ಕ್ಷಣ ಚಿಂತನೆ... ಚಿಂತನಾ ಲಹರಿ...
ಸದಾ ಹರಿಯುತ್ತಿರುವ ನದಿಯಂತೆ ಚಿಂತನೆಯೂ ಸಹ ಎಂಬ ಆಶಯದೊಂದಿಗೆ ಶುರು ಮಾಡಿದೆ. ಈ ನನ್ನ (ಗೂಗಲ್ ನವರ) ಬ್ಲಾಗಿನಲ್ಲಿ ಇಲ್ಲಿಯವರೆವಿಗೂ ಮಹಾನ್ ವ್ಯಕ್ತಿಗಳ ನುಡಿಗಟ್ಟುಗಳನ್ನು ಬಳಸಿಕೊಂಡು ಬರೆದ ಬರಹಗಳು, ವಿವಿಧ ವಿಷಯಗಳು, ಪ್ರವಾಸೀ ಕಥನ, ಸ್ವಗತ ಬರಹಗಳು, ಹಾಗೂ ಛಾಯಾಚಿತ್ರಗಳನ್ನು ಪ್ರಕಟಿಸುತ್ತಾ ಬಂದಿದ್ದೇನೆ. ಈ ಬರಹಗಳಿಗೆ, ಚಿತ್ರಗಳಿಗೆ ಹಲವಾರು ಬ್ಲಾಗಿಗರು ತಮ್ಮ ತಮ್ಮ ಸಲಹೆ, ಪ್ರೋತ್ಸಾಹಗಳನ್ನು ನೀಡುತ್ತಾ ಬಂದಿದ್ದಾರೆ. ಅವರೆಲ್ಲರಿಗೂ ಧನ್ಯವಾದಗಳು.
ಬರಹಗಳಿಗೆ ವಿಷಯಗಳ ಬರವಿರದಿದ್ದರೂ ಕೆಲವೊಮ್ಮೆ ಏನು ಬರೆಯಬೇಕು? ಯಾಕೆ ಬರೆಯಬೇಕು ಎಂಬುದು ಹೊಳೆಯದೇ ಮಿತ್ರರೊಂದಿಗೆ ಚರ್ಚಿಸಿದ್ದಿದೆ. ಆಗೆಲ್ಲ ಅವರ ಅಭಿಪ್ರಾಯ ಅಥವಾ ಸಲಹೆಗಳಿಂದ ಒಂದಷ್ಟು ಬರವಣಿಗೆ ಸಾಗುತ್ತಾ ಬಂದಿದೆ. ಅವರೆಲ್ಲರ ಪ್ರೋತ್ಸಾಹದಿಂದ ಇಲ್ಲಿಯವರೆವಿಗೂ ಅಂದರೆ ಎರಡು ವರ್ಷ ಮುಗಿಸುತ್ತಾ ಮೂರನೇ ವರ್ಷಕ್ಕೆ ಬರಹದ ಕಾಲ್ನಡಿಗೆಯನ್ನು ಶುರು ಮಾಡುತ್ತಿದ್ದೇನೆ.
ಬ್ಲಾಗಿನಿಂದಾಗಿ ಹಲವಾರು ಮಿತ್ರರು ಸಿಕ್ಕಿದ್ದಾರೆ. ಅವರೆಲ್ಲರ ಒಡನಾಟವೂ, ಆತ್ಮೀಯತೆಯೂ ಸಿಕ್ಕಿದೆ ಹಾಗೂ ವ್ಯಕ್ತಿತ್ವ ನಿರ್ಮಾಣಕ್ಕೂ ಸಹಕಾರಿಯಾಗಿದೆ.
ಮೂಲತ: ಗೂಗಲ್ ಕಂಪನಿಯವರಿಗೆ ವಂದನೆಗಳನ್ನು ತಿಳಿಸುತ್ತೇನೆ. ಏಕೆಂದರೆ, ಅವರ ಈ ಸೋಷಿಯಲ್ ನೆಟ್ವರ್ಕ್‌ನಿಂದಾಗಿ ಬ್ಲಾಗ್ ಉಚಿತವಾಗಿ ದೊರಕಿದ್ದು ಅದರ ಸದುಪಯೋಗ ಪಡೆಯುತ್ತಿದ್ದೇನೆ.
ನನ್ನ ಬ್ಲಾಗಿನಲ್ಲಿ ಬರಹ ಯೂನಿಕೋಡ್ ಉಪಯೋಗಿಸುವುದರಿಂದ ಅನೇಕರಿಗೆ ಓದಲು ಅನುಕೂಲವಾಗಿದೆ ಎಂಬುದು ನನ್ನ ಅನಿಸಿಕೆ. ಬರಹ ತಂತ್ರಾಂಶ ತಯಾರಿಕರಿಗೂ ಧನ್ಯವಾದಗಳು.
ಇದರೊಂದಿಗೆ ನಿಮ್ಮೆಲ್ಲರ ಕ್ಷಣ ಪ್ರತಿಕ್ರಿಯೆಯೇ ಮೂರನೇ ವರ್ಷಕ್ಕೆ ಬ್ಲಾಗನ್ನು ವಿಸ್ತರಿಸುವ ಹುಮ್ಮಸ್ಸು ಕೊಟ್ಟಿದೆ ಹಾಗೂ ಕೊಡುತ್ತದೆ ಎಂಬ ಆಶಯದಿಂದ, ನಿಮ್ಮೆಲ್ಲರಿಗೂ ನನ್ನ ಕೃತಜ್ಞತೆಗಳು ಹಾಗು ಧನ್ಯವಾದಗಳನ್ನು ತಿಳಿಸುತ್ತೇನೆ.
ಇಂತಿ,
ಚಂದ್ರಶೇಖರ ಬಿ.ಎಚ್.
6 ಕಾಮೆಂಟ್‌ಗಳು:
ಶುಭಾಶಯ ಚಂದ್ರು, ನಿಮ್ಮ ಬ್ಲಾಗ್ ಯಾನ ಹೀಗೆ ಮುಂದುವರಿಯಲಿ
Many many more happy returns of the day for you & your blog chandrashekarji.
I enjoyed your blog reading.
Thanks & all the best
Best wishes, and We are looking forward, to you sir.
congrats sir... & all the best...
ಅಭಿನಂದನೆಗಳು ಸರ್. ನಿಮ್ಮ ಬ್ಲಾಗಿನ ಮೂರನೆ ಹುಟ್ಟು ಹಬ್ಬಕ್ಕೆ ಶುಭಾಶಯಗಳು.
ಶುಭ ಹಾರೈಸಿದ, ಪ್ರೋತ್ಸಾಹಿಸಿದ ನಿಮಗೆಲ್ಲರಿಗೂ ಧನ್ಯವಾದಗಳು.
ಹೀಗೆಯೆ ಬರುತ್ತಿರಿ.
ಮತ್ತೊಮ್ಮೆ ಧನ್ಯವಾದಗಳು.
ಸ್ನೇಹದಿಂದ,
ಕಾಮೆಂಟ್ ಪೋಸ್ಟ್ ಮಾಡಿ