ಮಂಗಳವಾರ, ಜೂನ್ 8, 2010

ಬದಲಾವಣೆಗೆ ಹೆದರಬೇಡಿ!

ಜನ ಚೇಂಜ್‌ ಕೇಳುತ್ತಾರೆ. ಹಾಗಂತ ಬದಲಾವಣೆಗಳಿಗೆ ಹೆದರುವುದು ತರವೇ?

ಆಧುನಿಕತೆ ದಿನದಿಂದ ದಿನಕ್ಕೆ ಮುನ್ನುಗುತ್ತಲೇ ಇದೆ. ಹಾಗೆಂದು ಅತಿರೇಕದ ಬದಲಾವಣೆಗಳಿಗೆ ಒಗ್ಗಿಕೊಳ್ಳುವುದೂ
ಕಷ್ಟಸಾಧ್ಯವೇ ಹೌದು! ಉದಾಹರಣೆಗೆ, ಒಂದು ಕಾಲದಲ್ಲಿ ಬೆರಳಚ್ಚುಗಾರ ಎಂದರೆ ಒಂದು ಹೆಮ್ಮೆಯ ವಿಚಾರವಾಗಿತ್ತು. ಏಕೆಂದರೆ, ಬೆರಳಚ್ಚಿನ ಕೌಶಲ ಸಿದ್ಧಿಸಿಕೊಳ್ಳಲು ಬಹಳ ತ್ರಾಸದಿಂದ ಕಲಿಯುತ್ತಿದ್ದರು. ಅದನ್ನು ಬಳಸಿಕೊಂಡೇ ಹಲವರಿಗೆ ಉದ್ಯೋಗದೊಂದಿಗೆ ಜೀವನವೂ ಒಂದು ಹಂತಕ್ಕೆ ಮುಟ್ಟುವಂತಿತ್ತು. ಆನಂತರ, ಆಧುನಿಕತೆ ಮಜಲಿನಲ್ಲಿ ಮೂಡಿಬಂದ ಎಲೆಕ್ಟ್ರಾನಿಕ್‌ ಬೆರಳಚ್ಚು ಯಂತ್ರಗಳು ಕೆಲವರಿಗೆ ಅಡಚಣೆಯುಂಟುಮಾಡಿದರೂ, ಜೀವನಕ್ಕೆ ತೊಂದರೆ ಕೊಡಲಿಲ್ಲ ಎನ್ನಬಹುದು. ಆದರೆ, ಆಧುನಿಕ ಆವಿಷ್ಕಾರವಾದ ಗಣಕಯಂತ್ರದಿಂದಾಗಿ ಬಹಳಷ್ಟು ಬೆರಳಚ್ಚುಗಾರರಿಗೆ ಒಂದು ಹೆದರಿಕೆಯಿತ್ತು. ಕಾರಣ ಗಣಕಯಂತ್ರದ ತಂತ್ರದಿಂದಾಗಿ ತಮ್ಮ ಉದ್ಯೋಗಕ್ಕೇ ಕುತ್ತು ಬರುವುದೇನೋ ಎಂಬ ಅನುಮಾನ. ತಂತ್ರಾಂಶದ ಕಲಿಕೆ, ಉಪಯೋಗ ಹೇಗೆಂದು ತಿಳಿಯದೇ, ಅದರಲ್ಲಿಯೂ ಕಮ್ಯಾಂಡರುಗಳೆಂಬ ಕಮ್ಯಾಂಡುಗಳ ನೆನಪಿನಲ್ಲಿರಿಸಿಕೊಂಡು ಗಣಕಯಂತ್ರ ಚಲಾಯಿಸುವುದು ಕಷ್ಟ ಎಂಬ ಹೆದರಿಕೆಯಿಂದಾಗಿಯೂ ಉದ್ಯೋಗಕ್ಕೆ ತೊಂದರೆ ತಂದುಕೊಂಡವರೂ ಇದ್ದಾರೆ (ಆಗಿನ ಒಂದು ಹಂತದಲ್ಲಿ). ಕೆಲವರು ಅದರಿಂದಾಗಿ ಬೇರೆ ಉದ್ಯೋಗಕ್ಕೂ ಎಡತಾಕಿದ್ದೂ ಇದೆ. ಆನಂತರದ, ವಿಂಡೋಸ್‌ನಿಂದಾಗಿ ಕೆಲವರು ಗಣಕಯಂತ್ರದ ತಂತ್ರಕ್ಕೆ ಒಲಿದು, ಅದನ್ನೇ ಒಲಿಸಿಕೊಂಡು ಜೀವನ ಕಂಡು ಕೊಂಡವರೂ ಇದ್ದಾರೆ. ಇವರಿಗೆಲ್ಲ ಹೊಸದೊಂದು ಕಿಟಕಿ ಕಟಕಿಯಾಡದೇ ಕೆಲಸ ಕೊಟ್ಟಿದೆ.


