ಛಿ! ತುಂಟೀ...
ಹಾಯ್ ಬ್ರದರ್!
ಹೆಲ್ಲೋ.....
ನೀ ಹಿಂಗ ನೋಡಬ್ಯಾಡ ನನ್ನ
ಕನ್ನಡವೇ ಸತ್ಯ, ಕನ್ನಡವೇ ನಿತ್ಯ...
ತಾಯಿ-ತಂದೆ ಆಶೀರ್ವಾದ
ಹಾಯ್ ಬ್ರದರ್!
ಹೆಲ್ಲೋ.....
ನೀ ಹಿಂಗ ನೋಡಬ್ಯಾಡ ನನ್ನ
ಕನ್ನಡವೇ ಸತ್ಯ, ಕನ್ನಡವೇ ನಿತ್ಯ...
ತಾಯಿ-ತಂದೆ ಆಶೀರ್ವಾದ
ಅಥವಾ
ಅಕ್ಕನ ಕೊಡುಗೆ
ಅಥವಾ
ಅಣ್ಣ ಅತ್ತಿಗೆ ಉಡುಗೊರೆ...
ಇಂತಹ ಅದೆಷ್ಟೋ ಬರಹಗಳನ್ನು ನೀವು ಆಟೋ ಅಥವಾ ಕಾರು ಮುಂತಾದವುಗಳ ಮೇಲೆ ಬರೆದಿರುವುದನ್ನು ಓದಿರುತ್ತೀರಿ. ಒಂದು ಕ್ಷಣ ಇವೆಲ್ಲ ಮನಸೆಳೆಯುತ್ತವೆ. ಕೆಲವರು ತಮ್ಮ ಆತ್ಮೀಯರ ಹೆಸರನ್ನೋ, ತಮ್ಮ ಮೆಚ್ಚಿನ ನಟ-ನಟಿಯರ ಹೆಸರನ್ನೋ, ಅಥವಾ ಪ್ರೀತ್ಸೆ ! ಎಂದೋ, ಚೂರಿಚಿಕ್ಕಣ್ಣ, ಮಹಾಕ್ಷತ್ರಿಯ ಹೀಗೆ ಸಿನಿಮಾ ಹೆಸರನ್ನೋ ಬರೆಸಿರುತ್ತಾರೆ ತಮ್ಮ ಆಟೋ ಬೆನ್ನುಗಳ ಮೇಲೆ. ಇವೆಲ್ಲ ಓದಿರುತ್ತೀರಿ. ಕೆಲವರಂತೂ ವಿಚಿತ್ರ ಬರಹಗಳನ್ನು, ಚಿತ್ರಗಳನ್ನು ಬರೆಸಿರುತ್ತಾರೆ. ಕೆಲವರು ಪರಿಸರ ಪ್ರಜ್ಞೆಯ ಬರಹಗಳನ್ನೂ ಬರೆಸಿರುತ್ತಾರೆ.
ಕೆಲವು ಬರಹಗಳು ಖುಷಿಕೊಟ್ಟರೆ, ಮತ್ತೆ ಕೆಲವು ಹಾಗೆ ನೋಡಿ, ಹೀಗೆ ಮರೆತುಬಿಡುವಂತೆ ಇರುತ್ತವೆ.
ಇಂತಹ ಬರಹಗಳಿಂದ ಅನುಕೂಲಗಳೂ ಆಗಿದೆ ಎಂದರೆ ಅಚ್ಚರಿಯಾಗಬಹುದು. ಒಮ್ಮೆ ಆಟೋದಿಂದ ಇಳಿದು ಇದ್ದ ಬದ್ದ ಲಗೇಜನ್ನೆಲ್ಲ ಆಟೋದಲ್ಲಿಯೇ ಬಿಟ್ಟು ಬಂದಿದ್ದರು. ಆಟೋ ಮನೆ ಬಾಗಲಿನಿಂದ ಹೊರಟು ಹೋಯಿತು. ಅದರ ಹಿಂದಿದ್ದ ಚಿತ್ರವೊಂದನ್ನು ನೋಡಿದ್ದರಿಂದ ಮತ್ತೆ ಆಟೋ ಸ್ಟ್ಯಾಂಡಿಗೆ ಹೋಗಿ ಹುಡುಕಿದರೆ ಆಟೋ ಇಲ್ಲ. ಅಲ್ಲಿದ್ದವರನ್ನು ವಿಚಾರಿಸಿದಾಗ, ಆಟೋ ಓನರ್ ಮನೆಗೆಹೋಯಿತು ಎಂಬ ಉತ್ತರ. ಹಾಗೂ ಹೀಗೂ ಓನರರ ಮನೆ ಹುಡುಕಿದಾಗ ಆ ಆಟೋ ಗ್ಯಾರೆಜಿನಲ್ಲಿ ತಣ್ಣಗೆ ನಿಂತಿತ್ತು. ಕೊನೆಗೂ ಲಗೇಜೆಲ್ಲ ಸಿಕ್ಕಿತು. ಆದರೆ, ಇಲ್ಲಿ ಆಟೋ ಹತ್ತುವಾಗ, ಇಳಿಯುವಾಗ ಆಟೋ ನೋಂದಣಿ ಸಂಖ್ಯೆ ಗುರುತಿಟ್ಟುಕೊಂಡಿದ್ದರೆ, ಇಷ್ಟೆಲ್ಲಾ ಕಷ್ಟವಾಗುವುದಿಲ್ಲ, ಏನಂತೀರಿ?
