನ್ಯವಾದಗಳು.

ಕ್ಷಣ... ಚಿಂತನೆ... ಹೇಳಿದರು...

ಮಲ್ಲಿಕಾರ್ಜುನ್ ಸರ್‍, ಈ ತಾಣಕ್ಕೆ ಸ್ವಾಗತ. ನಿಮ್ಮ ಅನಿಸಿಕೆಗಳಿಗೆ ಧನ್ಯವಾದಗಳು. ನಿಮ್ಮ ಪ್ರಶ್ನೆಗೆ ಇರಬಹುದು ಎಂದು ನನ್ನ ಅನಿಸಿಕೆ.