ಶುಕ್ರವಾರ, ಏಪ್ರಿಲ್ 30, 2010

* ನಮನ *

ಇಂಗಿ ಹೋಗುತಿದೆ ಇಂಗ್ಲೀಷಿನ ಮರುಭೂಮಿಯಲಿ
ನಿನ್ನ ಮಕ್ಕಳ ಪ್ರತಿಭಾ        (ಕುವೆಂಪು ವಿರಚಿತ)

ಬಿಡಿ ನೀವ್ ಆಂಗ್ಲ ವ್ಯಾಮೋಹ ಪೂರ್ಣ,
ಎಂದೇನಿಲ್ಲ, ಇರಲಿ ಪ್ರೀತಿ ಅದಕೂ, ಆದರೂ
ಬಿಡದಿರಲಿ ಕನ್ನಡ ತಾಯ್‍ ಮೇಲಿನ ಪ್ರೀತಿ, ಭಕುತಿ
ಎಂದರು ಕುವೆಂಪು, ಬೀರಿದರು ಕನ್ನಡದಾ ಕಂಪು

ಏನು ಬಿಡು ಎಂದರೂ ಬಿಡಲೊಲ್ಲೆನಯ್ಯ
ಕನ್ನಡದ ಮಮತೆಯ ಬಿಡಲೊಲ್ಲೆನಯ್ಯ    (ಕುವೆಂಪು ವಿರಚಿತ)

ಕನ್ನಡವೇ ಸತ್ಯ, ಕನ್ನಡವೇ ನಿತ್ಯ ಎಂದು
ಉಸಿರಲಿ ಬೆರೆತ ಕನ್ನಡವನು ನಾನು
ಬಿಡಲೊಲ್ಲೆನಯ್ಯ, ಎಂದೇ ಹೇಳಿದರು
ತಾವ್‍ ಕುವೆಂಪು, ಬೀರಿದರು ಕನ್ನಡದಾ ಕಂಪು

ಪಾರು ಮಾಡಮ್ಮ ನೀ ಇಂಗ್ಲೀಷಿನಿಂದ
ಪೂತನಿಯ ಅಸುವೀಂಟಿ ಕೊಂದ ಗೋವಿಂದ    (ಕುವೆಂಪು ವಿರಚಿತ)

ಮಗುವೇ ಹೋರಾಡು ನೀನ್ ಕನ್ನಡಕೆ
ಕನ್ನಡತಾಯಿಗೆ ನೀನ್ ಬೇಕು, ಕನ್ನಡಾಂಬೆಯ
ನೀವ್ ರಕ್ಷಿಪ ಬೇಕು, ಅದುವೇ ಬೆಳಕು
ಮರೆಯಬೇದೆಂದರು ಕುವೆಂಪು, ಬೀರಿದರು ಕನ್ನಡದಾ ಕಂಪು

ಕನ್ನಡ ಎನೆ ಕುಣಿದಾಡುವುದೆನ್ನೆದೆ
ಕನ್ನಡ ಎನೆ ಕಿವಿ ನಿಮಿರುವುದು |    (ಕುವೆಂಪು ವಿರಚಿತ)

ನಲಿದಾಡಲಿ ನುಡಿ-ಕನ್ನಡ ನಾಲಿಗೆಯಲಿ,
ಕೇಳಿಬರಲಿ ಕನ್ನಡ ದಿಕ್ಕುದಿಕಿನಲಿ
ಕುಣಿದಾಡುವ ನಾವ್, ನಲಿದಾಡುವ ನೀವ್,
ನುಡಿದರು ಕುವೆಂಪು, ಬೀರಿದರು ಕನ್ನಡದಾ ಕಂಪು

ನೀ ಮುಟ್ಟುವ ಮರ - ಶ್ರೀಗಂಧದ ಮರ
ನೀ ಕುಡಿಯುವ ನೀರ್ - ಕಾವೇರಿ   (ಕುವೆಂಪು ವಿರಚಿತ)

ದೇಶ, ವೇಶ ಯಾವುದಾದರೇನ್? ನಿನ್ನ ಕಸುಬು,
ನೌಕರಿ ಯಾವುದಾದರೇನ್? ಎಲ್ಲಿದ್ದರೇನ್? ತಿಳಿ
ಅದನೆ, ಕರ್ನಾಟಕ, ಕನ್ನಡ-ಕಸ್ತೂರಿ, ಚಿತ್ತವೆಲ್ಲ
ಪಸರಿಸಿರೆಂದರು ಕುವೆಂಪು, ಬೀರಿದರು ಕನ್ನಡದಾ ಕಂಪು

ದೀಕ್ಷೆಯ ತೊಡು ಇಂದೇ|
ಕಂಕಣ ಕಟ್ಟಿಂದೇ, ಕನ್ನಡ ನಾಡೊಂದೇ   (ಕುವೆಂಪು ವಿರಚಿತ)

