ಗುರುವಾರ, ಅಕ್ಟೋಬರ್ 1, 2009

ಅವರು ಹೇಳಿರುವ ಈ ಒಂದು ಮಾತೇ ಸಾಕು...

ಅಕ್ಟೋಬರ್‍ ೨, ಪೂಜ್ಯ ಬಾಪೂ, ಭಾರತೀಯ ಸ್ವಾತಂತ್ರ್‍ಯ ಹೋರಾಟಗಾರ, ಅಹಿಂಸೆಯ ಹರಿಕಾರ, ಮಹಾತ್ಮಾಗಾಂಧೀಜಿಯವರ ಜನ್ಮದಿನ. ಇಂದು ಅವರನ್ನು ನೆನಪಿಸಿಕೊಳ್ಳುವ ದಿನ. ಅವರ ವ್ಯಕ್ತಿತ್ವವನ್ನು ತಿಳಿಯಲು, ಅವರು ಹೇಳಿರುವ ಈ ಒಂದು ಮಾತೇ ಸಾಕು. ಇದು ಸರ್ವಕಾಲಕ್ಕೂ, ಸರ್ವರಿಗೂ ಅನ್ವಯಿಸುವಂತಹುದು.

"Strength does not come from physical capacity. It comes from an indomitable will." - Mahatma Gandhi

ಬಾಪೂರವರಿಗೆ ಮನಪೂರ್ವಕ ನಮನಗಳು.

8 ಕಾಮೆಂಟ್‌ಗಳು:

ಸಾಗರದಾಚೆಯ ಇಂಚರ ಹೇಳಿದರು...

ಮಹಾತ್ಮಾ ಗಾಂಧೀಜಿಯವರಿಗೆ ನಮ್ಮ ನಮನಗಳು

PARAANJAPE K.N. ಹೇಳಿದರು...

ಸಕಾಲಿಕ ಬರಹ, ಚಿಂತನೆಗೆ ಹಚ್ಚುವ ಮಾತು

Ittigecement ಹೇಳಿದರು...

ಚಂದ್ರಶೇಖರ...

ಗಾಂಧಿ ತಾತನನ್ನು ನೆನಪಿಸಿದ್ದು..
ಅವರ ಅಣಿಮುತ್ತು ಅಮೂಲ್ಯವಾದದ್ದು...
ಅವರು ನುಡಿದಂದಂತೆ ನಡೆದವರು...

ಹಾಗೆ ಇನ್ನೊಬ್ಬ ಪುಣ್ಯಾತ್ಮ, ಆದರ್ಶವಾದಿಯನ್ನು ಮರೆಯುತ್ತಿದ್ದೇವೆ...

"ಲಾಲ್ ಬಹಾದ್ದೂರ್ ಶಾಸ್ತ್ರಿ"ಯವರು...

ಅಕ್ಟೋಬರ್ ಎರಡು ಶಾಸ್ತ್ರಿಯವರ ಜನ್ಮದಿನವೂ ಹೌದು...!

ನಿಮ್ಮ ಬ್ಲಾಗ್ ವಿಶಿಷ್ಟವಾಗಿದೆ....
ಅಭಿನಂದನೆಗಳು...

AntharangadaMaathugalu ಹೇಳಿದರು...

ಚಂದ್ರು ಅವರೇ...
ಗಾಂಧೀಜಿಯವರ ಮಾತುಗಳು ಸರ್ವಕಾಲಕ್ಕೂ ಸಲ್ಲ ಬಹುದಾದದ್ದು. ಧನ್ಯವಾದಗಳು.

ಪ್ರಕಾಶ್ ರವರೇ....
ಗಾಂಧೀಜಿಯ ಜನ್ಮ ದಿನದ ಅಬ್ಬರದಲ್ಲಿ, ಲಾಲ್ ಬಹಾದ್ದೂರ್ ಶಾಸ್ತ್ರಿಗಳ ಜನ್ಮದಿನ ಎಷ್ಟು ಜನ ನೆನಪಿಸಿಕೊಳ್ಳುತ್ತಾರೆ? ಮರೆಯದಂತೆ ಎಚ್ಚರಿಸಿದ ನಿಮಗೆ ಧನ್ಯವಾದಗಳು......

ಶ್ಯಾಮಲ

shivu.k ಹೇಳಿದರು...

ಸರ್,

ಇವತ್ತು ಅವರ ಹುಟ್ಟಿದ ದಿನದಂತೂ ಅವರ ಮಾತು ಓದಿದೆ ಎಷ್ಟು ಸತ್ಯ ಅಲ್ವಾ!

ಕ್ಷಣ... ಚಿಂತನೆ... ಹೇಳಿದರು...

ಗುರುಮೂರ್ತಿ ಮತ್ತು ಪರಾಂಜಪೆ ಸರ್‍, ವಂದನೆಗಳು.

ಕ್ಷಣ... ಚಿಂತನೆ... ಹೇಳಿದರು...

ಪ್ರಕಾಶಣ್ಣ,

ನಿಮ್ಮ ಅನಿಸಿಕೆಗಳಿಗೆ ಧನ್ಯವಾದಗಳು.

ದಿವಂಗತ ಪ್ರಧಾನಿ ಲಾಲಬಹದ್ದುರ್‌ ಶಾಸ್ತ್ರಿಯವರನ್ನು ಮರೆತಿರುವುದನ್ನು ಸೂಕ್ಷ್ಮವಾಗಿ ನೆನಪಿಸಿದ್ದೀರಿ. ಇನ್ನೆಂದೂ ಹೀಗಾಗದಂತೆ ನೋಡಿಕೊಳ್ಳುವೆ.

ಹಾಗೂ ಬ್ಲಾಗಿಗೆ ಮೆಚ್ಚಿಕೆಯನ್ನು ತಿಳಿಸಿದ್ದೀರಿ. ಧನ್ಯವಾದಗಳು.
ಚಂದ್ರು.

ಕ್ಷಣ... ಚಿಂತನೆ... ಹೇಳಿದರು...

ಶ್ಯಾಮಲಾ ಮತ್ತು ಶಿವು ಅವರೆ, ಧನ್ಯವಾದಗಳು. ನಿಮ್ಮ ಅನಿಸಿಕೆಗಳು ಮತ್ತಷ್ಟು ಮಹನೀಯರ ಮಾತುಗಳನ್ನು ಅವಲೋಕಿಸುವಲ್ಲಿ ಸಹಾಯವಾಗುತ್ತದೆ.

ಚಂದ್ರು