ಹಿಂದೆ, ಒಂದು ಬರಹದಲ್ಲಿ ಡ್ರಿಂಕ್ ಕಾಫಿ ಅಂಡ್ ಡ್ರೈವ್ (http://kshanachintane.blogspot.com/2009/04/blog-post_25.html) ಎಂಬುದರ ಬಗ್ಗೆ ಬರೆದಿದ್ದೆ.
ಕಳೆದ ತಿಂಗಳು ಮೈಸೂರಿನ ರೈಲು ನಿಲ್ದಾಣದಿಂದ ಆಟೋದಲ್ಲಿ ಹೋಗುತ್ತಿರುವಾಗ ನಾವಿದ್ದ ವಾಹನವನ್ನು ಹಿಂದೆ ಹಾಕಿ ಒಂದು ಆಟೋ ಮುಂದೆ ಹೋಯಿತು. ಅದರ ಹಿಂಬರಹ ಹೀಗಿತ್ತು. `ತಿರುಗಿ ನೋಡಿದ್ದಕ್ಕೆ ಲವ್ವಾ!??'. ಬರೆಸಿದವನ ಉದ್ದೇಶ ಏನಿರಬಹುದೋ ಬಲ್ಲವರಾರು? ಒಟ್ಟಿನಲ್ಲಿ ಬರಹ ಓದಿದವರ ತಲೆಯಲ್ಲಿ ಕೊರೆಯುತ್ತಿರುತ್ತದೆ.
ಇದು ಈ ಪ್ರಶ್ನೆಯಾದರೆ, ಈಗೊಂದು ೨-೩ ತಿಂಗಳುಗಳ ಹಿಂದೆ ದಿನಪತ್ರಿಕೆಯಲ್ಲಿ ಓದಿದ್ದು ನೆನಪಾಯಿತು. ಅದೇನೆಂದರೆ, ಗುರಾಯಿತಿಸದ ಎಂದು ಚಾಕುವಿನಿಂದ ಇರಿದಿದ್ದರಂತೆ. `ಗುರಾಯಿಸಿದರೆ ಇರಿಯುವೆ' ಎಂದೇನಾದರೂ ಅವನ ಮನಸ್ಸಿನಲ್ಲಿ ಬರೆಸಬೇಕೆಂದು ಕೊಂಡಿದ್ದನೋ ಏನೋ? ಬಲ್ಲವರಾರು? ಹೀಗೆ ಬರಹಗಳು ಕಾಡುತ್ತವೆ.
ನಿಮಗೂ ಇಂತಹ ಬರಹಗಳು ಓದಿಗೆ ಸಿಕ್ಕಿರಬಹುದು! ಅಭಿಪ್ರಾಯ ತಿಳಿಸಿ.
ವಾರಾಂತ್ಯವು ಎಲ್ಲರಿಗೂ ಶುಭವಾಗಿರಲಿ!
8 ಕಾಮೆಂಟ್ಗಳು:
ಚಂದ್ರು....
ಆಟೋದವರು ಹೆಚ್ಚಾಗಿ ಓದಿದವರಿರುವದಿಲ್ಲ...
ಬಹಳ ಕನಸು ಕಟ್ಟಿಕೊಂಡವರು..
ಹುಚ್ಚುಚ್ಚಾಗಿ ಬರೆಸಿರುತ್ತಾರೆ...
ನನ್ನ ಬಳಿ ಅಂಥಹ ಕೆಲವು ಫೋಟೊಗಳಿವೆ...
ಕೆಲವು ಬಾರಿ ನಗು ಬಂದರೂ...
ಕೆಲವು ಬಾರಿ ಸಿಟ್ಟೂ ಬರುತ್ತದೆ......
