ಮಂಗಳವಾರ, ಸೆಪ್ಟೆಂಬರ್ 29, 2009

ದಸರಾ ಗೊಂಬೆಗಳು ಇಲ್ಲಿವೆ


ದಸರಾ ಗೊಂಬೆಗಳು ಇಲ್ಲಿವೆ


ಶಾಲಾದಿನಗಳಲ್ಲಿ ಗಣೇಶ ಹಬ್ಬದ ದಿನದಂದು ಚಂದ್ರಶೇಕರ ಚಂದ್ರಶೇಕರ ಚಂದ್ರಶೇಕರ ಬಿ ಗಣೇಶನ ದರ್ಶನ ಮಾಡುವ ಎಂದಾದರೂ ಮನೆ ಮನೆಗಳಿಗೆ ಗಣೇಶ ಕೂರ್‍ಸಿದ್ದೀರಾ? ಎಂದು ಪ್ರಶ್ನಿಸುತ್ತಾ, ಆ ಮನೆಗಳಲ್ಲಿ ಗಣೇಶನಿಗೆ ಮಂತ್ರಾಕ್ಷತೆ ದೂರದಿಂದಲೇ ಅರ್ಪಿಸಿ, ಕೈಮುಗಿದು ಬರುವಾಗ ಕಡಲೆಹಿಟ್ಟು, ಬಾಳೆಹಣ್ಣು ಇತ್ಯಾದಿ ಎಲ್ಲ ಪ್ರಸಾದವಾಗಿ ಸ್ವೀಕರಿಸಿ ಮನೆಗೆ ಬರುತ್ತಿದ್ದ ನೆನಪು.

ಅದರಂತೆಯೇ, ನವರಾತ್ರಿಯಲ್ಲಿ ಗೊಂಬೆ ಬಾಗಿನವಾಗಿ ಮಕ್ಕಳಿಗೆಲ್ಲಾ ಪೆಪ್ಪರಮೆಂಟು, ಕಡಲೆ ಉಸಲಿ, ಮೊಸಂಬಿ, ಇತ್ಯಾದಿ ಪಡೆದದ್ದು ಮರೆಯದ ನೆನಪಾಗಿವೆ. ಮತ್ತೊಮ್ಮೆ ಆ ಅವಕಾಶ ಹೀಗೆ ದೊರಕಿತು.ನಮ್ಮ ಮನೆಯ ಹತ್ತಿರದವರೊಬ್ಬರ ಮನೆಯಲ್ಲಿ ನವರಾತ್ರಿ ಹಬ್ಬದ ಆರಂಭದಿಂದ `ದಸರಾ' ಗೊಂಬೆಗಳನ್ನು ಇಟ್ಟಿದ್ದರು. ವಿಜಯದಶಮಿಯ ದಿನದಂದು ಸುಮಾರು ಜನರು ಬಂದು ನೋಡಿ ಹೋಗುತ್ತಿದ್ದರು. ನಾನೂ ಮನೆಯಲ್ಲಿ ನನ್ನ ತಂಗಿ ಮಕ್ಕಳನ್ನು ಕರೆದುಕೊಂಡು ಹೋಗಿ ನೋಡಲು ೨-೩ ದಿನದ ಹಿಂದೆಯೇ ತಿಳಿಸಿದ್ದೆನಾದರೂ ಹೋಗಿರಲಿಲ್ಲ. ನಿನ್ನೆ ದಿನ ಹೋಗಿದ್ದರು. ಎಂದಿನಂತೆ ನಾನು ವಾಕಿಂಗ್ ಹೋಗಿದ್ದವನು ಮನೆಗೆ ಬಂದೊಡನೆಯೇ `ನೀನೂ, ಹೋಗು, ಜನ ಎಲ್ಲ ಬಂದು ಫೋಟೋ ತೊಗೊತಿದ್ದಾರೆ. ಈ ಟೀವಿ ಯವರು ಬಂದಿದ್ರು', ಎಂದು ಹೇಳಿದರು. ಸರಿ, ನಾನೂ ಹೊರಟೆ. ಕ್ಯಾಮೆರಾ ಇತ್ತು. ಸೆಲ್‌ ಇರಲಿಲ್ಲ. ಸುಮಾರು ೯.೦೦ ಘಂಟೆಯ ವೇಳೆಗೆ ಅಂಗಡಿಗೆ ಹೋಗಿ ಸೆಲ್‌ ತಂದು ಗೊಂಬೆಗಳನ್ನು ನೋಡಲು ಹೊರಟೆ. ಒಂದು ಸುತ್ತು ಗೊಂಬೆಗಳನ್ನೆಲ್ಲ ನೋಡಿದ ಮೇಲೆ `ಫೋಟೋ" ತೆಗೆದುಕೊಳ್ಳಲು ಅನುಮತಿ ಕೋರಿದೆ. `ಧಾರಾಳವಾಗಿ' ಎಂಬ ಉತ್ತರ ಬಂದಿತು. ಆ ಖುಷಿಯಲ್ಲಿ ಒಂದಷ್ಟು ಫೋಟೋಗಳನ್ನು ತೆಗೆದುಕೊಂಡೆ. ಇನ್ನೂ ಸ್ವಲ್ಪ ವಿವರವಾಗಿ ತೆಗೆದುಕೊಳ್ಳುವ ಇರಾದೆಯಿತ್ತು. ಆದರೆ, ಅದಾಗಲೇ ೧೦.೦೦ ರ ಸಮಯವಾಗುತ್ತಿರುವುದನ್ನು ಗಮನಿಸಿ, ಮನೆಯೊಡೆಯ ಶ್ರೀ ಶಂಕರ್‍ ಮತ್ತು ಅವರ ಕುಟುಂಬದವರ ಅನುಮತಿಯನ್ನು ಪಡೆದು ಅವರದೊಂದು ಭಾವಚಿತ್ರ ತೆಗೆದುಕೊಂಡೆ (ಈ ಪ್ರದರ್ಶನವು ಅಕ್ಟೋಬರ್‌ ೩ ರ ವರೆವಿಗೂ ಇರುತ್ತದೆಂದು ತಿಳಿಸಿದರು). ಬಂಧು-ಮಿತ್ರರು, ಮಕ್ಕಳು, ಸ್ನೇಹಿತರು ಹೀಗೆ ಎಲ್ಲರೂ ಬಂದು ನೋಡಲಿ, ಅದೇ ನಮಗೆ ಸಂತೋಷ ಎಂದು ತಿಳಿಸಿದರು.

