ಮಂಗಳವಾರ, ಮಾರ್ಚ್ 23, 2010

ಈ ಮೂವರು ಭಾರತಾಂಬೆಯ ಹುತಾತ್ಮ ಪುತ್ರರು

ಭಾರತ ದೇಶದ ಸ್ವಾತಂತ್ರ್‍ಯ ಪೂರ್ವದಲ್ಲಿ (ಬ್ರಿಟಿಷ್ ಆಳ್ವಿಕೆಯ ಕಾಲದಲ್ಲಿ, ಕಳೆದ ಶತಮಾನದ ಹೊಸ್ತಿಲಲ್ಲಿ), ಯುವ ಕ್ರಾಂತಿಕಾರಿಗಳಾಗಿದ್ದ, ಭಗತ್ ಸಿಂಗ್, ಶಿವರಾಂ ರಾಜಗುರು ಹಾಗೂ ಸುಖದೇವ್‌ ಇವರ ಹೆಸರನ್ನು ಕೇಳಿದರೇ ಸಾಕು ಬ್ರಿಟಿಷ್ ಸಾಮ್ರಾಜ್ಯವನ್ನು ನಡುಗಿಸುವಂತಿದ್ದ ಗುಡುಗಿನಂತಹ ವ್ಯಕ್ತಿತ್ವದ ಇವರುಗಳನ್ನು ಲಾಹೋರ್‍ ಷಡ್ಯಂತ್ರದ ನೆಪದಲ್ಲಿ ಮಾರ್ಚ್ ೨೩, ೧೯೩೧ ರ ಮುಂಜಾನೆ ಗಲ್ಲುಶಿಕ್ಷೆಯ ಮೂಲಕ ಕೊಂದರು. ಆದರೆ, ಈ ಯುವಕರೆಲ್ಲರೂ ಹುತಾತ್ಮರೆಂಬ, ಶಹೀದ್‌ ಎಂಬ ಹೆಸರಿನಿಂದ ಇಂದಿಗೂ ಭಾರತದ ಯುವಕರಲ್ಲಿ ಮನೆಮಾಡಿದ್ದಾರೆ.


ಮೂವರೂ ಮಿತ್ರರು ಒಂದೇ ಕಾರಣಕ್ಕಾಗಿ, ಭಾರತಮಾತೆಯ `ದಾಸ್ಯತ್ವದ' ಬಿಡುಗಡೆಗಾಗಿ ಹುತಾತ್ಮರಾದದ್ದು ವಿಶ್ವ ಇತಿಹಾಸದಲ್ಲಿಯೇ ಪ್ರಮುಖವಾದುದು. ಆ ೨೧-೨೪ ವಯೋಮಾನದ ಆ ಯುವಕರುಗಳು ಕೇವಲ ಬ್ರಿಟಿಷರ ವಿರುದ್ಧ ಕರಪತ್ರ ಹಂಚುವ, ದೊಂಬಿ ಮಾಡುವ, ಬಾಂಬೆಸೆಯುವ ಕ್ರಾಂತಿಕಾರಿಗಳಾಗಿರಲಿಲ್ಲ. ಸಾರ್ವಜನಿಕರಲ್ಲಿ ಭಯ ಉಂಟುಮಾಡುವವರಾಗಿರಲಿಲ್ಲ. ಉನ್ನತ ಮಟ್ಟದ ಓದನ್ನು ಪಡೆದವರಾಗಿದ್ದರು, ಇತಿಹಾಸ ತಿಳಿದವರಾಗಿದ್ದರು, ಭಾರತದ ಭವಿಷ್ಯನ್ನು, ದೇಶಭಕ್ತಿಯನ್ನು ಹೃದಯದಲ್ಲಿ ತುಂಬಿಕೊಂಡವರಾಗಿದ್ದರು, ಅಂತಹ ಗೆಳೆಯರನ್ನು, ಯುವಶಕ್ತಿಯನ್ನು ಬ್ರಿಟಿಷರು ನಿರ್ದಾಕ್ಷಿಣ್ಯವಾಗಿ, ಜನರಿಗೆ ಹೆದರಿ, ಗಲ್ಲು ಶಿಕ್ಷೆಯ ಜಾರಿಗೆ ನಿಗದಿಪಡಿಸಿದ್ದ ದಿನಕ್ಕಿಂತ ಮೊದಲೇ, ಮುಂಚಿತವಾಗಿಯೇ, ಗುಟ್ಟಾಗಿಯೇ ಗಲ್ಲಿಗೇರಿಸಿದ್ದಲ್ಲದೇ ಅವರುಗಳ ಅಂತ್ಯಕ್ರಿಯೆಯನ್ನೂ ಸಹ...... ನೆರವೇರಿಸಿಬಿಟ್ಟರು. ಇವರ ಹೌತಾತ್ಮ್ಯದಿಂದಾಗಿ ಮತ್ತು ಅವರಲ್ಲಿದ್ದಂತಹ ಧೀ:ಶಕ್ತಿಯು, ಜನರನ್ನು ಮತ್ತಷ್ಟು ಒಗ್ಗೂಡಿಸಿ ಭಾರತಮಾತೆಯ ದಾಸ್ಯತ್ವದ ಸಂಕೋಲೆಗಳನ್ನು ಬಿಡಿಸುವಲ್ಲಿ ಮತ್ತಷ್ಟು ಬಲ ಸಿಕ್ಕಿತು.

