Ahimsa means not to injure any creature by thought, word or deed, not even to the supposed advantage of this creature.
ಅಹಿಂಸೆ ಎಂಬ ಪದಬಳಕೆ ಬಂದ ಕೂಡಲೇ ನೆನಪಾಗುವುದು ಬಾಪೂಜಿ ಗಾಂಧೀಜಿ. ಆದರೆ ಅವರ ಅಂತ್ಯವಾಗಿದ್ದು ಮಾತ್ರ ಹಿಂಸೆಯಿಂದಲೇ ಅಹುದು. ಅವರನ್ನು ಅತಿ ಹತ್ತಿರದಿಂದ ಕೊಂದವನು ನಾಥೋರಾಮ್ ಗೂಡ್ಸೆ (ಜನವರಿ ೩೦, ೧೯೪೮) ಅಹಿಂಸೆಯಿಂದ ಸ್ವಾತಂತ್ರ್ಯ ಪಡೆದ ಭಾರತದಲ್ಲಿ ಈ ಒಂದು ಮಹಾನ್ ಚೇತನ ಹಿಂಸೆಗೆ ಬಲಿಯಾಯಿತು. ಮಹಾತ್ಮನಾಗಿ ಹುತಾತ್ಮನಾದರು.
ಆದರೆ, ಇಂದಿನ ಜನಾಂಗಕ್ಕೆ ಹಿಂಸೆಯೊಂದೇ ಪರಮೋಚ್ಛ ಎಂಬಂತಾಗಿದೆ. ಈ ಒಂದು ದಿನವಾದರೂ ವಿಶ್ವದಲ್ಲಿ ಅಥವಾ ಒಂದು ಸಣ್ಣ ಊರು ಅಥವಾ ನಮ್ಮ ನಮ್ಮ ಮನೆ-ಮನಸ್ಸಿನಲ್ಲಿಯಾದರೂ ಸರಿ ಅಹಿಂಸೆಯೆಂಬುದು ನಮ್ಮ ನಡೆ, ನುಡಿಗೆ ಹತ್ತಿರವಾಗಿರಲಿ. ಏಕೆಂದರೆ, ನಾವು ಪ್ರತಿಯೊಂದನ್ನು ಪ್ರತಿಭಟಿಸುವಾಗಲೂ ಹಿಂಸಾತ್ಮಕ, ನಿಂದಾತ್ಮಕತೆಯಿಂದ ಕೂಡಿರುವ ಮನಸ್ಸುಳ್ಳವರಾಗಿದ್ದೇವೆ ಎಂದರೆ ಅಚ್ಚರಿಯಿಲ್ಲ. ಮನುಷ್ಯ ಸ್ವಭಾವವೇ ಹಾಗೆ ಎನ್ನಬಹುದು.
ರಘುಪತಿ ರಾಘವ ರಾಜಾರಾಂ, ಪತಿತ ಪಾವನ ಸೀತಾರಾಂ ಅವರ ಮೆಚ್ಚಿನ ಮಂತ್ರವು ಎಲ್ಲರೊಳಗೂ ಅಣುರಣಿಸಲಿ. ಇಂತಹ ಅಹಿಂಸಾ ಪ್ರತಿಪಾದಕ, ಅಹಿಂಸೆಯೊಂದೇ ಸತ್ಯ ಎಂದು ಬಾಳಿ ಬೆಳಗಿದ, ಅದಕ್ಕೆಂದೇ ಹುತಾತ್ಮರಾದ ಬಾಪೂಜಿಯವರಿಗೆ ನಮನಗಳು.
ಮಹಾತ್ಮಾ ಗಾಂಧೀಜಿಯವರ ಜೀವನ, ಅವರ ಬಗೆಗಿನ ಹೆಚ್ಚಿನ ತಿಳುವಳಿಕೆಗಾಗಿ ಈ ಕೆಳಗಿನ ಜಾಲತಾಣಗಳನ್ನು ನೋಡಬಹುದು.
http://www.mkgandhi.org/main.htm
http://www.mkgandhi-sarvodaya.org/main.htm
The Musings of the Mahatma : Answers for our Times (http://www.mkgandhi.org/Mahatma1.pps)
http://www.gandhiserve.org/cgi-bin/if2/imageFolio.cgi?direct=Cartoons
* * *
Photo Courtesy: http://www.mkgandhi.org/
2 ಕಾಮೆಂಟ್ಗಳು:
ಸಕಾಲಿಕ ಬರಹ, ಮಾಹಿತಿಗೆ ಒದಗಿಸಿದ ಲಿ೦ಕು ಗಳು ಚೆನ್ನಾಗಿವೆ.
good
ಕಾಮೆಂಟ್ ಪೋಸ್ಟ್ ಮಾಡಿ