ಅಲ್ಲಿ ಮೊದಲಿಗೆ ಹಳ್ಳಿಯ ಚಿತ್ರಣ, ಹೊಲಗದ್ದೆಗಳಲ್ಲಿ ದುಡಿಯುತ್ತಿರವವರು. ಗಣೇಶನ ಮೂರ್ತಿಗಳು, ರಾಮ ಪಟ್ಟಾಭಿಷೇಕ, ಕೃಷ್ಣ ಜನನ, ಆಫ್ರಿಕಾ, ಮೈಸೂರು ಅರಮನೆ ಮತ್ತು ಮಹಾರಾಜರು, ಕೃಷ್ಣನ ಲೀಲೆಗಳು, ಮಿನಿ ಜಂಬೂ ಸವಾರಿ, ಚಪ್ಪಾಳೆ ಹಾಕಿದರೆ ಕರಾಟೆಯಾಡುವವು, ಹಾಡುವ ಮಂಗ, ಇವುಗಳಲ್ಲದೆ, ಶಾಲೆಯಲ್ಲಿ ರಾಷ್ಟ್ರಧ್ವಜಾರೋಹಣ, ಬುದ್ಧನ ನಿರ್ವಾಣ, ರಾಮಾಯಣದ ಚಿತ್ರಗಳು, ಸಾಧು-ಸಂತರು, ಗಾರುಡಿ ಗೊಂಬೆಗಳು, ದಶಾವತಾರ, ಅಷ್ಟಲಕ್ಷ್ಮಿಯರು, ದುರ್ಗಾದೇವಿ, ಮಾರುತಿ, ಶ್ರೀನಿವಾಸ ಕಲ್ಯಾಣ, ಗಿರಿಜಾ ಕಲ್ಯಾಣ, ಗರುಡೋತ್ಸವ, ಸ್ವಾಮಿ ವಿವೇಕಾನಂದ, ಥೈಲ್ಯಾಂಡ್, ಜಪಾನೀ, ಇತ್ಯಾದೀ ಗೊಂಬೆಗಳು, ಪರಿಸರ ರಕ್ಷಿಸಿ, ಕಾಡು ಪ್ರಾಣಿಗಳು, ಹರಿಣಗಳು, ಸೈನಿಕರು, ಕಾಡಿನ ಚಿತ್ರಣ, ನರ್ತಕಿಯರು, ಸಂಗೀತಗಾರರು.., ಹೀಗೆ ಇನ್ನೂ ಅನೇಕವನ್ನು ಪ್ರದರ್ಶಿಸಿದ್ದಾರೆ.

ಒಮ್ಮೆ ನೋಡಿದರೆ ಮತ್ತೊಮ್ಮೆ ನೋಡಬೇಕೆನಿಸುತ್ತದೆ.
ChandrashekaraBH

8 ಕಾಮೆಂಟ್‌ಗಳು:

ಸಾಗರದಾಚೆಯ ಇಂಚರ ಹೇಳಿದರು...