ಭಾಷೆಯ ಕೊಡು, ದಿಟ್ಟಿ ಇಡು, ಅದು
ಕನ್ನಡವೊಂದೇ, ಕರ್ನಾಟಕವೊಂದೇ,
ಧಮನಿ-ಧಮನಿಯಲಿ ಕನ್ನಡ ಮಾತೊಂದೇ
ತುಂಬಿರಲೆಂದರು ಕುವೆಂಪು, ಬೀರಿದರು ಕನ್ನಡದಾ ಕಂಪು

ಜೈ ಭಾರತ ಜನನಿಯ ತನುಜಾತೆ|
ಜಯ ಹೇ ಕರ್ನಾಟಕ ಮಾತೇ |    (ಕುವೆಂಪು ವಿರಚಿತ)

ತಾಯೆ ಭಾರತಿ, ಕನ್ನಡ ಮಾತೇ,
ನೀ-ಎನ್ನ ಮಾತೇ, ನೀ ನಮ್ಮ ಮಾತೇ,
ಕರ್ನಾತಕ ಮಾತೇ, ಜೈ ಜೈ ಮಾತೇ
ನಮಿಸುವೆನೆಂದರು ಕುವೆಂಪು, ಬೀರಿದರು ಕನ್ನಡದಾ ಕಂಪು

(ಕುವೆಂಪು ಶತಮಾನೋತ್ಸವದ ನೆನಪಿಗಾಗಿ ೨೦೦೩ ರಲ್ಲಿ ಬರೆದದ್ದು. ದಟ್ಸ್ ಕನ್ನಡ.ಕಾಂ ನಲ್ಲಿ ಪ್ರಕಟವಾಗಿತ್ತು )
ರಚನೆ: ಚಂದ್ರಶೇಖರ ಬಿ.ಎಚ್.




8 ಕಾಮೆಂಟ್‌ಗಳು:

ಮನದಾಳದಿಂದ............ ಹೇಳಿದರು...

ಆಸೆಯಾಗಿಯೇ ಉಳಿದಿದೆ ಕವಿವರ್ಯರ ಕನಸು
ಎಷ್ಟು ಜನ ಇಂದು ಕನ್ನಡಿಗರಾಗಿ ಉಳಿದಿದ್ದಾರೆ? ಕುವೆಂಪು ಅವರು ಹೇಳಿದಂತೆ
ಕನ್ನಡ ಏನೇ ಕುಣಿದಾಡುವುದು ಎನ್ನೆದೆ.....
ಕನ್ನಡ ಏನೇ ಕಿವಿ ನಿಮಿರುವುದು......
ಇಂದಿನ ಕನ್ನಡಿಗರಿಗೆ(?) ಕನ್ನಡ ಎಂದರೆ ಕಿವಿ ನಿಮಿರುವುದೇನೆ ನಿಜ. ಆದರೆ ಅದು ಅಭಿಮಾನದಿಂದಲ್ಲ, ಅಸಹ್ಯದಿಂದ!
ಇದು ನಮ್ಮ ನೆಲ, nಅಮ್ಮ ಭಾಷೆ ಎಂಬ ಅಭಿಮಾನ ಯಾರಿಗೂ ಇಲ್ಲ. ಮಗು ಹುಟ್ಟುತ್ತಲೇ ಆಂಗ್ಲ ಮಾಧ್ಯಮದ ಶಾಲೆಗೇ ಸೇರಬೇಕು. ಅದೇ ನಮಗೆ ಪ್ರತಿಷ್ಠೆ! ಆಂಗ್ಲ ಭಾಷೆ ಮಾತನಾಡುವವ ಮಾತ್ರ ವಿಧ್ಯಾವಂತ! ಕನ್ನಡ ಮಾತನಾಡಿದರೆ ಅವನನ್ನು ನೋಡುವ ನೋಟವೇ ಬೇರೆ.
ಇದು ಸ್ವಾಮಿ ಇಂದಿನ ನಮ್ಮ ಭವ್ಯ ಕರ್ನಾಟಕ!
ಈ ಜನರೇ ಕನ್ನಡಿಗರು! ತಾಯ್ನೆಲದ ಬೆಲೆ ಅರಿಯದ ಮಹಾ ಮೂಡರು!

ಏನೇ ಇರಲಿ.....
ಚೆನ್ನಾಗಿದೆ ನಿಮ್ಮ ಕವನ. ಕನ್ನಡ ಮರೆತ ಕನ್ನಡಿಗರು(?) ಒಮ್ಮೆ ಯೋಚಿಸಿ ನೋಡಬೇಕು.

Ittigecement ಹೇಳಿದರು...

ಚಂದ್ರು...