ಇಲ್ಲಿ ಏಕೆ ಪ್ರಸ್ತಾಪಿಸಲು ಯೋಚಿಸಿದೆನೆಂದರೆ, `ಡೋಂಟ್ ಬಿ ಅಫ್ರೇಡ್‌ ಆಫ್ ಚೇಂಜ್' ಎಂಬ ಒಂದು ಪೋಸ್ಟರಿನಿಂದಾಗಿ. ಇದರಲ್ಲಿ ಬೆರಳಚ್ಚುಗಾರ್ತಿಯೊಂದಿಗೆ ಒಂದು ಬೆರಳಚ್ಚು ಯಂತ್ರವಿದೆ. ಅದರ ಕೆಳಗಿನ ಬರಹ ಈ ಮೇಲಿನದು. ಅದಕ್ಕೇ, ಹೇಳಿದ್ದು ಬದಲಾವಣೆ ಎಲ್ಲ ಹಂತದಲ್ಲಿಯೂ ಇರುತ್ತದೆ. ಇರಲೇ ಬೇಕು. ಹಾಗೆಂದು ಬದಲಾವಣೆಗೆ ಹೆದರಿ ಕುಳಿತರೆ, ಬದುಕು ಸಸಾರವಾಗದೇ ತತ್ವಾರಕ್ಕೆ ತುತ್ತಾಗುವುದಿಲ್ಲವೇ?

ಆದ್ದರಿಂದ: 'ಬದಲಾವಣೆಗೆ ಹೆದರಬೇಡಿ!'.

ಚಿತ್ರ ಕೃಪೆ: courtsey: http://www.aegee.kiev.ua/Press.aspx?id=9

10 ಕಾಮೆಂಟ್‌ಗಳು:

PARAANJAPE K.N. ಹೇಳಿದರು...

ಹೌದು, ನಿಮ್ಮ ಮಾತು ನಿಜ. ನಾನು ಕೂಡ ಬೆರಳಚ್ಚುಗಾರನಾಗಿಯೇ ಜೀವನ ಆರ೦ಭಿಸಿದವನು, ಬೆರಳಚ್ಚು, ಕಲ್ಲಚ್ಚು(cyclostyle), ನೆರಳಚ್ಚು (xerox) ಯ೦ತ್ರಗಳನೆಲ್ಲ ಚಲಾಯಿಸಿ ಕೊನೆಗೆ ಕ೦ಪ್ಯೂಟರ್ ನತ್ತ ವಾಲಿದವನು. ನಾನಿದ್ದ ಊರಿನಲ್ಲಿ ಕ೦ಪ್ಯೂಟರ್ ನಲ್ಲಿ ಕನ್ನಡ ಬಳಕೆಯನ್ನು ಸುಮಾರು 18 ವರ್ಷ ಗಳ ಹಿ೦ದೆ ಮೊದಲ ಬಾರಿ introduce ಮಾಡಿದ್ದೆ. ನನಗೊಬ್ಬ ಮಿತ್ರರಿದ್ದಾರೆ, ಹೆಬ್ಬಾರ್ ಅ೦ತ ಅವರ ಹೆಸರು. ಅವರು ಬೆರಳಚ್ಚು ಯ೦ತ್ರ ರಿಪೇರಿ ಮಾಡುತ್ತಿದ್ದರು, ಇತ್ತೀಚಿಗೆ ಬೆರಳಚ್ಚು ಯ೦ತ್ರ ಮ್ಯೂಸಿಯಂ ಸೇರಿದ ಮೇಲೆ ಅವರಿಗೆ ಜೀವನಕ್ಕೆ ಬೇರೆ ದಾರಿ ಹುಡುಕಬೇಕಾದ ಅನಿವಾರ್ಯತೆ ಬ೦ತು. ನಿಮ್ಮ ಬರಹದಿ೦ದ ಇದೆಲ್ಲ ನೆನಪಾಯಿತು.Dont be afraid of change - ಇದು ಎಲ್ಲ ಕ್ಷೇತ್ರಕ್ಕೂ ಅನ್ವಯವಾಗುವ ಮಾತು. ಅಲ್ಲವೇ ?

ಸೀತಾರಾಮ. ಕೆ. / SITARAM.K ಹೇಳಿದರು...

Nice message!!!

ಸುಮ ಹೇಳಿದರು...

ನಿಜ , ಬದಲಾವಣೆ ಜಗ ನಿಯಮ.

ಮನದಾಳದಿಂದ............ ಹೇಳಿದರು...

ಹೌದು..
ಬದಾಲಾವನೆಗೆ ನಾವು ಹೆದರಿ ಹಿಂದೆ ಸರಿದರೆ ಜೀವನ ಮುಂದೆ ಹೋಗುವುದಿಲ್ಲ ಎಂಬುದು ಸಾರ್ವತ್ರಿಕ ಸತ್ಯ!