ಚಂದ್ರು ಸರ್,
ದಸರಾ ಗೊಂಬೆ ಚೆನ್ನಾಗಿವೆ,
ಫೋಟೋಗಳು ಅದ್ಭುತ, ತೋರಿಸಿದ್ದಕ್ಕೆ ಧನ್ಯವಾದಗಳು

PARAANJAPE K.N. ಹೇಳಿದರು...

ದಸರಾ ಹಬ್ಬದ ಫೋಟೋಗಳ ಚಿತ್ರ-ಬರಹ ಚೆನ್ನಾಗಿದೆ.

shivu ಹೇಳಿದರು...

ಚಂದ್ರು ಸರ್,

ದಸರಾ ಬೊಂಬೆ ಗಳ ಫೋಟೊಗಳನ್ನು ಇನ್ನೂ ಯಾರು ಹಾಕಲಿಲ್ಲವಲ್ಲ ಅಂದುಕೊಳ್ಳುತ್ತಿದ್ದೆ. ನೀವು ಹಾಕಿದ್ದಿರಲ್ಲ...ಬೊಂಬೆಗಳನ್ನು ನೋಡಲು ಬಲು ಖೂಷಿಯಾಗುತ್ತೆ ಸರ್. ಫೋಟೊಗಳು ಚೆನ್ನಾಗಿವೆ.

Shweta ಹೇಳಿದರು...

ಓಹ್ ಸರ್ ನಿಮ್ಮ ಬ್ಲಾಗ್ ಗೆ ಬರದೆ ತುಂಬಾ ದಿನವಾಗಿತ್ತು...ಎಸ್ಟೆಲ್ಲ ಲೇಖನಗಳಿವೆ ಓದಲು ....ಎಲ್ಲವನ್ನು ಓದುತ್ತಿದ್ದೇನೆ ....
ದಸರಾ ಗೊಂಬೆಗಳನ್ನು ಮಾಡುವ ಪದ್ಧತಿ ನಮ್ಮ ಊರಿನಲ್ಲಿ ಇಲ್ಲ.. ಇಲ್ಲಿನ ಗೊಂಬೆಗಳನ್ನು ನೋಡಿ ತುಂಬಾ ಸಂತಸ ವಾಗುತ್ತಿದೆ....

ಧನ್ಯವಾದಗಳು

ಕ್ಷಣ... ಚಿಂತನೆ... bhchandru ಹೇಳಿದರು...

ಗುರು ಅವರೆ, ದಸರಾ ಗೊಂಬೆಗಳು ನಿಮಗಿಷ್ಟವಾಗಿದ್ದಕ್ಕೆ ಧನ್ಯವಾದಗಳು.

ಕ್ಷಣ... ಚಿಂತನೆ... bhchandru ಹೇಳಿದರು...

ಪರಾಂಜಪೆ ಸರ್‍, ನಿಮ್ಮ ಮೆಚ್ಚುಗೆಯ ನುಡಿಗಳಿಗೆ ಥ್ಯಾಂಕ್ಸ್.

ಕ್ಷಣ... ಚಿಂತನೆ... bhchandru ಹೇಳಿದರು...

ಶಿವು ಸರ್‍, ದಸರಾ ಗೊಂಬೆಗಳ ಫೋಟೋ ಮತ್ತಷ್ಟು ಹಾಕುವ ಆಸೆ ಇತ್ತು. ಆದರೆ ನೆಟ್ ನಿಧಾನವಾಗಿದ್ದರಿಂದ ೨ ಫೋಟೋ ಹಾಕಿದೆ. ನಿಮ್ಮ ಅನಿಸಿಕೆಗಳಿಗೆ ಥ್ಯಾಂಕ್ಸ್.

ಕ್ಷಣ... ಚಿಂತನೆ... bhchandru ಹೇಳಿದರು...

ಶ್ವೇತಾ ಅವರೆ, ನನ್ನ ಬರಹಗಳು ನಿಮಗಿಷ್ಟವಾಗಿದೆ ಎಂದು ಈ ನಿಮ್ಮ ಅಭಿಪ್ರಾಯವು ತಿಳಿಸಿತು. ಹೀಗೆಯೇ ಬರುತ್ತಿರಿ.
ನಿಮ್ಮ ಊರಿನ ಕಡೆ ಗೊಂಬೆಗಳನ್ನು ಮಾಡುವ (ಕೂರಿಸುವ) ಪದ್ಧತಿ ಏಕಿಲ್ಲ ಎಂದು ತಿಳಿಯಬೇಕಿದೆ. ಅದನ್ನು ನಿಮ್ಮ ಬ್ಲಾಗಿನಲ್ಲಿ ಬರೆಯಿತಿ.

ಧನ್ಯವಾದಗಳು.