ಇವೆಲ್ಲ ಘಟನೆಗಳೂ ನಡೆದು ಇಂದಿಗೆ ೭೯ ವರ್ಷಗಳಾಗುತ್ತಿವೆ. ಇಂತಹ ಸಂದರ್ಭದಲ್ಲಿ ನಮ್ಮ ಯುವಕರು, ಹಿರಿಯರು, ರಾಜಕೀಯ ನೇತಾರರು ಎಲ್ಲ ಇವರನ್ನು ನೆನೆಯುವ ದಿನ.

ಕೇವಲ ನೆನಪಿಸಿಕೊಂಡರೆ ಸಾಲದು. ಇಂದಿನ ಯುವಕರಲ್ಲಿ, ಹಿರಿಯರಲ್ಲಿ, ದೇಶ, ನಾಡು ಸಂಸ್ಕೃತಿ ಇವೆಲ್ಲ ಮಾಯವಾಗುತ್ತಿವೆ. ಕಾರಣ ಏನಿರಬಹುದು? ಹಣ ಮಾಡುವ ದಂಧೆಯೇ ಮುಖ್ಯ ಎನಿಸಿರಬಹುದೇ? ದೇಶ, ಭಾಷೆ, ಸಂಸ್ಕೃತಿ, ಕರ್ತೃತ್ವ ಶಕ್ತಿ, ಎಲ್ಲಕಿಂತ ಹೆಚ್ಚಾಗಿ ಮೌಲ್ಯ (ಜೀವನ ಮೌಲ್ಯ), ಆದರ್ಶ ಇವೆಲ್ಲ ಯಾರಿಗೆ ಬೇಕಾಗಿದೆ. ಈ ದಿನ ಮೆರೆದರೆ ಸಾಕು... ಎಂಬ ಮನೋಭಾವವೇ ಹೆಚ್ಚಾಗಿದೆಯಲ್ಲವೇ? ಯಾರು ಏನಾದರೇನು? ದೇಶ ಏನಾದರೇನು? ಸಂಸ್ಕೃತಿ ಏನಾದರೇನು? ನಾವ್ ಚೆನ್ನಾಗಿದ್ದರೆ ಸಾಕೆಂಬ ಮನೋಭಾವಗಳನ್ನು ಮಕ್ಕಳಿದ್ದಾಗಿನಿಂದಲೇ ಮನಸ್ಸಿನಿಂದ ದೂರೀಕರಿಸಬೇಕಲ್ಲವೇ?