ಒಂದು ಆಟೋದಲ್ಲಿ ಹೀಗೆ ಬರೆಸಿತ್ತು...
" ಆಟೋ ನನ್ನಪ್ಪಂದು..
ರಸ್ತೆ ನಮ್ ತಾತಂದು..."
ಚೆನ್ನಾಗಿದೆ ನಿಮ್ಮ ಬರಹ....
ಸರ್,
ನಾನು ನಿತ್ಯ ಓಡಾಡುವಾಗ ಇಂಥ ಅನೇಕ ಬರಹಗಳು ಆಟೋಗಳ ಹಿಂಬದಿಯಲ್ಲಿ ಬರೆದಿರುತ್ತವೆ. ಕೆಲವು ನಗು ತರಿಸಿದರೆ, ಮತ್ತೆ ಕೆಲವು ಇರಿಸುಮುರಿಸು ಉಂಟಾಗುವಂತಿರುತ್ತವೆ. ಆದ್ರೂ ಅವನ್ನು ತಲೆಗೆ ಹಾಕಿಕೊಳ್ಳದೇ ಸಾಗುತ್ತೇನೆ.
ಒಂದು ಆಟೋ ಮೇಲೆ ಹೀಗೆ,
ಹಾರ್ನ್ ಮಾಡಬೇಡವೇ ಮೂರ್ಖ,
ನಾನೇನು ಇಲ್ಲಿ ಚಾಪೆ ಹಾಕಿಕೊಂಡು ಮಲಗಿಲ್ಲ.
ಉತ್ತರ ವಿಚಾರವನ್ನು ಬರೆದಿದ್ದೀರಿ.
ಪ್ರಕಾಶಣ್ಣ ಮತ್ತು ಶಿವು,
ನಿಮ್ಮ ಅನಿಸಿಕೆಗಳಿಗೆ ಧನ್ಯವಾದಗಳು. ಕೆಲವೊಮ್ಮೆ ಮನಸಿಗೆ ಕಿರಿಕಿರಿಯಾಗುವ ಬರಹಗಳೂ ಇರುತ್ತವೆ. ಆದರೆ, ಅವನ್ನೆಲಲ್ ಅಲ್ಲಿಗೇ ಬಿಡುವುದು ಉತ್ತಮವಲ್ಲವೇ?
ಸ್ನೇಹದಿಂದ,
ಆಟೋ ಬರಹಗಳನ್ನು ನಾನು ಕೂಡ ಗಮನಿಸುತ್ತಿರುತ್ತೇನೆ, ಕೆಲವು ಅದೆಷ್ಟು ಚೆನ್ನಾಗಿರುತ್ತವೆ೦ದರೆ ಎಲ್ಲರ ಕಣ್ಣು ತೆರೆಸುವ೦ತಿರುತ್ತವೆ.
ಚಂದ್ರು ಸರ್
ತುಂಬಾ ಚೆನ್ನಾಗಿದೆ ಬರಹ
ನಾನೂ ಕೂಡ ಆಟೋ, ವ್ಯಾನ್, ಲಾರಿಗಳ ಬರಹಗಳನ್ನು ಗಮನಿಸುತ್ತಿರುತ್ತೇನೆ. ಈ ಆಟೋ ಹೆಸರುಗಳ ಬಗ್ಗೆ ಒಂದು ಬ್ಲಾಗ್ ಬರೆದಿದ್ದೆ - http://ini-dani.blogspot.com/2008/06/blog-post_10.html#links
ಚಂದ್ರು ಸರ್,
ಚೆನ್ನಾಗಿದೆ ನಿಮ್ಮ ಬರಹ..ನಾನೂ ಗಮನಿಸುತ್ತಿರುತ್ತೇನೆ..
ಪರಾಂಜಪೆ ಸರ್, ಗುರು ಸರ್, ದೀಪಸ್ಮಿತ ಮತ್ತು ಶ್ವೇತ ಅವರೆ, ನಿಮ್ಮ ಪ್ರತಿಕ್ರಿಯೆಗಳಿಗೆ ಧನ್ಯವಾದಗಳು.
ದೀಪಸ್ಮಿತರೆ ಸ್ವಾಗತ. ಇಂತಹ ಬರಹಗಳ ಲಿಂಕ್ ಕೊಟ್ಟಿದ್ದೀರಿ. ಥ್ಯಾಂಕ್ಸ್.
ಸ್ನೇಹದಿಂದ,
ಕಾಮೆಂಟ್ ಪೋಸ್ಟ್ ಮಾಡಿ