Dr.D.T.Krishna Murthy. ಹೇಳಿದರು...

'A river is not the same at any point of time'ಅನ್ನುತ್ತಾರೆ.ಬದಲಾವಣೆಯೊಂದೇ ಶಾಶ್ವತ!so,change with the world.Thank you for giving us a nice article.

ಸಾಗರದಾಚೆಯ ಇಂಚರ ಹೇಳಿದರು...

ತುಂಬಾ ಒಳ್ಳೆಯ ಸಂದೇಶ ಸರ್

ಸವಿಗನಸು ಹೇಳಿದರು...

good message...

ದೀಪಸ್ಮಿತಾ ಹೇಳಿದರು...

ಜಗತ್ತು ಅತಿ ವೇಗದಲ್ಲಿ ಬದಲಾಗುತ್ತಿದೆ. ಇವತ್ತಿನ ತಂತ್ರಜ್ಞಾನ ನಾಳೆಗೆ ಹಳೆಯದೆನ್ನುವ ಸ್ಥಿತಿ ಈಗಿದೆ. ಬದಲಾವಣೆಗೆ ನಾವು ಹೊಂದಿಕೊಳ್ಳದೆ ವಿಧಿಯಿಲ್ಲ.

It is not the strongest of the species that survive, nor the most intelligent, but the one most responsive to change ಎನ್ನುವ ಮಾತಿದೆ. ಕಾಗೆಗಳು, ಪಾರಿವಾಳಗಳು ಬದಲಾಗುತ್ತಿರುವ ಪರಿಸರಕ್ಕೆ ಹೊಂದಿಕೊಳ್ಳುವಷ್ಟು ಸಲೀಸಾಗಿ ಗುಬ್ಬಿಗಳು ಆಗುತ್ತಿಲ್ಲ. ಅದಕ್ಕೆ ನೋಡಿ, ಅವುಗಳು ವಿರಳವಾಗುತ್ತಿವೆ

AntharangadaMaathugalu ಹೇಳಿದರು...

ಚಂದ್ರೂ...
ಒಳ್ಳೆಯ ವಿಚಾರ. ನಾನು ಕೂಡ ನನ್ನ ವೃತ್ತಿ ಜೀವನವನ್ನು ಬೆರಳಚ್ಚು/ಶೀಘ್ರಲಿಪಿಯಿಂದಲೇ ಆರಂಭಿಸಿ, ಹಂತ ಹಂತವಾಗಿ ಮೇಲೇರಿದವಳು. ನಮ್ಮ ಕಛೇರಿಯಲ್ಲಿ ಮೊದಲ್ ಬಾರಿಗೆ ಗಣಕ ಯಂತ್ರ ಬಂದಾಗ... ನೀವು ಹೇಳಿದ ಈ ಬದಲಾವಣೆಯ ಭಯ ನಮ್ಮ ಹಿರಿಯ ಸಹೋದ್ಯೋಗಿಗಳಲ್ಲಿ ತುಂಬಾ ಆಗಿತ್ತು... ನನಗೆ ಅದೆಲ್ಲಾ ನೆನಪಾಯಿತು ಚಂದ್ರೂ..

ಕ್ಷಣ... ಚಿಂತನೆ... ಹೇಳಿದರು...

ಪರಾಂಜಪೆ ಸರ್‍, ನಿಮ್ಮ ಆರಂಭಿಕ ಕೆಲಸ ಹಾಗೂ ಶ್ರೀ ಹೆಬ್ಬಾರ್‌ ಅವರ ಜೀವನದ ಗತಿ ಬದಲಾಗಿದ್ದು ಇವೆಲ್ಲ ತಿಳಿಸಿದ್ದೀರಿ. ಧನ್ಯವಾದಗಳು.

@@@
ಶ್ರೀ ಸೀತಾರಾಮ, ಸುಮಾ ಮೇಡಂ, ಮನದಾಳದಿಂದ, ಡಾ. ಕೃಷ್ಣಮೂರ್ತಿ, ಸಾಗರದಾಚೆಯ ಇಂಚರ, ಸವಿಗನಸು, ದೀಪಸ್ಮಿತ ಹೀಗೆಯೆ ಬರುತ್ತಿರಿ. ಬದಲಾವಣೆ ಅನಿವಾರ್ಯ. ನಿಮ್ಮೆಲ್ಲರ ಅನಿಸಿಕೆಗಳಿಗೆ ವಂದನೆಗಳು.
@@@
ಅಂತರಂಗದ ಮಾತುಗಳು, ನಿಮ್ಮ ವೃತ್ತಿ ಶುರುವಾಗಿದ್ದು, ಅನುಭವ ಎಲ್ಲ ನೆನಪಿಸಿಕೊಂಡಿದ್ದೀರಿ. ಹೀಗೆಯೆ ಬರುತ್ತಿರಿ. ಧನ್ಯವಾದಗಳು.

ಸ್ನೇಹದಿಂದ,