ಇವೆಲ್ಲವ ವಿಚಾರಗಳನ್ನೂ ಇಂದಿನ ನಮ್ಮ ಯುವಜನತೆ, ಪೋಷಕರು, ಗುರು-ಹಿರಿಯರು, ರಾಜಕಾರಣಿಗಳು ಹಾಗೂ ಒಟ್ಟಿನಲ್ಲಿ ಭಾರತೀಯರೆಲ್ಲರೂ ಚಿಂತಿಸಬೇಕಾದ ವಿಚಾರ.

ವಂದೇ ಮಾತರಂ, ಭಾರತ್ ಮಾತಾ ಕೀ ಜೈ. ಜೈ, ಜೈ.

ಇಂತಹ ಅಪ್ರತಿಮ ದೇಶಭಕ್ತರ ಬಗೆಗಿನ ಓದಿಗಾಗಿ ಈ ಕೆಳಗಿನ ಅಂತರ್ಜಾಲತಾಣಗಳನ್ನು ನೋಡಿ.
www.shahidbhagatsingh.org/
http://www.freeindia.org/biographies/freedomfighters/bhagathsingh/page11.htm


ಚಂದ್ರಶೇಖರ ಬಿ.ಎಚ್.

8 ಕಾಮೆಂಟ್‌ಗಳು:

ಸಾಗರದಾಚೆಯ ಇಂಚರ ಹೇಳಿದರು...

ಸುಂದರ ಲೇಖನ
ದೇಶ ಭಕ್ತಿಯ ಪಾಠ ನಾವಿನ್ನೂ ಇವರಿಂದ ಕಲಿಯಬೇಕಿದೆ

PARAANJAPE K.N. ಹೇಳಿದರು...

ಇ೦ದಿನ ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ಕೇವಲ ಗಾ೦ಧಿ-ನೆಹರು ಮಾತ್ರ ದೇಶಕ್ಕೆ ಸ್ವಾತ೦ತ್ರ್ಯ ತ೦ದುಕೊಡುವಲ್ಲಿ ಶ್ರಮಿಸಿದವರು ಎನ್ನುವ ಅರ್ಥ ಹೊಮ್ಮಿಸುವ ಪಾಠಗಳಿವೆ . ಹಾಗಾಗಿಯೋ ಅಥವಾ ಬೇರೆ ಕಾರಣವೋ ಗೊತ್ತಿಲ್ಲ, ಬಹುತೇಕ ಯುವಕರಿಗೆ ನೀವು ಹೇಳಿದ ಹುತಾತ್ಮ-ತ್ರಯರು ಗೊತ್ತೇ ಇರಲಿಕ್ಕಿಲ್ಲ, ಕೆಲವರು ಭಗತ್ ಸಿ೦ಗ್ ಹೆಸರು ಕೇಳಿರಬಹುದು ಅಷ್ಟೇ. ಇ೦ಥವರು ನಮ್ಮ ನೆಲದಲ್ಲಿ ಇದ್ದರು ಎ೦ಬುದೊ೦ದೇ ನಮಗೆ ಹೆಮ್ಮೆ ಎನಿಸಿದರೆ ಸಾಲದು, ಅವರ ಜೀವನಾದರ್ಶ ಗಳು ನಮಗೆ ದಾರಿದೀಪವಾಗಬೇಕು. ಉತ್ತಮ ಲೇಖನ

ಕ್ಷಣ... ಚಿಂತನೆ... ಹೇಳಿದರು...