ಭಾಷೆಗಿಂತ ಬದುಕೇ ಮುಖ್ಯ..
ನಮ್ಮ ಮಕ್ಕಳಿಗೆ ಇಂಗ್ಲೀಷ್ ಮಾಧ್ಯಮಕ್ಕೆ ಹಾಕುವ ನಮಗೆಲ್ಲ ..
ಎಚ್ಚರಿಕೆಯ ಘಂಟೆಯಂತಿದೆ..

ಕುವೆಂಪುರವರ ಸಾಲುಗಳು ಅದ್ಭುತ !
ಅದೆಷ್ಟು ಭಾವವಿದೆ..
ಕನ್ನಡ ಅಭಿಮಾನವಿದೆ !

ಮತ್ತೆ ಅವರ ಕವಿತೆಗಳನ್ನು ನೆನಪಿಸಿದ್ದಕ್ಕೆ ಧನ್ಯವಾದಗಳು...

PARAANJAPE K.N. ಹೇಳಿದರು...

ಕುವೆ೦ಪು ಅವರ ರಚನೆಗಳಲ್ಲಿರುವ ಕನ್ನಡದ ಬಗೆಗಿನ ಕಳಕಳಿಯ ನುಡಿಗಳನ್ನು ಒಟ್ಟುಗೂಡಿಸಿ ಕೊಟ್ಟಿದ್ದೀರಿ. ಚೆನ್ನಾಗಿವೆ. ಎಲ್ಲರೂ ಅನುಸರಿಸಬೇಕಾದ ವಿಚಾರಗಳಿವು. ಆದರೆ ಯಾಕೋ ನಾವು ನಿರಭಿಮಾನಿಗಳಾಗ್ತಾ ಇದೀವಿ ಅನಿಸುತ್ತೆ.

PARAANJAPE K.N. ಹೇಳಿದರು...

ಕುವೆ೦ಪು ಅವರ ರಚನೆಗಳಲ್ಲಿರುವ ಕನ್ನಡದ ಬಗೆಗಿನ ಕಳಕಳಿಯ ನುಡಿಗಳನ್ನು ಒಟ್ಟುಗೂಡಿಸಿ ಕೊಟ್ಟಿದ್ದೀರಿ. ಚೆನ್ನಾಗಿವೆ. ಎಲ್ಲರೂ ಅನುಸರಿಸಬೇಕಾದ ವಿಚಾರಗಳಿವು. ಆದರೆ ಯಾಕೋ ನಾವು ನಿರಭಿಮಾನಿಗಳಾಗ್ತಾ ಇದೀವಿ ಅನಿಸುತ್ತೆ.

ಸೀತಾರಾಮ. ಕೆ. / SITARAM.K ಹೇಳಿದರು...

ಕುವೆ೦ಪುರವರ ಕನ್ನಡ ಭಾಷೆಗಿನ ಬೇರೆ ಬೇರೆ ಕವನಗಳ ಸಾಲುಗಳನ್ನು ಸ೦ಗ್ರಹಿಸಿ ಅದನ್ನು ಸೂಕ್ತ ವಿಸ್ತರಿಸಿದ್ದಕ್ಕೆ ಧನ್ಯವಾದಗಳು.

ಕ್ಷಣ... ಚಿಂತನೆ... ಹೇಳಿದರು...

ಮನದಾಳದಿಂದ ಅವರೆ ನಿಮ್ಮ ಮನದಾಳದಿಂದ ಮೂಡಿಬಂದ ಅಭಿಪ್ರಾಯಕ್ಕೆ ಧನ್ಯವಾದಗಳು.
ನಿಮ್ಮ ಅನಿಸಿಕೆಗಳು ಸತ್ಯವೇ ಹೌದು. ಹೀಗೆಯೆ ಬರುತ್ತಿರಿ

ಸ್ನೇಹದಿಂದ,

ಕ್ಷಣ... ಚಿಂತನೆ... ಹೇಳಿದರು...

ಪ್ರಕಾಶಣ್ಣ, ನಿಮ್ಮ ಅನಿಸಿಕೆಗಳಿಗೆ ಧನ್ಯವಾದಗಳು. ಭಾಷೆಗಿಂತ ಬದುಕು ಮುಖ್ಯವಾದರೂ ತಾಯನುಡಿ, ತಾಯಿನೆಲ ಮರೆಯಬಾರದು ಎಂಬ ಉದ್ದೇಶದಿಂದ ಇದ್ದರೆ ಚೆಂದ ಎಂದು ಅನಿಸಿಕೆ.
ಸ್ನೇಹದಿಂದ,

ಕ್ಷಣ... ಚಿಂತನೆ... ಹೇಳಿದರು...

ಪರಾಂಜಪೆ ಸರ್‍ ಹಾಗೂ ಸೀತಾರಾಮ ಸರ್‍, ನಿಮ್ಮ ಅಭಿಪ್ರಾಯಗಳಿಗೆ ಧನ್ಯವಾದಗಳು.