ಗುರು ಅವರೆ, ನಿಮ್ಮ ಅನಿಸಿಕೆ ನಿಜ. ಆದರೆ, ಜನಕ್ಕೆ ಅವೆಲ್ಲ ಏಕೆ ಬೇಕು? ಇದೇ ಒಂದು ಮಹತ್ತಾದ ಪ್ರಶ್ನೆಯಾಗಿದೆ? ಅದರಿಂದ ಏನು ಉಪಯೋಗ? ಇವೆಲ್ಲ ಜನರ ಮನಸ್ಸಿನಲ್ಲಿರುವುದರಿಂದ, ದೇಶಭಕ್ತಿಗಿಂತ - ಸಣ್ಣಪುಟ್ಟ ಪುಡಿಗುಂಪಿನಲ್ಲಿ ದೊಂಬಿ ಮಾಡುವುದಷ್ಟೇ ಬೇಕಿರುವುದು.
ಅಭಿಪ್ರಾಯಕ್ಕೆ ಧನ್ಯವಾದಗಳು.
ಸ್ನೇಹದಿಂದ,

ಕ್ಷಣ... ಚಿಂತನೆ... ಹೇಳಿದರು...

ಪರಾಂಜಪೆ ಸರ್‍, ಹೌದು. ನಾವೂ ಸಹ ಪಠ್ಯಪುಸ್ತಕಗಳಲ್ಲಿ ಇವಿಷ್ಟನ್ನೇ ತಿಳಿದಿರುವುದು. ಆದರೆ, ಇಂತಹ ಬಲಿದಾನಗೈದವರ ಜೀವನಚಿತ್ರಗಳು ಇಲ್ಲವಾಗಿದೆ. ಇಂತಹದನ್ನು ತಿಳಿದವರಾದರೂ ಪರಿಚಯಿಸಬೇಕು. ಆದ್ರೆ, ಇಂದಿನ ಜನಾಂಗಕ್ಕೆ ಅವೆಲ್ಲ ಏಕೆ ಬೇಕು? ಎಂಬ ಧೋರಣೆಯಿರುವುದರಿಂದಲೇ ನಾವಿನ್ನೂ ಹೀಗೆ ಇದ್ದೇವೆ. ನಿಮ್ಮ ಅನಿಸಿಕೆಗಳಿಗೆ ವಂದನೆಗಳು.

ಸ್ನೇಹದಿಂದ,

ಸವಿಗನಸು ಹೇಳಿದರು...

ಚಂದ್ರು,
ದೇಶ ಭಕ್ತಿ ಇವರನ್ನು ನೋಡಿ ಕಲಿಯಬೇಕು...
ಚೆಂದದ ಬರಹ...

ಸೀತಾರಾಮ. ಕೆ. / SITARAM.K ಹೇಳಿದರು...

You have mentioned about the great personalties on right time.
Thanks for the article & remaindering the dates

ಮನದಾಳದಿಂದ............ ಹೇಳಿದರು...

ಮಾಹಿತಿ ಪೂರ್ಣ ಲೇಖನ,

ಭಾರತೀಯರಾದ ನಮಗೇ ಈ ಮಹಾನ್ ವ್ಯಕ್ತಿಗಳ ಪರಿಚಯವಿಲ್ಲ. ಇಂದಿನ ಶಿಕ್ಷಣ ವ್ಯವಸ್ಥೆಯ ಪಟ್ಯ ಕ್ರಮ ಕೂಡ ಹಲವಾರು ದೇಶಭಕ್ತರ ಹೆಸರನ್ನೇ ಬಳಸುವುದಿಲ್ಲ! ನಾವಾದರೂ ಕನಿಷ್ಠ ಪಕ್ಷ ನೆನೆಸಿಕೊಂಡು ಹುತಾತ್ಮರ ದೇಶಭಕ್ತಿಯ ಭಿಕ್ಷೆ ಪಡೆಯೋಣ!

shivu.k ಹೇಳಿದರು...

ಚಂದ್ರು ಸರ್,

ಲೇಖನವನ್ನು ತುಂಬಾ ಖುಷಿಯಾಯ್ತು. ದೇಶಭಕ್ತಿಗಾಗಿ ಶ್ರಮಿಸಿದ ಅನೇಕರಲ್ಲಿ ಇವರ ಕೂಡ ಇರುವ ವಿಚಾರವನ್ನು ಮಾಹಿತಿ ಸಮೇತ ತಿಳಿಸಿದ್ದೀರಿ...ಅದಕ್ಕೆ ಧನ್ಯವಾದಗಳು.